ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಯಶಸ್ವಿ ವೃತ್ತಿಜೀವನದ ಜೊತೆಗೆ, ಅವರ ವೈಯಕ್ತಿಕ ಬದುಕಿನ ಅಪರಿಚಿತ ಸಂಗತಿಗಳು ಇಲ್ಲಿವೆ. ಅಮಂಡಾ ಪೂರ್ವಾಂಕರ ಜೊತೆಗಿನ ಅವರ ವಿವಾಹ, ವಿಚ್ಛೇದನ ಮತ್ತು ನಂತರದ ಸಂಬಂಧಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.

ನಿಖಿಲ್ ಕಾಮತ್ ಭಾರತದ ಪ್ರಮುಖ ಸ್ಟಾಕ್ ಬ್ರೋಕರ್ ಮತ್ತು ಹಣಕಾಸು ಸೇವಾ ಕಂಪನಿಗಳಲ್ಲಿ ಒಂದಾದ ಜೆರೋಧಾದ ಸಹ-ಸಂಸ್ಥಾಪಕ. ಯಶಸ್ವಿ ಉದ್ಯಮಿ ಕೂಡ ಹೌದು. ಅದರೊಂದಿಗೆ ನಿಖಿಲ್‌ ಕಾಮತ್‌ ಪ್ರಖ್ಯಾತ ಯೂಟ್ಯೂಬರ್‌. ಅವರು ತಮ್ಮ ಜನಪ್ರಿಯ ಯೂಟ್ಯೂಬ್ ಪಾಡ್‌ಕ್ಯಾಸ್ಟ್ ಸರಣಿ WTF isಗೆ ಪ್ರಸಿದ್ಧ ವ್ಯಕ್ತಿಗಳ ಪಾಡ್‌ಕಾಸ್ಟ್‌ ಮಾಡುತ್ತಾರೆ. ಈಗಾಗಲೇ ರಣಬೀರ್‌ ಕಪೂರ್‌ನ,ತನ್ಮಯ್ ಭಟ್, ಕೆಎಲ್ ರಾಹುಲ್, ಬಿಲ್ ಗೇಟ್ಸ್ ಮತ್ತು ಕುಮಾರ್ ಮಂಗಲಂ ಬಿರ್ಲಾ, ನಂದನ್ ನಿಲೇಕಣಿ, ಯಾನ್ ಲೆಚುನ್ ಹಾಗೂ ಎಲಾನ್‌ ಮಸ್ಕ್‌ರಂಥ ದಿಗ್ಗಜರನ್ನು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿಸಿದ್ದಾರೆ.

ಶಿವಮೊಗ್ಗ ಮೂಲದ ನಿಖಿಲ್‌ ಕಾಮತ್‌ ಓದಿದ್ದು 10ನೇ ಕ್ಲಾಸ್‌ ಮಾತ್ರ. ಎಂದಿಗೂ ಕಾಲೇಜು ಮೆಟ್ಟಿಲು ಹತ್ತಿದವರಲ್ಲ. ಅಣ್ಣ ನಿತಿನ್‌ ಕಾಮತ್‌ ಜೊತೆಗೂಡಿ ಅವರು ಆರಂಭಿಸಿರುವ ಜೀರೋಧಾ ಸ್ಟಾಕ್‌ ಬ್ರೋಕಿಂಗ್‌ ಕಂಪನಿ ದೇಶದ ಪ್ರಮುಖ ಹಣಕಾಸು ಸೇವಾ ಕಂಪನಿಗಳಲ್ಲಿ ಒಂದಾಗಿದೆ. ಜೀರೋಧಾ ಕಂಪನಿಯ ಭಾಗವಾಗಿದ್ದರೂ, ಅದರ ಹೆಚ್ಚಿನ ವ್ಯವಹಾರಗಳನ್ನು ನೋಡಿಕೊಳ್ಳುವುದು ನಿತಿನ್‌ ಕಾಮತ್‌.

ಅಣ್ಣ ನಿತಿನ್‌ ಕಾಮತ್‌ಗೆ ಮದುವೆಯಾಗಿರುವುದು, ಮಕ್ಕಳಿರುವುದು ಗೊತ್ತಿರುವ ವಿಚಾರ. ಆದರೆ, ನಿಖಿಲ್‌ ಕಾಮತ್‌ ಬಗ್ಗೆ ಇಲ್ಲಿಯವರೆಗೂ ಅವಿವಾಹಿತ ಎಂದೇ ವರದಿಯಾಗಿತ್ತು. ಆದರೆ, ನಿಖಿಲ್‌ ಕಾಮತ್‌ ವಿಚ್ಛೇದಿತ ಅನ್ನೋದು ಗೊತ್ತಾಗಿದೆ. 2019ರ ಏಪ್ರಿಲ್‌ 18 ರಂದು ನಿಖಿಲ್‌ ಕಾಮತ್‌ ವಿವಾಹ ನಡೆದಿತ್ತು. ಆದರೆ, 2021ರ ವೇಳೆ ಅವರು ವಿಚ್ಛೇದನ ಪಡೆದುಕೊಂಡಿದ್ದರು.

ನಿಖಿಲ್‌ ಕಾಮತ್‌ ಮಾಜಿ ಪತ್ನಿ ಯಾರು?

ಅಮಂಡಾ ಪೂರ್ವಾಂಕರ. ಹೌದು ಪೂರ್ವಾಂಕರ ರಿಯಲ್‌ ಎಸ್ಟೇಟ್‌, ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಅಮಂಡಾ ಪೂರ್ವಾಂಕರರನ್ನು ನಿಖಿಲ್‌ ಕಾಮತ್‌ ವಿವಾಹವಾಗಿದ್ದರು. ಇದರ ಮಾಹಿತಿ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗೂ ನಿಖಿಲ್‌ ಕಾಮತ್‌ ಕೂಡ ಎಲ್ಲೂ ಈ ವಿಚಾರವನ್ನು ಹೇಳಿಕೊಂಡಿಲ್ಲ. 

2019ರ ಏಪ್ರಿಲ್‌ 18 ರಂದು ವಿವಾಹವಾಗಿದ್ದ ಜೋಡಿ ಕೆಲವು ತಿಂಗಳುಗಳ ಕಾಲ ಒಟ್ಟಿಗೆ ಜೀವನ ಮಾಡಿತ್ತು. ಆದರೆ, ಮುಂದೆ ಅವರ ನಡುವೆ ಹೊಂದಾಣಿಕೆ ಕಂಡು ಬರಲಿಲ್ಲ. ಅದೇ ವರ್ಷವೇ ಅವರು ಬೇರೆಬೇರೆಯಾಗಿದ್ದರು. 2021ರ ವೇಳೆಗೆ ಅಧಿಕೃತವಾಗಿ ವಿಚ್ಛೇದನ ಸಿಕ್ಕಿತ್ತು. ಆದರೆ, ವಿಚ್ಛೇದನಕ್ಕೆ ಕಾರಣ ಏನು ಅನ್ನೋದು ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವ ವೇಳೆ ತಾವೊಬ್ಬ ರಿಲೇಷನ್‌ಷಿಪ್‌ ಜಂಕಿ ಎಂದು ನಿಖಿಲ್‌ ಕಾಮತ್‌ ಹೇಳಿದ್ದಾರೆ. ಅಮಂಡಾ ಪೂರ್ವಾಂಕರ ತಮ್ಮ ಬದುಕಿನಿಂದ ಹೋದ ಬಳಿಕ ನಿಖಿಲ್‌ ಕಾಮತ್‌ ಅವರ ಹೆಸರು 2017ರ ಮಿಸ್‌ ವರ್ಲ್ಡ್‌ ಮಾನುಷಿ ಚಿಲ್ಲರ್‌ ಅವರೊಂದಿಗೆ ಕೇಳಿಬಂದಿತ್ತು. ಆಕೆಯ ಜೊತೆ ಕೆಲ ವರ್ಷ ಅವರು ಸುತ್ತಾಡಿದ್ದರು.

ಅದಾದ ಬಳಿಕ ಅವರು ಈಗ ಸುಶಾಂತ್‌ ಸಿಂಗ್‌ ರಜಪೂತ್‌ ಕೇಸನಲ್ಲಿ ಪೊಲೀಸರಿಂದ ದೊಡ್ಡ ಮಟ್ಟದ ವಿಚಾರಣೆ ಎದುರಿಸಿದ್ದ ಬಾಲಿವುಡ್‌ ನಟಿ ರೇಹಾ ಚಕ್ರವರ್ತಿ ಅವರ ಜೊತೆ ಕೇಳಿಬಂದಿದೆ. ಆಕೆಯ ಜೊತೆಗೂ ನಿಖಿಲ್‌ ಕಾಮತ್‌ ಹಲವು ಏರಿಯಾಗಳಲ್ಲಿ ಸುತ್ತಾಡಿರುವ, ವಿಡಿಯೋ, ಫೋಟೋ ವೈರಲ್‌ ಆಗಿವೆ.