Asianet Suvarna News Asianet Suvarna News

ಶಿವಣ್ಣ 'ಜೋಗಿ' ಸಿನಿಮಾ ಬಗ್ಗೆ ನಟ ವಿಷ್ಣುವರ್ಧನ್‌ ಭವಿಷ್ಯ ಏನಿತ್ತು? ಆಮೇಲೆ ಏನಾಯ್ತು?

ನಟ ವಿಷ್ಣುವರ್ಧನ್ ಅವರು ಜೋಗಿ ಸಿನಿಮಾವನ್ನು ಬೆಂಗಳೂರಿನ ರೇಣುಕಾಂಬಾ ಥಿಯೇಟರ್‌ನಲ್ಲಿ ನೋಡಿದ್ದಾರೆ. ಸಿನಿಮಾ ಬಗ್ಗೆ ಏನೂ ರಿಯಾಕ್ಷನ್ ಕೊಡಲಿಲ್ಲ. ಆ ಬಗ್ಗೆ ಜೋಗಿ ಟೀಮ್ ಕೇಳಲು, 'ಇಲ್ಲಿ ನಾನೇನೂ ಹೇಳಲ್ಲ. ಆಮೇಲೆ ಮನೆಗೆ ಹೋಗಿ ಹೇಳ್ತೀನಿ' ಅಂದ್ರಂತೆ. 

Actor Vishnuvardhan told that Shiva Rajkumar lead Jogi would become super hit srb
Author
First Published Jun 4, 2024, 12:41 PM IST

ಪ್ರೇಮ್ ನಿರ್ದೇಶನ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ಜೋಗಿ' ಸಿನಿಮಾ ಕನ್ನಡದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಿರುವುದು ಗೊತ್ತೇ ಇದೆ. ಜೋಗಿಯಲ್ಲಿ ಕಥೆ-ಚಿತ್ರಕಥೆ, ಶಿವಣ್ಣ ಗೆಟ್‌ಅಪ್, ಗುರುಕಿರಣ್ ಹಿನ್ನೆಲೆ ಸಂಗೀತ, ಹಾಡುಗಳು ಎಲ್ಲವೂ ದೊಡ್ಡಮಟ್ಟದ ಯಶಸ್ಸಿಗೆ ಕಾರಣವಾಗಿದ್ದವು. ಇಂದೂ ಕೂಡ ಜೋಗಿ ಸಿನಿಮಾದ ಬಗ್ಗೆ ಕನ್ನಡ ಸಿನಿಪ್ರೇಕ್ಷಕರು ಮಾತನಾಡುತ್ತಲೇ ಇರುತ್ತಾರೆ. ಈ ಚಿತ್ರದ ಬಗ್ಗೆ ನಟ, ಕನ್ನಡದ ಸಾಹಸಸಿಂಹ ವಿಷ್ಣುವರ್ಧನ್ ಅದೇನು ಹೇಳಿದ್ದಾರೆ ಎಂಬುದನ್ನು ನೋಡೋಣ!

ಹೌದು, ನಟ ವಿಷ್ಣುವರ್ಧನ್ ಅವರು ಜೋಗಿ ಸಿನಿಮಾವನ್ನು ಬೆಂಗಳೂರಿನ ರೇಣುಕಾಂಬಾ ಥಿಯೇಟರ್‌ನಲ್ಲಿ ನೋಡಿದ್ದಾರೆ. ಸಿನಿಮಾ ಬಗ್ಗೆ ಏನೂ ರಿಯಾಕ್ಷನ್ ಕೊಡಲಿಲ್ಲ. ಆ ಬಗ್ಗೆ ಜೋಗಿ ಟೀಮ್ ಕೇಳಲು, 'ಇಲ್ಲಿ ನಾನೇನೂ ಹೇಳಲ್ಲ. ಆಮೇಲೆ ಮನೆಗೆ ಹೋಗಿ ಹೇಳ್ತೀನಿ' ಅಂದ್ರಂತೆ. ಆಮೇಲೆ ಜೋಗಿ ನಿರ್ದೇಶಕ ಪ್ರೇಮ್ ವಿಷ್ಣುವರ್ಧನ್ ಮನೆಗೆ ಹೋದರೆ, ಅಲ್ಲಿ ಅವರು ಅರ್ಧ ಗಂಟೆ ಸುಮ್ಮನೇ ಕುಳಿತುಬಿಟ್ಟಿದ್ದರಂತೆ. ವಿಷ್ಣುವರ್ಧನ್ ಅಭಿಪ್ರಾಯ ತಿಳಿಯಲು ಅಲ್ಲಿ ಹೋಗಿ ಕುಳಿತಿದ್ದ ಹಲವು ನಿರ್ಮಾಪಕರು, ನಿರ್ದೇಶಕರು ವಿಷ್ಣುವರ್ಧನ್ ಸೈಲೆಂಟ್‌ ಆಗಿ ಕುಳಿತಿದ್ದನ್ನು ನೋಡಿ ಮುಖ ಮುಖ ನೋಡತೊಡಗಿದ್ದರಂತೆ. 

ಮಗು ಅಳ್ತಾ ಇದ್ರೆ ನಂಗೆ ಟೆನ್ಷನ್ ಆಗುತ್ತೆ, ಎಲ್ರೂ ಹಾಲು ಕೊಡು ಅಂತಾರೆ, ಆದ್ರೆ... ; ಶ್ರುತಿ ಹರಿಹರನ್

ಬಳಿಕ, ತಿಳಿದಿದ್ದೇನೆಂದರೆ, ಜೋಗಿ ಸಿನಿಮಾ ಕಥೆಗೆ ವಿಷ್ಣುವರ್ಧನ್ ಮಾರು ಹೋಗಿದ್ದರಂತೆ. ಆ ಕಾರಣಕ್ಕೇ ಅವರು ಅಷ್ಟೂ ಹೊತ್ತೂ ಸೈಲೆಂಟ್ ಆಗಿ ಕುಳಿತುಬಿಟ್ಟಿದ್ದರಂತೆ. ಆ ಸಿನಿಮಾವನ್ನು ಮೆಚ್ಚಿದ್ದ ವಿಷ್ಣುವರ್ಧನ್, 'ನಾವು ಬೆಳಕಲ್ಲಿ ಮಾಡುವ ಸಿನಿಮಾವನ್ನುಕತ್ತಲಲ್ಲಿ ತೋರಿಸುತ್ತೇವೆ. ಸಿನಿಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಡುತ್ತೇವೆ. ಸಿನಿಮಾದ ತಾಕತ್ತೇ ಅದು, ಜನರನ್ನು ಸೆಳೆಯುವ ಚುಂಬಕ ಶಕ್ತಿ. ಈ ಜೋಗಿ ಸಿನಿಮಾ ತುಂಬಾನೇ ಚೆನ್ನಾಗಿದೆ. ಈ ಚಿತ್ರ ಸೂಪರ್ ಹಿಟ್ ಆಗುತ್ತದೆ' ಎಂದಿದ್ದರಂತೆ. 

ಉಪೇಂದ್ರ ಚಿತ್ರದ 'ಕುಚು ಕುಚೂ' ಡೈಲಾಗ್‌ ಬಗ್ಗೆ ಪ್ರೇಮಾ ಹೇಳಿದ್ದೇನು; ವೇಶ್ಯೆ ಪಾತ್ರ ಮಾಡಿದ್ದಕ್ಕೆ ರಿಗ್ರೆಟ್ ಇದ್ಯಾ?

ಒಟ್ಟಿನಲ್ಲಿ, ನಟ ವಿಷ್ಣುವರ್ಧನ್ ಹೇಳಿದಂತೆ, ಜೋಗಿ ಸಿನಿಮಾ ಸೂಪರ್ ಹಿಟ್ ದಾಖಲಿಸಿತು. ಹೊಸ ರೀತಿಯ ಕಥೆ, ತಾಯಿ ಸೆಂಟಿಮೆಂಟ್ ಮೂಲಕ ಜೋಗಿ ಪ್ರೇಮ್ ಗೆದ್ದು ಬೀಗಿದರು. ಇಂದಿಗು ಕೂಡ ಜೋಗಿ ಸಿನಿಮಾ ಎಂದರೆ ಕನ್ನಡ ಸಿನಿಪ್ರೇಮಿಗಳ ಮೈ ರೋಮಾಂಚನಗೊಳ್ಳುತ್ತದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಜನರ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿತ್ತು. ಸಿನಿಮಾ ರಿಲೀಸ್‌ಗಿಂತ ಮೊದಲೇ ರೇಣುಕಾಂಬಾದಲ್ಲಿ ನೋಡಿದ್ದ ನಟ ವಿಷ್ಣುವರ್ಧನ್ ಪಕ್ಕಾ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ, ಆಗಿದೆ. 

ನಿವೇದಿತಾ ಜೈನ್: ಕೊಲ್ಲೂರಿನಲ್ಲಿ ಕೇರಳದ ಜ್ಯೋತಿಷಿ ಭವಿಷ್ಯ ನುಡಿದಿದ್ರು, ಹೇಳಿದಂತೆ ಆಯ್ತು!

Latest Videos
Follow Us:
Download App:
  • android
  • ios