Asianet Suvarna News Asianet Suvarna News

ಶುಭಮಂಗಳ: ಈ ಶತಮಾನದ ಮಾದರಿ ಹೆಣ್ಣಿಗೆ 'ಮಂಗಳಾರತಿ' ಮಾಡಿದ್ರಾ ಪುಟ್ಟಣ್ಣ ಕಣಗಾಲ್?

ಪುಟ್ಟಣ್ಣ ಕಣಗಾಲ್ ಅವರು ಆರತಿಗಾಗಿಯೇ ವಿಜಯ ನಾರಸಿಂಹ ಬಳಿ ಹೇಳಿ 'ಈ ಶತಮಾನದ ಮಾದರಿ ಹೆಣ್ಣು' ಹಾಡನ್ನು ಬರೆಸಿದ್ದರು. ವಿಜಯನಾರಸಿಂಹ ಆರತಿಯನ್ನು ಹೊಗಳಿ ಹಾಡನ್ನು ಬರೆಯುತ್ತೇನೆ ಎಂದಾಗ ಸ್ವತಃ ಪುಟ್ಟಣ್ಣ, 'ಹಾಗೆ ಬೇಡ, ಒಂದು ಕ್ವಾಲಿಟಿ..

Aarathi song Ee Shathamanada Madari Hennu in Puttanna Kanagal movie Shubhamangala srb
Author
First Published Apr 25, 2024, 3:21 PM IST | Last Updated Apr 25, 2024, 3:28 PM IST

ನಟಿ ಆರತಿ (Aarathi) ಹಾಗೂ ಪುಟ್ಟಣ್ಣ ಕಣಗಾಲ್ (Puttanna Kanagal) ಜೋಡಿ ನಿಜಜೀವನದಲ್ಲಿ ಒಮ್ಮೆ ಗಂಡ-ಹೆಂಡತಿಯಾಗಿದ್ದು ಗೊತ್ತೇ ಇದೆ. ಆದರೆ, ಅದಕ್ಕೂ ಮೊದಲು ಆರತಿಯವರಿಗಾಗಿಯೇ ಪುಟ್ಟಣ್ಣ ಕಣಗಾಲ್ 'ಶುಭಮಂಗಳ' ಚಿತ್ರವನ್ನು ಮಾಡಿದ್ದರು. ಈ ಚಿತ್ರವು 1975ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಬರೋಬ್ಬರಿ 4 ವರ್ಷಗಳಷ್ಟು ಧೀರ್ಘಕಾಲ ಶೂಟಿಂಗ್‌ ನಡೆದಿತ್ತು. ಪುಟ್ಟಣ್ಣ-ಆರತಿ ಈ ಸಮಯದಲ್ಲಿ ಗಂಡ-ಹೆಂಡತಿ ಆಗಿರದಿದ್ದರೂ ಈ ವೇಳೆಗಾಗಲೇ ಅವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಅದು ಸಿನಿಮಾ ಶೂಟಿಂಗ್‌ ಶುರುವಿನಲ್ಲಿ ಹೆಮ್ಮರವಾಗಿಯೇ ಇತ್ತು. ನಟಿ ಆರತಿ ಹಾಗು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಪ್ರೀತಿ ಸಾರ್ವಜನಿಕರ ದೃಷ್ಟಿಯಿಂದ ತುಂಬಾ ರಹಸ್ಯವಾಗಿತ್ತು. 

ಶುಭಮಂಗಳ (Shubhamangala) ಸಿನಿಮಾವನ್ನು ನಟಿ ಆರತಿಗಾಗಿಯೇ ಪುಟ್ಟಣ್ಣ ಕಣಗಾಲ್ ಮಾಡುತ್ತಿದ್ದರು. ಆದರೆ, ನಾಯಕ ಅಂತ ಒಬ್ಬರು ಇರಲೇಬೇಕಲ್ಲ. ನಟ ಶಿವರಾಂ ಮಾತಿನ ಮೂಲಕ ಬಂದ ನಟ ಶ್ರೀನಾಥ್ ಅವರು ಈ ಸಿನಿಮಾಗೆ ಹೀರೋ ಆಗಿ ಆಯ್ಕೆಯೇನೋ ಆದರು. ಆದರೆ, 'ಶ್ರೀನಾಥ್ (Srinath) ತುಂಬಾ ದಪ್ಪ ಇದ್ದಾರೆ, ಅವರು ತೆಳ್ಳಗಾಗಲೇಬೇಕು, ಜಾಗಿಂಗ್ ಮಾಡಿಸಿ' ಎಂದು ಪುಟ್ಟಣ್ಣ ಅವರು ಪಟ್ಟು ಹಿಡಿದರು ಎನ್ನಲಾಗಿದೆ. ಅದರಂತೆ ಶ್ರೀನಾಥ್ ಸ್ವಲ್ಪ ತೆಳ್ಳಗಾಗಿ ಶುಭ ಮಂಗಳ ನಾಯಕರಾದರು. ನಟ ಶಿವರಾಂ (Shivaram) ಕೂಡ ಪ್ರಮುಖ ಪಾತ್ರದಲ್ಲಿದ್ದರು. 

ಪುಷ್ಪಾ ನಟಿಗೆ ಪ್ರಶ್ನೆಗಳ ಸರಮಾಲೆ, ರಶ್ಮಿಕಾ ಹೆಸರಿನ ಅರ್ಥ ಬಿಡಿಸಿ ಹೇಳಿದ 'ನ್ಯಾಷನಲ್ ಕ್ರಶ್!

ಪುಟ್ಟಣ್ಣ ಕಣಗಾಲ್ ಅವರು ಆರತಿಗಾಗಿಯೇ ವಿಜಯ ನಾರಸಿಂಹ ಬಳಿ ಹೇಳಿ 'ಈ ಶತಮಾನದ ಮಾದರಿ ಹೆಣ್ಣು' ಹಾಡನ್ನು ಬರೆಸಿದ್ದರು. ವಿಜಯನಾರಸಿಂಹ ಆರತಿಯನ್ನು ಹೊಗಳಿ ಹಾಡನ್ನು ಬರೆಯುತ್ತೇನೆ ಎಂದಾಗ ಸ್ವತಃ ಪುಟ್ಟಣ್ಣ, 'ಹಾಗೆ ಬೇಡ, ಒಂದು ಕ್ವಾಲಿಟಿ ಇಟ್ಟುಕೊಂಡು ಬರೆಯಿರಿ' ಎಂದು ಹೇಳಿ' ಈ ಶತಮಾನದ ಮಾದರಿ ಹೆಣ್ಣು' ಹೀಗೆ ಏನಾದ್ರೂ ಇರಲಿ ಎಂದ್ರಂತೆ. ತಕ್ಷಣ ವಿಜಯನಾರಸಿಂಹ ಅವರು 'ಅದನ್ನೇ ಹೆಡ್‌ಲೈನ್‌ ಆಗಿ ಇಟ್ಟುಕೊಂಡು 'ಈ ಶತಮಾನದ ಮಾದರಿ ಹೆಣ್ಣು' ಎಂದು ಪ್ರಾರಂಭಿಸಿ ಹಾಡು ಬರೆದುಕೊಟ್ಟರಂತೆ. ವಿಜಯ್ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಆ ಹಾಡಿಗೆ ಆರತಿ ನಟನೆ ಮೂಲಕ ಜೀವ ತುಂಬಿದ್ದಾರೆ. 

ಪುಷ್ಪಾ ನಟಿಗೆ ಪ್ರಶ್ನೆಗಳ ಸರಮಾಲೆ, ರಶ್ಮಿಕಾ ಹೆಸರಿನ ಅರ್ಥ ಬಿಡಿಸಿ ಹೇಳಿದ 'ನ್ಯಾಷನಲ್ ಕ್ರಶ್!

ಇಲ್ಲೊಂದು ಅಚ್ಚರಿಯ ಸಂಗತಿಯಿದೆ. ಶುಭ ಮಂಗಳ ಹಾಡು ಬರೆಯಿಸಿ ಶೂಟಿಂಗ್ ಶುರುವಾಗುವ ಹೊತ್ತಿಗೆ ನಟಿ ಆರತಿ ಹಾಗೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಡುವೆ ಪ್ರೀತಿ ಚಿಗುರಿ ಬೆಳೆಯುತ್ತಿತ್ತು. ಆದರೆ ನಾಲ್ಕು ವರ್ಷಗಳಲ್ಲಿ ಈ ಹಾಡಿನ ಚಿತ್ರೀಕರಣ ಮುಗಿಯುವ ಹೊತ್ತಿಗೆ ಆರತಿ-ಪುಟ್ಟಣ್ಣ ಮಧ್ಯೆ ಮನಸ್ತಾಪ ಮೂಡಿತ್ತು. ಹೀಗಾಗಿ ಆ ಹಾಡಿನ ಮೂಲಕ ಆರತಿಯನ್ನು ಕೊನೆಯಲ್ಲಿ ಡಮ್ಮಿ ಮಾಡುವ ಉದ್ದೇಶ ಪುಟ್ಟಣ್ಣ ಅವರದ್ದಾಗಿತ್ತು. ಹೀಗಾಗಿಯೇ ಹಾಡಿನ ಕೊನೆಯಲ್ಲಿ ಆರತಿ ಪರ್ಸ್‌ನಲ್ಲಿದ್ದ ಹಣ ಮಾಯವಾಗಿ ಖಾಲಿ ಪರ್ಸ್‌ ಅಷ್ಟೇ ಆರತಿ ಕೈಗೆ ಸಿಕ್ಕಿತ್ತು. 

'ವೋಟ್ ನಮ್ಮ ಪವರ್' ರ್‍ಯಾಪ್ ಸಾಂಗ್ ಮೂಲಕ ಮತದಾನದ ಮಹತ್ವ ಸಾರಿದ ಚಂದನವನದ ತಾರೆಯರು!

ಈ ಶತಮಾನದ ಮಾದರಿ ಹೆಣ್ಣು ಎಂದು ಪ್ರಾರಂಭವಾಗುವ ಹಾಡಿನಲ್ಲಿ, ಹೇಮಾ ಪಾತ್ರಧಾರಿ ನಟಿ ಆರತಿ ತಾವು ಹಾಗೂ ತಮ್ಮ ಶಿಷ್ಯಂದಿರ ಜತೆ ಸೇರಿ ಕಳ್ಳರ ಜತೆ ಹೋರಾಡಿ ತಮ್ಮ ಪರ್ಸ್‌ ಕಾಪಾಡಿಕೊಳ್ಳುತ್ತಾರೆ. ಆದರೆ, ಹಾಡು ಮುಗಿಯುವ ಹೊತ್ತಿಗೆ ಆರತಿ ಪರ್ಸಿನಲ್ಲಿದ್ದ ಹಣವನ್ನು ಎಗರಿಸಿ ಕಳ್ಳರು ಖಾಲಿ ಪರ್ಸ್ ನೀಡುವ ಮೂಲಕ ಆರತಿನ್ನು ಯಾಮಾರಿಸಿರುತ್ತಾರೆ. ತನ್ನ ಪರ್ಸ್ ಅನ್ನೇ ಕಾಪಾಡಿಕೊಳ್ಳಲಾಗದ ಈ ಹೆಣ್ಣು ಅದು ಹೇಗೆ 'ಈ ಶತಮಾನದ ಮಾದರಿ ಹೆಣ್ಣು' ಆಗಿರುತ್ತಾಳೆ ಎಂದು ಎಲ್ಲರೂ ಮಾತನಾಡಿಕೊಳ್ಳುವಂತೆ, ಹಾಸ್ಯ ಮಾಡುವಂತೆ ಮಾಡಿದ್ದಾರೆ ನಿರ್ದೇಶಕ ಪುಟ್ಟಣ್ಣನವರು. 

ಮಾಲಾಶ್ರೀ 'ಮಾರಕಾಸ್ತ್ರ' ಮತ್ತೆ ಬಿಡುಗಡೆ; ತೆಲುಗಿನಲ್ಲೂ ಕಮಾಲ್ ಮಾಡಲಿದೆ 'ಮಾರಣಾಯಧಂ'..!

Latest Videos
Follow Us:
Download App:
  • android
  • ios