Bengaluru Residential Society Fine: ಇಂದು ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಜಾಸ್ತಿ ಆಗಿದೆ. ಅಷ್ಟೇ ಅಲ್ಲದೆ ಒಂದಿಷ್ಟು ನೀತಿ-ನಿಯಮ ಹಾಕಲಾಗುವುದು, ಆದರೆ ಇಲ್ಲೊಂದು ಸೊಸೈಟಿಯು ಹುಡುಗಿಯರು ಇದ್ದಿದ್ದಕ್ಕೆ ಈ ರೀತಿ ಶಿಕ್ಷೆ ಕೊಟ್ಟಿದೆ, ಇದು ಸರಿಯೇ? 

ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದು, ಒಂದು ರಾತ್ರಿ ಇಬ್ಬರು ಹುಡುಗಿಯರು ಬಂದಿದ್ದಕ್ಕೆ 5000 ರೂಪಾಯಿ ದಂಡ ಹಾಕಿರುವ ವಿಷಯವನ್ನು ಬೆಂಗಳೂರು ಮೂಲದ ಒಬ್ಬ ರೆಡ್ಡಿಟ್ ಬಳಕೆದಾರರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕ್ರಮ ಕೈಗೊಳ್ಳಬಹುದಾ?

ತನ್ನ ಫ್ಲಾಟ್‌ನಲ್ಲಿ ಒಂದು ಹೆಣ್ಣು ರಾತ್ರಿ ಇದ್ದಳು ಎನ್ನುವ ಕಾರಣಕ್ಕಾಗಿ ಅವರಿಗೆ ₹5,000 ದಂಡ ಹಾಕಲಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಾವು ಇರುವ ಸೊಸೈಟಿಯಿಂದ ಇನ್‌ವಾಯ್ಸ್‌ನ ಸ್ಕ್ರೀನ್‌ಶಾಟ್ ಅನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆ ಸೊಸೈಟಿ ವಿರುದ್ಧ ಏನಾದರೂ ಕಾನೂನು ಕ್ರಮ ಕೈಗೊಳ್ಳಬಹುದಾ ಎಂದು ಪ್ರಶ್ನಿಸಿದ್ದಾರೆ.

ಕುಟುಂಬಗಳಿಗೆ ಈ ನಿಯಮವಿಲ್ಲ

ನಾವಿರುವ ಕಮ್ಯುನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಚುಲರ್‌ಗಳು ಅತಿಥಿಗಳನ್ನು ರಾತ್ರಿ ಉಳಿಸಿಕೊಳ್ಳಲು ಅವಕಾಶವೇ ಇಲ್ಲ. ಆದರೆ ಇತರ ಕುಟುಂಬಗಳಿಗೆ ಮಾತ್ರ ಈ ರೀತಿ ಯಾವುದೇ ನಿರ್ಬಂಧಗಳಿಲ್ಲ. ನಾವು ನಿರ್ವಹಣಾ ಶುಲ್ಕ,ಎಲ್ಲವನ್ನೂ ಕೊಡ್ತೀವಿ, ನಮಗೊಂದು ನ್ಯಾಯ, ಕುಟುಂಬಸ್ಥರಿಗೊಂದು ನ್ಯಾಯ” ಎಂದು ಹೇಳಿದ್ದಾರೆ.

₹5,000 ದಂಡವನ್ನು ಹಾಕಲಾಗಿದೆ

ನವೆಂಬರ್ 1 ರ ದಿನಾಂಕ ಇನ್‌ವಾಯ್ಸ್‌ ನೀಡಲಾಗಿದೆ. ತಮ್ಮ ಫ್ಲಾಟ್‌ನಲ್ಲಿ ಇಬ್ಬರು ಹುಡುಗಿಯರು ರಾತ್ರಿ ಇದ್ದರು ಎಂದು ಸೊಸೈಟಿಯು ಅವರಿಗೂ, ಅವರ ಫ್ಲಾಟ್‌ಮೇಟ್‌ಗೂ ₹5,000 ದಂಡವನ್ನು ಹಾಕಿದೆ. ಅಷ್ಟೇ ಅಲ್ಲದೆ ಅವರು ಈ ಉಲ್ಲಂಘನೆ ನಡೆದ ದಿನಾಂಕ, ರಾತ್ರಿ ಇದ್ದ ಹುಡುಗಿಯರ ಸಂಖ್ಯೆಯನ್ನು ಕೂಡ ಮೆನ್ಶನ್‌ ಮಾಡಿದ್ದಾರೆ. ಇನ್‌ವಾಯ್ಸ್‌ನಲ್ಲಿ ಇಬ್ಬರು ಹುಡುಗಿಯರು ರಾತ್ರಿ ಇದ್ದರು ಎಂದು ಬರೆಯಲಾಗಿದೆ. ಅಕ್ಟೋಬರ್ 31 ರಂದು ಈ ಘಟನೆ ಸಂಭವಿಸಿದೆಯಂತೆ.

ಕಾನೂನು ಕ್ರಮ ಕೈಗೊಳ್ಳಬೇಕು

“ನನಗೆ ಯಾವುದೇ ಎಚ್ಚರಿಕೆ ಕೊಡದಿರೋದು ಮೊದಲ ಉಲ್ಲಂಘನೆಯಾಗಿದೆ. ಇದು ಬಹಳ ಸಣ್ಣ ವಿಷಯ ಅಂತ ನನಗೆ ಗೊತ್ತು, ಆದರೆ ಈ ರೀತಿ ಕೀಳಾಗಿ ನಡೆಸಿಕೊಳ್ಳುವುದು ಸರಿ ಅನಿಸೋದಿಲ್ಲ. ಇದಕ್ಕೆ ನಾನು ದೊಡ್ಡದಾಗಿ ಕಾನೂನು ಕ್ರಮ ಕೈಗೊಳ್ಳದೆ ಇರೋಕಾಗಲ್ಲ. ಆದರೆ ಈ ವಿಷಯವನ್ನು ಮರುಪರಿಶೀಲಿಸುವಂತೆ ಮಾಡಬಹುದೇ” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಅನೇಕರು ಬ್ಯಾಚುಲರ್‌ನ ಈ ಸಮಸ್ಯೆಯ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಸೊಸೈಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದರೆ, ಇನ್ನೂ ಕೆಲವರು ಇದರ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಈ ಅಪಾರ್ಟ್‌ಮೆಂಟ್‌ ಬೇಡ, ಬೇರೆ ಜಾಗಕ್ಕೆ ಹೋಗಿ ಎಂದಿದ್ದಾರೆ. ಇನ್ನು ಕೆಲವರು ಸೊಸೈಟಿಯ ಹೆಸರು ಹೇಳಿ, ಇದರಿಂದ ಬೇರೆ ಬ್ಯಾಚುಲರ್ಸ್‌ ಆ ಜಾಗದಿಂದ ದೂರವಿರಲು ಅನುಕೂಲ ಆಗುವುದು ಎಂದಿದ್ದಾರೆ.

ಈ ರೀತಿ ದಂಡ ಹಾಕಿರೋದು ಯಾವುದೇ ಅರ್ಥ ಕೊಡೋದಿಲ್ಲ. ಇದು ತಮ್ಮನ್ನು ತಾವೇ ಓಯೋ (Oyo) ಹೋಟೆಲ್ ಎಂದು ಪರಿಗಣಿಸಿದ ಹಾಗೆ ಕಾಣುತ್ತದೆ. ಕಾನೂನುಬದ್ಧವಾಗಿ ಹೋರಾಡಬಹುದು, ಆದರೆ ಇದಕ್ಕೆ ಕೊನೆಯಿಲ್ಲ. ಮನೆ ಮಾಲೀಕರು ಬೇರೆ ಕಡೆ ಹೋಗಿ ಎನ್ನುತ್ತಾರೆ. ಇದು ನಮ್ಮ ದೇಶದ ಸಮಸ್ಯೆ

Disclaimer: ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಬರಹ ಇದಾಗಿದ್ದು, ಸುವರ್ಣ ನ್ಯೂಸ್‌ ಈ ವಿಷಯವನ್ನು ಅಧಿಕೃತವಾಗಿ ಹೇಳೋದಿಲ್ಲ.