ಬೈ ಬೈ ಕೊರೋನಾ, ನೀನು ಹೋಗಲೇ ಬೇಕಿದೆ, ಗುಡ್‌ ಬೈ ಕೊರೋನಾ ನಿನಗೆ ಬೇರೆ ದಾರಿ ಏನಿದೆ

ಇದು ಹಂಸಲೇಖ ಸಾಹಿತ್ಯ ರಚಿಸಿರುವ ಹಾಡು. ಕೊರೋನಾ ವೈರಸ್‌ ಜಾಗೃತಿ ಕುರಿತ ಈ ಹಾಡು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಾಹಿತ್ಯದ ಸಾಲುಗಳಿಗೆ ಹಂಸಲೇಖ ಸಂಗೀತ ನೀಡಿದ್ದರೆ ಪತ್ನಿ ಲತಾ ಹಂಸಲೇಖ ಹಾಗೂ ಪುತ್ರಿ ನಂದಿನಿ ಧ್ವನಿ ನೀಡಿದ್ದಾರೆ. ಹಾಡಿನ ಆರಂಭಕ್ಕೂ ಮುನ್ನ ಇದರ ಉದ್ದೇಶ ಕುರಿತು ಹಂಸಲೇಖ ಮಾತನಾಡಿದ್ದಾರೆ.

‘ಮಕ್ಕಳೇ ಭಯಪಡಬೇಡಿ, ಕೊರೋನಾ ಒಂದು ಕ್ರಿಮಿ. ಆ ತರಹ ವೈರಸ್‌ಗಳು ಭೂಮಿಗೆ ಅದೆಷ್ಟೋ ಬಂದು ಹೋಗಿವೆ. ಇದು ಸಹ ಬಂದು ಹೋಗುತ್ತೆ. ಹಾಗಾಗಿ ಹೆದರಬೇಡಿ. ಕೊರೋನಾ ಸೆಂಡಪ್‌ ಮಾಡೋಣ, ಬೈ ಬೈ ಹೇಳೋಣ’ ಎಂದು ಧೈರ್ಯ ತುಂಬಿದ್ದಾರೆ. ಸದ್ಯಕ್ಕೆ ಈ ಹಾಡು ಯುಟ್ಯೂಬ್‌ನಲ್ಲಿ ಲಭ್ಯವಿದೆ.

"