ಚುನಾವಣೆ ನಂತರ ಕಾಂಗ್ರೆಸ್ ನಿರ್ನಾಮ: ರಮೇಶ ಜಿಗಜಿಣಗಿ
ಬಿಜೆಪಿ ಬಂದರೆ ದಲಿತರು, ಮುಸ್ಲಿಮರಿಗೆ ತೊಂದರೆ ಆಗುತ್ತದೆ ಎಂದು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದವರು, ಅಂಬೇಡ್ಕರ್ ತೀರಿಹೋದ ಮೇಲೆ ಅವರ ಅಂತ್ಯಸಂಸ್ಕಾರ ಮಾಡಲು ಜಾಗ ನೀಡದೇ ದೇಶದ ಮಹಾನ್ ನಾಯಕನಿಗೆ ಅಗೌರವ ತೋರಿಸಿತು: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ
ಇಂಡಿ(ಏ.25): ಲೋಕಸಭಾ ಚುನಾವಣೆ ಮುಗಿದ ಮುಂದಿನ ದಿನದಲ್ಲಿ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ. ಮುಸ್ಲಿಮರು ಹಾಗೂ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡು ಮೋಸ ಮಾಡಿದೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ದೂರಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಂದರೆ ದಲಿತರು, ಮುಸ್ಲಿಮರಿಗೆ ತೊಂದರೆ ಆಗುತ್ತದೆ ಎಂದು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದವರು, ಅಂಬೇಡ್ಕರ್ ತೀರಿಹೋದ ಮೇಲೆ ಅವರ ಅಂತ್ಯಸಂಸ್ಕಾರ ಮಾಡಲು ಜಾಗ ನೀಡದೇ ದೇಶದ ಮಹಾನ್ ನಾಯಕನಿಗೆ ಅಗೌರವ ತೋರಿಸಿತು. ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ದೇಶದ ಎಲ್ಲಿ ನೋಡಿದರೂ ಬಾಂಬ್ ಸದ್ದು ಕೇಳಿಸುತ್ತಿತ್ತು. ಕಾಶ್ಮೀರದ 370 ಕಲಂ ಅನ್ನು ರದ್ದುಗೊಳಿಸುವುದರ ಮೂಲಕ ಪ್ರತ್ಯೇಕ ಕಾಶ್ಮೀರ ಬಾವುಟವನ್ನು ತೆಗೆದುಹಾಕಿ ದೇಶಪ್ರೇಮ ಮೆರೆದಿದ್ದಾರೆ ನಮ್ಮ ಹೆಮ್ಮೆಯ ಪ್ರಧಾನಿ ಎಂದು ಹೇಳಿದರು.
ಕೀಳು ಮಟ್ಟಕ್ಕೆ ಇಳಿದ ಪ್ರಧಾನಿ ಮೋದಿ ಮೇಲೂ ಆಯೋಗ ಕ್ರಮ ಕೈಗೊಳ್ಳಲಿ: ಎಂ.ಬಿ.ಪಾಟೀಲ
ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಸುಮಾರು ₹25 ಸಾವಿರ ಕೋಟಿ ಅನುದಾನವನ್ನು ಬೇರೆಡೆಗೆ ಬಳಕೆ ಮಾಡಿಕೊಂಡು ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ರಾಜ್ಯದ ಸಮಾಜ ಕಲ್ಯಾಣ ಸಚಿವರು ದಲಿತ ಸಮುದಾಯಕ್ಕೆ ಸೇರಿದ ಮಹಾದೇವಪ್ಪನವರು ಇದ್ದರೂ ಅದರ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ, ಕ್ಯಾಬಿನೆಟ್‌ನಲ್ಲಿ ವಿರೋಧ ಆದರೂ ಬಿಡದೇ, ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದೇನೆ ಎಂದು ಹೇಳಿದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಅರುಣ ಶಹಾಪೂರ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ,ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ವಿಜು ಮಾನೆ,ಬಾಳು ಮುಳಜಿ,ಶಾಂತು ಕಂಬಾರ, ಮಲ್ಲು ವಾಲಿಕಾರ,ಶಿವು ಬಗಲಿ, ಸುನೀಲ ಕಾಲೇಬಾಗ, ಭೀಮು ಮಸಳಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.