ಮತ್ತೊಮ್ಮೆ ಸೋತ ಗೀತಾ ಶಿವರಾಜ್ ಕುಮಾರ್, ದೊಡ್ಮನೆ ಸೊಸೆಗೆ ಒಲಿಯದ ಎಂಪಿ ಪಟ್ಟ!
ಗೀತಾ ಶಿವರಾಜ್‌ಕುಮಾರ್ 'ವೀಕ್ ಕ್ಯಾಂಡಿಡೇಟ್' ಎಂಬ ಮಾತು ಹರಿದಾಡಿತ್ತು. ಆ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ನಾನ್ಯಾಕೆ ವೀಕ್ ಕ್ಯಾಂಡಿಡೇಟ್ ಆಗ್ತೇನೆ. ಅವರಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿದೆ. ಅದಕ್ಕೆ ನನ್ನ ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ...
ಕೆಲವರ ಪಾಲಿಗೆ ನಿರೀಕ್ಷಿತ ಹಾಗೂ ಹಲವರ ಪಾಲಿಗೆ ಅನಿರೀಕ್ಷಿತ ಎಂಬಂತೆ ಮತ್ತೊಮ್ಮೆ ದೊಡ್ಮನೆ ಸೊಸೆ ಗೀತಾ ಶಿವರಾಜ್‌ಕುಮಾರ್‌ಗೆ (Geetha Shiva Rajkumar) ಸೋಲು ಎದುರಾಗಿದೆ. ಎಂಪಿ ಪಟ್ಟದ ಕನಸು ಕಂಡಿದ್ದ ನಟ ಶಿವರಾಜ್‌ಕುಮಾರ್ (Shiva Rajkumar) ಪತ್ನಿ ಹಾಗೂ ಮಾಜಿ ಸಿಎಂ ಬಂಗಾರಪ್ಪನವರ ಮಗಳು ಗೀತಾ, ಇದೀಗ ಮತ್ತೊಮ್ಮೆ ಲೋಕಸಭಾ ಚುನಾವಣೆ-2024ರಲ್ಲಿ ಸೋತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಗ ಹಾಗೂ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಹೋದರ ಬಿ ವೈ ರಾಘವೇಂದ್ರ (B Y Raghavendra) ವಿರುದ್ಧ ಗೀತಾ ಶಿವರಾಜ್‌ಕುಮಾರ್ ಸೋತಿದ್ದಾರೆ.
ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ, ಈಶ್ವರಪ್ಪ ಹಾಗೂ ಗೀತಾ ಶಿವರಾಜ್‌ಕುಮಾರ್ ಮಧ್ಯೆ ತ್ರಿಕೋನ ಸ್ಪರ್ಧೆ ಎಂದೇ ಬಿಂಬಿಸಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಈಶ್ವರಪ್ಪ ಅವರು ಮತ ಸೆಳೆಯಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಗೀತಾ ಹಾಘು ರಾಘವೇಂದ್ರ ನಡುವಿನ ಅಥವಾ ಬಿಜೆಪಿ-ಕಾಂಗ್ರೆಸ್ ಮಧ್ಯೆ ನಡೆದ ಹಣಾಹಣಿ ಎಂದೇ ಹೇಳಬಹುದು. ಇದೀಗ, ಬಿ ವೈ ರಾಘವೇಂದ್ರ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೊಡ್ಮನೆ ಸೊಸೆಗೆ ಎಂಪಿ ಪಟ್ಟ ಕನಸಾಗಿಯೇ ಉಳಿದಿದೆ.
ಹಿಮಾಚಲ ಪ್ರದೇಶದ 'ಮಂಡಿ'ಯಲ್ಲಿ ಗೆದ್ದು ಸಂಸದೆಯಾದ ಬಾಲಿವುಡ್ ನಟಿ ಕಂಗನಾ ರಣಾವತ್!
ಗೀತಾ ಶಿವರಾಜ್‌ಕುಮಾರ್ 'ವೀಕ್ ಕ್ಯಾಂಡಿಡೇಟ್' ಎಂಬ ಮಾತು ಹರಿದಾಡಿತ್ತು. ಆ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ನಾನ್ಯಾಕೆ ವೀಕ್ ಕ್ಯಾಂಡಿಡೇಟ್ ಆಗ್ತೇನೆ. ಅವರಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿದೆ. ಅದಕ್ಕೆ ನನ್ನ ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ. ನಾನು ನಾಳೆಯೇ ನಾಮಪತ್ರ ಸಲ್ಲಿಸುತ್ತಿದ್ದೇನೆ. ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಶಿವರಾಜಕುಮಾರ್ ಜೊತೆಗಿರುತ್ತಾರೆ. ಹಲವು ಸಿನಿಮ ನಟರು ನಮ್ಮ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂದಿದ್ದರು.
ಮಗು ಅಳ್ತಾ ಇದ್ರೆ ನಂಗೆ ಟೆನ್ಷನ್ ಆಗುತ್ತೆ, ಎಲ್ರೂ ಹಾಲು ಕೊಡು ಅಂತಾರೆ, ಆದ್ರೆ... ; ಶ್ರುತಿ ಹರಿಹರನ್
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದೇವೆ. 2014ರ ಚುನಾವಣೆಗೂ ಈ ಬಾರಿಯ ಚುನಾವಣೆಗೆ ತುಂಬಾ ವ್ಯತ್ಯಾಸವಿದೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಮತದಾರರ ಒಲವು ನಮ್ಮ ಕಡೆ ಹೆಚ್ಚಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ ಹೇಳಿದರು.
ಶಿವಣ್ಣ 'ಜೋಗಿ' ಸಿನಿಮಾ ಬಗ್ಗೆ ನಟ ವಿಷ್ಣುವರ್ಧನ್ ಭವಿಷ್ಯ ಏನಿತ್ತು? ಆಮೇಲೆ ಏನಾಯ್ತು?
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕ್ಷೇತ್ರದಾದ್ಯಂತ ಸಂಚಾರ ನಡೆಸಿದಾಗ ಕುಡಿಯುವ ನೀರಿನ ಸಮಸ್ಯೆ ವಿದ್ಯುತ್ ಸಮಸ್ಯೆ ಬರಗಾಲ ಮೊದಲಾದ ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಸಮಯ ಇರುತ್ತೇನೆ. ನನ್ನ ಮಕ್ಕಳು ದೊಡ್ಡವರಾದ ಹಿನ್ನೆಲೆಯಲ್ಲಿ ನನಗೆ ಯಾವ ಸಮಸ್ಯೆಯೂ ಇಲ್ಲ. ಶಿವಮೊಗ್ಗ ಮತ್ತು ಸೊರಬದ ಕುಬಟೂರಿನಲ್ಲಿ ನನಗೆ ಮನೆ ಇದೆ. ಜಿಲ್ಲೆಯಲ್ಲಿ ಬಗರು ಹುಕುಂ ಹಕ್ಕು ಪತ್ರದ ಸಮಸ್ಯೆ ಇದೆ. ಇದನ್ನು ನನ್ನ ಸಹೋದರ ಮಧು ಬಂಗಾರಪ್ಪ ಜೊತೆಗೂಡಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದರು.
ಉಪೇಂದ್ರ ಚಿತ್ರದ 'ಕುಚು ಕುಚೂ' ಡೈಲಾಗ್ ಬಗ್ಗೆ ಪ್ರೇಮಾ ಹೇಳಿದ್ದೇನು; ವೇಶ್ಯೆ ಪಾತ್ರ ಮಾಡಿದ್ದಕ್ಕೆ ರಿಗ್ರೆಟ್ ಇದ್ಯಾ?
ಕ್ಷೇತ್ರದಲ್ಲಿ ಮೋದಿಯ ಆಲೆ ಎಂಬ ಮಾತನ್ನು ಕೂಡ ಗೀತಾ ಗಮನಕ್ಕೆ ತರಲಾಗಿತ್ತು. ಆಗ 'ಈ ರೀತಿಯ ಅಲೆಯ ಬಗ್ಗೆ ಗೊತ್ತಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹಾಲಿ ಸಂಸದರ ಪ್ರೋಗ್ರೆಸ್ ರಿಪೋರ್ಟ್ ನೋಡಿದ್ದೇನೆ. ಅದರಲ್ಲಿ ಎಲ್ಲವೂ ನಿಜವಿಲ್ಲ. ನನ್ನ ಎದುರಾಳಿ ಯಾರು ಎಂದು ಯೋಚನೆ ಮಾಡುವುದಿಲ್ಲ. ನಮಗೆ ಕೆಲವೊಮ್ಮೆ ನೇರ ಸ್ಪರ್ಧೆ ಇದ್ದರೆ ಕೆಲವೊಮ್ಮೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಈಶ್ವರಪ್ಪನವರ ಸ್ಪರ್ಧೆಯಿಂದ ನಮಗೆ ಲಾಭ ನಷ್ಟದ ಪ್ರಶ್ನೆ ಇಲ್ಲ' ಎಂದಿದ್ದರು.
'ಹೆಲ್ಪಿಂಗ್ ಹ್ಯಾಂಡ್' ಖ್ಯಾತಿಯ ಕಿಚ್ಚ ಸುದೀಪ್ ಮನೆಗೇ ಬಂದಿದ್ದ ಅಭಿಮಾನಿ ವ್ಯಕ್ತಿಗೆ ಮಾಡಿದ್ದೇನು?