ವಾಷಿಂಗ್ಟನ್‌ (ಜು. 03):  ಇಡೀ ವಿಶ್ವವೇ ಕೊರೋನಾ ಹೊಡೆತಕ್ಕೆ ತತ್ತರಗೊಂಡಿರುವ ನಡುವೆಯೇ ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ ಆಸ್ತಿ ಮೌಲ್ಯ 13 ಲಕ್ಷ ಕೋಟಿ ರು.ಗೆ ಏರಿಕೆಯಾದೆ. ತನ್ಮೂಲಕ ಬೆಜೋಸ್‌ ವಿಶ್ವ ಈವರೆಗೆ ಕಂಡ ಅತಿದೊಡ್ಡ ಸಿರಿವಂತ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇನ್ನೂ ಅಚ್ಚರಿಯ ಸಂಗತಿಯೆಂದರೆ ಕಳೆದ ವರ್ಷ ಜೆಫ್‌ ಬೆಜೋಸ್‌ರಿಂದ ವಿಚ್ಚೇದನ ಪಡೆದಿದ್ದ ಮೆಕೆಂಜಿ ಬೆಜೋಸ್‌ ಈಗ ವಿಶ್ವದ 2 ನೇ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ವಿಚ್ಛೇದನದ ವೇಳೆ ತಮ್ಮ ಪತಿ ಬೆಜೋಸ್‌ರಿಂದ ಮೆಕೆಂಜಿ 38 ಬಿಲಿಯನ್‌(2.8 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿ ಪಡೆದಿದ್ದರು. ಅಲ್ಲದೆ, ಅಮೆಜಾನ್‌ನಲ್ಲಿ ಷೇರು ಹೊಂದಿರುವ ಮ್ಯಾಕೆಂಜಿ ಅವರ ಸಂಪತ್ತು 4.32 ಲಕ್ಷ ಕೋಟಿಗೆ ಏರಿಕೆಯಾಗಿ ವಿಶ್ವದ 12ನೇ ಶ್ರೀಮಂತ ವ್ಯಕ್ತಿ ಹಾಗೂ 2ನೇ ಶ್ರೀಮಂತ ಮಹಿಳೆ ಆಗಿ ಹೊರಹೊಮ್ಮಿದ್ದಾರೆ.

ಕೊರೋನಾ ಎಫೆಕ್ಟ್: ಮೆಟ್ರೋ ನಿಗಮಕ್ಕೆ 110 ಕೋಟಿ ನಷ್ಟ..!

ಬ್ಲೂಮ್‌ಬರ್ಗ್‌ ಬಿಲಿಯನೇ​ರ್ಸ್ ಇಂಡೆಕ್ಸ್‌ನ ವರದಿಯ ಪ್ರಕಾರ, ಅಮೆಜಾನ್‌ ಷೇರು ಬುಧವಾರ ಶೇ.4.4ರಷ್ಟುಅಂದರೆ 2.18 ಲಕ್ಷ ಕೋಟಿ ರು.ನಷ್ಟುಏರಿಕೆ ಆಗಿದೆ. ಹೀಗಾಗಿ ಬೆಜೋಸ್‌ ಆಸ್ತಿ ಮೌಲ್ಯ 13.04 ಲಕ್ಷ ಕೋಟಿ ರು.ಗೆ ಏರಿಕೆ ಆಗಿದೆ. ಈ ಮುನ್ನ ಬೆಜೋಸ್‌ ಆಸ್ತಿ 2018 ಸೆಪ್ಟೆಂಬರ್‌ನಲ್ಲಿ 12.76 ಲಕ್ಷ ಕೋಟಿ ರು. ತಲುಪಿದ್ದು, ಈ ವರೆಗಿನ ಗರಿಷ್ಠ ಎನಿಸಿಕೊಂಡಿತ್ತು.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"