ತಿಂಗಳ ಹಿಂದಷ್ಟೇ ಮುದ್ದು ಕಂದಮ್ಮನ ತಾಯಿಯಾಗಿರುವ ನಟಿ ಅದಿತಿ ಪ್ರಭುದೇವ ಮೊದಲ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ. ಏನಿದು ಸರ್​ಪ್ರೈಸ್​ ಅಂತೀರಾ? 

 ನಟಿ ಅದಿತಿ ಪ್ರಭುದೇವ ಅವರ ಮನೆಯ ಮೊದಲ ಮಗಳಿಗೆ ಮೊದಲ ಹುಟ್ಟುಹಬ್ಬದ ಸಂಭ್ರಮ. ಇದೇನಿದು ಎಂದು ಅಚ್ಚರಿಯಾಗಬಹುದು. ಇದೇ ಏಪ್ರಿಲ್​ 4ರಂದು ಸ್ಯಾಂಡಲ್​ವುಡ್​ ಬ್ಯೂಟಿ ಅದಿತಿ ಪ್ರಭುದೇವ ಹೆಣ್ಣುಮಗುವಿನ ತಾಯಿಯಾಗಿದ್ದು, ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. ಮಗು ಹುಟ್ಟಿ ಇನ್ನೂ ಒಂದು ತಿಂಗಳಾಗಿಲ್ಲ, ಇದಾಗಲೇ ಹುಟ್ಟುಹಬ್ಬನಾ ಎಂದು ಕೇಳಬಹುದು. ಆದರೆ ಅಸಲಿಗೆ ತಮ್ಮ ಮಗಳು ಎಂದೇ ಭಾವಿಸಿರುವ ನಾಯಿಮರಿ ಚಾಕಲೇಟ್​ ಹುಟ್ಟುಹಬ್ಬವನ್ನು ನಟಿ ಮತ್ತು ಪತಿ ಯಶ್​ ಆಚರಿಸಿದ್ದಾರೆ. ಈ ಚಾಕಲೇಟ್​ ತಮ್ಮ ಲೈಫ್​ನಲ್ಲಿ ಬಂದ ಮೇಲೆ ತುಂಬಾ ಬದಲಾವಣೆ ಆಗಿದೆ. ನನಗೆ ಇದು ತುಂಬಾ ಪ್ರೀತಿ ಕೊಟ್ಟಿದೆ ಎಂದಿರುವ ನಟಿ, ಸ್ವಂತ ಮಕ್ಕಳಿಗೆ ಹುಟ್ಟುಹಬ್ಬ ಆಚರಿಸುವ ರೀತಿಯಲ್ಲಿಯೇ ನಾಯಿಯ ಹುಟ್ಟುಹಬ್ಬವನ್ನೂ ಆಚರಿಸಿದ್ದಾರೆ.

ಇದೇ ವೇಳೆ ತಮ್ಮ ಆರೋಗ್ಯದ ಬಗ್ಗೆಯೂ ಹೇಳಿಕೊಂಡಿರುವ ನಟಿ, ನಾನು ಮತ್ತು ಮಗಳು ತುಂಬಾ ಚೆನ್ನಾಗಿರುವುದಾಗಿ ಹೇಳಿದ್ದಾರೆ. ಇನ್ನೂ ಒಂದು ತಿಂಗಳು ತುಂಬದ ಕಾರಣ, ನಿಜವಾಗಿ ನೋಡುವುದಾದರೆ ಅದಿತಿ ಅವರು ಹಸಿ ಬಾಣಂತಿಯೇ. ಆದರೂ ಇದಾಗಲೇ ಬಂದು ಯೂಟ್ಯೂಬ್​ನಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ನಾಯಿಯಮರಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ ಅದಿತಿ ಗರ್ಭಿಣಿಯಾದ ಮೇಲೂ ಆ್ಯಕ್ಟೀವ್​ ಆಗಿಯೇ ಇದ್ದರು. ವಿಭಿನ್ನ ರೀತಿಯ ಟಿಪ್ಸ್​, ಅಡುಗೆ ಕುರಿತು ವಿಡಿಯೋ ಶೇರ್​ ಮಾಡುತ್ತಿರುವ ನಟಿ ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿಯೇ ಇದ್ದರು. ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು. ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಕಾಲು ಊದಿಕೊಳ್ಳುವುದು ಹಲವು ಗರ್ಭಿಣಿಯರಿಗೆ ಸಾಮಾನ್ಯ. ಇಡೀ ದೇಹದಲ್ಲಿನ ಪ್ರಕ್ರಿಯೆ ಒಂದೇ ಸಮನೆ ಬದಲಾಗುವ ಕಾರಣ, ದೇಹ ಮತ್ತು ಮನಸ್ಸು ಎರಡರ ಮೇಲೂ ಸಾಕಷ್ಟು ಪ್ರಭಾವ ಬೀರುತ್ತದೆ. ಕೆಲವೊಂದು ದೈಹಿಕ ಸಮಸ್ಯೆಗಳು ಕಾಣಿಸುತ್ತವೆ. ಅಂಥದ್ದರಲ್ಲಿ ಒಂದು ಕಾಲು ಊದಿಕೊಳ್ಳುವುದು. ಅದಕ್ಕೆ ಏನೇನು ಪರಿಹಾರ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ಅದಿತಿ ನೀಡಿದ್ದರು.

ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..

 ಇದೀಗ ಮಗು ಜನಿಸಿ 20 ದಿನಗಳಾದ ಮೇಲೆ ಗರ್ಭಿಣಿ ಅವಧಿಯಲ್ಲಿ, ತಾವು ಮಾಡಿದ್ದ ಇನ್ನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದರು. ತಾವು ಗರ್ಭಿಣಿಯಾಗಿದ್ದಾಗ ಹೇಗೆಲ್ಲಾ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೆ ಎನ್ನುವ ಬಗ್ಗೆ ನಟಿ ಹೇಳಿದ್ದಾರೆ. ಬೆಳಿಗ್ಗೆ ಬಿಸಿಯಾದ ನೀರು ಕುಡಿದು, ಏನಾದರೂ ಹಣ್ಣು ತಿಂದು ವ್ಯಾಯಾಮ ಮಾಡಲು ಹೋಗುತ್ತೇನೆ ಎಂದಿದ್ದಾರೆ ನಟಿ. ಇವರ ಈ ವಿಡಿಯೋ ಮಾಡಿದಾಗ ಎಂಟು ತಿಂಗಳು ತುಂಬಿದ್ದರಿಂದ ಈ ಸಮಯದಲ್ಲಿ ವೈದ್ಯರ ಸಲಹೆ ಪಡೆದು ವ್ಯಾಯಾಮ ಮಾಡುವಂತೆ ಹೇಳಿದ್ದಾರೆ. ತಾವು ರೆಗ್ಯುಲರ್​ ಆಗಿ ಯೋಗ, ವ್ಯಾಯಾಮ ಮಾಡುತ್ತಿದ್ದುದರಿಂದ ತಮಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದಿರುವ ಅವರು, ಹೊಸದಾಗಿ ಮಾಡುವುದಿದ್ದರೆ ವೈದ್ಯರ ಇಲ್ಲವೇ ಪರಿಣತದ ಸಲಹೆ ಪಡೆದು ಅದನ್ನು ಶುರು ಮಾಡುವಂತೆ ಹೇಳಿದ್ದಾರೆ. ಗರ್ಭಿಣಿಯಾಗಿದ್ದಾಗ ಮನಸ್ಸು ಉಲ್ಲಾಸವಾಗಿರಲಿ, ಹಿತವಾಗಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಿದರೆ ಒಳ್ಳೆಯದು ಎಂದಿದ್ದಾರೆ. 

ಇನ್ನು ನಟಿಯ ಸಿನಿ ಪಯಣದ ಕುರಿತು ಹೇಳುವುದಾದರೆ, ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ಅದಿತಿ, ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡುತ್ತಿದ್ದು, ಈಗ ಮೊದಲ ಮಗುವಿನ ಸಂತಸದಲ್ಲಿದ್ದಾರೆ.

ಹೊಟ್ಟೆ ಬೊಜ್ಜು ಕರಗಿಸೋದು ಇಷ್ಟು ಸುಲಭನಾ? ಡಯಟೀಷಿಯನ್​ ಕುಸುಮಾ ಈಸಿ ಟಿಪ್ಸ್​


YouTube video player