ಇತ್ತೀಚೆಗೆ ಸೆಲೆಬ್ರಿಟಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅನುಪ್ರಭಾಕರ್ ಅವರು 2020ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ವಿಜಯಶ್ರೀ ರೆಸಾರ್ಟ್‌ನಲ್ಲಿ ಮಗಳು ನೆಟ್ಟ ತೆಂಗಿನ ಸಸಿಯನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ಕೂಡಾ ಅಲ್ಲಿ ಗಿಡ ನೆಟ್ಟಿದ್ದರು. ಪುನೀತ್ ಅವರು ಪರಿಸರ ಕಾಳಜಿಗೆ ಒತ್ತು ನೀಡುತ್ತಿದ್ದರು. ಅನುಪ್ರಭಾಕರ್, ರಘು ಮುಖರ್ಜಿ ದಂಪತಿಗೆ ನಂದನ ಎಂಬ ಮಗಳಿದ್ದಾಳೆ. ಸಸಿ ಉಳಿಸಿಕೊಂಡಿದ್ದಕ್ಕೆ ಅನು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಹೆಚ್ಚಾಗಿ ಸೋಷಿಯಲ್ ವರ್ಕ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಾವು ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರೂ ಜನರು ಅದನ್ನು ನೋಡುತ್ತಾರೆ ಫಾಲೋ ಮಾಡುತ್ತಾರೆ ಅನ್ನೋ ಅರಿವು ಈಗ ಎಲ್ಲರಿಗೂ ಇದೆ. ದಿನದಿಂದ ದಿನಕ್ಕೆ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್‌ಗಳು ಹೆಚ್ಚಾಗುತ್ತಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಾರೆ ಆಗ ಅವರ ಕೈಯಿಂದ ಸಸಿ ನೆಟ್ಟುತ್ತಾರೆ. ಕೆಲವರು ಹಾಗೆ ಸುಮ್ಮನೆ ಶೋ ಅಂದುಕೊಳ್ಳುತ್ತಾರೆ ಆದರೆ ಕೆಲವರು ನಿಜಕ್ಕೂ ಪ್ರಾಮಾಣಿಕವಾಗಿ ಊಳಿಸಿಕೊಂಡಿದ್ದಾರೆ. 2020ರ ಅಮೂಲ್ಯ ಕ್ಷಣವನ್ನು ಅನುಪ್ರಭಾಕರ್ ಮತ್ತೆ ನೆನಪು ಮಾಡಿಕೊಂಡಿದ್ದಾರೆ.
'2020ರಲ್ಲಿ ನಾನು ಜೇಮ್ಸ್ ಸಿನಿಮಾ ಶೂಟಿಂಗ್‌ಗೆಂದು ಬಂದಾಗ ಬ್ಯೂಟಿಫುಲ್ ವಿಜಯಶ್ರೀ ರೆಸಾರ್ಟ್‌ನಲ್ಲಿ ನಾನು ಪುನೀತ್ ರಾಜ್‌ಕುಮಾರ್ ಎಲ್ಲರೂ ಉಳಿದುಕೊಂಡಿದ್ವಿ. ಆಗ ನನ್ನ ಮಗಳಿಗೆ ಎರಡು ವರ್ಷ ಆಗಿತ್ತು. ನನ್ನ ಮಗಳು ನೆಟ್ಟಿದ ತೆಂಗಿನ ಮರ ಇದು. ಇಲ್ಲಿಗೆ ಬರುವ ಗೆಸ್ಟ್‌ಗಳಿಂದ ಗಿಡ ನೆಡುವ ಕೆಲಸ ಮಾಡಿಸುತ್ತೀವಿ ಎಂದು ಮಾಡಿಸಿದ್ದರು. ಈಗ 2025..ಇದನ್ನು ನೋಡಲು ಖುಷಿಯಾಗುತ್ತಿದೆ. ತೆಂಗಿನ ಮರ ಇಷ್ಟು ಉದ್ದ ಬೆಳೆದಿದೆ ಹಾಗೇ ನನ್ನ ಮಗಳ ಹೆಸರು ಇದರ ಮೇಲೆ ಇದೆ. ಇಲ್ಲಿ ಮತ್ತೊಂದು ಸ್ಪೆಷಲ್ ಏನೆಂದರೆ. ಮಗಳು ನೆಟ್ಟಿಗರು ಮರದ ಹಿಂದೆನೇ ಅಪ್ಪು ಅವರ ನೆಟ್ಟಿರುವ ಗಿಡ ಇದೆ. ನನ್ನ ಮಗಳು ಸಸಿ ನೆಟ್ಟುವ ಸ್ವಲ್ಪ ದಿನಗಳ ಮುಂಚೆ ಅಪ್ಪು ಗಿಡ ನೆಟ್ಟಿರುವುದು' ಎಂದು ವಿಡಿಯೋದಲ್ಲಿ ಅನುಪ್ರಭಾಕರ್ ಮಾತನಾಡಿದ್ದಾರೆ.
ಮಧ್ಯರಾತ್ರಿ ಪಾರ್ಟಿ ಮಾಡೋಕೆ ಗ್ಲಾಸ್ ಇಲ್ಲ ಅಂತ ಬಾತ್‌ರೂಮ್‌ನಲ್ಲಿದ್ದ ಬಕೆಟ್ ಚೊಂಬು ಬಳಸಿದ ಸ್ಟಾರ್ ನಟರು!
ಪುನೀತ್ ರಾಜ್‌ಕುಮಾರ್ ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೂ ಒಂದು ಪವರ್‌ಫುಲ್ ಇಂಪ್ಯಾಕ್ಟ್ ಬೀರುತ್ತಾರೆ. ಸಾಮಾನ್ಯವಾಗಿ ಸ್ಟಾರ್ ಹೋಟೆಲ್‌ಗಳು ಅಥವಾ ಪರಿಸರಕ್ಕೆ ಪ್ರಾಮುಖ್ಯತೆ ನೀಡುವ ಹೋಟೆಲ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ನೆಟ್ಟಿರುವ ಗಿಡ ಅಥವಾ ಮರ ಇರುತ್ತದೆ. ಈಗ ತಮ್ಮ ಮಗಳು ನೆಟ್ಟಿರುವ ಸಸಿಯನ್ನು ಇಷ್ಟು ವರ್ಷ ಹಾಗೆ ಉಳಿಸಿಕೊಂಡು ಬಂದಿರುವುದಕ್ಕೆ ಅನು ಸಂತಸ ವ್ಯಕ್ತ ಪಡಿಸಿದ್ದಾರೆ. ನಟಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಜನವರಿ 24,2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಗಸ್ಟ್ 15,2019 ಮಗಳು ಹುಟ್ಟಿದ್ದಳು ಅಕೆಗೆ ನಂದನ ಎಂದ ಹೆಸರಿಟ್ಟಿದಾರೆ.
ಸದ್ಯಕ್ಕೆ ರೆಸ್ಟ್ ತಗೋಬೇಕು...ಆರಾಮ್ ಆಗಿ ನಿರ್ಧಾರ ಮಾಡ್ತೀವಿ; ಹನಿಮೂನ್ ಪ್ಲ್ಯಾನ್ ಬಗ್ಗೆ ಚೈತ್ರಾ- ಜಗದೀಪ್
