ಮಜಾ ಟಾಕೀಸ್‌ನಲ್ಲಿ ದೇವರಾಜ್ ಕುಟುಂಬ ಹಳೆ ನಾಟಕದ ನೆನಪುಗಳನ್ನು ಹಂಚಿಕೊಂಡರು. ಸ್ಪಂದನಾ ತಂಡದೊಂದಿಗೆ ಬಸವ ಕಲ್ಯಾಣಕ್ಕೆ ಹೋದಾಗ ಗಾಡಿ ಸಮಸ್ಯೆಯಿಂದ ತಡವಾಗಿ ತಲುಪಿದರು. ಊಟಕ್ಕೆ ಏನೂ ಸಿಗದಿದ್ದಾಗ, ಸ್ನಾನದ ಮನೆಯಲ್ಲಿ ಬಕೆಟ್‌ನಲ್ಲಿ ರಮ್ ಬೆರೆಸಿ ಕುಡಿದರು. ಅವತ್ತು ಕುಡಿದ ಅನೇಕರು ಇಂದು ಸ್ಟಾರ್ ನಟರಾಗಿದ್ದಾರೆ ಎಂದು ದೇವರಾಜ್ ಹೇಳಿದರು. ಈ ವಿಷಯ ತಿಳಿದು ಅವರ ಪತ್ನಿ ಆಶ್ಚರ್ಯಪಟ್ಟರು.
ಸೃಜನ್ ಲೋಕೇಶ್ ಮಜಾ ಟಾಕೀಸ್ ಪ್ರಪಂಚಕ್ಕೆ ದೇವರಾಜ್ ಕುಟುಂಬ ಆಗಮಿಸಿದ್ದರು. ಈ ವೇಲೆ ಹಳೆ ನಾಟಕದ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಡೈನಾಮಿಕ್ ಸ್ಟಾರ್. ಎಲ್ಲಾ ಕಥೆಗಳನ್ನು ಹೇಳಿದ್ರು ಆದರೆ ಇಂಟ್ರೆಸ್ಟಿಂಗ್ ಅನಿಸಿದ್ದು ಬಕೆಟ್‌ನಲ್ಲಿ ಪಾರ್ಟಿ ಮಾಡಿದ್ದು. ಯಾರೂ ಯೋಚನೆ ಮಾಡದ ರೀತಿಯಲ್ಲಿ ಪಾರ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಪಾರ್ಟಿ ಬಗ್ಗೆ ದೇವರಾಜ್ ಫ್ಯಾಮಿಲೂ ಮಾಹಿತಿ ಇರಲಿಲ್ಲ......
'ಸ್ಪಂದನಾ ತಂಡದಿಂದ ಬಸವ ಕಲ್ಯಾಣಕ್ಕೆ ನಾಟಕಕ್ಕೆ ಹೋಗಿದ್ವಿ. ಗಾಡಿ ಸಮಸ್ಯೆ ಆಗಿ ನಾವು ಬಡವ ಕಲ್ಯಾಣ ತಲುಪುವುದು ತಡವಾಗಿತ್ತು. ಹಳ್ಳಿ ಕಡೆ ಆಗಿದ್ದ ಕಾರಣ ರಾತ್ರಿ 7.30 ಅಥವಾ 8 ಗಂಟೆಗೆ ಬಂದ್ ಆಗಿಬಿಡುತ್ತದೆ. ನಮಗೆ ಸರಿಯಾಗಿ ಊಟ ಇಲ್ಲ ಏನೂ ಇಲ್ಲ ಆದರೂ ಅಲ್ಲಿದ್ದ ಒಂದು ಚೌಲ್ಟ್ರಿಗೆ ತಲುಪಿಸಿಬಿಟ್ಟರು. ಈಗ ಏನೂ ಇಲ್ಲ ಏನ್ ಮಾಡೋದು ಎಂದು ಯೋಚನೆ ಮಾಡುತ್ತಿರುವಾಗ ನಮ್ಮೊಟ್ಟಿಗೆ ಸತ್ಯ ಸೀನಾ ಅಂತ ಫ್ರೆಂಡ್ ಇದ್ದ. ಅವನ ಬಳಿ ಸದಾ ಎಣ್ಣೆ ಬಾಟಲ್‌ಗಳು ಇರುತ್ತದೆ. ಏನ್ ಮಾಡೋದು ಕಡಿಯಲು ಗ್ಲಾಸ್ ಇಲ್ಲ ಲೋಟ ಇಲ್ಲ ತಟ್ಟೆ ಇಲ್ಲ ಎಂದು ಯೋಚನೆ ಮಾಡುತ್ತಿದ್ವಿ. ಬಾ ಒಂದು ಐಡಿಯಾ ಮಾಡುತ್ತೀನಿ ಎಂದು ನಮ್ಮನ್ನು ಸ್ನಾನದ ಮನೆಗೆ ಕರೆದುಕೊಂಡು ಹೋದಾ...ಅಲ್ಲಿದ್ದ ಬಕೆಟ್ ಮತ್ತು ಚೊಂಬು ಬಳಸಿಕೊಳ್ಳುವ ಪ್ಲ್ಯಾನ್ ಆಯ್ತು. ಅರ್ಧ ಬಕೆಟ್ ನೀರು ತುಂಬಿಸಿಬಿಟ್ಟು ಅದಕ್ಕೆ ಎರಡು ಬಾಟಲ್ ರಮ್ ಸುರಿದುಬಿಟ್ವಿ. ಚೊಂಬಲಿ ಎಣ್ಣೆ ಎತ್ತಿಕೊಳ್ಳುವುದು ಸ್ವಲ್ಪ ಕುಡಿದು ಪಕ್ಕದಲ್ಲಿ ಇದ್ದವರಿಗೆ ಕೊಡುವುದು. ಅವತ್ತು ಬಕೆಟ್‌ನಲ್ಲಿ ಎಣ್ಣೆ ಕುಡಿದವರಲ್ಲಿ ಸುಮಾರು ಜನರು ಇವತ್ತು ಸ್ಟಾರ್ ನಟರು ಆಗಿದ್ದಾರೆ. ಅವಿನಾಶ್, ಪ್ರಕಾಶ್ ರಾಜ್, ನಾಗೇಂದ್ರ ಶಾ ಸೇರಿದಂತೆ ದೊಡ್ಡ ಪಟ್ಟಿನೇ ಇದೆ' ಎಂದುದೇವರಾಜ್ ಹೇಳಿದ್ದಾರೆ.
ಸದ್ಯಕ್ಕೆ ರೆಸ್ಟ್ ತಗೋಬೇಕು...ಆರಾಮ್ ಆಗಿ ನಿರ್ಧಾರ ಮಾಡ್ತೀವಿ; ಹನಿಮೂನ್ ಪ್ಲ್ಯಾನ್ ಬಗ್ಗೆ ಚೈತ್ರಾ- ಜಗದೀಪ್
'ಅಯ್ಯೋ ನಮಗೆ ಈ ಕಥೆ ಗೊತ್ತಿರಲಿಲ್ಲ ಮಜಾ ಟಾಕೀಸ್‌ಗೆ ಬಂದ ಮೇಲೆ ಎಷ್ಟೋ ಸತ್ಯಗಳು ಹೊರಗಡೆ ಬರುತ್ತಿದೆ' ಎಂದು ದೇವರಾಜ್ ಪತ್ನಿ ಹೇಳಿದ್ದಾರೆ. 'ಈಗ ಬಕೆಟ್ ಕುಡುಕಾ ಎಂಬ ಪದಕ್ಕೆ ಸರಿಯಾದ ಅರ್ಥ ಸಿಕ್ಕಿದೆ' ಎನ್ನುವ ಸೃಜನ್ ಲೋಕೇಶ್. ಆ ಬಕೆಟ್‌ನಲ್ಲಿ ಕುಡಿದವರು ಸ್ಟಾರ್‌ಗಳು ಆಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ನಮಗೂ ಆ ಬಕೆಟ್ ಬೇಕು ಎಲ್ಲಿದೆ ಎಂದು ಹಾಸ್ಯ ಮಾಡಿದ್ದಾರೆ. 'ದೇವರಾಜ್ ಅವರು ಹೇಳುತ್ತಿರವ ಮಾತುಗಳು ನಿಜಕ್ಕೂ ಸಿನಿಮಾ ಸೀನ್ ನೋಡುವಂತೆ ಆಗುತ್ತಿದೆ. ಎಂಥಾ ಹಿರಿಯರನ್ನು ಪಡೆದಿದ್ದೀವಿ ನಾವೇ ಪುಣ್ಯವಂತರು' ಎಂದು ಯೋಗರಾಜ್ ಭಟ್ ಕೂಡ ಕಾಲೆಳೆಯುತ್ತಾರೆ.
ಕೊಡಗಿನ ತೋಟದ ಮನೆಯಲ್ಲಿ ಭೂತಕೋಲ ಆರಾಧನೆ ಮಾಡಿಸಿದ ಜೈ ಜಗದೀಶ್ ಪುತ್ರಿಯರು; ಫೋಟೋ ವೈರಲ್
