ಈ ಹಿಂದೆ ‘ದಿ ಬೆಸ್ಟ್ ಆ್ಯಕ್ಟರ್’ ಎನ್ನುವ ಕಿರುಚಿತ್ರ ಮಾಡಿ ಗಮನ ಸೆಳೆದಿದ್ದ ರಂಗಭೂಮಿ ಪ್ರತಿಭೆ ನಾಗರಾಜ್ ಸೋಮಯಾಜಿ ಈಗ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹೆಸರು ‘ಅಕಟಕಟ’. ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ.
ಈ ಹಿಂದೆ ‘ದಿ ಬೆಸ್ಟ್ ಆ್ಯಕ್ಟರ್’ (The Best Actor) ಎನ್ನುವ ಕಿರುಚಿತ್ರ ಮಾಡಿ ಗಮನ ಸೆಳೆದಿದ್ದ ರಂಗಭೂಮಿ ಪ್ರತಿಭೆ ನಾಗರಾಜ ಸೋಮಯಾಜಿ (Nagaraja Somayaji) ಈಗ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹೆಸರು ‘ಅಕಟಕಟ’ (Akatakata). ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದ್ದು, ಪ್ರತಿಭಾವಂತ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡುವ ಪ್ಲಾನ್‌ನಲ್ಲಿದ್ದಾರೆ ಕುಂದಾಪುರದ ಮೂಲದ ಸೋಮಯಾಜಿ. ನಿರ್ಮಾಪಕರಾಗಿಯೂ ಪಳಗಿರುವ ಇವರು ಈ ಚಿತ್ರದಿಂದ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನದತ್ತ ತೊಡಗಿಕೊಂಡಿದ್ದಾರೆ.
‘ಅಕಟಕಟ’ ಟೈಟಲ್ ಕೇಳಿದಾಕ್ಷಣ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಈ ಮೊದಲೇ ಕೇಳಿಬಂದಿತ್ತಲ್ವಾ? ಲೂಸ್ ಮಾದ ಯೋಗಿ (Yogi) ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಲ್ಲವೇ.? ಎಂಬ ಪ್ರಶ್ನೆಗಳು ಮೂಡಿಬರುತ್ತವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಾಗರಾಜ್ ಸೋಮಯಾಜಿ ಲೂಸ್ ಮಾದ ಯೋಗಿಗೆ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ ಇದೆಲ್ಲ ಈಗ ಹಳೆಯ ಸುದ್ದಿ. ಹಾಗೆಂದು ಅಕಟಕಟ ಪ್ರಾಜೆಕ್ಟ್ ನಿಂತಿಲ್ಲ. ಇದೀಗ ಹೊರಬಿದ್ದಿರುವ ಹೊಸ ಸುದ್ದಿಯಂದ್ರೆ ನಾಗರಾಜ್ ಸೋಮಯಾಜಿ ಅಕಟಕಟ ಸಿನಿಮಾ ಮೂಲಕ ಹೊಸಮುಖವನ್ನು ನಾಯಕ ನಟನಾಗಿ ಪರಿಚಯಿಸುತ್ತಿದ್ದಾರೆ. ಆದರೆ ಆ ನಟ ಯಾರು ಅನ್ನೋದು ಇನ್ನು ಸಸ್ಪೆನ್ಸ್.
ಪಿರಿಯಡ್ಸ್ ಟೈಮಲ್ಲಿ ನೀರೊಳಗೆ ಚಿತ್ರೀಕರಣ ಕಷ್ಟ: ನಯನಾ
‘ಅಕಟಕಟ’ ಸಿನಿಮಾ ಸಬ್ಜೆಕ್ಟ್ ನೊಂದಿಗೆ ಮತ್ತೆ ಬಂದಿರುವ ನಿರ್ದೇಶಕರು ಚಿತ್ರದ ನಾಯಕ ನಟ ಯಾರು, ಚಿತ್ರತಂಡದಲ್ಲಿ ಯಾರ‍್ಯಾರು ಇರ್ತಾರೆ, ನಿರ್ಮಾಪಕರು ಯಾರು ಇದೆಲ್ಲವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಜನವರಿ 14ಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದು, ಅಂದೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಸ್. ಕೆ. ರಾವ್ (S.K.Rao) ಕ್ಯಾಮೆರಾ ವರ್ಕ್, ಮ್ಯಾಥ್ಯೂಸ್ ಮನು (Mathews Manu) ಸಂಗೀತ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದ್ದು, ಜನವರಿ 14ರ ಸಂಕ್ರಾಂತಿ ಹಬ್ಬದಂದು ಅಕಟಕಟ ಚಿತ್ರಕ್ಕೆ ಹೊಸ ಆರಂಭ ಸಿಗಲಿದೆ. ಈ ಹಿಂದೆ ಸಂಚಾರಿ ವಿಜಯ್ (Sanchari Vijay) ನಟನೆಯ ‘ಪುಕ್ಸಟ್ಟೆಲೈಫು’ ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಬಂಡವಾಳ ಹಾಕಿದ್ದರು.
ಪ್ರಯತ್ನ ಮಾಡೋಣ ನನ್ನ ಇತಿಮಿತಿಯಲ್ಲಿದ್ದರೆ ಡ್ಯಾನ್ಸ್ ಮಾಡ್ತೀನಿ: ನಟ Vijay Raghavendra
ಹೊಸಬರ ಕೌಟುಂಬಿಕ ಚಿತ್ರ ಅನುಮಿತ: ಕೆ ದಿನೇಶ್ ನಾಚಪ್ಪ ಕಾಳಿಮಾಡ ನಿರ್ದೇಶನ, ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸಬರ ಚಿತ್ರ ‘ಅನುಮಿತ’ (Anumita). ‘ಕೌಟುಂಬಿಕ ಬದುಕಿನ ಏರಿಳಿತಗಳು, ಮಮತೆಯಿಂದ ಸಲಹುವ ಗುಣ ಇತ್ಯಾದಿ ಅಂಶಗಳು ಚಿತ್ರದಲ್ಲಿವೆ’ ಎಂದು ನಿರ್ದೇಶಕ ದಿನೇಶ್ ನಾಚಪ್ಪ ತಿಳಿಸಿದ್ದಾರೆ. ಅವರೇ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ವಿಂಪಲ್ ಮುತ್ತಮ್ಮ ಚಿತ್ರದ ನಾಯಕಿ. ದೇವಯ್ಯ, ಪವನ್ ತಮ್ಮಯ್ಯ, ಡಿಂಪಲ್ ನಾಚಪ್ಪ, ನರವಂಡ ಉಮೇಶ್ ಮೊಣ್ಣಪ್ಪ, ಪದ್ಮಾ, ವಾಂಚಿರ ಜಯ ನಂಜಪ್ಪ, ನಲ್ಲಚೇಂದ್ರ ರೇಖಾ, ಮಂದೀರ ಬೋಪಯ್ಯ, ರೀಟಾ ನಾಚಪ್ಪ ನಟಿಸಿದ್ದಾರೆ. ಶಿವಸತ್ಯ ಮೋಹನ್ ಮತ್ತು ಕೌಸ್ತಿಕ್ ಹರ್ಷ ಸಂಗೀತ, ಬದ್ರಿನಾಥ್ ಎಸ್ ಛಾಯಾಗ್ರಹಣ, ಕುಮಾರ್ ಸಿ ಕೆ ಸಂಕಲನ, ಸುರೇಶ್ ಅವರ ನೃತ್ಯ ಸಂಯೋಜನೆ ಇದೆ. ಕೆ ಸಜನಿ ಸೋಮಯ್ಯ ಚಿತ್ರದ ಕಥೆ ಹೆಣೆದಿದ್ದಾರೆ.
