ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ 2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ಬಗ್ಗೆ ಮೋದಿ ಮಾತು!
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಪಾಡ್‌ಕಾಸ್ಟ್‌ನಲ್ಲಿ 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಗೋಧ್ರಾ ರೈಲು ದುರಂತದ ನಂತರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ತಮ್ಮ ಅನುಭವಗಳನ್ನು ವಿವರಿಸಿದ್ದಾರೆ.
ಬೆಂಗಳೂರು (ಜ.10): ಸ್ಟಾಕ್ ಮಾರ್ಕೆಟ್ ಬ್ರೋಕಿಂಗ್ ಸ್ಟಾರ್ಟ್‌ಅಪ್ ಜೀರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ತಮ್ಮ ಮೊಟ್ಟಮೊದಲ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ಅವರು ತಮ್ಮ ಜೀವನದಲ್ಲಿ ಎದುರಿಸಿದ ಅತಿದೊಡ್ಡ ಸವಾಲುಗಳಲ್ಲಿ ಒಂದಾದ 2002ರ ಗುಜರಾತ್ ಗಲಭೆಯ ಬಗ್ಗೆಯೂ ಮನಬಿಚ್ಚಿ ತಿಳಿಸಿಸಿದರು.
2002ರ ಫೆಬ್ರವರಿ 24 ರಂದು ನಾನು ಮೊದಲ ಬಾರಿಗೆ ಶಾಸಕನಾಗಿದ್ದೆ. ಫೆಬ್ರವರಿ 27ಕ್ಕೆ ನಾನು ವಿಧಾನಸಭೆಗೆ ಪ್ರವೇಶಿಸಿದ್‌ದೆ. ಗೋಧ್ರಾದಲ್ಲಿ ಘಟನೆ ಆದಾಗ ನನಗೆ ಶಾಸಕನಾಗಿ ಬರೀ ಮೂರು ದಿನಗಳ ಅನುಭವವಿತ್ತಷ್ಟೇ. ರೈಲಿಗೆ ಬೆಂಕಿ ಬಿದ್ದಿದೆ ಎಂದು ಮೊದಲ ಬಾರಿಗೆ ನನಗೆ ವರದಿ ಬಂತು. ಕೆಲ ಹೊತ್ತಿನಲ್ಲಿಯೇ ಅಲ್ಲಿ ಸಾವು ಕಂಡಿರುವವರ ಮಾಹಿತಿಗಳು ಬರಲಾರಂಭಿಸಿತು. ಈ ವೇಳೆ ನಾನು ವಿಧಾನಸಭೆಯಲ್ಲಿದೆ. ಇದು ನನಗೆ ಚಿಂತೆ ಉಂಟು ಮಾಡಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
ವಿಧಾನಸಭೆಯಿಂದ ಹೊರಗೆ ಬಂದ ಕೂಡಲೇ, ತಕ್ಷಣವೇ ನಾನು ಗೋಧ್ರಾಗೆ ಭೇಟಿ ನೀಡಬೇಕು ಎಂದು ತಿಳಿಸಿದೆ. ಆದರೆ, ಅಂದು ಕೇವಲ ಒಂದು ಹೆಲಿಕಾಪ್ಟರ್ ಇತ್ತು. ನನ್ನ ಪ್ರಕಾರ ಅದು ಓಎನ್‌ಜಿಸಿ ಕಂಪನಿಗೆ ಸೇರಿದ್ದಾಗಿತ್ತು. ಆದರೆ, ಆ ಹೆಲಿಕಾಪ್ಟರ್ ಸಿಂಗಲ್ ಇಂಜಿನ್ ಆಗಿರುವ ಕಾರಣ, ವಿಐಪಿಗಳು ಅದರಲ್ಲಿ ಪ್ರಯಾಣ ಮಾಡೋದು ಸರಿಯಲ್ಲ. ನೀಡಲು ಸಾಧ್ಯವಿಲ್ಲ ಎಂದಿದ್ದರು. ಈ ವೇಳೆ ಅವರೊಂದಿಗೆ ಕೆಲ ಮಾತುಕತೆಗಳು ಕೂಡ ನಡೆಯಿತು. ಏನಾದರಾಗಲಿ, ಅದಕ್ಕೆ ನಾನೇ ಜವಾಬ್ದಾರಿ ಎಂದು ಅವರಿಗೆ ಹೇಳಿದ್ದೆ. ಆ ಬಳಿಕ ಗೋಧ್ರಾಗೆ ಭೇಟಿ ನೀಡಲು ಸಾಧ್ಯವಾಯಿತು. ಅಲ್ಲಿನ ನೋವಿನ ದೃಶ್ಯಗಳನ್ನು ನಾನು ನೋಡಿದೆ. ಆ ಮೃತದೇಹಗಳು.. ಅಂದು ನಾನು ಜೀವನದ ಪ್ರತಿ ದುಃಖವನ್ನೂ ಅನಬುಭವಿಸಿದೆ. ಆದರೆ, ನಾನು ನನ್ನ ಭಾವನೆಗಳು ಮತ್ತು ನೈಸರ್ಗಿಕ ಪ್ರವೃತ್ತಿಯಿಂದ ದೂರವಿರಬೇಕಾದ ಸ್ಥಾನದಲ್ಲಿ ಕುಳಿತಿದ್ದೇನೆ ಎಂದು ನನಗೆ ತಿಳಿದಿತ್ತು. ನನ್ನನ್ನು ನಿಯಂತ್ರಿಸಲು ನಾನು ಸಾಧ್ಯವಾದಷ್ಟು ಪ್ರಯತ್ನ ಮಾಡಿದೆ ಎಂದು ಅವರು ಹೇಳಿದರು.
2002ರ ಫೆಬ್ರವರಿ 27 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಕೋಚ್‌ಗೆ ಮತಾಂಧರು ಬೆಂಕಿಹಚ್ಚಿದ್ದರು. ಇದರಲ್ಲಿ ಅಯೋಧ್ಯೆಯಿಂದ ಬರುತ್ತಿದ್ದ ಹಿಂದೂ ಭಕ್ತಾದಿಗಳು ಹಾಗೂ ಕರಸೇವಕರೂ ಸೇರಿ 59 ಮಂದಿ ಸುಟ್ಟು ಕರಕಲಾಗಿದ್ದರು. ಯಾರೊಬ್ಬರ ದೇಹ ಕೂಡ ಗುರುತಿಸುವಂಥ ಸ್ಥಿತಿಯಲ್ಲಿ ಇದ್ದಿರಲಿಲ್ಲ. ಇದರ ಬೆನ್ನಲ್ಲಿಯೇ ಗುಜರಾತ್ ಇತಿಹಾಸದಲ್ಲಿಯೇ ಕಂಡ ಅತಿದೊಡ್ಡ ಕೋಮುಗಲಭೆ ಉಂಟಾಗಿತ್ತು.
ಉದ್ಯಮಿ ನಿಖಿಲ್ ಕಾಮತ್ ಪೋಡ್‌ಕಾಸ್ಟ್ ಪ್ರೋಮೋ ರಿಲೀಸ್, ಪ್ರಧಾನಿ ಮೋದಿ ಅತಿಥಿ?
ನಿಖಿಲ್ ಕಾಮತ್ ಜೊತೆಗಿನ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ, ಸಾಮಾನ್ಯ ವಿದ್ಯಾರ್ಥಿಯಾಗಿದ್ದ ತಾವು ಗುಜರಾತ್ ಮುಖ್ಯಮಂತ್ರಿ ಪದವಿವರೆಗೆ ಏರಿದ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. "ನಾನು ಮುಖ್ಯಮಂತ್ರಿಯಾದಾಗ, ನನ್ನ ಒಂದು ಭಾಷಣದಲ್ಲಿ, ನನ್ನ ಪ್ರಯತ್ನಗಳಲ್ಲಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಹೇಳಿದ್ದೆ. ಎರಡನೆಯದಾಗಿ, ನಾನು ನನಗಾಗಿ ಏನನ್ನೂ ಮಾಡುವುದಿಲ್ಲ. ಮೂರನೆಯದಾಗಿ, ನಾನು ಮನುಷ್ಯ, ನಾನು ತಪ್ಪುಗಳನ್ನು ಮಾಡಬಹುದು, ಆದರೆ ನಾನು ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ. ನಾನು ಅವುಗಳನ್ನು ನನ್ನ ಜೀವನದ ಮಂತ್ರಗಳನ್ನಾಗಿ ಮಾಡಿಕೊಂಡಿದ್ದೇನೆ. ತಪ್ಪುಗಳನ್ನು ಮಾಡುವುದು ಸಹಜ, ಎಲ್ಲಾ ನಂತರ ನಾನು ಮನುಷ್ಯ, ನಾನು ದೇವರು ಅಲ್ಲ, ಆದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ" ಎಂದು ಅವರು ಹೇಳಿದರು.
ಬೆಂಗಳೂರಿನ ಸಮಸ್ಯೆಗೆ ಬೆಸ್ಟ್ ಐಡಿಯಾ ಕೊಟ್ಟು ತಲಾ 10 ಲಕ್ಷ ರೂ. ಗೆದ್ದುಕೊಂಡ ಐದು ಸಂಸ್ಥೆಗಳು!