Asianet Suvarna News

ಈ ಲೈಬ್ರರಿಯಲ್ಲಿ ನೀವು ಮನುಷ್ಯರನ್ನು ಓದಬಹುದು!

'ಮನುಷ್ಯರನ್ನು ಅಳೆಯದಿರೋಣ'- ಎಂಬ ಆಶಯದಿಂದ ಆರಂಭವಾದ ಈ ಹ್ಯೂಮನ್ ಲೈಬ್ರರಿಯಲ್ಲಿ ನೀವು ಪುಸ್ತಕಗಳನ್ನು ಓದಿದಂತೆಯೂ ಮನುಷ್ಯರನ್ನೂ ಎದುರಿಗೆ ಕೂರಿಸಿಕೊಂಡು ಓದಬಹುದು. 
 

You can read humans in these Libraries
Author
Bengaluru, First Published Jun 27, 2021, 2:19 PM IST
  • Facebook
  • Twitter
  • Whatsapp

ಅದೊಂದು ಲೈಬ್ರರಿ. ಆದರೆ ಅಲ್ಲಿ ನೀವು ಪುಸ್ತಕಗಳನ್ನು ಓದೋಲ್ಲ. ಅಲ್ಲಿ ಪುಸ್ತಕಗಳು ಮನುಷ್ಯರ ರೂಪದಲ್ಲಿ ಇರುತ್ತವೆ. ನೀವು ಪುಸ್ತಕಗಳನ್ನು ಲೈಬ್ರರಿಯಿಂದ ತಂದಂತೆಯೇ ಈ ಲೈಬ್ರರಿಯಲ್ಲಿರುವ ಒಬ್ಬ ಮನುಷ್ಯನನ್ನು ರೆಂಟ್ ಕೊಟ್ಟು ಮನೆಗೆ ಕರೆತರಬಹುದು. ಈ ಮನುಷ್ಯರನ್ನು "ಓದಬಹುದು'. ಅಂದರೆ ಅವರು ಹೇಳುವ ಕತೆಗಳನ್ನು ಕೇಳಬಹುದು.

ಇದನ್ನು ಹ್ಯೂಮನ್ ಲೈಬ್ರರಿ ಅಂತ ಕರೆಯಲಾಗುತ್ತೆ. ಇಲ್ಲಿ ಸಾಮಾನ್ಯವಾಗಿ ಈ ಕತೆ ಹೇಳುವವರು ತಮ್ಮ ಜೀವನದ ಕತೆಗಳನ್ನು ಹೇಳುತ್ತಾರೆ. ಇವರನ್ನು ಹ್ಯೂಮನ್ ಬುಕ್ ಅಂತ ಕರೆಯಲಾಗುತ್ತದೆ. ಇವರು ಇನ್ಯಾರದೋ ಕತೆಗಳನ್ನು ಹೇಳುವುದಲ್ಲ. ತಮ್ಮದೇ ಕತೆಗಳನ್ನು ಬಿತ್ತರಿಸುತ್ತಾರೆ. ಸಾಮಾನ್ಯವಾಗಿ ಹ್ಯೂಮನ್ ಬುಕ್ ಆಗಲು ಎಂಥವರನ್ನು ಆಯ್ದುಕೊಳ್ಳಲಾಗುತ್ತದೆ ಎಂದರೆ- ಯಾವುದೋ ದೇಶದಿಂದ ನಿರಾಶ್ರಿತರಾಗಿ ಓಡಿ ಬಂದವರು; ಅಲ್ಲಿ ಬದುಕಲು ಅವಕಾಶವಿಲ್ಲದ ದುಸ್ಸಹನೀಯತೆ; ಮನೆ- ಸಮಾಜದಲ್ಲಿ ಅನುಭವಿಸಿದ ಕಷ್ಟಕೋಟಲೆ ಅಥವಾ ದೌರ್ಜನ್ಯ; ಅಧಿಕಾರಿಗಳಿಂದ ಪೀಡನೆ; ಕೋಮುಗಲಭೆಯಲ್ಲಿ ಮನೆ ಮಾರು ಸುಟ್ಟುಹೋಗಿ ಓಡಿಬಂದವರು, ಲಿಂಗ- ಬಣ್ಣ- ರೂಪ ಇತ್ಯಾದಿಗಳಿಗಾಗಿ ಜನರಿಂದ ನಿಂದನೆ - ಅವಮಾನ ಎದುರಿಸಿದವರು ಇತ್ಯಾದಿ ಇತ್ಯಾದಿ.

ಮಹಿಳೆಯ ಕಾಂಡೋಮ್‌ಗೆ ಹೆಚ್ಚಾದ ಬೇಡಿಕೆ, ಪುರುಷರು ಫುಲ್ ಖುಶ್! ...

2000ನೇ ಇಸವಿಯಲ್ಲಿ ಇಂತದೊಂದು ಪ್ರಯತ್ನ ಆರಂಭವಾಯಿತು. ಡೆನ್ಮಾರ್ಕ್‌ನಲ್ಲಿ ಕೆಲವು ಯುವ ಉತ್ಸಾಹಿಗಳು ಇದನ್ನು ಆರಂಭಿಸಿದರು. "ಮನುಷ್ಯರನ್ನು ಜಡ್ಜ್ ಮಾಡದಿರೋಣ' ಎಂಬುದು ಇದರ ಆಶಯ.

ಈಗ ಈ ಪರಿಕಲ್ಪನೆ ಸುಮಾರು 80 ದೇಶಗಳಿಗೆ ಹರಡಿಕೊಂಡಿದೆ. ಇಲ್ಲೆಲ್ಲಾ ಮನುಷ್ಯ ಲೈಬ್ರರಿಗಳಿವೆ. ಶಾಶ್ವತ ಗ್ರಂಥಾಲಯಗಳೂ ಇವೆ. ಹೆಚ್ಚಾಗಿ ಇವು ನಡೆಯುವುದು ಇವೆಂಟ್‌ಗಳ ಮೂಲಕ. ಅಂದರೆ ಇಂಥ ಹಲವು "ಬುಕ್'ಗಳನ್ನು ಒಂದೆಡೆ ಸೇರಿಸಿ ಒಂದು ಉತ್ಸವವನ್ನು ಏರ್ಪಡಿಸಲಾಗುತ್ತದೆ. ಅಲ್ಲಿಗೆ ಆಸಕ್ತ ಜನ ಬಂದು ಈ ಪುಸ್ತಕಗಳ ಮುಂದೆ ಕುಳಿತು, ಅವರು ಹೇಳುವ ಮಾತುಗಳನ್ನು ಕೇಳಿ, ಪ್ರಶ್ನೆ ಮಾಡಿ, ಅನುಮಾನಗಳಿದ್ದಲ್ಲಿ ಪರಿಹರಿಸಿಕೊಂಡು, ಹೋಗುತ್ತಾರೆ. ಡೆನ್ಮಾರ್ಕ್ ಇಂಥ ಪರಿಕಲ್ಪನೆ ಮಂಡಿಸಿದ ಮೊದಲ ದೇಶವಾದರೆ, ಇಂಥದೊಂದು ಪರ್ಮನೆಂಟ್ ಲೈಬ್ರರಿ ಕಟ್ಟಿದ ಮೊದಲ ದೇಶ ಆಸ್ಟ್ರೇಲಿಯಾ.

ನಾನು ಒಳ್ಳೇ ಅಪ್ಪ ಅಲ್ಲ! ನನ್ನ ಥರಾ ನೀವೂ ಆಗಬೇಡಿ: ಅರ್ಜುನ ಹೇಗ್ಯಾಕ್ಹೇಳಿದ್ದು? ...

ಮೂಲತಃ, ಇದು ಜನರ ನಡುವೆ ಇರುವ ಪೂರ್ವಾಗ್ರಹಗಳನ್ನು ನಿವಾರಿಸುವ ಒಂದು ಪ್ರಯತ್ನ. ಸಾಮಾನ್ಯವಾಗಿ ನಾವು ಹೆಚ್ಚಾಗಿ ಭೇಟಿ ಮಾಡದ ವ್ಯಕ್ತಿಗಳ ಬಗ್ಗೆ ನಮಗೆ ಒಂದು ಬಗೆಯ ಪೂರ್ವಾಗ್ರಹ ಬೇರೂರಿಕೊಂಡಿರುತ್ತದೆ ಅಲ್ಲವೇ. ಉದಾಹರಣೆಗೆ, ಅಲೆಮಾರಿಗಳ ಬಗ್ಗೆ ನಮಗೆ ಗೊತ್ತಿಲ್ಲ. ಯಹೂದಿಗಳ ಬಗ್ಗೆ ನಮಗೆ ತಿಳಿದಿಲ್ಲ. ಶ್ರೀಲಂಕಾದಿಂದ ಬಂದ ತಮಿಳರ ಯಾತನೆಯ ಕತೆಗಳೇನು ಎಂಬುದನ್ನು ನಮಗೆ ಯಾರೂ ಹೇಳಿಲ್ಲ.

ನಮ್ಮ ಪಕ್ಕದಲ್ಲೇ ವಾಸಿಸುವ ಇನ್ನೊಂದು ಕುಟುಂಬದ ಕತೆಯೂ ನಮಗೆ ಸರಿಯಾಗಿ ಗೊತ್ತಿರುವುದಿಲ್ಲ. ಹೋಗಲಿ, ನಿಮ್ಮ ಅಜ್ಜ ಅಥವಾ ಮುತ್ತಜ್ಜ ಹೇಳುವ ಹಿಂದಿನ ಕಾಲದ ಕತೆಗಳನ್ನು ನೀವು ಸರಿಯಾಗಿ ಕಿವಿಗೊಟ್ಟು ಕೇಳಿದ್ದೀರೇನು? ಸರಿಯಾಗಿ ಆಲಿಸಿದ್ದರೆ, ಅವರು ಅನುಭವಿಸಿದ ಸುಖ ದುಃಖ ನೋವು ಯಾತನೆ ನಲಿವು ಇತ್ಯಾದಿಗಳು ನಿಮಗೆ ಗೊತ್ತಾಗುತ್ತಿದ್ದವು.

ಪ್ಲೇ ಬಾಯ್ ಕೆಲಸದ ಮೋಹದಲ್ಲಿ ಇದ್ದದ್ದೂ ಹೋಯ್ತು! ...

ಇತ್ತೀಚೆಗೆ ಬೆಂಗಳೂರಿನಲ್ಲೂ ಇಂಥದೊಂದು ಹ್ಯೂಮನ್ ಲೈಬ್ರರಿ ಕ್ಲಬ್‌ ಆರಂಭವಾಗಿದೆ. ಇದಕ್ಕೂ ಮೊದಲು ಇಂದೋರ್, ಮುಂಬಯಿ, ಕೋಲ್ಕತ್ತಾ, ದಿಲ್ಲಿ, ಹೈದರಾಬಾದ್‌ಗಳು ಇವು ಓಪನ್ ಆಗಿದ್ದವು. ಇಲ್ಲಿ ನೀವು ಓದುವ ಹ್ಯೂಮನ್ ಬುಕ್ ಯಾರೂ ಇರಬಹುದು- ಪೊಲೀಸ್ ಆಫೀಸರ್, ಬಾಂಗ್ಲಾದಿಂದ ಓಡಿ ಬಂದ ನಿರಾಶ್ರಿತ, ಕಚೇರಿಗೆ ಟಿಫಿನ್ ಒಯ್ಯುವ ಡಬ್ಬಾವಾಲಾ, ಟಾಂಗಾ ಓಡಿಸುವ ಟಾಂಗಾವಾಲಾ, ಪೋಸ್ಟ್‌ಮ್ಯಾನ್, ಕ್ಯಾನ್ಸರ್‌ ರೋಗ ಬಂದು ಬದುಕುಳಿದವರು- ಇತ್ಯಾದಿ. ಇವರು ಹೇಳುವ ತಮ್ಮ ಬದುಕಿ ಕತೆಗಳನ್ನು ಉಳಿದವರು ಆಲಿಸುತ್ತಾರೆ. ಫಿಸಿಕಲ್ ಬುಕ್‌ನ ಹಾಗಲ್ಲದೆ, ಇಲ್ಲಿ ನೀವು ಈ ಬುಕ್‌ಗಳಿಗೆ ಪ್ರಶ್ನೆಗಳನ್ನೂ ಕೇಳಬಹುದು. ಕ್ಲಾರಿಫಿಕೇಶನ್ ಪಡೆಯಬಹುದು.

Follow Us:
Download App:
  • android
  • ios