ಅಬ್ಬಾ..! ಶಾರುಖ್ ಮನೆಯ ನಾಮಫಲಕ ಡೈಮಂಡ್‌ದಾ? ನೆಟ್ಟಿಗರ ಪ್ರಶ್ನೆಗೆ ಗೌರಿ ಖಾನ್ ಉತ್ತರ
ಶಾರುಖ್ ಖಾನ್ ಮನೆಯ ಮನ್ನತ್ ನಾಮಫಲಕ ಮತ್ತೆ ವೈರಲ್ ಆಗಿದೆ. ಡೈಮಂಡ್‌ನಿಂದ ಮಾಡಿದ ನಾಮಫಲಕ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮನ್ನತ್ ನಿವಾಸ ಯಾರಿಗೆ ತಾನೆ ಗೊತ್ತಿಲ್ಲ. ದುಬಾರಿ ಬಂಗಲೆಗಳಲ್ಲಿ ಒಂದಾಗಿರುವ ಶಾರುಖ್ ಮನ್ನತ್ ಸಿನಿಮಾ ಆಗಾಗ ಸುದ್ದಿಯಲ್ಲಿರುತ್ತದೆ. ಇತ್ತೀಚಿಗಷ್ಟೆ ಮನ್ನತ್ ನಿವಾಸಕ್ಕೆ 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಮಫಲಕ ಮಾಡಿಸಲಾಗಿತ್ತು. ಆಕರ್ಷಕವಾದ ನಾಮಫಲಕ ಅಭಿಮಾನಿಗಳ ಗಮನ ಸೆಳೆದಿತ್ತು. ಹೊಸ ನಾಮಫಲಕ ಹಾಕಿಸುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ದುಬಾರಿ ನಾಮಫಲಕ ನಾಪತ್ತೆಯಾಗಿತ್ತು. ಶಾರುಖ್ ಮನೆ ಮುಂದೆ ರಾರಾಜಿಸುತ್ತಿದ್ದ ಹೊಸ ನಾಮಫಲಕ ಕಾಣೆಯಾಗಿದ್ದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಏನಾಯಿತು ಎಂದು ತಲೆಕೆಡಿಸಿಕೊಂಡಿದ್ದರು. ಆದರೆ ಈ ಬಗ್ಗೆ ಶಾರುಖ್ ಟೀಂ ಕಡೆಯಿಂದ ಯಾವುದೇ ಮಾಹಿತಿ ರಿವೀಲ್ ಆಗಿರಲಿಲ್ಲ. ಇದೀಗ ಅದೇ ನಾಮಫಲಕ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಅಚ್ಚರಿ ಮೂಡಿಸಿದೆ.
ಅಂದಹಾಗೆ ಶಾರುಖ್ ಮನ್ನತ್ ಮನೆಯ ನಾಮಫಲಕ ಡೈಮಾಂಡ್ ನಿಂದ ಮಾಡಲಾಗಿದೆ ಎನ್ನಲಾಗಿದೆ. ಶಾರುಖ್ ಪತ್ನಿ ಗೌರಿ ಖಾನ್ ಅವರೇ ನಮಫಲಕ ಡಿಸೈನ್ ಮಾಡಿಸಿದ್ದಾರೆ. ಅಂತಹಾಗೆ ಗೌರಿ ಖಾನ್ ಇಂಟೀರಿಯರ್ ಡಿಸೈನರ್. ತನ್ನ ಮನೆಯ ಡಿಸೈನ್ ಕೂಡ ಗೌರಿ ಖಾನ್ ಅವರೇ ಮಾಡಿದ್ದು ನಾಮ ಫಲಕ ಕೂಡ ಆಕರ್ಷಕವಾಗಿದೆ. ಅಂದಹಾಗೆ ಹೊಸ ನಾಮಫಲಕದ ಜೊತೆ ಗೌರಿ ಖಾನ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಫೋಟೋ ಜೊತೆಗೆ ನಾಮ ಫಲಕದ ಬಗ್ಗೆಯೂ ಬರೆದುಕೊಂಡಿದ್ದಾರೆ.
25 ಲಕ್ಷ ರೂ. ಬೆಲೆಬಾಳುವ ಶಾರುಖ್ ಮನೆಯ ಹೊಸ ನಾಮಫಲಕ ನಾಪತ್ತೆ
ನಿಮ್ಮ ಮನೆಯ ಮುಖ್ಯದ್ವಾರ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು ಎಂಟ್ರಿ ಕೊಡುವ ಮುಖ್ಯವಾದ ಸ್ಥಳವಾಗಿದೆ. ನಾಮಫಲಕ ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತದೆ. ನಮ್ಮನೆ ನಾಮಫಲಕ ಗ್ಲಾಸ್ ಗಾಜಿನ ಹರಳುಗಳನ್ನು ಹೊಂದಿರುವ ಪಾರದರ್ಶಕವಾಗಿದೆ. ಇದು ಉನ್ನತಿ ಮತ್ತು ಶಾಂತಿಯುತವಾದ ವೈಬ್ ನೀಡುತ್ತದೆ' ಎಂದು ಹೇಳಿದ್ದಾರೆ. ಈ ಮೂಲಕ ಡೈಮಂಡ್ ನಿಂದ ಮಾಡಿದ್ದು ಎನ್ನುವ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಗೌರಿ ಖಾನ್ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ಸದ್ಯ ಡೈಮಂಡ್ ನಿಂದ ಮಾಡಿದ್ದು ಅಲ್ವಲ್ಲಾ ಎನ್ನುತ್ತಿದ್ದಾರೆ.
ಸಲ್ಮಾನ್ ಖರೀದಿಸಬೇಕಿದ್ದ ಮನ್ನತ್ ಬಂಗಲೆ ಶಾರುಖ್ ಪಾಲಾಗಿದ್ದು ಹೇಗೆ? ಇಂಟ್ರಸ್ಟಿಂಗ್ ವಿಚಾರ ಬಹಿರಂಗ
ಇನ್ನು ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸದ್ಯ 4 ವರ್ಷಗಳ ಬಳಿಕ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವ ಶಾರುಖ್, ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆಯೂ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ದಕ್ಷಿಣದ ಸ್ಟಾರ್ ನಟಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಮುಂದಿನ ವರ್ಷ ಜನವರಿ ವರೆಗೂ ಕಾಯಲೇಬೆಕು.