ರಚಿತಾಗೆ 'ಸುಂದರಿ' ಎಂದ ರಮ್ಯಾ; ನಿಮ್ ರೇಂಜಿಗೆ ಯಾರಿಲ್ಲ ಬಿಡಿ ಅಂತಿದ್ದಾರೆ ಫ್ಯಾನ್ಸ್
ನಟಿ ರಮ್ಯಾ ಸಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ರಚಿತಾ ಪೋಸ್ಟ್ ಗೆ ಸುಂದರಿ ಎಂದು ರಮ್ಯಾ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಿಮ್ ರೇಂಜಿಗೆ ಯಾರಿಲ್ಲ ಬಿಡಿ ಎಂದು ಹೇಳುತ್ತಿದ್ದಾರೆ.
ಸ್ಯಾಂಡಲ್ ವುಡ್ ಕ್ವೀನ್, ಮೋಹಕತಾರೆ ರಮ್ಯಾ(Ramya) ಸಮಾಜಿಕ ಜಾಲತಾಣದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಅನೇಕ ವಿಚಾರಗಳನ್ನು ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಸ್ಯಾಂಡಲ್ ವುಡ್ ಸಿನಿಮಾಗಳ ಬಗ್ಗೆಯೂ ರಮ್ಯಾ ಪೋಸ್ಟ್ ಮಾಡುತ್ತಿದ್ದಾರೆ. ಸಿನಿಮಾ ಇಷ್ಟವಾದರೆ ಅದನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಷ್ಟೆಯಲ್ಲ ಮತ್ತೆ ಚಿತ್ರರಂಗಕ್ಕೆ ಮರಳುವ ಸೂಚನೆಯನ್ನು ಸಹ ನೀಡಿದ್ದಾರೆ. ಆಗಾಗ ಮೀಡಿಯಾ ಮುಂದೆ ಕಾಣಿಸಿಕೊಳ್ಳುತ್ತಿರುವ ನಟಿ ರಮ್ಯಾ ಯಾವಾಗ ತೆರೆಮೇಲೆ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಅನೇಕ ನಟಿಯರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ರಮ್ಯಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಪ್ರೋತ್ಸಾಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಟಿಯರ ಪೋಸ್ಟ್ ಗಳಿಗೆ ಕಾಮೆಂಟ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇದೀಗ ರಮ್ಯಾ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಅವರ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ನಟಿ ರಚಿತಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಸೀರೆ ಧರಿಸಿ ಪೋಸ್ ನೀಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರಚಿತಾ ಪೋಸ್ಟ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಜೊತೆಗೆ ನಟಿ ರಮ್ಯಾ ಕೂಡ ರಚಿತಾ ಅವರನ್ನು ಹೊಗಳಿದ್ದಾರೆ. ರಚಿತಾ ವಿಡಿಯೋಗೆ ರಮ್ಯಾ ಸುಂದರಿ ಎಂದು ಕಾಮೆಂಟ್ ಮಾಡಿದ್ದಾರೆ. ರಮ್ಯಾ ಕಾಮೆಂಟ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ನಟಿ ಶ್ರುತಿ ಹರಿಹರನ್ ಖಾತೆಯಿಂದ ರಮ್ಯಾಗೆ ಮೆಸೇಜ್; ಹ್ಯಾಕ್ ಮಾಡಲು ಪ್ರಯತ್ನಿಸಿದ ಕಿಡಿಗೇಡಿಗಳ
ರಮ್ಯಾ ಕಾಮೆಂಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, 'ನೀವು ಸ್ಯಾಂಡಲ್ ವುಡ್ ಕ್ವೀನ್, ಸಾವಿರಾರು ಜನ ಬರಬಹುದು ಹೋಗಬಹುದು ಆದರೆ ನೀವೆ ನಮಗೆ ಕ್ವೀನ್' ಎನ್ನುತ್ತಿದ್ದಾರೆ. ಇನ್ನು 'ಸುದೀಪ್ ಜೊತೆ ಯಾವಾಗ ನಟಿಸುತ್ತೀರಿ' ಎಂದು ಕೇಳುತ್ತಿದ್ದಾರೆ. ಇನ್ನೊಬ್ಬ ಅಭಿಮಾನಿ ಕಾಮೆಂಟ್ ಮಾಡಿ, 'ನಿಮಗಿಂತನಾ ಮೇಡಮ್, ನೀವು ಪಾಂಡ್ಸ್ ಪೌಡರ್ ಕಾಲದಲ್ಲೇ ಮಿಂಚಿದವರು' ಎಂದು ಹೇಳಿದ್ದಾರೆ. 'ಯಾರೆ ಇರಲಿ, ಯಾರೆ ಬರಲಿ ನಿಮ್ಮ ರೇಂಜಿಗೆ ಯಾರಿಲ್ಲ' ಎನ್ನುತ್ತಿದ್ದಾರೆ. ರಮ್ಯಾ ಅವರನ್ನು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.
ಕಮ್‌ಬ್ಯಾಕ್: ಸುವರ್ಣ ನ್ಯೂಸ್‌ಗೆ Ramya Exclusive ಮಾಹಿತಿ
ರಮ್ಯಾ ಕಾಮೆಂಟ್ ರಚಿತಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಮ್ಯಾ ಕಾಮೆಂಟ್ ಶೇರ್ ಮಾಡಿ, ಹಾರ್ಟ್ ಇಮೋಜಿ ಹಾಕಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ನಟಿ ರಮ್ಯಾ ಬಣ್ಣದ ಲೋಕದಿಂದ ದೂರ ಆಗಿ ಅನೇಕ ವರ್ಷಗಳಾಗಿದೆ. ಸಿನಿಮಾ ಬಳಿಕ ರಾಜಕೀಯದಲ್ಲಿ ಸಕ್ರೀಯರಾಗಿದ್ದ ರಮ್ಯಾ ಇದೀಗ ರಾಜಕೀಯದಿಂದನೂ ದೂರ ಆಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತರುವ ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ಮರಳುವ ಬಗ್ಗೆ ಸೂಚನೆ ನೀಡಿದ್ದಾರೆ. ಆದರೆ ಇನ್ನೂ ಯಾವುದೇ ಸಿನಿಮಾವನ್ನು ಘೋಷಣೆ ಮಾಡಿಲ್ಲ. ರಮ್ಯಾ ನಟಿಯಾಗಿ ಮತ್ತೆ ಅಭಿಮಾನಿಗಳನ್ನು ರಂಜಿಸುತ್ತಾರಾ ಅಥವಾ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಏನೇ ಆದರೂ ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ವಾಪಾಸ್ ಬರಲಿ ಎನ್ನುವುದು ಅಭಿಮಾನಿಗಳ ಆಶಯ.