Asianet Suvarna News Asianet Suvarna News

ನೀರೊಳಗೆ ಶೂಟಿಂಗ್ ಮಾಡಿದ ಕಷ್ಟ ಸುಖ ಹಂಚಿ ಕೊಂಡ 'ಗಿಣಿರಾಮ' ನಟಿ ನಯನಾ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಗಿಣಿರಾಮ' ಧಾರಾವಾಹಿಯಲ್ಲಿ ಮಹಾ ತಿರುವು. ನೀರೋಳಗೆ ಚಿತ್ರೀಕರಣ ಮಾಡಬೇಕು, ಅನುಭವ ಹಂಚಿಕೊಂಡ ನಟಿ ನಯನಾ....

Colors Kannada Ginirama Fame Nayana talks about challenges of shooting underwater  vcs
Author
Bangalore, First Published Jan 11, 2022, 2:55 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಣಿರಾಮ ಧಾರಾವಾಹಿ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಪ್ರಸಾರವಾಗುವ ಈ ಎಪಿಸೋಡ್‌ ತುಂಬಾನೇ ಇಂಟ್ರೆಸ್ಟಿಂಗ್ ಆಗಿರಲಿದ್ದು, ನಟಿ ನಯನಾ ಅಂಡರ್‌ವಾಟರ್ ಚಿತ್ರೀಕರಣ ಮಾಡುವ ಸಾಹಸ ಮಾಡಿದ್ದಾರೆ. ಇ-ಟೈಮ್ಸ್‌ ಈ ಶೂಟಿಂಗ್ ಅನುಭವ ಹಂಚಿಕೊಂಡಿರುವ ನಟಿ, ಹಲವು ವಿಚಾರಣಗಳನ್ನು ಹಂಚಿಕೊಂಡಿದ್ದಾರೆ. 

ನಯನಾ ಮಾತು:
'ಅಂಡರ್‌ವಾಟರ್ ಚಿತ್ರೀಕರಣ ಮಾಡುತ್ತೀವಿ ಎಂಬ ವಿಚಾರ ತಿಳಿಯುತ್ತಿದ್ದಂತೆ, ನಾನು ತುಂಬಾ ಖುಷಿಪಟ್ಟೆ. ನಾನು ಒಳ್ಳೆಯ ಸ್ವಿಮ್ಮರ್ ಅಲ್ಲ. ಹೀಗಾಗಿ ಸ್ವಲ್ಪ ಗಾಬರಿಯೂ ಆಯಿತು. ಆದರೆ ಸ್ವಿಮ್ಮಿಂಗ್ ಮ್ಯಾನೇಜ್ ಮಾಡುವೆ. ನಾವು ಸ್ವಿಮಿಂಗ್‌ ಪೂಲ್‌ನಲ್ಲಿ ಚಿತ್ರೀಕರಣ ಮಾಡಿದ್ದು. ಆದರೂ ಅಂಡರ್‌ವಾಟರ್ ಶೂಟಿಂಗ್ ಮಾಡುವುದು ದೊಡ್ಡ ಚಾಲೆಂಜ್,' ಎಂದು ನಯನಾ ಮಾತನಾಡಿದ್ದಾರೆ. 

Colors Kannada Ginirama Fame Nayana talks about challenges of shooting underwater  vcs

'ನೀರೊಳಗೆ ಇಳಿಯುವ ಮುನ್ನ ನಮಗೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಹೇಳಿಕೊಟ್ಟಿದ್ದರು. ನೀರೊಳಗೆ ಚಿತ್ರೀಕರಣ ಮಾಡುತ್ತಿರುವ ಪ್ರತಿಯೊಬ್ಬ ಕಲಾವಿದರ ಬಗ್ಗೆಯೂ ಧಾರಾವಾಹಿ ತಂಡ ಮುನ್ನೆಚ್ಚರಿಕೆ ವಹಿಸಿತ್ತು. ಸ್ಕೂಬಾ ಡೈವಿಂಗ್‌ಗೆ ಬಳಸುವ ಆಕ್ಷಿಜನ್, ಉಡುಪುಗಳನ್ನು ಪ್ರತಿಯೊಬ್ಬ ಕಲಾವಿದರಿಗೂ ನೀಡಿದ್ದರು. ನಾವು ಚಿತ್ರೀಕರಣ ಮಾಡುವ ಸಮಯದಲ್ಲಿ ಪ್ರೊಫೆಷನಲ್ ಸ್ಕೂಬಾ ಡೈವರ್‌ಗಳು ಜೊತೆಗಿದ್ದರು. ಇಡೀ ತಂಡಕ್ಕೆ ಧೈರ್ಯ ಬಂದ ನಂತರವೇ ಚಿತ್ರೀಕರಣ ಮಾಡಿದ್ದು,' ಎಂದು ನಯನಾ ಹೇಳಿದ್ದಾರೆ. 

Eco Friendly Menstrual cup ಬಗ್ಗೆ ಕಿರುತೆರೆ ನಟಿ ನಯನಾ ಮಾತು!

'ನಾನು ಮೊದಲೇ ಹೇಳಿದ ಹಾಗೆ ಸ್ವಿಮ್ಮಿಂಗ್‌ ವಿಚಾರದಲ್ಲಿ ನಾನು ಕಾನ್ಫಿಡೆಂಟ್ ಆಗಿಲ್ಲ. ನೀರಲ್ಲಿ ಮಜಾ ಮಾಡುವುದಕ್ಕೆ ತುಂಬಾನೇ ಇಷ್ಟ. ಆದರೆ ಕೆಲವೊಂದು ಟೆಕ್ನಿಕ್‌ಗಳಲ್ಲಿ ನಾನು ತುಂಬಾನೇ ವೀಕ್. ನನ್ನ ಅದೃಷ್ಟ, ಏನೆಂದರೆ ನೀರಿನಲ್ಲಿ ಉಸಿರು ಕಟ್ಟಿಕೊಂಡು ಇರುವುದಕ್ಕೆ ನನಗೆ ಬರುತ್ತದೆ. ನಾನು ಗಾಯಕಿ ಆಗಿರುವುದಕ್ಕೆ ಇದು ಸುಲಭವಾಯ್ತು. ಗಾಯಕರಾಗಿ ನಮಗೆ ಮೊದಲು ಉಸಿರು ಕಂಟ್ರೂಲ್‌ ತೆಗೆದುಕೊಳ್ಳುವುದನ್ನೇ ಹೇಳಿಕೊಟ್ಟಿರುತ್ತಾರೆ. ನಾನು ಸುಮಾರು  40 ರಿಂದ 50 ಸೆಕೆಂಡ್ ನೀರಿನಲ್ಲಿ ಉಸಿರು ಹಿಡಿದು ಕೊಳ್ಳಬಹುದು. ಇದು ನನಗೆ ಸಹಾಯ ಮಾಡಿದೆ,' ಎಂದು ನಯನಾ ಮಾತನಾಡಿದ್ದಾರೆ. 

'ಧಾರಾವಾಹಿ ಕಥೆ ಬಗ್ಗೆ ಹೇಳಬೇಕು ಅಂದ್ರೆ ಪ್ರಮುಖ ಪಾತ್ರಧಾರಿಗಳಿಗೆ ಯಾವುದೇ ಸರಿಯಾದ ಸ್ಕೂಬಾ ಡೈವಿಂಗ್ ವಸ್ತುಗಳನ್ನು ಬಳಸಿರಲಿಲ್ಲ. ಹೀಗೆ ಮಾಡಲು ಕಾರಣವೆಂದರೆ ಈ ಸನ್ನಿವೇಶ ತುಂಬಾನೇ ನ್ಯಾಚುರಲ್ ಆಗಿ ಕಾಣಿಸಬೇಕು ಎಂದು. ನೀರೊಳಗೆ ಫೈಟರ್ ಪಾತ್ರದಲ್ಲಿ ಕಾಣಿಸಿಕೊಂಡರುವರಿಗೆ ಮಾತ್ರ ಎಲ್ಲಾ ಸ್ಕೂಬಾ ಡೈವಿಂಗ್ ವಸ್ತುಗಳನ್ನು ನೀಡಲಾಗಿತ್ತು. ನಟ ಋತ್ವಿಕ್ ಮತ್ತು ನಾನು ಉಸಿರು ಹಿಡಿದುಕೊಂಡು ಚಿತ್ರೀಕರಣ ಮಾಡಿದ್ದೀವಿ. ಉಸಿರು ಹಿಡಿದುಕೊಂಡು ಚಿತ್ರೀಕರಣ ಮಾಡಿ ಆನಂತರ ಮೇಲೆ ಬರುತ್ತಿದ್ದೆವು,' ಎಂದಿದ್ದಾರೆ. 

ಬೀದಿಯಲ್ಲಿ ಗಿಡಗಳನ್ನು ಮಾರುತ್ತಿದ್ದ 'ಗಿಣಿರಾಮ' ನಟಿ ನಯನ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟ!

'ನನ್ನ ಪಿರಿಯಡ್ಸ್‌ ಸಮಯದಲ್ಲಿ ನಾನು ಚಿತ್ರೀಕರಣ ಮಾಡುವುದು ದೊಡ್ಡ ಚಿಂತೆ ಆಗಿತ್ತು. ನನ್ನ ತಿಂಗಳ ಡೇಟ್ ಸಮಯದಲ್ಲಿ ನಾನು ಚಿತ್ರೀಕರಣ ಮಾಡುತ್ತಿದ್ದೆ. ಕರೆಕ್ಟ್‌ ಆಗಿ ಪಿರಿಯಡ್ಸ್ ಎರಡನೇ ದಿನ ನಾನು ನೀರೊಳಗಡೆ ಚಿತ್ರೀಕರಣ ಮಾಡಬೇಕಿತ್ತು. ಆಗ ನನ್ನ ತಲೆಯಲ್ಲಿ ಸಾವಿರಾರು ವಿಚಾರಗಳು ಓಡುತ್ತಿದ್ದವು.  ಸ್ವಲ್ಪ ಆತಂಕ ಅಗಿತ್ತು. ಆ ಸಮಯದಲ್ಲಿ ನಾನು menstrual cup ಬಳಸುತ್ತಿದ್ದೆ ಹೀಗಾಗಿ ನೀರಿನಲ್ಲಿ ಹೆಚ್ಚಿನ ಸಮಯ ಇರಲು ಸಾಧ್ಯವಾಯಿತು,' ಎಂದು ನಯನಾ ಈ ಚಾಲೆಂಡ್ ಅನ್ನು ಹೇಗೆ ಎದುರಿಸಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.

'ಅಂಡರ್‌ವಾಟರ್‌ ಚಿತ್ರೀಕರಣ ಮಾಡುವ ಸಮಯದಲ್ಲಿ ನನಗೆ ತುಂಬಾನೇ ಹೊಟ್ಟೆ ನೋವಿತ್ತು. ಚಳಿಗಾಲದಲ್ಲಿ ಈ ಸಂದರ್ಭವನ್ನು ಎದುರಿಸುವುದು ಮತ್ತೊಂದು ಚಾಲೆಂಜ್. ಸ್ಯಾನಿಟರಿ ನ್ಯಾಪಿಕಿನ್‌ಗಿಂತ ಕಪ್ಸ್‌ಗೆ ಬದಲಾಗುವ ಮನಸ್ಸು ಮಾಡಿದ್ದಕ್ಕೆ ನನಗೆ ನಾನೇ ಧನ್ಯವಾದಗಳನ್ನು ಹೇಳಿಕೊಳ್ಳಬೇಕು. ಚಿತ್ರೀಕರಣ ಮಾಡುವ ಸಮಯದಲ್ಲಿ ನನಗೆ hygiene ಕಾಪಾಡಿಕೊಳ್ಳಲು ಸಹಾಯ ಕೂಡ ಮಾಡಿದೆ. ಏನೇ ಚಾಲೆಂಜ್ ಎದುರಿಸಿದ್ದರೂ, ಅಂಡರ್‌ವಾಟರ್ ಚಿತ್ರೀಕರಣದ ಅನುಭವ ಸೂಪರ್ ಆಗಿತ್ತು' ಎಂದಿದ್ದಾರೆ ನಟಿ ನಯನಾ. ಆ ಮೂಲಕ ಮತ್ತೊಮ್ಮೆ ಮಹಿಳೆಯರು ಬಳಸಬಹುದಾದ ಶೀ ಕಪ್ಸ್ ಬಗ್ಗೆ ಅರಿವು ಮೂಡಿಸುವ ಯತ್ನ ಮಾಡಿದ್ದಾರೆ.

Follow Us:
Download App:
  • android
  • ios