ಶ್ರೀಮಂತ ಮಹಿಳೆಯರೊಂದಿಗೆ ಸುಖ ಪಡೆಯಿರಿ, ಅದಕ್ಕಾಗಿ ಹಣವನ್ನೂ ಪಡೆಯಿರಿ- ಎಂಬ ಆಫರ್‌ಗೆ ಮರುಳಾದ ಯುವಕರ ಕತೆ ಏನಾಯ್ತು ಗೊತ್ತಾ? 

ನಿಮಗೆ ಹಣ‌ ಬೇಕೆ? ಅದರ ಜೊತೆಗೆ ಸುಖವೂ ಬೇಕೆ? ಹಾಗಿದ್ರೆ ಈ ಕೆಲಸ ಮಾಡಿ!

ಹಾಗಂತ ಒಂದು ಜಾಹೀರಾತು ನಿಮ್ಮನ್ನು ಆಕರ್ಷಿಸುತ್ತೆ. ಅದರಲ್ಲಿ ಕೆಲಸದ ವಿವರ ಹೀಗಿರುತ್ತೆ: ಮೇಲ್ ಎಸ್ಕಾರ್ಟ್. ಪ್ರತಿ ರಾತ್ರಿ 10,000ದಿಂದ 1 ಲಕ್ಷ ರೂಪಾಯಿಗಳ ವರೆಗೂ ಗಳಿಸುವ ಅವಕಾಶ. ಶ್ರೀಮಂತ ಮಹಿಳೆಯರಿಗೆ ಸೇವೆ ಸಲ್ಲಿಸುವ ಅವಕಾಶ! ಸುಂದರ ಯುವಕರು‌ ಅಪ್ಲೈ ಮಾಡಿ! ಇದನ್ನು ನೋಡಿ‌ ನೀವು ರೋಮಾಂಚಿತರಾಗುತ್ತೀರಿ. ಅದೇನೆಂದು ನಿಮಗೆ ಅರ್ಥವಾಗುತ್ತದೆ. ಹಣವನ್ನೂ ಸುಖವನ್ನೂ ಒಟ್ಟಿಗೇ ಪಡೆಯಬಹುದಲ್ಲಾ ಅಂತ ಅಪ್ಲೈ ಮಾಡಿಯೇಬಿಡುತ್ತೀರಿ. ಮುಂದೇನಾಗುತ್ತೆ? ಹಾಗೆ ಅರ್ಜಿ ಹಾಕಿದವರ ಕತೆಯೇನಾಯ್ತು ಅಂತ ಇಲ್ಲಿದೆ ಕೇಳಿ.

ಕೊಚ್ಚಿನ್‌ನ ಪ್ರದೀಪ್ ಎಂಬ ಯುವಕ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಉದ್ಯೋಗಿಯಾಗಿದ್ದರು. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಕಂಪನಿ‌ ಲೇ ಆಫ್ ಮಾಡಿತು. ಪ್ರದೀಪ್ ಸೇರಿ ಹಲವರ ಜಾಬ್ ಹೋಯಿತು. ಫೀಲ್ಡ್ ನಲ್ಲಿ ಬೇರೆ ಯಾವ ಉದ್ಯೋಗಗಳೂ ಇರಲಿಲ್ಲ. ದಿಕ್ಕು ತೋಚದ ಪ್ರದೀಪ್. ಆನ್‌ಲೈನ್‌ನಲ್ಲಿ ಜಾಬ್‌ಗಳಿಗಾಗಿ‌ ಜಾಲಾಡುತ್ತಿದ್ದಾಗ ಈ ಜಾಹೀರಾತು ಕಣ್ಣಿಗೆ ಬಿತ್ತು. ಮನಸ್ಸು ಚಂಚಲಗೊಂಡಿತು. ಕೂಡಲೇ ಅಪ್ಲೈ ಮಾಡಿದರು. 

ಕಾಜಲ್ ಅಗರ್ವಾಲ್ -ತಮನ್ನಾ ಭಾಟಿಯಾ: ಬಿಕಿನಿಯಲ್ಲಿ ದಕ್ಷಿಣದ ಚೆಲುವೆಯರು! ...

ಅಲ್ಲಿಂದ ಉತ್ತರ ಬಂತು- ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದೇವೆ. ಕೂಡಲೇ ೨೦೦೦ ರೂಪಾಯಿ ಕಳಿಸಿ. ಪ್ರದೀಪ್ ಕಳಿಸಿದರು. ಅದಾದ ಮರುದಿನ ಇನ್ನೊಂದು ಮೇಲ್. ನಿಮ್ಮ ಹೆಸರ ನೋಂದಾವಣೆಯಾಗಿದೆ. ನೀವು ಏನೇನು ಮಾಡಬೇಕು ಎಂದು ತಿಳಿಸಲು ಒಂದು ಇನ್‌ಫಾರ್ಮೇಶನ್ ಕಿಟ್ ಕಳಿಸುತ್ತಿದ್ದೇವೆ. ಅದಕ್ಕೆ ೧೦,೦೦೦ ರೂಪಾಯಿ ಕಳಿಸಿ. ಪ್ರದೀಪ್ ಅದನ್ನೂ ಕಳಿಸಿದರು. ನಿಮ್ಮ ಹೆಸರನ್ನು ನಮ್ಮ ಗಿಗೊಲೊ ಕ್ಲಬ್‌ನಲ್ಲಿ ನೋಂದಾಯಿಸಿಕೊಳ್ಳುತ್ತಿದ್ದೇವೆ. ಮೆಂಬರ್‌ಶಿಪ್‌ಗಾಗಿ ೧೫,೦೦೦ ಕಳಿಸಿ ಅಂತ ಇನ್ನೊಂದು ಮೇಲ್. ಅದೂ ಆಯಿತು. ಇದಾದ ಬಳಿಕ ಇನ್ನೊಂದು ಮೇಲ್- ನಿಮ್ಮ ಸದಸ್ಯತ್ವ ಸಕ್ಸಸ್. ನಿಮ್ಮ ಫೋಟೋ ನೋಡಿ ಅಟ್ರಾಕ್ಟಿವ್ ಶ್ರೀಮಂತ ಮಹಿಳೆಯೊಬ್ಬರು ನಿಮ್ಮನ್ನು ಬುಕ್ ಮಾಡಿದ್ದಾರೆ. ಈ ವೀಕೆಂಡ್‌ನಲ್ಲಿ ನೀವು ಅವಳ ಜೊತೆ ಪ್ರತಿಷ್ಠಿತ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆಯಬೇಕು. ಆದಾದ ನಂತರ ನಾವು ನಿಮ್ಮ ಖಾತೆಗೆ ಡೈರೆಕ್ಟ್ ಆಗಿ ಹಣ ಹಾಕುತ್ತೇವೆ. ಆದ್ರೆ ಈಗ ನೀವು ಹೋಟೆಲ್ ಕೊಠಡಿ ಬುಕ್ಕಿಂಗ್‌ಗಾಗಿ ೫೦,೦೦೦ ರೂಪಾಯಿ ಕಳಿಸಿ. ಅದನ್ನು ಆಮೇಲೆ ನಿಮಗೆ ಹಿಂದಿರುಗಿಸುತ್ತೇವೆ.


ಸರಿ, ಎಂದು ಪ್ರದೀಪ್‌ ಅವರು ನೀಡಿದ ಗೂಗಲ್ ಪೇ ನಂಬರಿಗೆ ಹಣ ಕಳಿಸಿದರು. ನಂತರ ಆ ನಂಬರ್ ಸ್ವಿಚಾಫ್ ಆಯ್ತು. ಯಾರೂ ಸಂಪರ್ಕಿಸಲಿಲ್ಲ. ತಾನು ಮೋಸಹೋದೆ ಎಂದು ಪ್ರದೀಪ್‌ಗೆ ಗೊತ್ತಾಯಿತು. ಅಷ್ಟರಲ್ಲಾಗಲೇ ೭೭,೦೦೦ ರೂ ಕೈಬಿಟ್ಟಿತ್ತು. ಹಣವೂ ಇಲ್ಲ, ಕೆಲಸವೂ ಇಲ್ಲ, ಸುಖವೂ ಇಲ್ಲ. ಅವರು ಪೊಲೀಸರಿಗೆ ದೂರು ನೀಡಿದರು. 

'ಮದುವೆಗೂ ಮುನ್ನ ಸೆಕ್ಸ್ ಮಾಡಿದರೆ ಹೇಗೆ' ಅಪ್ಪನಿಗೆ ಆಲಿಯಾ ಬೋಲ್ಡ್ ಪ್ರಶ್ನೆ ...

ಇದೊಂದು ದೊಡ್ಡ ಜಾಲ ಎನ್ನುತ್ತಾರೆ ಪೊಲೀಸರು. ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚಿವೆ. ಲಾಕ್‌ಡೌನ್‌ನಿಂದಾಗಿ ಹಲವು ಕಂಪನಿಗಳು ಲೇಆಫ್ ಮಾಡುತ್ತಿದ್ದು, ತುಂಬಾ ಮಂದಿ ಯುವಕರೂ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂಥವರನ್ನು ಆಕರ್ಷಿಸಿ ಖೆಡ್ಡಾಗೆ ಕೆಡವುವುದೇ ಈ ಜಾಲದ ವಿನ್ಯಾಸ. ಗಿಗೊಲೊ ಅಥವಾ ಪ್ಲೇಬಾಯ್ ಜಾಬ್ ಆಕರ್ಷಣೆ ಈ ಖದೀಮರ ಹೊಸ ಕುತಂತ್ರ. ಯುವಕರು ಇದಕ್ಕೆ ಸುಲಭವಾಗಿ ಬಲಿಯಾಗುತ್ತಾರೆ ಎಂಬುದು ಇವರಿಗೆ ಗೊತ್ತು. ನೂರಾರು ಮಂದಿ ಇಂಥ ಜಾಲಕ್ಕೆ ಬಲಿಯಾಗಿದ್ದು, ತಾವು ಉಳಿಸಿಟ್ಟ ಹಣವನ್ನು ಕಳೆದುಕೊಂಡಿದ್ದಾರೆ. ಮಾನ ಮರ್ಯಾದೆಯ ಭಯದಿಂದಾಗಿ ಪೊಲೀಸರಿಗೆ ದೂರು ಕೊಡಲೂ ಅಂಜುತ್ತಿದ್ದು, ಇದೇ ಆ ಲೂಟಿಕೋರರಿಗೆ ಲಾಭಕರವಾಗಿದೆ. ಸಾಮಾನ್ಯವಾಗಿ ತಮ್ಮ ಊರುಗಳಿಂದ ದೂರ ಬಂದು, ಮಹಾನಗರಗಳಲ್ಲಿದ್ದುಕೊಂಡು ಕೆಲಸ ಮಾಡುತ್ತಿರುವವರು ಇದಕ್ಕೆ ತುತ್ತಾಗುತ್ತಾರೆ. ತಾವು ಇಲ್ಲಿ ಅಪರಿಚಿತರು, ಅದ್ದರಿಂದ ಇಂಥ ಗಿಗೊಲೊ ಕೆಲಸ ಮಾಡಿ ದಕ್ಕಿಸಿಕೊಳ್ಳಬಹುದು ಎಂದು ಇಂಥವರು ಭಾವಿಸುತ್ತಾರೆ. 
ಇಂಥ ಜಾಲಗಳಿಗೆ ಯಾರೂ ಬಲಿ ಬೀಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

#Feelfree: ಫೋರ್ ಪ್ಲೇ ಅಥವಾ ಮುನ್ನಲಿವು ಎಂದರೆ ಏನು? ...