MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • ಹುಬ್ಬಳ್ಳಿಗೆ ಹೊರಟ ಆಂಕರ್ ಅನುಶ್ರೀ.. ಗೊತ್ತಿದ್ರೆ, ಅದೇನೂ ದೊಡ್ಡ ಸೀಕ್ರೆಟ್ ಅಲ್ಲ ಬಿಡಿ ಅಂತೀರಾ.. ಆದ್ರೆ ಗೊತ್ತಾ ನಿಮ್ಗೆ!?

ಹುಬ್ಬಳ್ಳಿಗೆ ಹೊರಟ ಆಂಕರ್ ಅನುಶ್ರೀ.. ಗೊತ್ತಿದ್ರೆ, ಅದೇನೂ ದೊಡ್ಡ ಸೀಕ್ರೆಟ್ ಅಲ್ಲ ಬಿಡಿ ಅಂತೀರಾ.. ಆದ್ರೆ ಗೊತ್ತಾ ನಿಮ್ಗೆ!?

ಗೋಲ್ಡನ್ ಟೈಂಮಿಂಗ್ ಚಟಪಟ ಚಿನಕುರುಳಿ ಆಂಕರ್ ಅನುಶ್ರೀ (Anchor Anushree) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಗತಿಯೊಂದನ್ನು ವೈರಲ್ ಮಾಡಿದ್ದಾರೆ. ಅನುಶ್ರೀ ಅವರು ಇಂದು, ಅಂದರೆ, 10 ಅಕ್ಟೋಬರ್ 2026ರಂದು ಹುಬ್ಬಳ್ಳಿಗೆ ಹೊರಟಿದ್ದಾರೆ. ಅಲ್ಲಿಗ್ಯಾಕೆ? ಈ ಸ್ಟೋರಿ ನೋಡಿ..

3 Min read
Author : Shriram Bhat
Published : Oct 10 2026, 01:28 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಕನ್ನಡದ ಖ್ಯಾತ ನಿರೂಪಕಿ, ಗೋಲ್ಡನ್ ಟೈಂಮಿಂಗ್ ಚಟಪಟ ಚಿನಕುರುಳಿ ಆಂಕರ್ ಅನುಶ್ರೀ (Anchor Anushree) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಗತಿಯೊಂದನ್ನು ವೈರಲ್ ಮಾಡಿದ್ದಾರೆ. ಅನುಶ್ರೀ ಅವರು ಇಂದು, ಅಂದರೆ, 10 ಅಕ್ಟೋಬರ್ 2026ರಂದು ಹುಬ್ಬಳ್ಳಿಗೆ ಹೊರಟಿದ್ದಾರೆ. ಅಲ್ಲಿಗ್ಯಾಕೆ ಹೊರಟಿದ್ದಾರೆ ಅನುಶ್ರೀ? ಅವರಿಗೆ ಅಲ್ಲೇನು ಕೆಲಸ? ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : Instagram

ಹೌದು, ಆಂಕರ್, ನಟಿ ಅನುಶ್ರೀ ಅವರು ಹುಬ್ಬಳ್ಳಿಗೆ ಹೊರಟಿರುವುದು ನಿಜ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಪ್ರಯಾಣಿಸುತ್ತಿರುವುದಾಗಿ ಅನುಶ್ರೀ ಲೈವ್‌ನಲ್ಲಿ ತಿಳಿಸಿದ್ದಾರೆ. ಇಂದು ನಟ ಗಣೇಶ್ ಅಭಿನಯದ, ಈ ತಿಂಗಳು 16ಕ್ಕೆ 1300 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುವ 'ಬೃಂದಾವಹಾರಿ; ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಅಲ್ಲಿ ಅನುಶ್ರೀ ಅವರದೇ ನಿರೂಪಣೆ.

Related Articles

Related image1
ಅಕ್ಕಿ ಡಬ್ಬದಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು.. ವರ್ಷವಾದ್ರೂ ಹುಳು ಬರಲ್ಲ, ಅಜ್ಜಿ ಕಾಲದ ಸೀಕ್ರೆಟ್ ಟಿಪ್ಸ್
Related image2
ನವಿಲುಕೋಸು ತಿನ್ನೋದ್ರಿಂದ ದೇಹದಲ್ಲಿ ಏನಾಗುತ್ತೆ? ಎಲ್ಲರೂ ಈ ತರಕಾರಿ ತಿನ್ನಬಹುದಾ? ಸೀಕ್ರೆಟ್ ತಿಳಿಯಿರಿ!
38
Image Credit : Instagram

‘ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿದೆ. ಹುಬ್ಬಳ್ಳಿಗೆ ಹೋಗುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡ ಅನುಶ್ರೀ, ಅಲ್ಲಿಯೂ ಅಭಿಮಾನಿಗಳನ್ನು ಭೇಟಿಯಾಗುವ ಖುಷಿಯಲ್ಲಿದ್ದೇನೆ ಎಂದಿದ್ದಾರೆ. ಅಷ್ಟರಲ್ಲೇ ಅಭಿಮಾನಿಯೊಬ್ಬರು ಲೈವನ್‌ನಲ್ಲೇ ಕುತೂಹಲದ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅವರು 'ಗುಡ್‌ನ್ಯೂಸ್' ಬಗ್ಗೆ ಅನುಶ್ರೀ ಅವರನ್ನು ಕೇಳಿದ್ದಾರೆ. ಅದಕ್ಕೆ ಅನುಶ್ರೀ ಅವರು ಸ್ವಲ್ಪವೂ ಬೇಸರಿಸಿಕೊಳ್ಳದೇ ನಗುನಗುತ್ತಾ ಉತ್ತರಿಸಿದ್ದಾರೆ.

48
Image Credit : Instagram

ಅಭಿಮಾನಿಯ ಪ್ರಶ್ನೆಗೆ ಅನುಶ್ರೀ ಕೊಟ್ಟ ತಮಾಷೆಯ ಉತ್ತರ ವೈರಲ್!

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಬಹುದಿನಗಳ ನಂತರ ಇನ್‌ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ಮನಬಿಚ್ಚಿ ಮಾತನಾಡಿದ ಅವರು, ತಮ್ಮ ವೈವಾಹಿಕ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬರು ಕೇಳಿದ ಗುಡ್‌ನ್ಯೂಸ್ ಪ್ರಶ್ನೆಗೆ ಅನುಶ್ರೀ ನೀಡಿದ ಉತ್ತರ ಮಾತ್ರ ಸಖತ್ ಮಜವಾಗಿದ್ದು, ಅವರ ಮಾತುಗಳು ಈಗ ಗಮನ ಸೆಳೆಯುತ್ತಿವೆ.

58
Image Credit : Instagram

‘ಜೀ ಕನ್ನಡಕ್ಕೆ ಗೊತ್ತಿಲ್ಲದೆ ಯಾವ ಗುಡ್‌ನ್ಯೂಸ್ ಹೇಳಲಿ?’

'ಜೀ ಕನ್ನಡ ವಾಹಿನಿಗೆ ಗೊತ್ತಿಲ್ಲದೆ ನಾನು ಯಾವ ಗುಡ್‌ನ್ಯೂಸ್ ತಾನೇ ಹೇಳಲು ಸಾಧ್ಯ ಅನಿಲ್ ಅವರೇ? ಬಹುಶಃ ನನ್ನ ಗಂಡ ಅಥವಾ ಕುಟುಂಬಕ್ಕಿಂತಲೂ ಮೊದಲು ಜೀ ಕನ್ನಡಕ್ಕೇ ಆ ವಿಷಯ ಗೊತ್ತಾಗುತ್ತೆ ಅನಿಸುತ್ತೆ!' ಎಂದು ತಮಾಷೆಯಾಗಿ ಹೇಳಿದ್ದಾರೆ. ಅವರ ಈ ಉತ್ತರ ಕೇಳಿದ ಅಭಿಮಾನಿಗಳು ನಗೆಗಡಲಲ್ಲಿ ತೇಲುವಂತಾಗಿದೆ. ಯಾವುದೇ ವಿಚಾರವನ್ನೂ ಹಾಸ್ಯದಿಂದಲೇ ನಿಭಾಯಿಸುವ ಅನುಶ್ರೀ ಅವರ ಶೈಲಿಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ.

68
Image Credit : Instagram

ಮದುವೆಯ ನಂತರದ ಜೀವನ ಹೇಗಿದೆ ಗೊತ್ತಾ?

ಲೈವ್ ಸಂವಾದದ ವೇಳೆ ಅನುಶ್ರೀ ತಮ್ಮ ವೈವಾಹಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಮದುವೆಯ ನಂತರ ಜೀವನ ಸರಳವಾಗಿ, ಚೆನ್ನಾಗಿ ಸಾಗುತ್ತಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ನೆಮ್ಮದಿ ಮತ್ತು ಸಂತೋಷ ತಮ್ಮ ಜೀವನದಲ್ಲಿ ಮುಂದುವರಿಯಲಿ ಎಂಬುದು ಅವರ ಆಸೆಯಾಗಿದೆ.

78
Image Credit : Instagram

‘ನನ್ನ ಜೀವನ ಮುಂದೆಯೂ ಹೀಗೆಯೇ ಇರಲಿ ಎಂಬುದೇ ಆಸೆ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಅನುಶ್ರೀ ಅವರು 2025ರ ಆಗಸ್ಟ್ 28ರಂದು ಉದ್ಯಮಿ ರೋಶನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಕೀನ್ಯಾದ ಮಸಾಯಿ ಮಾರಾಗೆ ಪ್ರವಾಸ ಕೈಗೊಂಡು ಬಂದಿದ್ದರು. ಮದುವೆಯ ನಂತರವೂ ತಮ್ಮ ಕೆಲಸ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿರುವ ಅನುಶ್ರೀ, ಅಭಿಮಾನಿಗಳ ಜೊತೆಗಿನ ಬಾಂಧವ್ಯಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

ಇನ್ಮುಂದೆ ವಾರಕ್ಕೊಮ್ಮೆ ಇನ್‌ಸ್ಟಾಗ್ರಾಮ್ ಲೈವ್!

ಅನುಶ್ರೀ ಅವರ ಲೈವ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿಯೂ ಸಿಕ್ಕಿದೆ. ಈ ಹಿಂದೆ ಆಗಾಗ ಇನ್‌ಸ್ಟಾಗ್ರಾಮ್ ಲೈವ್‌ಗೆ ಬರುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವು ಕಾರಣಗಳಿಂದ ಅಭಿಮಾನಿಗಳೊಂದಿಗೆ ನೇರ ಸಂವಾದ ನಡೆಸುವುದು ಕಡಿಮೆಯಾಗಿತ್ತು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಕನಿಷ್ಠ ವಾರಕ್ಕೊಮ್ಮೆಯಾದರೂ ಅಥವಾ ಹತ್ತು ದಿನಗಳಿಗೊಮ್ಮೆಯಾದರೂ ಲೈವ್‌ಗೆ ಬಂದು ಅಭಿಮಾನಿಗಳೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಜೊತೆಗಿನ ಸಂಪರ್ಕವನ್ನು ಇನ್ನಷ್ಟು ಗಟ್ಟಿಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

88
Image Credit : Instagram

ಮುದ್ದಿನ ಶ್ವಾನಗಳ ತುಂಟಾಟಕ್ಕೂ ಬಿತ್ತು ನಗು!

ಲೈವ್‌ನಲ್ಲಿ ಅನುಶ್ರೀ ಅವರ ಮಾತುಗಳಷ್ಟೇ ಅಲ್ಲ, ಮನೆಯ ಮುದ್ದಿನ ಶ್ವಾನಗಳೂ ಗಮನ ಸೆಳೆದಿವೆ. ತಮ್ಮ ಮನೆಯ ಎರಡು ನಾಯಿಗಳನ್ನು ಅಭಿಮಾನಿಗಳಿಗೆ ಪರಿಚಯಿಸಬೇಕೆಂದು ಅವರು ಪ್ರಯತ್ನಿಸಿದ್ದಾರೆ. ಆದರೆ ಎಷ್ಟೇ ಕರೆದರೂ ಅವು ಮಾತ್ರ ತಮ್ಮ ಜಾಗದಿಂದ ಕದಲಲಿಲ್ಲ.

ಇದರಿಂದ ತಮಾಷೆಯಾಗಿ ಪ್ರತಿಕ್ರಿಯಿಸಿದ ಅನುಶ್ರೀ, “ಈ ಮನೆಯ ಯಜಮಾನಿ ನಾನೋ ಅಥವಾ ಇವೋ ಗೊತ್ತಾಗುತ್ತಿಲ್ಲ, ಮರ್ಯಾದೆಯೇ ಕೊಡುತ್ತಿಲ್ಲ!” ಎಂದು ನಗುತ್ತಲೇ ಹೇಳಿದ್ದಾರೆ. ಕೊನೆಗೆ ಕೈಯಲ್ಲಿ ಬಿಸ್ಕೇಟ್ ಹಿಡಿದು ಅವುಗಳನ್ನು ಆಕರ್ಷಿಸಿ, ಅಭಿಮಾನಿಗಳಿಗೆ ತಮ್ಮ ಮುದ್ದಿನ ಶ್ವಾನಗಳನ್ನು ತೋರಿಸಿದ್ದಾರೆ.

ಒಟ್ಟಿನಲ್ಲಿ, ಅನುಶ್ರೀ ಅವರ ಈ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಗುಡ್‌ನ್ಯೂಸ್ ಕುರಿತ ತಮಾಷೆಯ ಪ್ರಶ್ನೆ, ವೈವಾಹಿಕ ಜೀವನದ ಮಾತುಗಳು, ಅಭಿಮಾನಿಗಳಿಗೆ ನೀಡಿದ ಹೊಸ ಭರವಸೆ ಹಾಗೂ ಮುದ್ದಿನ ಶ್ವಾನಗಳ ತುಂಟಾಟ ಎಲ್ಲವೂ ಸೇರಿ ಮನರಂಜನೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅನುಶ್ರೀ ಅವರ ನೇರ ಮಾತು ಮತ್ತು ಹಾಸ್ಯಮಯ ಉತ್ತರಗಳು ಅಭಿಮಾನಿಗಳಿಗೆ ಇಷ್ಟವಾಗಿದ್ದು, ಮುಂದಿನ ಲೈವ್‌ನಲ್ಲಿ ಅವರು ಏನೆಲ್ಲಾ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಆಂಕರ್ ಅನುಶ್ರೀ
ಗೋಲ್ಡನ್ ಸ್ಟಾರ್ ಗಣೇಶ್
ಸ್ಯಾಂಡಲ್‌ವುಡ್
ಟಿವಿ ಶೋ
ಜೀ ಕನ್ನಡ
 

Latest Videos
Recommended Stories
Recommended image1
ತಡೆಯೋಕಾಗ್ದೇ ಕೊನೆಗೂ ಬಾಯ್ಬಿಟ್ಟ ಕತ್ರಿನಾ ಕೈಫ್; ಟ್ರೋಲರ್‌ಗಳಿಗೆ ಸಖತ್ ಪಂಚ್ ಕೊಟ್ಟ 'ಮುದ್ದು ಕಂದನ ಅಮ್ಮ'
Recommended image2
ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಲಿರೋ 'ಮುಂಗಾರು ಮಳೆ' ಪ್ರೀತಮ್.. 'ಬೃಂದಾವಿಹಾರಿ' ದರ್ಶನಕ್ಕೆ ಸಜ್ಜಾಗುತ್ತಿರೋ 'ಗಂಡು ಮೆಟ್ಟಿದ ನಾಡು'..!
Recommended image3
ಆ ನೋವು ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಬಿಗ್ ಬಾಸ್ ಬಳಿಕದ ನೋವು ಬಿಚ್ಚಿಟ್ಟ ನೀಲಕಂಠ ನಟಿ ನಮಿತಾ
Related Stories
Recommended image1
ಅಕ್ಕಿ ಡಬ್ಬದಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು.. ವರ್ಷವಾದ್ರೂ ಹುಳು ಬರಲ್ಲ, ಅಜ್ಜಿ ಕಾಲದ ಸೀಕ್ರೆಟ್ ಟಿಪ್ಸ್
Recommended image2
ನವಿಲುಕೋಸು ತಿನ್ನೋದ್ರಿಂದ ದೇಹದಲ್ಲಿ ಏನಾಗುತ್ತೆ? ಎಲ್ಲರೂ ಈ ತರಕಾರಿ ತಿನ್ನಬಹುದಾ? ಸೀಕ್ರೆಟ್ ತಿಳಿಯಿರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved