- Home
- Entertainment
- Sandalwood
- Appu Birthday: ಪುನೀತ್ ರಾಜ್ ಎದುರು ಅಂದು ರಶ್ಮಿಕಾ ಕನ್ನಡದಲ್ಲಿ ಹೀಗೆಲ್ಲಾ ಮಾತಾಡಿದ್ರಾ? ಆ ವಿಡಿಯೋ ವೈರಲ್
Appu Birthday: ಪುನೀತ್ ರಾಜ್ ಎದುರು ಅಂದು ರಶ್ಮಿಕಾ ಕನ್ನಡದಲ್ಲಿ ಹೀಗೆಲ್ಲಾ ಮಾತಾಡಿದ್ರಾ? ಆ ವಿಡಿಯೋ ವೈರಲ್
ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು, 'ಅಂಜನಿ ಪುತ್ರ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ, ರಶ್ಮಿಕಾ ಮಂದಣ್ಣ ಅವರು ಪುನೀತ್ ಅವರೊಂದಿಗೆ ನಟಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರೆ, ಪುನೀತ್ ಚಿತ್ರತಂಡದ ಕನಸಿನ ಬಗ್ಗೆ ಮಾತನಾಡಿದ್ದಾರೆ.

ಅಪ್ಪು ಜನ್ಮದಿನವಿಂದು
ಇಂದು ಅರ್ಥಾತ್ ಮಾರ್ಚ್ 17 ಎಲ್ಲರ ನೆಚ್ಚಿನ ಅಪ್ಪು, ಪುನೀತ್ ರಾಜ್ ಅವರ 51ನೇ ಹುಟ್ಟುಹಬ್ಬ. ಈ ದಿನದಂದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಹೆಸರು ಎಂದರೆ ರಶ್ಮಿಕಾ ಮಂದಣ್ಣ (Rashmika Mandanna). ಇದೀಗ ಹಳೆಯ ವಿಡಿಯೋ ಒಂದು ಅಪ್ಪು ಹುಟ್ಟಿದ ದಿನಕ್ಕೆ ಮತ್ತೆ ವೈರಲ್ ಆಗಿದ್ದು, ಇದರಲ್ಲಿ ರಶ್ಮಿಕಾ ಅಪ್ಪು ಎದುರು ಏನು ಹೇಳಿದ್ರು ಎನ್ನೋದು ಇಂಟರೆಸ್ಟಿಂಗ್ ಆಗಿದೆ.
ಅಂಜನಿ ಪುತ್ರದ ಆಡಿಯೋ
ಅಷ್ಟಕ್ಕೂ ಇದು ಪುನೀತ್ ರಾಜ್‌ಕುಮಾರ್ (Puneeth Rajkumar) ಮತ್ತು ರಶ್ಮಿಕಾ ಮಂದಣ್ಣ ಜೋಡಿ 'ಅಂಜನಿ ಪುತ್ರ' ಚಿತ್ರದಲ್ಲಿ (Anjani Puthra) ಒಟ್ಟಿಗೇ ನಟಿಸಿದ್ದರು. ಆ ಸಿನಿಮಾದ ಆಡಿಯೋ ಬಿಡುಗಡೆ ದಿನ ರಶ್ಮಿಕಾ ಮಾಡಿದ್ದ ಸಂದರ್ಶನ ಇದಾಗಿದೆ. ಮೊದಲಿಗೆ ರಶ್ಮಿಕಾ ಆರ್ ಯೂ ಎಕ್ಸೈಟೆಡ್ ಸರ್ ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಪುನೀತ್ ಅವರು, 'ನಾನು ನಿಮ್ಮನ್ನು ಕೇಳ್ಬೇಕು, ಆರ್ ಯೂ ಎಕ್ಸೈಟೆಡ್?' ಎಂದು ಪ್ರಶ್ನಿಸುತ್ತಾರೆ. ಆಗ ರಶ್ಮಿಕಾ ಮಂದಣ್ಣ 'ನಾನ್ ತುಂಬಾ ಎಕ್ಸೈಟ್ ಆಗಿದೀನಿ.. ಎಂದಿದ್ದಾರೆ.
ಸ್ಕ್ರೀನ್ ಶೇರ್ ಬಗ್ಗೆ ನಟಿ
ನಿಮ್ಮಂಥ ಮೇರು ನಟರ ಜೊತೆ ನಾನು ಸ್ಕ್ರೀನ್ ಶೇರ್ ಮಾಡಿಕೊಳ್ತಿರುವುದಕ್ಕೆ ತುಂಬಾ ಖುಷಿಯಾಗ್ತಿದೆ ಎಂದು ರಶ್ಮಿಕಾ ಹೇಳಿದ್ದಾರೆ. ಅದಕ್ಕೆ ಪುನೀತ್, ನಮ್ಮ ಸಿನಿಮಾ ಬಗ್ಗೆ ಅಂದ್ರೆ ಎಲ್ರಿಗೂ ಗೊತ್ತಿರೋದೆ.. ನೀವೂ ಆ್ಯಕ್ಟ್ ಮಾಡಿದೀರಾ, ನಾನೂ ಮಾಡಿದ್ದೀನಿ, ಚಿಕ್ಕಣ್ಣ ಆಕ್ಟ್ ಮಾಡಿದಾರೆ, ರಮ್ಯಕೃಷ್ಣ ಅವ್ರಿದಾರೆ, ಸಾಧು ಕೋಕಿಲ, ರವಿಶಂಕರ್ ಹೀಗೆ ದೊಡ್ಡ ಲಿಸ್ಟೇ ಇದೆ. ಡೈರೆಕ್ಟ್ ಮಾಡಿರೋದು ಹರ್ಷ, ನಾವು ಒಟ್ಟಿಗೇ ಆರೇಳು ತಿಂಗಳುಗಳ ಕಾಲ ಜರ್ನಿ ಮಾಡಿದೀವಿ ಎಂದು ಹೇಳುತ್ತಾರೆ.
ನಟ ಏನಂದ್ರು?
ಈಗ ಇವತ್ತು ಆಡಿಯೋ ರಿಲೀಸ್ ಆಗ್ತಾ ಇದೆ, ಅದ್ರ ನಂತ್ರ ಬಹುಶಃ ಒಂದು, ಒಂದೂ ಕಾಲು ತಿಂಗಳಲ್ಲಿ ಸಿನಿಮಾನೂ ರಿಲೀಸ್ ಆಗುತ್ತೆ.. 'ಇದೇ ಪ್ರಶ್ನೆಯನ್ನು ನಾನು ನಿಮಗೆ ಕೇಳ್ಬೇಕು.. ' ಎಂದ ಪುನೀತ್ ಅವರಿಗೆ ರಶ್ಮಿಕಾ 'ನಿಮ್ಮೆಲ್ಲರ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಪ್ರೇಕ್ಷಕರು ಈ ಸಿನಿಮಾ ನೋಡಿ ಹೇಗೆ ರಿಯಾಕ್ಟ್ ಮಾಡ್ತಾರೆ ಅಂತ ತಿಳಿಯೋಕೆ ನಾನೂ ಕೂಡ ತುಂಬಾ ಎಕ್ಸೈಟ್ ಆಗಿದೀನಿ.. 'ಎನ್ನುತ್ತಾರೆ.
ಗುಡ್ ಸಿನಿಮಾ ಕನಸು
ಅದಕ್ಕೆ ಪುನೀತ್ 'ಈಗ ನಮ್ ಸಿನಿಮಾದ ಹಾಡು ಹಾಗೂ ಟೀಸರ್‌ನ ನೋಡಿ ಅವ್ರು ಸಂತೋಷ ಪಡ್ತಾರೆ ಅಂತ ನಾನು ಅಂದ್ಕೊಂಡಿದೀನಿ.. ಯಾಕಂದ್ರೆ, ನೀವ್ ಆಗಿರ್ಬಹುದು, ನಾನಾಗಿರ್ಬಹುದು, ಹರ್ಷ ಆಗಿರ್ಬಹುದು, ಪ್ರೊಡ್ಯೂಸರ್ ಕುಮಾರ್ ಆಗಿರ್ಬಹುದು, ಅಥವಾ ಇವತ್ತಿನ ಹೀರೋ ರವಿ ಬಸ್ರೂರ್ ಆಗಿರ್ಬಹುದು, ಎಲ್ಲರೂ ಒಂದ್ ಗುಡ್ ಸಿನಿಮಾ ಕನಸು ಕಂಡಿದೀವಿ..' ಎಂದಿದ್ದಾರೆ ನಟ ಪುನೀತ್ ರಾಜ್‌ಕುಮಾರ್. ಅದಕ್ಕೆ ನಟಿ ರಶ್ಮಿಕಾ ಹೌದು, ಎಲ್ಲರೂ ಒಳ್ಳೇದನ್ನೇ ಎದುರು ನೋಡ್ತಾ ಇದೀವಿ..' ಎನ್ನುತ್ತಾರೆ.
ಅಂಜನಿ ಪುತ್ರ ಸಿನಿಮಾ ಕುರಿತು
ಇನ್ನು ಅಂಜನಿ ಪುತ್ರ ಸಿನಿಮಾ ಕುರಿತು ಹೇಳುವುದಾದರೆ, ಈ ಚಿತ್ರ ನಿರ್ದೇಶಕ ಹರಿ ಅವರ ತಮಿಳು ಚಲನಚಿತ್ರ ಪೂಜಾಯಿ ಚಿತ್ರದ ರಿಮೇಕ್ ಆಗಿದೆ. ಎ. ಹರ್ಷ ನಿರ್ದೇಶಿಸಿದ ಮತ್ತು ಎಮ್.ಎನ್. ಕುಮಾರ್ ನಿರ್ಮಿಸಿದ ಚಿತ್ರವಿದು. ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಪಿ. ರವಿಶಂಕರ್, ರಮ್ಯಾ ಕೃಷ್ಣನ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರವಿ ಬಸ್ರೂರ್ ಅವರು ಚಿತ್ರಕ್ಕಾಗಿ ಸಂಗೀತ ನೀಡಿದ್ದಾರೆ. ಛಾಯಾಗ್ರಹಣವನ್ನು ಸ್ವಾಮಿ ಜೆ ಮಾಡಿದ್ದಾರೆ ಹಾಗೂ ದೀಪು ಎಸ್.ಕುಮಾರ್ ಚಲನಚಿತ್ರ ಸಂಕಲನ ನಿರ್ವಹಿಸಿದ್ದಾರೆ. 21 ಡಿಸೆಂಬರ್ 2017 ರಂದು ಚಿತ್ರ ಬಿಡುಗಡೆಗೊಂಡಿದೆ. ಈ ಸಂದರ್ಶನವನ್ನು rs_anil_2.0 ಶೇರ್ ಮಾಡಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

