ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಸರಿಗಮಪ' ಐಶ್ವರ್ಯ ರಂಗರಾಜನ್; ಫೋಟೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯ ರಂಗರಾಜನ್ ನಿಶ್ಚಿತಾರ್ಥದ ಫೋಟೋಗಳು. ಸದ್ದಿಲ್ಲದೆ ಎಂಗೇಜ್ ಆಗುತ್ತಿರುವುದು ಯಾಕೆ ಅಂತಿದ್ದಾರೆ ಫ್ಯಾನ್ಸ್...

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ. ಈ ಶೋ ಮೂಲಕ ಜನರಿಗೆ ಪರಿಚಯವಾದ ಸುಂದರಿ ಐಶ್ವರ್ಯ ರಂಗರಾಜನ್. ಐಶು ನೀಡಿರುವ ಹಾಡುಗಳು ಸೂಪರ್ ಹಿಟ್.
ನಟ ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲಿ 'ಶೇಕ್ ಇಟ್ ಪುಸ್ಪವತಿ' ಹಾಡು ಹಾಡಿರುವ ಐಶ್ವರ್ಯ ರಂಗರಾಜನ್ ಇದೀಗ ಸಿಂಗಲ್ ಲೈಫ್‌ಗೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. ಇದರಿಂದ ಹುಡುಗರ ಹಾರ್ಟ್ ಬ್ರೇಕ್ ಆಗಿದೆ.
'ಎಂಗೇಜ್ಡ್. ನಾವು ಪರ್ಫೆಕ್ಟ್ ಫಿಚ್ ಹುಡುಕಿಕೊಂಡಿರುವೆ. ಇನ್ನು ಮುಂದೆ ಬೆಂಗಳೂರಿನಿಂದ ಮಂಗಳೂರು ಅಪ್ ಆಂಡ್ ಡೌನ್' ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ.
ಐಶ್ವರ್ಯ ನಿಶ್ಚಿತಾರ್ಥ ಆಗಿರುವ ಹುಡುಗ ಹೆಸರು ಸ್ಪಷ್ಟವಾಗಿಲ್ಲ ಏಕೆಂದರೆ ಟ್ಯಾಗ್ ಮಾಡಿರುವ ಅಕೌಂಟ್‌ನಲ್ಲಿ ಅವರ ಹೆಸರನ್ನು ಕಾಮೆಂಟ್ರಿ ಆಂಡ್ ಮೀಮ್ಸ್ ಅಂತ ಬರೆದುಕೊಳ್ಳಲಾಗಿದೆ.
ಐಶ್ವರ್ಯ ನಿಶ್ಚಿತಾರ್ಥ ಬಿಗ್ ಸರ್ಪ್ರೈಸ್ ಆದರೂ ಫೋಟೋಗೆ ಅನುಪಮಾ ಗೌಡ, ಆಂಕರ್ ಅನುಶ್ರೀ, ಗಣೇಶ್ ಕಾರಂತ್, ವಾಸುಕಿ ವೈಭವ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ.
ಯಾವುದೇ ಆಡಂಬರವಿಲ್ಲದೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಐಶ್ವರ್ಯ ಇನ್ನು ಮದುವೆ ದಿನಾಂಕ ಅನೌನ್ಸ್ ಮಾಡಿಲ್ಲ.