ಮಹಿಳೆಯರ ಕಾಂಡೋಮ್‌ಗಳಿಗೆ ಹೆಚ್ಚೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ. ಇದು ಲೈಂಗಿಕ ಸುಖ ಹೆಚ್ಚಿಸೋ ಜೊತೆಗೆ ಪುರುಷರಿಗೂ ಥ್ರಿಲ್ಲಿಂಗ್ ಅನುಭವ ನೀಡುತ್ತಂತೆ! 

ಮಹಿಳೆಯರ ಕಾಂಡೋಮ್‌ಗಳಿಗೆ ಹೆಚ್ಚೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ. ಇದು ಲೈಂಗಿಕ ಸುಖ ಹೆಚ್ಚಿಸೋ ಜೊತೆಗೆ ಪುರುಷರಿಗೂ ಥ್ರಿಲ್ಲಿಂಗ್ ಅನುಭವ ನೀಡುತ್ತಂತೆ!

ಹಾಗೆ ನೋಡಿದ್ರೆ ಈ ಫೀಮೇಲ್‌ ಕಾಂಡೋಮ್‌ಗಳು ಮಾರುಕಟ್ಟೆಗೆ ಬಂದು ಎರಡು ದಶಕಗಳೇ ಕಳೆದಿವೆ. ಆದರೆ ಗಂಡಸರ ಕಾಂಡೋಮ್‌ಗಳಿಗೆ ಹೋಲಿಸಿದರೆ ಇವುಗಳ ಬಳಕೆ ಕಡಿಮೆಯಿತ್ತು. ಈಗ ಹೊಸ ಹೊಸ ಮಾದರಿಗಳಲ್ಲಿ ಫೀಮೇಲ್ ಕಾಂಡೋಮ್‌ಗಳು ಮಾರುಕಟ್ಟೆಗೆ ಬಂದಿವೆ. ಇವುಗಳ ಹೆಚ್ಚುಗಾರಿಕೆ ಗೊತ್ತಾಗುತ್ತಿರುವ ಹಾಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಅಂಥಾ ಹೆಚ್ಚುಗಾರಿಕೆಗಳೇನು, ಅವು ಮೇಲ್‌ ಕಾಂಡೋಮ್ ಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾ ಅಂತ ನೋಡೋಣ.

ಹೊಟ್ಟೆ ಪಾಡಿಗೆ ಸೆಕ್ಸ್ ವರ್ಕ್ ಮಾಡುವ ಸಾಕಷ್ಟು ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ಅವರಲ್ಲಿ ಹೆಚ್ಚಿನವರು ಒಂದು ಹಂತದವರೆಗೆ ಲೈಂಗಿಕ ವೃತ್ತಿ ಮಾಡಿ ಆಮೇಲೆ ಅನೇಕ ಲೈಂಗಿಕ ರೋಗಗಳಿಗೆ ತುತ್ತಾಗುತ್ತಾರೆ. ಪಡಬಾರದ ಬವಣೆ ಪಡುತ್ತಾರೆ. ಅವರ ಮುಖ್ಯ ಕಂಪ್ಲೇಂಟ್ ನಮ್ಮಲ್ಲಿಗೆ ಬರುವ ಗಂಡಸರು ಎಷ್ಟು ಹೇಳಿದರೂ ಕಾಂಡೋಮ್ ಧರಿಸೋದಿಲ್ಲ. ಹೆಚ್ಚು ಒತ್ತಾಯ ಮಾಡಿದರೆ ನಮ್ಮ ಮೇಲೇ ಹಲ್ಲೆ ಮಾಡುತ್ತಾರೆ ಎಂಬುದು. ಅಂಥವರು ಈ ಫೀಮೇಲ್ ಕಾಂಡೋಮ್ ಧರಿಸಿದರೆ ಅದು ಸೀಕ್ರೆಟ್ ಆಗಿರುತ್ತದೆ. ಸಣ್ಣ ಸೌಂಡ್ ಸಹ ಮಾಡಲ್ಲ. ದೇಹದ ತಾಪಮಾನವನ್ನು ಹೊಂದಿರುವ ಕಾರಣ ಒಳಗೆ ಅವುಗಳಿರೋದನ್ನ ಸೀಕ್ರೆಟ್ ಆಗಿ ಮೆಂಟೇನ್ ಮಾಡಬಹುದು.

ಇಂದು ಅಮೆರಿಕದ #KissingDay- ಮುತ್ತು ನಿಮಗೆಷ್ಟು ಗೊತ್ತು? ...

ಸಾಂಸಾರಿಕ ವಿಚಾರಕ್ಕೆ ಬಂದರೂ ಕೆಲವು ದಂಪತಿಗಳಲ್ಲಿ ಗಂಡಸರಿಗೆ ಕಾಂಡೋಮ್ ಧರಿಸಿ ಸೆಕ್ಸ್ ಮಾಡಿದರೆ ಸರಿಯಾದ ಲೈಂಗಿಕ ಸುಖ ಸಿಗಲ್ಲ ಎಂಬ ಮನೋಭಾವ ಇದೆ. ಅಂಥವರು ಕಾಂಡೋಮ್ ಬಳಸದೇ ಲೈಂಗಿಕ ಕ್ರಿಯೆಗಿಳಿಯುತ್ತಾರೆ. ಆ ಒಂದು ಕ್ಷಣದ ಸುಖಕ್ಕೆ ಬೆಲೆ ತೆರುವವಳು ಮಾತ್ರ ಹೆಣ್ಣು. ಅಷ್ಟು ಬೇಗ ಮಕ್ಕಳನ್ನ ಪಡೆಯುವ ಮನಸ್ಸಿಲ್ಲದ ಕಾರಣ ಆಕೆ ಪದೇ ಪದೇ ಅಬಾರ್ಶನ್ ಮಾಡಿಸಿಕೊಂಡು, ಇಲ್ಲವೇ ಗರ್ಭನಿರೋಧಕ ಪಿಲ್ಸ್ ಬಳಸಬೇಕಾಗುತ್ತದೆ. ಇದರಿಂದ ಸೈಡ್ ಎಫೆಕ್ಟ್ ಗಳು ಬಹಳ. ಹೆಂಗಸರಿಗಾಗಿ ಬಂದಿರುವ ಕಾಂಡೋಮ್ ಗಳು ಇಂಥವರಿಗೆ ಸಹ ಬಹಳ ಯೂಸ್ ಆಗುತ್ತವೆ. ಬೇಡದ ಗರ್ಭದಿಂದ ಹೆಣ್ಣನ್ನು ರಕ್ಷಿಸುವ ಜೊತೆಗೆ ಲೈಂಗಿಕ ಸುಖವನ್ನೂ ನೀಡುತ್ತದೆ.

ಹೆಣ್ಮಕ್ಕಳ ಕಾಂಡೋಮ್‌ಗಳು ಗಂಡಸರ ಕಾಂಡೋಮ್‌ನಂತೆ ರಬ್ಬರ್‌ನಿಂದ ಮಾಡಿದ ಸಂವೇದನೆಗಳೇನನ್ನೂ ನೀಡದ ರೀತಿ ಇರುವುದಿಲ್ಲ. ಇವುಗಳು ಶಿಶ್ನಕ್ಕೆ ಕಿರಿಕಿರಿ ಮಾಡಲ್ಲ. ಸ್ಪರ್ಶ ಇಲ್ಲದಂತೆ ಮಾಡಿ ಲೈಂಗಿಕ ನಿರಾಸಕ್ತಿ ತರಿಸೋದಿಲ್ಲ. ಇವುಗಳಲ್ಲಿ ಮೈ ತಾಪಮಾನಕ್ಕೆ ತಕ್ಕಂತೆ ಮಾರ್ಪಾಡಾಗುವ ಕಾಂಡೋಮ್‌ಗಳು ಹೆಣ್ಣುಗಳಲ್ಲೂ ಲೈಂಗಿಕತೆಯನ್ನು ಉದ್ರೇಕಿಸುತ್ತವೆ. ಜೊತೆಗೆ ಸಂಭೋಗದ ವೇಳೆ ಜಿ ಸ್ಪಾಟ್ ಅಥವಾ ಚಂದ್ರನಾಡಿಯನ್ನು ಉತ್ತೇಜಿಸುತ್ತದೆ. ಜೊತೆಗೆ ಶಿಶ್ನವನ್ನೂ ಉದ್ರೇಕಿಸುತ್ತದೆಯಂತೆ. ಹೀಗಾಗಿ ಅಧಿಕ ಸುಖ ಪಡೆಯಬಹುದು.

#Feelfree: ಫೋರ್ ಪ್ಲೇ ಅಥವಾ ಮುನ್ನಲಿವು ಎಂದರೆ ಏನು? ...

ಒಂದು ಕಡೆ ಹೆಚ್ ಐ ವಿಯಂಥಾ ಮಾರಕ ಲೈಂಗಿಕ ರೋಗಗಳಿಂದ ಹೆಣ್ಣುಮಕ್ಕಳನ್ನು ರಕ್ಷಿಸುತ್ತದೆ. ಗರ್ಭ ನಿರೋಧಕವಾಗಿ ಬೇಡದ ಗರ್ಭ ಧಾರಣೆಯನ್ನು ನಿಯಂತ್ರಿಸುತ್ತದೆ. ಲೈಂಗಿಕ ಸುಖವನ್ನು ಹೆಚ್ಚಿಸುತ್ತದೆ. ಮತ್ತೊಂದು ವಿಶೇಷತೆ ಎಂದರೆ ಪುರುಷ ಕಾಂಡೋಮ್‌ನಂತೆ ಸಂಭೋಗ ಮುಗಿದ ಕೂಡಲೇ ಇದನ್ನು ತೆಗೆಯಬೇಕಾದ ಅನಿವಾರ್ಯತೆ ಇಲ್ಲ. ಲೈಂಗಿಕತೆಗೂ ಕೆಲಹೊತ್ತಿನ ಮೊದಲೇ ಇದನ್ನು ಧರಿಸಿದರೆ ಲೈಂಗಿಕತೆ ನಡೆಸಿದ ಬಳಿಕವೂ ಕೆಲಕಾಲ ಜೋಡಿಗಳು ಕಿರಿಕಿರಿ ಇಲ್ಲದೇ ವಿಶ್ರಾಂತಿ ಪಡೆಯಬಹುದು. ಅನೇಕ ಬಗೆಯ ಫೀಮೇಲ್ ಕಾಂಡೋಮ್‌ಗಳಿವೆ. ಎಫ್‌ಸಿ ೨ ಅದರಲ್ಲಿ ಪ್ರಮುಖವಾಗಿ 130 ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದೆ. ಇದು ಮೇಲ್‌ ಕಾಂಡೋಮ್‌ಗಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದು ತಜ್ಞರ ಅಭಿಮತ.

ಸದ್ಯಕ್ಕೆ ಈ ಫೀಮೇಲ್ ಕಾಂಡೋಮ್‌ಗಳ ಬಳಕೆದಾರರು ಇಂಟರ್‌ನ್ಯಾಶನಲ್‌ ಲೆವೆಲ್‌ನಲ್ಲಿ ಹೆಚ್ಚಾಗುತ್ತಿದ್ದಾರೆ. ಆದರೆ ಭಾರತದಂಥಾ ರಾಷ್ಟ್ರಗಳಲ್ಲಿ ಫೀ ಮೇಲ್‌ ಕಾಂಡೋಮ್‌ಗಳ ಖರೀದಿಗೆ ಮಹಿಳೆಯರಲ್ಲಿ ಹಿಂಜರಿಕೆ ಇದೆಯಂತೆ. ಕೆಲವರು ಅದನ್ನು ಧರಿಸುವಾಗ ಪೂರ್ಣ ಒಳಗೋದರೆ ನಾಚಿಕೆಗೇಡು ಎಂದು ಧರಿಸಲು ಒಪ್ಪುತ್ತಿಲ್ಲ. ಇನ್ನೂ ಕೆಲವರಿಗೆ ಇಂಥದ್ದರ ಬಳಕೆ ಬಗ್ಗೆ ಸಂಕೋಚವಿದೆ. ಆದರೆ ತಜ್ಞರು ಹೇಳುವ ಪ್ರಕಾರ ಇದು ಒಂದು ಲಿಮಿಟ್ ದಾಟಿ ಒಳಗೆ ಹೋಗುವುದಿಲ್ಲ. ಜೊತೆಗೆ ಹಾರ್ಮೊನಲ್ ಬದಲಾವಣೆಗಳನ್ನೂ ಮಾಡಲ್ಲ. ಸೈಡ್‌ ಎಫೆಕ್ಟ್‌ಗಳು ಬಹಳ ಕಡಿಮೆ. ಹೆಣ್ಣಿನ ಸುರಕ್ಷಿತ ಲೈಂಗಿಕತೆ ದೃಷ್ಟಿಯಿಂದ ಈ ಫೀಮೇಲ್ ಕಾಂಡೋಮ್‌ಗಳು ಹೆಚ್ಚು ಉಪಯುಕ್ತ.

#Feelfree: ಅರವತ್ತರ ಅಂಕಲ್, ಇಪ್ಪತ್ತೈದರ ಯುವಕ, ಯಾರು ಹಿತವರು ನನಗೆ?