ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಖ್ಯಾತಿಯ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ, ತಂದೆಯ ಅಗಲಿಕೆಯ ನೋವಿನ ನಡುವೆಯೂ ಅವರ ಆತ್ಮದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಂದೆಯ ನೆರಳು, ಅವರು ಬಳಸುತ್ತಿದ್ದ ಪೌಡರ್ ವಾಸನೆ ಮತ್ತು ನಾಯಿಯ ವಿಚಿತ್ರ ವರ್ತನೆಯಂತಹ ಘಟನೆಗಳು ತಂದೆಯ ಉಪಸ್ಥಿತಿಯನ್ನು ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ. ಈ ಅನುಭವಗಳು ಭಯಾನಕವಾಗಿದ್ದರೂ, ತಂದೆ ತಮ್ಮೊಂದಿಗಿದ್ದಾರೆ ಎಂಬ ಭಾವನೆ ನೀಡುತ್ತವೆ.

ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಂಗಳೂರು ಸುಂದರಿಯರು ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ. ಕಳೆದ ವರ್ಷ ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದರು. ಆದರೆ ಅಗಲಿರುವ ತಂದೆ ನಮ್ಮ ಜೊತೆನೇ ಇದ್ದಾರೆ ಅನ್ನೋದಕ್ಕೆ ಹಲವು ಸಾಕ್ಷಿಗಳಿದೆ ಎಂದು ಇತ್ತೀಚಿಗೆ ಆರ್‌ ಜೆ ರಾಜೇಶ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ನಡೆದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. 

'ಅಪ್ಪ ತೀರಿಕೊಂಡ ದಿನ ನಾವು ಅವರ ಆತ್ಮವನ್ನು ನೋಡಿದ್ವಿ. ಅಪ್ಪ ಸತ್ತಾಗ ಅವರ ಫೇವರೇಟ್‌ ಕುರ್ಚಿ ಇತ್ತು ಮನೆಯಲ್ಲಿ ಅದರಲ್ಲಿ ಕೂರಿಸಿದ್ವಿ. ಅಪ್ಪನ ಕಾರ್ಯ ಎಲ್ಲವೂ ಮುಗಿದ ಮೇಲೆ ಆ ಚೇರನ್ನು ಯಾರೋ ಅಡುಗೆ ಮನೆಯ ಒಳಗಡೆ ಇಟ್ಟು ಬಿಟ್ಟಿದ್ದರು. ರಾತ್ರಿ ನಾವು ಹೀಗೆ ಸೋಫಾ ಮೇಲೆ ಕೂತ್ಕೊಂಡಿದ್ದಾಗ ಯಾರೋ ಕಿಚನ್‌ ಒಳಗೆ ಹೋದಂತೆ ಅಯ್ತು. ಅಷ್ಟಕ್ಕೂ ಅದು ನಮ್ಮ ಅಪ್ಪನೇ. ಅವರು ಸತ್ತಾಗ ಧರಿಸಿದ್ದ ಅದೇ ಪಂಚೆ ಮತ್ತು ಸರ್ಟ್‌ನಲ್ಲಿ ಹೇಗೆ ಕಾಣಿಸಿದ್ದರೋ ಅದೇ ರೀತಿ ಅವರ ನೆರಳನ್ನು ನೋಡಿದ್ವಿ. ಅದನ್ನು ನೆನೆಪಿಸಿಕೊಂಡರೆ ಇಂದಿಗೂ ಭಯ ಆಗುತ್ತದೆ' ಎಂದು ಅವಳಿ ಸಹೋದರಿಯರು ಮಾತನಾಡಿದ್ದಾರೆ. 

ಅಂದು ಮಗಳು ನೆಟ್ಟ ತೆಂಗಿನ ಸಸಿ ಹಿಂದೆಯೇ ಪುನೀತ್ ರಾಜ್‌ಕುಮಾರ್ ನೆಟ್ಟ ಗಿಡವಿದೆ: ಅನುಪ್ರಭಾಕರ್ ಹೆಮ್ಮೆಯ ಕ್ಷಣವಿದು

'ಅವತ್ತು ಎಲ್ಲರೂ ನಾರ್ಮಲ್ ಆಗಿ ಮಾತನಾಡುತ್ತಾ ಕೂತಿದ್ದರು ನಾವು ಗಾಬರಿಯಲ್ಲಿ ಫುಲ್‌ ಸೈಲೆಂಟ್ ಆಗಿ ಕೂತಿದ್ವಿ. ನಂತರ ಮೊದಲು ಹೋಗಿ ಆ ಚೇರ್ ಯಾರು ಅಡುಗೆ ಮನೆಯಲ್ಲಿ ಇಟ್ಟಿದ್ದು ಎಂದು ಭಯದಲ್ಲಿ ಜೋರಾಗಿ ಕೂಗಾಡುತ್ತಿದ್ದೆ. ಎಲ್ಲರೂ ಇವಳಿಗೆ ಏನ್ ಅಯ್ತು ಎಂದು ವಿಚಿತ್ರವಾಗಿ ನೋಡುತ್ತಿದ್ದಾರೆ. ನಾನು ಆ ರಾತ್ರಿ ಯಾರಿಗೂ ಏನನ್ನೂ ಹೇಳಲಿಲ್ಲ. ಮುರು ದಿನ ಎಲ್ಲರಿಗೂ ಹೇಳಿದೆ ಅಪ್ಪನನ್ನು ನೋಡಿದೆ ಅಂತ. ಎಲ್ಲರೂ ಶಾಕ್ ಆಗಿದ್ದರು. ಅಪ್ಪ ತೀರಿಕೊಳ್ಳುವ ಮುಂಚೆ ಅವರು ಬಳಸುತ್ತಿದ್ದ ಪೌಡರ್ ವಾಸನೆ ಅವರಯ ಹೋದ ಮೇಲೆ ಆಗಾಗ ಬರುತ್ತಿತ್ತು. ಈ ರೀತಿ ತುಂಬಾ ಅನುಭವಗಳು ಆಗಿದೆ' ಎಂದು ಸಹೋದರಿಯರು ಹೇಳಿದ್ದಾರೆ. 

ಮಧ್ಯರಾತ್ರಿ ಪಾರ್ಟಿ ಮಾಡೋಕೆ ಗ್ಲಾಸ್‌ ಇಲ್ಲ ಅಂತ ಬಾತ್‌ರೂಮ್‌ನಲ್ಲಿದ್ದ ಬಕೆಟ್‌ ಚೊಂಬು ಬಳಸಿದ ಸ್ಟಾರ್ ನಟರು!

'ಮನೆಯಲ್ಲಿ ಅಪ್ಪನ ಫೇವರೇಟ್‌ ನಾಯಿ ಇತ್ತು. ಅಪ್ಪ ಅನಾರೋಗ್ಯಕ್ಕೆ ತುತ್ತಾದಾಗ ಅವರಿಗೆ ಮಾತು ಹೋಗಿತ್ತು. ಆ ಸಂದರ್ಭದಲ್ಲಿ ನಾವು ಎಷ್ಟೋ ಬಾರಿ ಆ ನಾಯಿಯನ್ನು ಅಪ್ಪನ ಹತ್ತರ ಕರೆ ತಂದು ಮಾತನಾಡಿಸುವುದಕ್ಕೆ ಪ್ರಯತ್ನ ಪಟ್ಟಿದೀವಿ. ಆದರೆ ನಾಯಿ ಮಾತ್ರ ಅಪ್ಪನನ್ನು ನೋಡುತ್ತಿರಲಿಲ್ಲ. ನನ್ನಮ್ಮ ತುಂವಾ ಧೈರ್ಯವಂತೆ. ಇದಕ್ಕೆಲ್ಲಾ ಭಯ ಪಡಲ್ಲ. ಅಂಥವರು ಅಪ್ಪ ತೀರಿಕೊಂಡ ಎರಡನೇ ದಿನ ನಾಯಿ ಕೊಟ್ಟ ವಿಚಿತ್ರ ಲುಕ್‌ಗೆ ಭಯ ಪಟ್ಟು ಜೋರಾಗಿ ಕಿರುಚಿದರು. ಅಣ್ಣ ಓಡಿಬಂದು ನೋಡಿದಾಗ ಮತ್ತೆ ಅಪ್ಪ ಬಳಸುತ್ತಿದ್ದ ಅದೇ ಪೌಡರ್ ವಾಸನೆ ಆ ನಾಯಿಯಿದ್ದ ಜಾಗದಲ್ಲಿ ತುಂಬಾ ಜೋರಾಗಿ ಮೂಗಿಗೆ ಬರುತ್ತಿತ್ತು' ಎಂದಿದ್ದಾರೆ ಸಹೋದರಿಯರು. 

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಸರಿಗಮಪ' ಐಶ್ವರ್ಯ ರಂಗರಾಜನ್; ಫೋಟೋ ವೈರಲ್

YouTube video player