Asianet Suvarna News Asianet Suvarna News

ಬಾಲಿವುಡ್‌ಗೆ ಹೊರಟ ಹೊಂಬಾಳೆ ಫಿಲ್ಮ್ಸ್; ಶಾರುಖ್ ಜೊತೆ ಸಿನಿಮಾ, ನಿರ್ದೇಶಕ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಂಬಾಳೆ ಫಿಲ್ಮ್ಸ್ ಸೌತ್ ಸಿನಿಮಾಗಳ ಬಳಿಕ ಇದೀಗ ಬಾಲಿವುಡ್ ಕಡೆ ಹೊರಟಿದೆ. ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. 

bollywood star Shah rukh khan likely to Act in Hombale Films sgk
Author
First Published Dec 3, 2022, 1:20 PM IST

ಹೊಂಬಾಳೆ ಫಿಲ್ಮ್ಸ್ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ. ಕೆಜಿಎಫ್ ಮತ್ತು ಕಾಂತಾರ ಸಿನಿಮಾ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಕನ್ನಡ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿರದೆ ಬೇರೆ ಬೇರೆ ಭಾಷೆಯ ಸಿನಿಮಾಗಳಿಗೂ ಬಂಡವಾಳ ಹೂಡುತ್ತಿದೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳನ್ನು ಮಾಡುತ್ತಿದೆ. ಸೌತ್ ಸಿನಿಮಾಗಳ ಬಳಿಕ ಇದೀಗ ಹೊಂಬಾಳೆ ಫಿಲ್ಮ್ಸ್ ಬಾಲಿವುಡ್ ಕಡೆ ಮುಖ ಮಾಡಿದೆ. ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ಸ್ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದೆ, ಹಿಂದಿಯ ಸ್ಟಾರ್ ನಟನ ಜೊತೆ ಸಿನಿಮಾ ಮಾಡಲಿದೆ ಎನ್ನುವ ಸುದ್ದಿ ಅನೇಕ ತಿಂಗಳಿಂದ ಕೇಳಿ ಬರುತ್ತಲೇ ಇತ್ತು. ಇದೀಗ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತೆ  ನಿರ್ದೇಶಕ ಯಾರು ಎನ್ನುವ ಮಾಹಿತಿ ಕೂಡ ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಕನ್ನಡದ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಮಾಡುತ್ತಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಶಾರುಖ್. ಇದೀಗ ಹೊಂಬಾಳೆ ಫಿಲ್ಮ್ಸ್ ಶಾರುಖ್ ಜೊತೆ ಸಿನಿಮಾ ಮಾಡುವ ಮೂಲಕ ತನ್ನ ಸಾಮ್ರಾಜ್ಯವನ್ನು ಉತ್ತರ ಭಾರತ ಕಡೆಯು ವಿಸ್ತರಿಸುತ್ತಿದೆ. ಅಂದಹಾಗೆ ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಶಾರುಖ್ ಖಾನ್ ಜೊತೆ ಮಾತುಕತೆ ಮಾಡಿ ಮುಗಿಸಿದ್ದಾರೆ ಎನ್ನಲಾಗಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಲು ಶಾರುಖ್ ಕೂಡ ಉತ್ಸುಕರಾಗಿದ್ದಾರಂತೆ. 

ರೋಹಿತ್ ಶೆಟ್ಟಿ ನಿರ್ದೇಶನ

ಅಂದಹಾಗೆ ಶಾರುಖ್ ಮತ್ತು ಹೊಂಬಾಳೆ ಕಾಂಬಿನೇಷನ್‌ನಲ್ಲಿ ಬರ್ತಿರುವ ಬಹುನಿರೀಕ್ಷೆಯ ಸಿನಿಮಾಗೆ ಬಾಲಿವುಡ್ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ರೋಹಿತ್ ಶೆಟ್ಟಿ ಜೊತೆಯೂ ಹೊಂಬಾಳೆ ಫಿಲ್ಮ್ಸ್ ಜೊತೆ ಮಾತುಕತೆ ನಡೆಸಿದ್ದು ರೋಹಿತ್ ಶೆಟ್ಟಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಆಕ್ಷನ್ ಸಿನಿಮಾಗಳನ್ನು ಮಾಡುವುದರಲ್ಲಿ ರೋಹಿತ್ ಶೆಟ್ಟಿ ಎತ್ತಿದ ಕೈ. ಹಾಗಾಗಿ ಹೊಂಬಾಳೆ ನಿರ್ಮಾಣದಲ್ಲಿ ಶಾರುಖ್ ಆಕ್ಷನ್ ಹೀರೋ ಆಗಿ ಅಬ್ಬರಿಸುವ ಸಾಧ್ಯತೆ ಇದೆ. ಸದ್ಯ ಎಲ್ಲಾ ತಯಾರಿ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಮೆಗಾಪ್ರಾಜೆಕ್ಟ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. 

ಅಬ್ಬಾ..! ಶಾರುಖ್ ಮನೆಯ ನಾಮಫಲಕ ಡೈಮಂಡ್‌ದಾ? ನೆಟ್ಟಿಗರ ಪ್ರಶ್ನೆಗೆ ಗೌರಿ ಖಾನ್ ಉತ್ತರ

ಶಾರುಖ್ ಸಿನಿಮಾದಲ್ಲಿ ರಕ್ಷಿತ್-ರಿಷಬ್?

ಈ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಕೇಳಿಬರುತ್ತಿದೆ. ಶಾರುಖ್ ಖಾನ್ ಸಿನಿಮಾದಲ್ಲಿ ಕನ್ನಡದ ಇಬ್ಬರೂ ಸ್ಟಾರ್ ಕಲಾವಿದರು ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಹೌದು, ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರಿಗಾಗಿಯೇ ರೋಹಿತ್ ಶೆಟ್ಟಿ ವಿಶೇಷವಾದ ಪಾತ್ರ ತಯಾರಿಸಿದ್ದಾರಂತೆ. ಒಂದು ವೇಳೆ ರಕ್ಷಿತ್ ಮತ್ತು ರಿಷಬ್ ಇಬ್ಬರೂ ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸಿದ್ದೇ ಆದರೆ ಇಬ್ಬರೂ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ಮಿಂಚಲಿದ್ದಾರೆ.  

ಮೆಕ್ಕಾಗೆ ಭೇಟಿ ನೀಡಿದ ಬಾಲಿವುಡ್ ಸ್ಟಾರ್ ಶಾರುಖ್ ಖಾನ್; ಫೋಟೋ ವೈರಲ್

ಹೊಂಬಾಳೆ ಬಳಿ ಇರುವ ಸಿನಿಮಾಗಳು

ಸದ್ಯ ಹೊಂಬಾಳೆಯ ದೊಡ್ಡ ಪ್ರಾಜೆಕ್ಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನೇನು ಈ ವರ್ಷ ಮುಗಿಯುತ್ತಾ ಬಂತು. ಮುಂದಿನ ವರ್ಷಾರಂಭದಲ್ಲಿ ಈ ಸಿನಿಮಾ ಅನೌನ್ಸ್ ಮಾಡಲಿದೆ ಹೊಂಬಾಳೆ ಪ್ರೊಡಕ್ಷನ್. ಹೊಂಬಾಳೆ ಈಗಾಗಲೇ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ಜೊತೆ ಸಲಾರ್, ಮಲಯಾಂ ಸ್ಟಾರ್ ಪೃಥ್ವಿರಾಜ್ ಜೊತೆ ಟೈಸನ್, ಶ್ರೀಮುರಳಿ ಜೊತೆ ಬಘೀರ, ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್ ಆಂಟನಿ, ಫಹಾದ್ ಫಾಸಿಲ್ ಜೊತೆ ಧೂಮಂ ಹಾಗೂ ಸೂರರೈ ಪೊಟ್ರು ನಿರ್ದೇಶಕಿ ಸುಧಾ ಕೊಂಗಾರ ಜೊತೆಯೂ ಸಿನಿಮಾ ಮಾಡುತ್ತಿದೆ. ಇದೀಗ ಮೊದಲ ಬಾಲಿವುಡ್ ಸಿನಿಮಾಗೆ ಸಜ್ಜಾಗಿದೆ ಹೊಂಬಾಳೆ ಫಿಲ್ಮ್ಸ್.   
     

Follow Us:
Download App:
  • android
  • ios