Asianet Suvarna News Asianet Suvarna News

ಮಗು ಅಳ್ತಾ ಇದ್ರೆ ನಂಗೆ ಟೆನ್ಷನ್ ಆಗುತ್ತೆ, ಎಲ್ರೂ ಹಾಲು ಕೊಡು ಅಂತಾರೆ, ಆದ್ರೆ... ; ಶ್ರುತಿ ಹರಿಹರನ್

ಮಗು ಅಳುತ್ತೆ. ಆಗ ನಂಗೆ ಟೆನ್ಷನ್ ಆಗುತ್ತೆ. ಮಗು ಅಳ್ತಾ ಇದ್ಯಾ, ಹಾಲು ಕೊಡು ಅಂತಾರೆ ಎಲ್ಲರೂ ಸೇರಿ. ನಮ್ಮಮ್ಮ ಅಮ್ಮ, ಅಮ್ಮ ಅಜ್ಜಿ ಹಾಗೂ ಸುತ್ತಮುತ್ತ ಇರೋರು ಎಲ್ರೂ ಮಗು ಬಗ್ಗೆನೇ ಯೋಚ್ನೆ ಮಾಡೋಕೆ ಶುರು ಮಾಡ್ತಾರೆ. 

Actress Sruthi Hariharan says about child and motherhood responsibility srb
Author
First Published Jun 4, 2024, 11:07 AM IST

ಮಲೆಯಾಳಂ ಹಾಗೂ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರಿಗೆ ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಅಪರಿಚಿತರಲ್ಲ. ಲೂಸಿಯಾ, ತಾರಕ್, ಉಪೇಂದ್ರ ಮತ್ತೆ ಬಾ ಸೇರಿದಂತೆ ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್ 'ಮೀ ಟೂ' ಮೂಲಕ ಕೂಡ ಬಹಳಷ್ಟು ಸುದ್ದಿ ಮಾಡಿದವರು. ನಟಿ ಶ್ರುತಿ ಹರಿಹರನ್ ಅವರ 'ಮೀಟೂ' ಅಭಿಯಾನ ಹಳ್ಳ ಹಿಡಿದು ಹೋಗಿದ್ದರೂ ಅವರ ಅಮೋಘ ಎನಿಸುವ ನಟನೆಯನ್ನು ಯಾವತ್ತೂ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಇಂಥ ನಟಿ ಈಗ ಮದುವೆಯಾಗಿ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದು, ಅದನ್ನು ಜಗತ್ತಿನ ಜೊತೆ ಹಂಚಿಕೊಂಡಿದ್ದಾರೆ. 

ಸಂದರ್ಶನವೊಂದರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಾಯ್ತನದ ಬಗ್ಗೆ ಮಾತನಾಡಿದ್ದಾರೆ. ಮಗು ಆದ ತಕ್ಷಣ ಹೆಣ್ಣು ತಾಯಿ ಆಗುತ್ತಾಳೆ. ಅವಳ ಪ್ರಯಾರಿಟಿ ಬೇರೆ ಆಗುತ್ತದೆ. ಮಗು ಎನ್ನುವುದು ತುಂಬಾ ದೊಡ್ಡ ರೆಸ್ಪಾನ್ಸಿಬಿಲಿಟಿ. ನಾವು ಅದನ್ನು ನಮಗೆ ಮಗು ಆಗುವ ಮೊದಲು ಊಹಿಸಲೂ ಸಾಧ್ಯವಿಲ್ಲ. ನಾವು ಒಂದು ಜೀವಕ್ಕೆ ಜವಾಬ್ದಾರಿ ಆಗುತ್ತೇವೆ. ನನಗೆ ಮಗು ಆಗಿ ಒಂದೂವರೆ ತಿಂಗಳು ಆದ ಬಳಿಕ ನಾನು ನಿಜವಾಗಿಯೂ ತಾಯ್ತನ ಹಾಗೂ ಮಗುವಿನ ಲಾಲನೆ-ಪಾಲನೆಯನ್ನು ಎಂಜಾಯ್ ಮಾಡಲು ಶುರು ಮಾಡಿದೆ. 

ಉಪೇಂದ್ರ ಚಿತ್ರದ 'ಕುಚು ಕುಚೂ' ಡೈಲಾಗ್‌ ಬಗ್ಗೆ ಪ್ರೇಮಾ ಹೇಳಿದ್ದೇನು; ವೇಶ್ಯೆ ಪಾತ್ರ ಮಾಡಿದ್ದಕ್ಕೆ ರಿಗ್ರೆಟ್ ಇದ್ಯಾ?

ಮಗು ಅಳುತ್ತೆ. ಆಗ ನಂಗೆ ಟೆನ್ಷನ್ ಆಗುತ್ತೆ. ಮಗು ಅಳ್ತಾ ಇದ್ಯಾ, ಹಾಲು ಕೊಡು ಅಂತಾರೆ ಎಲ್ಲರೂ ಸೇರಿ. ನಮ್ಮಮ್ಮ ಅಮ್ಮ, ಅಮ್ಮ ಅಜ್ಜಿ ಹಾಗೂ ಸುತ್ತಮುತ್ತ ಇರೋರು ಎಲ್ರೂ ಮಗು ಬಗ್ಗೆನೇ ಯೋಚ್ನೆ ಮಾಡೋಕೆ ಶುರು ಮಾಡ್ತಾರೆ. ಮಗುಗೆ ಹಾಲು ಕೊಡು, ಮಗುಗೆ ಹಾಲ್ ಕೊಡು ಅಂತಾರೆ. ಆದರೆ, ಮಗು ಅಳೋದು ಕೇವಲ ಹಾಲಿಗಾಗಿ ಮಾತ್ರ ಅಲ್ಲ, ಬೇರೆ ಬಹಳಷ್ಟು ಕಾರಣಗಳು ಇರ್ತಾವೆ. ಮೊದಲ ಆರು ತಿಂಗಳು ಮಗುವನ್ನು ನೋಡಿಕೊಳ್ಳುವುದು ತುಂಬಾ ಕಷ್ಟ. ಮಗುಗೆ ಹುಟ್ಟಿದ ಮೊದಲ ಕೆಲವು ತಿಂಗಳುಗಳು ಅಥವಾ ವರ್ಷ ಆಗುವಷ್ಟರವರೆಗೆ ಏನೋ ಗೊತ್ತಿರುವುದಿಲ್ಲ' ಎಂದಿದ್ದಾರೆ ನಟಿ ಶ್ರುತಿ ಹರಿಹರನ್. 

'ಹೆಲ್ಪಿಂಗ್ ಹ್ಯಾಂಡ್‌' ಖ್ಯಾತಿಯ ಕಿಚ್ಚ ಸುದೀಪ್ ಮನೆಗೇ ಬಂದಿದ್ದ ಅಭಿಮಾನಿ ವ್ಯಕ್ತಿಗೆ ಮಾಡಿದ್ದೇನು?

ನಟಿ ಶ್ರುತಿ ಹರಿಹರನ್ ಸದ್ಯ ಸಿನಿಮಾ ನಟನೆಯಿಂದ ದೂರವಿದ್ದಾರೆ. ಹೆಣ್ಣು ಮಗುವಿನ ತಾಯಿಯಾಗಿರುವ ನಟಿ ಶ್ರುತಿ ಹರಿಹರನ್ ಸದ್ಯಕ್ಕೆ ತಮ್ಮ ಮಗುವಿನ ಪಾಲನೆಯಲ್ಲಿ ನಿರತರಾಗಿದ್ದಾರೆ. ಕನ್ನಡ ಸೇರಿದಂತೆ ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಕೂಡ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಮೀ ಟೂ ಅಭಿಯಾನಕ್ಕೆ ನಾಂದಿ ಹಾಡಿ ದೇಶದಲ್ಲೆಡೆ ಸುದ್ದಿಯಾಗಿದ್ದ ಶ್ರುತಿ ಹರಿಹರನ್ ಆ ವಿವಾದ ಬಗೆಹರಿಯುವ ಮೊದಲೇ ವಿವಾಹ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ, ಈಗ ಮಗುವಿನ ತಾಯಿಯಾಗಿ ತಾಯ್ತನದ ಬಗ್ಗೆ ಮಾತನಾಡಿ ಮತ್ತೆ ಸುದ್ದಿಯಾಗುತ್ತಿದ್ದಾರೆ. 

ಆ್ಯಂಕರ್​ ಅನುಶ್ರೀ ಜತೆ ಸೀಕ್ರೆಟ್ ಟಾಕ್; ಬಡವರ ಮನೆ ಹೆಣ್ಮಕ್ಳಿಗೆ ಹೀರೋಯಿನ್ ಆಗೋದಕ್ಕೆ ಬಿಡ್ತಾರಾ?

Latest Videos
Follow Us:
Download App:
  • android
  • ios