ಅಮೆಜಾನ್‌ ಆನ್‌ಲೈನ್‌ ಶಾಪ್‌ನ ಒಡೆಯ ಜೆಫ್‌ ಬೆಜೋಸ್‌ನ ಪತ್ನಿ ಮೆಕೆಂಝೀ ಸ್ಕಾಟ್‌, ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ಇತ್ತೀಚಿನವರೆಗೆ ಗುರುತಿಸಲ್ಪಟ್ಟಿದ್ದಳು. ಈಕೆಯ ಕತೆ ಕುತೂಹಲಕರವಾಗಿದೆ.

ಮೆಕೆಂಝೀ ಸ್ಕಾಟ್‌ಗೆ ಈಗ ೫೦ರ ಹರೆಯ. ಸುಮಾರು 6640 ಕೋಟಿ ಡಾಲರ್‌ ಹಣಕಾಸಿನ ಒಡತಿ. ವಿಶ್ವದ ನಂಬರ್‌ ವನ್‌ ಶ್ರೀಮಂತೆ ಎಂಧು ಬ್ಲೂಮ್‌ಬರ್ಗ್‌ ಬಿಲಿಯನೇರ್ ಇಂಡೆಕ್ಸ್‌ ಗುರುತಿಸಿದೆ. ತನ್ನ ಸಂಪತ್ತಿನ ಅರ್ಧಭಾಗವನ್ನು ಈಕೆ ಲೋಕಸೇವೆಗೆ ದಾನ ಮಾಡಿಬಿಟ್ಟಿದ್ದಾಳೆ! 

ಅಂದ ಹಾಗೆ ಈಕೆಯ ಕೆಲಸ ಏನು ಗೊತ್ತಾ? ಈಕೆ ಬರಹಗಾರ್ತಿ. ಕಾದಂಬರಿಗಳನ್ನು ಬರೆಯುತ್ತಾಳೆ. ಕಳೆದ ವರ್ಷ ಈಕೆಗೂ ಜೆಫ್‌ ಬೆಜೋಸ್‌ಗೂ ವಿಚ್ಛೇದನವಾಯಿತು. ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿ ಬೆಳೆದ ಮೆಕೆಂಝೀ ಸ್ಕಾಟ್‌, ಪ್ರಿನ್ಸ್‌ಟನ್‌ ಯೂನಿವರ್ಸಿಟಿಯಲ್ಲಿ ಪದವಿ ಪಡೆದವಳು. ನೊಬೆಲ್‌ ಪುರಸ್ಕೃತ ಲೇಖಕಿ ಟೋನಿ ಮಾರಿಸನ್‌ ಅವರ ಗರಡಿಯಲ್ಲಿ ಕ್ರಿಯೇಟಿವ್‌ ರೈಟಿಂಗ್‌ನಲ್ಲಿ ಪಳಗಿದಳು. ಎರಡು ಕಾದಂಬರಿಗಳನ್ನು ಬರೆದಳು. ಅಮೆರಿಕದ ಒಂದು ಪ್ರಶಸ್ತಿಯೂ ಈಕೆಗೆ ಬಂತು. ಪದವಿಯ ನಂತರ ಈಕೆ ಒಂದು ಅನುದಾನ ಸಮಿತಿಯಲ್ಲಿ ಕೆಲಸ ಮಾಡಿದಳು. ಆಗ ಸಿಕ್ಕವನು ಜೆಫ್‌. ಇಬ್ಬರೂ ಡೇಟಿಂಗ್‌ ಶುರು ಮಾಡಿದರು. 1993ರಲ್ಲಿ ಮದುವೆಯಾಯಿತು. 1994ರಲ್ಲಿ ಜೆಫ್‌ ಕೆಲಸ ಬಿಟ್ಟು, ಒಂದು ಸಣ್ಣ ಗ್ಯಾರೇಜಿನಲ್ಲಿ ಅಮೆಜಾನ್‌ ಆನ್‌ಲೈನ್‌ ಮಾರಾಟ ಮಳಿಗೆ ಶುರುಮಾಡಿದ. ಸ್ಕಾಟ್‌ ಅವನ ಸಂಸ್ಥೆಯ ಮೊದಲ ಉದ್ಯೋಗಿ ಆದಳು. ೨೫ ವರ್ಷಗಳ ಮಧುರ ದಾಂಪತ್ಯ. ನಾಲ್ಕು ಮಕ್ಕಳು. ಕಳೆದ ವರ್ಷ ಇಬ್ಬರೂ ತಾವು ಬೇರೆಯಾಗುತ್ತಿದ್ದೇವೆ ಎಂದು ತಿಳಿಸಿದರು. ಈ ಸುದ್ದಿ ಬಹಿರಂಗವಾದ ಬಳಿಕ, ಜೆಫ್‌ ಬೆಜೋಸ್,‌ ಲಾರೆನ್‌ ಸ್ಯಾಂಚೆಸ್‌ ಎಂಬಾಕೆಯ ಜೊತೆಗೆ ಸಂಬಂಧ ಹೊಂದಿರುವುದು ಬಯಲಾಯಿತು. 

ವಿಶ್ವ ಕುಬೇರ ಜೆಫ್ ಬೆಜೋಸ್ ಮನೆ ಹೀಗಿದೆ: ಘರ್ ಕೆ ಅಂದರ್ ಏನೇನಿದೆ? 

ವಿಚ್ಛೇದನ ಸಂದರ್ಭ ಅವರ ಆಸ್ತಿ ಪಾಲಾಯಿತು. ಆಗ ಆಕೆಗೆ ಬಂದದ್ದು ಅಮೆಜಾನ್‌ನ ಷೇರಿನಲ್ಲಿ ೨೫ ಶೇಕಡ ಪಾಲು. ಅದರ ಮೊತ್ತವೇ ಸುಮಾರು ೩೮೦೦ ಕೋಟಿ ಡಾಲರ್‌. ಕೋವಿಡ್‌ ಪ್ಯಾಂಡೆಮಿಕ್‌ ಸಂದರ್ಭದಲ್ಲಿ ಸಂಸ್ಥೆಯ ಷೇರುಗಳ ಮೊತ್ತ ೨೦೦೦೦ ಕೋಟಿ ಡಾಲರ್‌ಗಳಿಗೆ ಜಿಗಿಯಿತು. ಸ್ಕಾಟ್‌ ಶ್ರೀಮಂತಿಕೆಯೂ ಮತ್ತಷ್ಟು ಏರಿತು. ಇದೇ ಸಂದರ್ಭದಲ್ಲಿ ಸ್ಕಾಟ್‌ ತನ್ನ ಪಾಲಿನ ಒಂದಷ್ಟು ಷೇರುಗಳನ್ನು ಮಾರಿ, ೧೭೦೦ ಕೋಟಿ ಡಾಲರ್‌ಗಳನ್ನು ಸಮಾಜಸೇವೆಗೆ ದಾನ ಮಾಡಿದಳು. ಸಾರ್ವಜನಿಕ ಆರೋಗ್ಯ ಸೇವೆ, ವರ್ಣತಾರತಮ್ಯ ತಡೆ, ಪರಿಸರ ಹಾನಿ ತಡೆ ಕಾರ್ಯಕ್ರಮಗಳಿಗೆ ಇದನ್ನು ಕೊಟ್ಟಿದ್ದಾಳೆ. 'ಗಿವಿಂಗ್‌ ಪ್ಲೆಡ್ಜ್' ಹೆಸರಿನ ಈ ಸೇವಾ ಕಾರ್ಯವನ್ನು ಆರಂಭಿಸಿದವರ ಮೈಕ್ರೋಸಾಫ್ಟ್‌ ವಿಂಡೋಸ್‌ ಸ್ಥಾಪಕ ಬಿಲ್‌ ಗೇಟ್ಸ್‌ ಮತ್ತು ಇನ್ನೊಬ್ಬ ಶ್ರೀಮಂತ ಉದ್ಯಮಿ ವಾರೆನ್‌ ಬಫೆಟ್ಸ್. 

ಪತಿ ಆಸ್ತಿ 13 ಲಕ್ಷ ಕೋಟಿ; ಡೈವೋ​ರ್ಸ್‌ನಿಂದ ಮಹಿಳೆಯರ ಪಟ್ಟೀಲಿ 2ನೇ ಸ್ಥಾನಕ್ಕೇರಿದ ಪತ್ನಿ 

'ಶ್ರೀಮಂತಿಕೆ ಒಬ್ಬನಿಗೇ ಸೇರಿದ್ದಲ್ಲ. ಒಬ್ಬನ ಶ್ರೀಮಂತಿಕೆ ಅಂದರೆ ಅದು ಹಲವು ಜನರ ದುಡಿಮೆಯ ಪ್ರತಿಫಲ ಆಗಿರುತ್ತದೆ. ಹೀಗಾಗಿ ಸೇವಾಕಾರ್ಯಕ್ಕೆ ದೇಣಿಗೆ ಕೊಡುವುದು ನಮ್ಮ ಕರ್ತವ್ಯ ಎಂದು ತಿಳಿದು ಮಾಡಿದ್ದೇನೆ,' ಅನ್ನುತ್ತಾಳೆ ಸ್ಕಾಟ್‌. ಈಕೆಯ ಉದಾರತೆಯನ್ನು ಜನ ಪ್ರಶಂಸಿಸಿದ್ದಾರೆ. ಆದರೆ ಈಕೆಯ ಮಾಜಿ ಗಂಡ ಜೆಫ್‌ ಬೆಜೋಸ್‌ನ ಜುಗ್ಗತನವನ್ನೂ ಟೀಕಿಸಿದ್ದಾರೆ. ಆತ ಒಂದು ಪೆನ್ನಿಯನ್ನೂ ಇಂಥ ಕೆಲಸಗಳಿಗೆ ಕೈಯೆತ್ತಿ ಕೊಟ್ಟವನಲ್ಲ. ಆ ದೃಷ್ಟಿಯಲ್ಲಿ ಮೆಕೆಂಝೀ ಸ್ಕಾಟ್‌ ಮಾದರಿ.

ಅಮೇಜಾನ್ ಬಾಸ್ ಜೊತೆ ಭಾರತಕ್ಕೆ ಬಂದ ಆ ಸುಂದರಿ ಯಾರು?