ಬಿಡುಗಡೆಗೊಂಡ ಪಬ್ಬಾರ್ ಪೋಸ್ಟರ್ನಲ್ಲಿ ಧೀರೇನ್ ರಾಜ್ಕುಮಾರ್ 2 ವಿಭಿನ್ನ ಲುಕ್ಗಳಲ್ಲಿ ನಿಟಿಸಿರುವುದು ವಿಶೇಷ. ಸಾಂಪ್ರದಾಯಿಕ ಉಡುಪು ಧರಿಸಿರುವ ಕೆಲವು ವ್ಯಕ್ತಿಗಳು, ಹೊಳೆಯುವ ಕೆಲವು ಭೌಗೋಳಿಕ ಚಿಹ್ನೆಗಳು ಮತ್ತು ಪೊಲೀಸರ ಉಪಸ್ಥಿತಿ ಪೋಸ್ಟರ್ನ ನಿಗೂಢತೆಗೆ ಸಾಕ್ಷಿಯಾಗಿವೆ.
ಟೀಸರ್ ವಿಡಿಯೋ ಮೂಲಕ ಭಾರೀ ನಿರೀಕ್ಷೆ ಹುಟ್ಟಿಸಿರುವ ‘ಪಬ್ಬಾರ್’ ಬಿಡುಗಡೆಗೆ ಸಿದ್ಧ!
ಕನ್ನಡ ಸಿನಿಮಾರಂಗದಲ್ಲಿ ಹೊಸಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸ್ಯಾಂಡಲ್ವುಡ್ ನಿಂತ ನೀರಲ್ಲ ಎನ್ನುವಂತೆ, ಬಿಗ್ ಬಜೆಟ್ ಸಿನಿಮಾಗಳು ಮಾತ್ರವಲ್ಲ, ಚಿಕ್ಕ ಹಾಗೂ ಮಧ್ಯಮ ಬಂಡವಾಳ ಹೂಡಿಕೆಯ ಸಿನಿಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಇದೀಗ ಬಿಡುಗಡೆ ಹಂತಕ್ಕೆ ಬಂತು ನಿಂತಿರುವ ಅಂಥಹದ್ದೊಂದು ಚಿತ್ರ 'ಪಬ್ಬಾರ್'.
ಗೀತಾ ಶಿವರಾಜ್ಕುಮಾರ್ ನಿಮಾರ್ಣದ ಈ 'ಪಬ್ಬಾರ್' ಚಿತ್ರಕ್ಕೆ ಶಾಖಾಹಾರಿ ಖ್ಯಾತಿಯ ಸಂದೀಪ್ ಸುಂಕದ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಹಿರಿಯ ನಟ ರಾಮ್ಕುಮಾರ್ ಅವರ ಪುತ್ರ ಧೀರೇನ್ ರಾಮ್ಕುಮಾರ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅಭಿನಯಿಸಿದ್ದಾರೆ. ಅಯ್ಯಪ್ಪ ಪಿ. ಶರ್ಮ ಪಬ್ಬಾರ್ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಸ್ಮಾರ್ಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಶಿವಣ್ಣ ಕೂಡ ಅಭಿನಯಿಸಿದ್ದಾರೆ
ಚಿತ್ರದ ಕ್ಯಾರೆಕ್ಟರ್ ಟೀಸರ್ ಹಾಗೂ 2 ಹಾಡುಗಳು ಬಿಡುಗಡೆಯಾಗಿದ್ದು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿವೆ. ನಿರ್ದೇಶಕ ಸಂದೀಪ್ ಸುಂಕದ್ ಹೇಳುವಂತೆ ಇದೊಂದು ಕಾಲ್ಪನಿಕ ಕಥೆಯಾದರೂ, ಗಟ್ಟಿ ಕಥೆಯನ್ನು ಒಳಗೊಂಡಿದೆ, ಅಡ್ವೆಂಚರಸ್ ಕ್ರೈಂ, ಥ್ರಿಲ್ಲರ್ ಕಥಾಹಂದರ ಇರುವ ಚಿತ್ರವಾಗಿದ್ದು, ಈ ಚಿತ್ರದ ಮೂಲಕ ಎರಡು ರೀತಿಯ ಜರ್ನಿಯನ್ನು ಹೇಳಲಾಗುತ್ತಿದೆ, ಒಂದು ಕೇಸ್ ಜರ್ನಿಯಾದರೆ, ಇನ್ನೊಂದು ಪರ್ಸನಲ್ ಜರ್ನಿ.
ಚಿತ್ರಕ್ಕೆ ಪಬ್ಬಾರ್ ಎಂದು ಹೆಸರಿಡಲು ಕಾರಣವೇನು? ಅಷ್ಟಕ್ಕೂ 'ಪಬ್ಬಾರ್' ಅಂದರೇನು?
ಹೌದು, ಪಬ್ಬಾರ್ ಎಂಬ ಪದವನ್ನು ಕೆಲವೇಕೆಲವು ಜನರು ಕೇಳಿರಬಹುದು. 'ಪಬ್ಬಾರ್' ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಒಂದು ನದಿ. ಇದೀಗ ಈ ಹೆಸರಿನಲ್ಲಿ ಕನ್ನಡದಲ್ಲಿ ಚಲನಚಿತ್ರವೊಂದು ನಿರ್ಮಾಣವಾಗಿದೆ. ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಡ್ರಾಮಾ ಒಳಗೊಂಡ ಚಿತ್ರ. ಹಿಮಾಚಲ ಪ್ರದೇಶದ ಪಬ್ಬಾರ್ ನದಿಯೇ ಈ ಚಿತ್ರದ ಕಥೆಗೆ ಕೇಂದ್ರಬಿಂದು. ಪಬ್ಬಾರ್ ಎಂದರೆ ಒಂದು ಜಾಗದ ಹೆಸರು. ಚಿತ್ರಕಥೆಯಲ್ಲಿ ಆ ಜಾಗ ಪ್ರಮಖ ಪಾತ್ರವನ್ನು ನಿರ್ವಹಿಸುತ್ತದೆ, ಇಡೀ ಕಥೆಯ ಕೇಂದ್ರ ಬಿಂದುವೇ ಪಬ್ಬಾರ್ ಎಂಬ ಹೆಸರಿನ ಆ ಸ್ಥಳವಾಗಿದೆ, ಹಾಗಾಗಿ ಚಿತ್ರಕ್ಕೆ ಪಬ್ಬಾರ್ ಎಂಬ ಶೀರ್ಷಿಕೆ ಇಡಲಾಗಿದೆ.
4 ನಿಮಿಷಗಳ ವಿಡಿಯೋ, ಹೆಚ್ಚಿದ ಕುತೂಹಲ!
ಸಾಮಾನ್ಯವಾಗಿ ಸಿನಿಮಾಗಳ ಪ್ರಚಾರಕ್ಕಾಗಿ ಕೆಲವು ಸೆಕೆಂಡುಗಳ ಟೀಸರ್ಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ ‘ಪಬ್ಬಾರ್’ ಚಿತ್ರತಂಡ 4 ನಿಮಿಷಗಳ ಸುದೀರ್ಘ ಪರಿಚಯಾತ್ಮಕ ವಿಡಿಯೋವನ್ನು ಬಿಡುಗಡೆ ಮಾಡಿದೆ. ವೇಗದ ದೃಶ್ಯಗಳ ಮೂಲಕ ಗಮನ ಸೆಳೆಯುವ ಬದಲು, ಚಿತ್ರದ ನಿಗೂಢತೆ, ಪಾತ್ರಗಳ ಹಿನ್ನೆಲೆ ಮತ್ತು ಕಥೆಯ ವಿಭಿನ್ನ ಜಗತ್ತನ್ನು ಪರಿಚಯಿಸುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಕಾಣಬಹುದು. ಪ್ರಶ್ನೆಗಳನ್ನು ಹುಟ್ಟುಹಾಕುವ, ಹಾಗೂ ರಹಸ್ಯ ಎನ್ನುವಂತಹ ದೃಶ್ಯಗಳು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ಧೀರೇನ್ ರಾಜ್ಕುಮಾರ್ ಅವರ 2 ಲುಕ್ಗಳ ಹಿಂದಿನ ರಹಸ್ಯವೇನು?
‘ಪಬ್ಬಾರ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಪ್ರೇಕ್ಷಕರನ್ನು ಸೆಳೆದಿದೆ. ಹಿಮಾಲಯದ ಮಂಜು ಮುಸುಕಿದ ಬೆಟ್ಟಗುಡ್ಡಗಳು, ಬೌದ್ಧ ಪ್ರಾರ್ಥನಾ ಧ್ವಜಗಳು ಮತ್ತು ಕಣಿವೆಯಲ್ಲಿರುವ ಸಣ್ಣ ವಸತಿ ಪ್ರದೇಶದ ದೃಶ್ಯಗಳು ಚಿತ್ರದ ಕಥೆಗೆ ವಿಭಿನ್ನ ಹಿನ್ನೆಲೆಯನ್ನು ಕಟ್ಟಿಕೊಟ್ಟಿವೆ ಎನ್ನಬಹುದು.
ಬಿಡುಗಡೆಗೊಂಡ ಪೋಸ್ಟರ್ನಲ್ಲಿ ಧೀರೇನ್ ರಾಜ್ಕುಮಾರ್ 2 ವಿಭಿನ್ನ ಲುಕ್ಗಳಲ್ಲಿ ನಿಟಿಸಿರುವುದು ವಿಶೇಷ. ಇದರಿಂದ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಸಾಂಪ್ರದಾಯಿಕ ಉಡುಪು ಧರಿಸಿರುವ ಕೆಲವು ವ್ಯಕ್ತಿಗಳು, ಹೊಳೆಯುವ ಕೆಲವು ಭೌಗೋಳಿಕ ಚಿಹ್ನೆಗಳು ಮತ್ತು ಪೊಲೀಸರ ಉಪಸ್ಥಿತಿ ಪೋಸ್ಟರ್ನ ನಿಗೂಢತೆಗೆ ಸಾಕ್ಷಿಯಾಗಿವೆ. ತೀರಾ ವಿಭಿನ್ನ ಜಗತ್ತುಗಳು ಹಾಗೂ ಪಾತ್ರಗಳು ಒಂದೇ ಕಥೆಯಲ್ಲಿ ಇವೆಯೇ? ಗೊತ್ತಿಲ್ಲ, ಕಾದು ನೋಡಬೇಕು.
ಈ ಹಿಂದೆ ವೇದಾ ಹಾಗೂ ಭೈರತಿ ರಣಗಲ್ನಂಥ ಯಶಸ್ವೀ ಚಿತ್ರಗಳನ್ನು ಕನ್ನಡಿಗರಿಗೆ ನೀಡಿರುವ ಶ್ರೀಮತಿ ಗೀತಾ ಶಿವರಾಜ್ಕುಮಾರ್ ನೇತೃತ್ವದ ಗೀತಾ ಪಿಕ್ಚರ್ಸ್ ಈ ವಿಭಿನ್ನ ಶೈಲಿಯ ಚಿತ್ರವನ್ನು ಕನ್ನಡಿಗರಿಗೆ ನೀಡಲು ಅಣಿಯಾಗಿದೆ. ಇನ್ನೇನು ಸಿನಿಮಾ ಸದ್ಯದಲ್ಲಿಯೇ ತೆರೆಯ ಮೇಲೆ ಬರಲಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.












