ಪ್ರಯತ್ನ ಮಾಡೋಣ ನನ್ನ ಇತಿಮಿತಿಯಲ್ಲಿದ್ದರೆ ಡ್ಯಾನ್ಸ್‌ ಮಾಡ್ತೀನಿ: ನಟ Vijay Raghavendra

ರಿಯಾಲಿಟಿ ಶೋ ವೇದಿಕೆಯಲ್ಲಿ ಅಕುಲ್ ಬಾಲಾಜಿ ಮತ್ತು ವಿಜಯ್. ಏನ್ ಬೇಕಿದ್ದರೂ ಮಾಡಿ ಆದರೆ ಸೇಫ್ಟಿ ಇರಬೇಕು....

Colors Kannada Vijay Raghavendra Akul Balaji talks about Dancing Championship vcs

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗಲಿರುವ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ (Dancing Championship) ರಿಯಾಲಿಟಿ ಶೋನಲ್ಲಿ ನಟ ವಿಜಯ್ ರಾಘವೇಂದ್ರ (Vijay Raghavendra) ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದು ಅಕುಲ್ ಬಾಲಾಜಿ (Akul Balaji) ನಿರೂಪಣೆ ಮಾಡುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಸೂಪರ್ ಹಿಟ್ ಎಂದು ಎಲ್ಲರಿಗೂ ಗೊತ್ತಿದೆ ಆದರೆ ಇವರು ಕಾರ್ಯಕ್ರಮದಿಂದ ನಿರೀಕ್ಷಿಸುತ್ತಿರುವುದು ಏನು ಎಂದು ಹಂಚಿಕೊಂಡಿದ್ದಾರೆ. 

'ನಾನು ತುಂಬಾನೇ ಫನ್‌ expect ಮಾಡ್ತಿದ್ದೀನಿ. ಅಕುಲ್ ಇದ್ದ ಕಡೆ ತುಂಬಾ ಸ್ಟ್ರಿಟ್ ಆಗಿರುತ್ತಾರೆ ಅನ್ನೋದೆಲ್ಲಾ ನಾನು ನಂಬುವುದಿಲ್ಲ. ಟೈಟಲ್‌ನಲ್ಲಿ ಇರುವ ಹಾಗೆ ಒಬ್ಬ ಚಾಂಪಿಯನ್ ಆಗಬೇಕು ಅಂದ್ರೆ ಮೊದಲು Discipline ಇರಬೇಕು. ನನ್ನ ಎಲ್ಲಾ ಸ್ಪರ್ಧಿಗಳಿಗೂ ಡೆಡಿಕೇಷನ್‌ (Dedication) ಇದೆ. ಟೀಂ ಜೊತೆ ಮಾತನಾಡುವಾಗ ನಾನು ಅವರಿಗೆ ನನ್ನ ಪರ್ಫಾರ್ಮೆನ್ಸ್‌ (Performance) ನನ್ನ ಡ್ಯಾನ್ಸ್‌ ಅನ್ನೋದಕ್ಕಿಂತ ನಮ್ಮ ಶೋ ಅಂತ ಮುಂದೆ ಬಂದ್ರೆ ತುಂಬಾ ದೊಡ್ಡ ಸ್ಕೋಪ್‌ ಸಿಗುತ್ತದೆ. ಡ್ಯಾನ್ಸ್ ಮಾಡುವಾಗ ನಗ್ತೀವಿ ನೋಡ್ತಾ ನೋಡ್ತಾ ಅಳ್ತೀವಿ ಒಂದೊಂದು ಸಲ ಎಕ್ಸೈಟ್ (excit) ಆಗ್ತೀವಿ. ಈ ಎಲ್ಲಾ ಎಮೋಷನ್‌ ನಮ್ಗೆ ಎಷ್ಟು ಸಿಗುತ್ತೋ ಟಿವಿನಲ್ಲಿ ನೋಡುವವರಿಗೂ ಅಷ್ಟೇ ಎಕ್ಸೈಟ್‌ಮೆಂಟ್‌ ಸಿಗಲಿ ಎನ್ನುವುದು ನನ್ನ ಹಾರೈಕೆ' ಎಂದು ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ. 

Colors Kannada Vijay Raghavendra Akul Balaji talks about Dancing Championship vcs

'ಏನ್ ಬೇಕಿದ್ರು ಡ್ಯಾನ್ಸ್ ಮಾಡಿ acrobatics ಮಾಡಿ, ಪಲ್ಟಿ ಹೊಡೆಯರಿ ಆದರೆ ವಿತ್ ಸೆಫ್ಟಿ ಮಾತ್ರ. ಡ್ಯಾನ್ಸ್ ಮಾಸ್ಟರ್ ಮಾಡ್ತಾರೆ, ಎಲ್ಲಿ ಎಲ್ಲೋ ನೋಡಿದೆ ಇನ್ನೆಲ್ಲೋ ನೋಡಿದೆ ಅನ್ನೋದಲ್ಲ ಪ್ರಯತ್ನ ಪಡೋಣ ನನ್ನ ಇತಿ ಮಿತಿಯಲ್ಲಿದ್ದರೆ ನಾನು ಡ್ಯಾನ್ಸ್ ಮಾಡ್ತೀನಿ. ಅಕುಲ್ ಹೇಳುತ್ತಾರೆ ಸೂಪರ್ ಡ್ಯಾನ್ಸ್ ಮಾಡುತ್ತಾರೆ ಅಂತ ಆದರೆ ಅದಲ್ಲ ನಾವಿಬ್ಬರು ಒಂದೇ ಜನರೇಶನ್‌ನವರು. ಈಗ ಇರುವ ಡ್ಯಾನ್ಸರ್‌ಗಳ ಮೂವ್‌ಮೆಂಟ್‌ (Dance Movement) ನನಗೆ ಅರ್ಥ ಆಗ್ತಿಲ್ಲ. ನಾನು ಇನ್ನೂ ಕಲಿಯುತ್ತಿರುವೆ. ಜಡ್ಜ್‌ ಸ್ಥಾನದಲ್ಲಿ ಕೂರಿಸಿದ್ದಾರೆ. ನೀವು ಬೆಟರ್ ಅಥವಾ ಬೆಸ್ಟ್‌ ಅಂತ ಮಾತ್ರ ನಾನು ಹೇಳಬಹುದು' ಎಂದಿದ್ದಾರೆ ವಿಜಯ್. 

ನಟ ಅಲ್ಲ ಡ್ಯಾನ್ಸರ್ ಆಗಬೇಕೆಂದು ಕಿರುತೆರೆ ಕಾಲಿಟ್ಟಿದ್ದು: Arjun Yogi Raj

ಸಿನಿಮಾ (Films) ಮತ್ತು ರಿಯಾಲಿಟಿ ಶೋ ಎರಡನ್ನೂ ಮಾಡುತ್ತಿರುವ ಕಾರಣ ಅಕುಲ್ ಮತ್ತು ವಿಜಯ್ ಸಮಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನೆ ಮಾಡಲಾಗಿತ್ತು. 'ಅವರು ಕೊಟ್ಟ ಡೇಟ್ ಬಿಟ್ಟು ಬೇರೆ ಡೇಟ್‌ ಇವರಿಗೆ ಕೊಡುವುದು ಅಷ್ಟೆ' ಎಂದು ಅಕುಲ್ ನಗುತ್ತಾ ಉತ್ತರಿಸುತ್ತಾರೆ. 'ಕೆಲಸ ಅಲ್ವಾ ಅಮ್ಮ, ಅದೂ ಅಲ್ಲದೇ ಬಹಳ ಕಡಿಮೆ ಜನರಿ ತಾವು ಇಷ್ಟ ಪಟ್ಟ ಕೆಲಸ ಸಿಗುವುದು ಅದರಲ್ಲಿ ನಾವಿದ್ದೀವಿ ಅಂದ್ರೆ ಅದು ನಮ್ಮ ಪುಣ್ಯ. ಓದಿರೋದು ಒಂದು ಕೆಲಸ ಮಾಡುತ್ತಿರುವುದು ಒಂದು. ಯಾವುದೇ ಕೆಲಸದಲ್ಲಿದ್ದರೂ ಈ ಡೇಟ್‌ ಕೊಟ್ಟಾಗ ಬಂದು ಶೂಟಿಂಗ್ ಮಾಡೋದು ಕೆಲಸಕ್ಕಿಂತ ಹೆಚ್ಚಾಗಿ ಇಲ್ಲಿ ಪ್ರೀತಿಯ ವಾತಾವರಣ ಇದೆ' ಎಂದು ಗುಲಾಬ್ ಜಾಮೂನ್ ಹೇಳಿದ್ದಾರೆ.

ಆರ್ಟಿಸ್ಟ್‌ಗೆ ಆರ್ಟ್‌ ಟಚ್‌ ಇಲ್ಲ ಅಂದ್ರೆ ಮೈ ಎಲ್ಲಾ ಚುಮಚುಮ ಅನುತ್ತೆ: ಪುಟ್ಟಗೌರಿ Sanya Iyer!
Latest Videos
Follow Us:
Download App:
  • android
  • ios