Divyaspandana ರಮ್ಯಾ ಮತ್ತೆ ಸಿನಿಮಾಗೆ ಬಂದಾಯ್ತಂತೆ, ನಿಜನಾ?

ಒಂದೊಳ್ಳೆ ಸ್ಕ್ರಿಪ್ಟ್ ಸಿಕ್ಕಿದೆ. ಮತ್ತೆ ಸಿನಿಮಾಕ್ಕೆ ವಾಪಾಸ್ ಬರ್ತೀನಿ ಅಂದಿದ್ರು ಮೋಹಕ ತಾರೆ ರಮ್ಯಾ. ಯಾವಾಗ, ಏನು ಅಂತೆಲ್ಲ ಕೇಳಿದ್ರೆ, ಸೀ ಯೂ ಸೂನ್ ಅಂದಿದ್ದಾರೆ. ಆ ಕಾಲ ಇದೀಗ ಬಂದಿದೆ. ಅಂದ್ರೆ ರಮ್ಯಾ ನಟನೆಗೆ ಮರಳಿದ್ದಾರಾ?

 

Does Ramya second acting innings begun

ಸಖತ್ತಾದ ಲುಕ್, ಒಂಚೂರು  ಆಟಿಟ್ಯೂಟ್, ಮೂಗಿನ ತುದೀಲಿ ಕೋಪ, ಅದರಪ್ಪನಷ್ಟು ಅಂತಃಕರಣ. ರಮ್ಯಾ (Ramya) ಅನ್ನೋ ಮೋಹಕ ನಟಿಯನ್ನು ಸ್ಯಾಂಡಲ್‌ವುಡ್‌ (Sandalwood) ಮಂದಿ ಗುರುತಿಸಿಕೊಳ್ಳೋದು ಹೀಗೆ. ಈಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಆಮೇಲೆ ರಾಜಕೀಯದಲ್ಲಿ ಬ್ಯುಸಿ ಆದರು. ಸಂಸದೆಯಾಗಿ ಸಂಸತ್ ಪ್ರವೇಶಿಸಿದರು. ಹೀಗೆಲ್ಲ ಏನೇನೋ ಆಯ್ತು. ಇಷ್ಟೆಲ್ಲ ಆದರೂ ರಮ್ಯಾ ಮೇಲಿನ ಜನರ ಮೋಹ ಕಡಿಮೆ ಆಗಿಲ್ಲ. ರಮ್ಯಾಗೆ ಇನ್ನೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಹೆಚ್ಚು-ಕಡಿಮೆ ಆರು ವರ್ಷಗಳಿಂದ ಸಿನಿಮಾದಿಂದ ದೂರನೇ ಉಳಿದಿದ್ದರು. ರಾಜಕೀಯದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದ ಮೋಹಕತಾರೆ ರಮ್ಯಾ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಮನಸ್ಸು ಮಾಡುತ್ತಿದ್ದಾರೆ. 

ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸಬೇಕು. ಅವರನ್ನು ಸಿನಿಮಾ ಪರದೆ ಮೇಲೆ ಮತ್ತೆ ನೋಡಬೇಕು ಎಂಬ ಹಂಬಲ ಅವರ ಅಭಿಮಾನಿಗಳಲ್ಲಿದೆ. ಹಲವು ದಿನಗಳಿಂದ ರಮ್ಯಾ ಕಮ್ ಬ್ಯಾಕ್ ಮಾಡಬೇಕು ಅಂತ ಸಿನಿಪ್ರಿಯರು ಒತ್ತಡ ಹಾಕುತ್ತಿದ್ದರು. ಅವರ ಒತ್ತಾಯದಂತೆ ಮೋಹಕ ತಾರೆ ಸ್ಯಾಂಡಲ್‌ವುಡ್‌ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಆ ಸುದ್ದಿ ಹೊರಬೀಳಲಿದೆ. 

 

ಈ ಹಿಂದೆ ರಮ್ಯಾ ಇನ್‌ಸ್ಟಾದಲ್ಲಿ 'ಆಸ್ಕ್ ಮಿ ಎನೀ ಥಿಂಗ್' ನಲ್ಲಿ ಫ್ಯಾನ್ಸ್ ಜೊತೆಗೆ ಕೊಶ್ಚನ್ ಆನ್ಸರ್ ಸೆಶನ್‌ನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಬಹಳಷ್ಟು ಜನ ಅವರ ಸಿನಿಮಾ ಕಂ ಬ್ಯಾಕ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಗ ರಮ್ಯಾ ಹೇಳಿದ ಮಾತು ಅವರೆಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸಿನಿಮಾ ಅನ್ನೋ ಹಡಗು ನನ್ನಿಂದ ಬಹುದೂರ ಹೋಗಿದೆ. ನನ್ನ ಪಾಲಿಗೆ ಅದೇನಿದ್ದರೂ ಮುಳುಗಿದ ಹಡಗು. ಅದನ್ನೇರಲು ಸಾಧ್ಯವಿಲ್ಲ, ಅದರಲ್ಲಿ ಜರ್ನಿ ಮಾಡುವುದೂ ಅಸಾಧ್ಯ ಎಂಬರ್ಥದ ಮಾತುಗಳನ್ನು ಹೇಳಿದ್ದರು. ಇದಕ್ಕೆ ಸಾಕಷ್ಟು ಜನ ವಿರೋದ ವ್ಯಕ್ತಪಡಿಸಿದ್ದರು. ರಮ್ಯಾ ಹೀಗೆಲ್ಲ ಹೇಳ್ಬೇಡಿ. ನೀವು ವಾಪಾಸ್ ಸಿನಿಮಾಕ್ಕೆ ಬರಲೇ ಬೇಕು ಅಂದಿದ್ದಾರೆ. ರಮ್ಯಾ ಇದನ್ನ ನಯವಾಗಿ ನಿರಾಕರಿಸಿದ್ದಾರೆ. ಆಮೇಲೆ ಜನರೂ ರಮ್ಯಾ ಸಿನಿಮಾಕ್ಕೆ ಬರುವ ಆಸೆ ಬಿಟ್ಟಿದ್ದಾರೆ. 

ನಟಿ ರಮ್ಯಾ ಜೊತೆ ಕಾಣಿಸಿಕೊಂಡ ಬಡವ ರಾಸ್ಕಲ್ ನಟಿ ಅಮೃತಾ!

ಆದರೆ ಕೆಲವು ಸಮಯದ ಹಿಂದೆ ರಮ್ಯಾ ಯಾರೂ ಊಹಿಸದ ಸರ್ಪೈಸ್ ನೀಡಿದ್ದರು. ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಮತ್ತೆ ನಟಿಸುತ್ತೇನೆ ಎಂದರು. ಅವರ ಈ ಮಾತು ಸಾಕಷ್ಟು ಜನರಲ್ಲಿ ಖುಷಿ ತಂದಿತು. ಅವರೆಲ್ಲ ರಮ್ಯಾ ವಾಪಾಸ್ ಬರುವ ಭರವಸೆಯಲ್ಲಿದ್ದರು. ಇದೀಗ ರಮ್ಯಾ ಇನ್ನೂ ಕೆಲವು ಸ್ಟೆಪ್ ಮುಂದೆ ಹೋಗಿದ್ದಾರೆ. ಕನ್ನಡ ಸಿನಿಮಾ ತಂಡವೊಂದು ರಮ್ಯಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಶೀಘ್ರದಲ್ಲಿ ಮೋಹಕತಾರೆಯನ್ನು ತೆರೆಮೇಲೆ ನೋಡಬಹುದು ಎನ್ನುತ್ತಿದೆ ಸ್ಯಾಂಡಲ್‌ವುಡ್‌. ಅಷ್ಟಕ್ಕೂ ರಮ್ಯಾ ಕಮ್ ಬ್ಯಾಕ್ ಮಾಡಿರುವ ಆ ಸಿನಿಮಾ ಯಾವುದು, ಅದರಲ್ಲಿ ಅವರ ಪಾತ್ರ ಏನು ಅನ್ನೋದು ಇನ್ನೂ ಗುಟ್ಟಾಗಿದೆ. ಆದರೆ ಸಿನಿಮಾವೊಂದರಲ್ಲಿ ಅವರು  ಅತಿಥಿ ಪಾತ್ರದಲ್ಲಿ ಈಗಾಗಲೇ ನಟಿಸಿದ್ದಾರೆ ಎನ್ನುವ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರುತ್ತಿದೆ. ಕಮ್ ಬ್ಯಾಕ್ ಸಿನಿಮಾದಲ್ಲಿ ರಮ್ಯಾ ಇದೂವರೆಗೂ ಮಾಡದ ಪಾತ್ರವೊಂದರಲ್ಲಿ ನಟಿಸಿದ್ದು, ಪಾತ್ರ ಚಿಕ್ಕದಿದ್ದರೂ, ಸಿನಿಮಾದ ಹೈಲೈಟ್ ಈ ಪಾತ್ರವೇ ಆಗಿರುತ್ತಂತೆ. 

ರಚಿತಾಗೆ 'ಸುಂದರಿ' ಎಂದ ರಮ್ಯಾ; ನಿಮ್ ರೇಂಜಿಗೆ ಯಾರಿಲ್ಲ ಬಿಡಿ ಅಂತಿದ್ದಾರೆ ಫ್ಯಾನ್ಸ್

'ರಮ್ಯಾ ಕನ್ನಡದ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿರುವುದು ಸುಳ್ಳಲ್ಲ. ಆದರೆ, ಯಾವ ಸಿನಿಮಾ ಅನ್ನುವುದು ಶೀಘ್ರದಲ್ಲೇ ತಿಳಿಯುತ್ತೆ' ಅಂತಿದ್ದಾರೆ ಸ್ಯಾಂಡಲ್‌ವುಡ್ ನ ನಿರ್ಮಾಪಕರೊಬ್ಬರು. ರಮ್ಯಾ ಅವರೂ ಈ ಗುಟ್ಟು ಬಿಟ್ಟುಕೊಟ್ಟಿಲ್ಲ.  ಚಿತ್ರತಂಡ ಕೂಡ ಸುಳಿವು ಬಿಟ್ಟು ಕೊಡುತ್ತಿಲ್ಲ. ಸಿನಿಮಾ ಪ್ರಚಾರದ ವೇಳೆ ಈ ವಿಷಯವನ್ನು ರಿವೀಲ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕಾರಣಕ್ಕೆ ರಮ್ಯಾ ಸೂಪರ್‌ಸ್ಟಾರ್ ಸಿನಿಮಾದಲ್ಲಿ ನಟಿಸಿದ್ದಾರಾ ? ಹೊಸ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರಾ? ಇಲ್ಲ ಪ್ಯಾನ್ ಇಂಡಿಯಾ ಸಿನಿಮಾನಾ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಜನರಂತೂ ರಮ್ಯಾ ಕಮ್‌ಬ್ಯಾಕ್‌ಗೆ ಕಾತರದಿಂದ ಕಾಯುತ್ತಿದ್ದಾರೆ. 

ಜಗ್ಗೇಶ್ 'ತೋತಾಪುರಿ' ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್

Latest Videos
Follow Us:
Download App:
  • android
  • ios