Asianet Suvarna News Asianet Suvarna News

ರಾಮಾಯಣ ಮಾಡ್ಬೇಕು, ರಾಮನಾಗಿ ನಾನು, ಸೀತೆಯಾಗಿ ನೀನು ನಟಿಸ್ಬೇಕು ಎಂದಿದ್ರಂತೆ ಡಾ ರಾಜ್‌ಕುಮಾರ್!

ಡಾ ರಾಜ್‌ಕುಮಾರ್ ಅವರು 'ನೃಪತುಂಗ' ಎನ್ನುವ ಸಿನಿಮಾದಲ್ಲಿ ಕೂಡ ನಟಿಸಬೇಕಿತ್ತು ಎನ್ನಲಾಗಿದೆ. ಆದರೆ, ಅದು ಕೂಡ ಸಾಧ್ಯವಾಗಲೇ ಇಲ್ಲ. 70 ವರ್ಷ ಕಳೆದ ಬಳಿಕ ವಯೋಸಹಜ ಎನ್ನುವಂತೆ ಡಾ ರಾಜ್‌ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. 

Dr Rajkumar said actress Bharathi Vishnuvardhan to do Ramayana movie which did not possible srb
Author
First Published Apr 25, 2024, 6:57 PM IST | Last Updated Apr 25, 2024, 7:01 PM IST

ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ ಹಾಗೂ ಭಾರತಿಯವ್ರ ಜೋಡಿ ಅಂದ್ರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಬಂಗಾರದ ಮನುಷ್ಯ, ಮೇಯರ್ ಮುತ್ತಣ್ಣ, ಗಂಗೆ ಗೌರಿ, ದೂರದ ಬೆಟ್ಟ, ಬಿಡುಗಡೆ, ತಾಯಿ ದೇವರು, ಗಂಧದ ಗುಡಿ, ಹಸಿರು ತೋರಣ, ನಮ್ಮ ಸಂಸಾರ, ಕುಲ ಗೌರವ, ಭಲೇ ಜೋಡಿ, ಹೃದಯ ಸಂಗಮ, ಜಗ ಮೆಚ್ಚಿದ ಮಗ, ಎಮ್ಮೆ ತಮ್ಮಣ್ಣ, ಜನ್ಮ ರಹಸ್ಯ ಸೇರಿದಂತೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಅವರಿಬ್ಬರ ಕೆಮೆಸ್ಟ್ರಿ ಅದೆಷ್ಟು ಚೆನ್ನಾಗಿ ಇರುತ್ತಿತ್ತು ಎಂದರೆ, ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕೂಡ ಎಲ್ಲೂ ಅಸಭ್ಯ ಎನ್ನುವಂತೆ ಇರುತ್ತಿರಲಿಲ್ಲ. ಧರಿಸುವ ಬಟ್ಟೆ, ಬಾಡಿ ಲಾಂಗ್ವೇಜ್ ಕೂಡ ನೋಡಿದವರಿಗೆ ಎಲ್ಲೂ ಅಸಭ್ಯ ಎನ್ನುವಂತೆ ಇರುತ್ತಿರಲಿಲ್ಲ. 

ಡಾ ರಾಜ್‌ಕುಮಾರ್ ಅವ್ರಿಗೆ ಯಾವಾಗ್ಲೂ ಒಂದು ಆಸೆ ಇತ್ತಂತೆ. ಅದನ್ನ ಯಾವಾಗ್ಲೂ ನಟಿ ಭಾರತಿ ಅವ್ರಿಗೆ ಹೇಳ್ತಾ ಇದ್ರಂತೆ. 'ನಂಗೆ ರಾಮಾಯಣ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇದೆ. ಅದ್ರಲ್ಲಿ ನಾನು ರಾಮನಾಗಿ, ನೀವು (ಭಾರತಿ) ಸೀತೆಯಾಗಿ ನಟಿಸ್ಬೇಕು' ಅಂದಿದ್ರಂತೆ ಡಾ ರಾಜ್‌ಕುಮಾರ್. ಆದ್ರೆ, ಕೊನೆಗೂ ಡಾ ರಾಜ್‌ ಅವ್ರ ಆ ಆಸೆ ಕೈಗೂಡ್ಲೇ ಇಲ್ಲ. ಅದಕ್ಕೆ ಭಾರತಿಯವ್ರು ಡಾ ರಾಜ್‌ಕುಮಾರ್ ಅವ್ರಿಗೆ 'ಅದು ದುರ್ದೈವ' ಎಂದಿದ್ದರಂತೆ. ಒಟ್ಟಿನಲ್ಲಿ, ಬಹಳಷ್ಟು ಚಿತ್ರಗಳಲ್ಲಿ ನಾಯಕ-ನಾಯಕಿಯರಾಗಿ ಮಿಂಚಿದ್ದ ಡಾ ರಾಜ್‌ಕುಮಾರ್ ಹಾಗೂ ಭಾರತಿ ಜೋಡಿ 'ರಾಮಾಯಣ' ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲೇ ಇಲ್ಲ. 

ಸಮರ್ಜಿತ್ ಲಂಕೇಶ್ 'ಗೌರಿ' ಪ್ರೀ ಟೀಸರ್ ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್

ಡಾ ರಾಜ್‌ಕುಮಾರ್ ಅವರು 'ನೃಪತುಂಗ' ಎನ್ನುವ ಸಿನಿಮಾದಲ್ಲಿ ಕೂಡ ನಟಿಸಬೇಕಿತ್ತು ಎನ್ನಲಾಗಿದೆ. ಆದರೆ, ಅದು ಕೂಡ ಸಾಧ್ಯವಾಗಲೇ ಇಲ್ಲ. 70 ವರ್ಷ ಕಳೆದ ಬಳಿಕ ವಯೋಸಹಜ ಎನ್ನುವಂತೆ ಡಾ ರಾಜ್‌ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಮಂಡಿ ನೋವು ಅವರನ್ನು ಎಡೆಬಿಡದೇ ಕಾಡುತ್ತಿತ್ತು. ಜೀವನ ಚೈತ್ರ ಶೂಟಿಂಗ್ ವೇಳೆಯಲ್ಲೇ ಅವರಿಗೆ ಸಾಕಷ್ಟು ದಣಿವಾಗುತ್ತಿತ್ತು ಎನ್ನುವವರಿದ್ದಾರೆ. ಅದೇನೇ ಇರಲಿ, ಡಾ ರಾಜ್‌-ಭಾರತಿ ಜೋಡಿಯ ಚಿತ್ರವೊಂದು ಕನ್ನಡ ಪ್ರೇಕ್ಷಕರಿಗೆ ತಪ್ಪಿಹೋಯ್ತು ಎಂಬ ಕೊರಗು ಅವರಿಬ್ಬರ ಜೋಡಿಯ ಅಭಿಮಾನಿಗಳಿಗೆ ಯಾವತ್ತೂ ಇರಲಿದೆ. 

ಶುಭಮಂಗಳ: ಈ ಶತಮಾನದ ಮಾದರಿ ಹೆಣ್ಣಿಗೆ 'ಮಂಗಳಾರತಿ' ಮಾಡಿದ್ರಾ ಪುಟ್ಟಣ್ಣ ಕಣಗಾಲ್?

ಅಂದಹಾಗೆ, ನಟಿ ಭಾರತಿಯವರು ಈಗ ಸಿನಿಮಾ ನಟನೆಯಲ್ಲಿ ಕ್ರಿಯಾಶೀಲವಾಗಿಲ್ಲ. ಆದರೆ, ತಮ್ಮ ದಿವಂಗತ ಪತಿ ಡಾ ವಿಷ್ಣುವರ್ಧನ್ ಜನ್ಮದಿನದಂದು ಅವರ ಸ್ಮರಣಾರ್ಥವಾಗಿ 'ವಿಷ್ಣು ಸೇನೆ' ಸಂಘದ ಮೂಲಕ ಹಲವಾರು ಸಮಾಜಮುಖಿ, ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನ್ನದಾನ, ರಕ್ತದಾನ ಶಿಬಿರಗಳು ಹೀಗೆ ನಟ ವಿಷ್ಣುವರ್ಧನ್ ಸ್ಮರಣಾರ್ಥವಾಗಿ ಪ್ರತಿವರ್ಷ ನಡೆಯುತ್ತಲೇ ಇರುತ್ತವೆ. 

ಪುಷ್ಪಾ ನಟಿಗೆ ಪ್ರಶ್ನೆಗಳ ಸರಮಾಲೆ, ರಶ್ಮಿಕಾ ಹೆಸರಿನ ಅರ್ಥ ಬಿಡಿಸಿ ಹೇಳಿದ 'ನ್ಯಾಷನಲ್ ಕ್ರಶ್!

Latest Videos
Follow Us:
Download App:
  • android
  • ios