ಅಮೇಜಾನ್ ಬಾಸ್ ಜೊತೆ ಭಾರತಕ್ಕೆ ಬಂದ ಆ ಸುಂದರಿ ಯಾರು?
ಜೆಫ್‌ನ ಹೊಸ ಪ್ರೇಯಸಿ ಲಾರೆನ್ ಸ್ಯಾಂಚೆಝ್. ಇವರಿಬ್ಬದೂ ಹೊಸ ಗೆಳೆತನ, ಹೊಸ ಪ್ರೇಮ. ನಿಮಗೆ ಅಚ್ಚರಿಯಾಗಬಹುದು, ಟೀನೇಜ್ ಹುಡುಗಿಯಂತೆ ಲಕಲಕಿಸುವ ಈಕೆಯ ವಯಸ್ಸು ಎಷ್ಟು ಗೊತ್ತಾ? 41! ಇನ್ನೂ ಒಂದು ಅಚ್ಚರಿಯೆ ವಿಷ್ಯ ಏನಪ್ಪಾ ಅಂದ್ರೆ, ಈಕೆ ಮೂರು ಮಕ್ಕಳ ತಾಯಿ!
ಅಮೆಜಾನ್ ಡಾಟ್ ಕಾಮ್ ಎಂಬ ಶ್ರೀಮಂತ ಆನ್‌ಲೈನ್ ಮಾರಾಟ ಸಂಸ್ಥೆಯ ಫೌಂಡರ್ ಜೆಫ್ ಬೆಜೋಸ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಬಾಲಿವುಡ್‌ನ ಸೆಲೆಬ್ರಿಟಿಗಳ ಜೊತೆಗೆ ನಿಂತುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಅವರ ಜೊತೆ ಚಿಟ್ ಚಾಟ್ ಮಾಡಿದ್ದಾರೆ. ನಂತರ ಪ್ರೇಮಸೌಧ ತಾಜ್‌ಮಹಲ್‌ಗೆ ಭೇಟಿ ಕೊಟ್ಟು, ಅದರ ಮುಂದೆ ಫೋಟೋ ತೆಗೆಸಿಕೊಂಡಿದ್ದಾರೆ. ಆಗೆಲ್ಲ ಅವರ ಜೊತೆಗೆ ಒಬ್ಬ ಚೆಲುವೆ ಇದ್ದಳು, ಆಕೆಯೇ ಜೆಫ್‌ನ ಹೊಸ ಪ್ರೇಯಸಿ ಲಾರೆನ್ ಸ್ಯಾಂಚೆಝ್. ಇವರಿಬ್ಬದೂ ಹೊಸ ಗೆಳೆತನ, ಹೊಸ ಪ್ರೇಮ.
ಲಾರೆನ್ ಸ್ಯಾಂಚೆಜ್ ಎಂಬ ಈ ಚೆಲುವೆ ಟಿವಿ ಅಂಕರ್. ನಿಮಗೆ ಅಚ್ಚರಿಯಾಗಬಹುದು, ಟೀನೇಜ್ ಹುಡುಗಿಯಂತೆ ಲಕಲಕಿಸುವ ಈಕೆಯ ವಯಸ್ಸು ಎಷ್ಟು ಗೊತ್ತಾ? ೪೧! ಇನ್ನೂ ಒಂದು ಅಚ್ಚರಿಯೆ ವಿಷ್ಯ ಏನಪ್ಪಾ ಅಂದ್ರೆ, ಈಕೆ ಮೂರು ಮಕ್ಕಳ ತಾಯಿ!
ಲಾಸ್ ಏಂಜಲೀಸ್‌ನ ಟಿವಿ ನೋಡುಗರಿಗೆ ಈಕಎ ಚಿರಪರಿಚಿತೆ. ಫಾಕ್ಸ್ ನ್ಯೂಸ್ ಚಾನೆಲ್‌ನಲ್ಲಿ 2011ರಿಂದ 2017ರವರೆಗೆ ಪ್ರಸಾರವಾಗುತ್ತಿದ್ದ ಗುಡ್‌ಡೇ ಲಾಸ್ ಏಂಜಲೀಸ್ ಎಂಬ ಶೋವನ್ನು ಈಕೆ ನಡೆಸಿಕೊಡುತ್ತಿದ್ದಳು. ಅದಕ್ಕೂ ಮೊದಲು ಎಂಟರ್‌ಟೇನ್‌ಮೆಂಟ್ ರಿಪೋರ್ಟರ್ ಆಗಿ ವರದಿ ಮಾಡಿಕೊಂಡು ಇದ್ದಳು. ಈಕೆಯ ಇನ್ನೊಂದು ವಿಶೇಷತೆ ಏನೆಂದರೆ, ಈಕೆ ಆಕಾಶದಿಂದ ಫಿಲಂ ಶೂಟಿಂಗ್ ಮಾಡುವುದರಲ್ಲಿ ನಿಪುಣೆ. ನುರಿತ ಹೆಲಿಕಾಪ್ಟರ್ ಪೈಲಟ್ ಕೂಡ ಹೌದು. ತನ್ನದೇ ಆದ ಏರ್ ಫಿಲಂ ಸಂಸ್ಥೆ- ಬ್ಲ್ಯಾಕ್ ಓಪ್ಸ್ ಏವಿಯೇಶನ್ ಎಂಬ ಶೂಟಿಂಗ್ ಕಂಪನಿಯನ್ನೂ ಹೊಂದಿದ್ದಾಳೆ.ಕ್ರಿಸ್ಟೋಫರ್ ನೋಲಾನ್‌ನ ಡನ್‌ಕಿರ್ಕ್ ಫಿಲಂಗೆ ಕೂಡ ಈ ಶೂಟಿಂಗ್ ನಡೆಸಿ ಕೊಟ್ಟಿದ್ದಾಳೆ.
ಸೂಟ್‌ಕೇಸ್‌ನಲ್ಲಿ 1 ಬಿಲಿಯನ್ ಡಾಲರ್ ಇಟ್ಕೊಂಡು ಭಾರತಕ್ಕೆ ಬಂದ ಅಮೆಜಾನ್ ಮುಖ್ಯಸ್ಥ!
ಜೆಫ್ ಮತ್ತು ಲಾರೆನ್ ಸ್ಯಾಂಚೆಜ್ ಅವರಿಬ್ಬರಿಗೂ ಪರಿಚಯವಾದದ್ದು ಲಾರೆನ್‌ಳ ಮೊದಲ ಗಂಡ ಪ್ಯಾಟ್ರಿಕ್ ವೈಟ್‌ಸೆಲ್ ಮೂಲಕವೇ. ಪ್ಯಾಟ್ರಿಕ್, ಹಾಲಿವುಡ್‌ನ ಪ್ರಭಾವಿ ವ್ಯಕ್ತಿ, ಆತ ಮ್ಯಾಟ್ ಡೇಮನ್, ಹ್ಯೂ ಜಾಕ್‌ಮನ್, ಕ್ರಿಸ್ತಿಯನ್ ಬೇಲ್ ಮುಂತಾದ ದೊಡ್ಡ ನಟರಿಗೆ ಏಜೆಂಟ್ ಆಗಿದ್ದವನು. ಬೆಜೋಸ್‌ನ ಹೊಸ ಸ್ಪೇಸ್ ಕಂಪನಿ ಬ್ಲೂ ಒರಿಜಿನ್‌ಗೆ ಲಾರೆನ್ ಕಳೆದ ವರ್ಷ ಕೆಲಸ ಮಾಡಿಕೊಡಲಾರಂಭಿಸಿದಳು. ಆಗ ಆರಂಭವಾದ ಇವರ ಪರಿಚಯ, ಪ್ರಣಯದತ್ತ ತಿರುಗಿತು. ಇದು ಲಾರೆನ್‌ಳ ದಾಂಪತ್ಯದಲ್ಲಿ ಬಿರುಕು ತಂದಿತು. ಕಳೆದ ವರ್ಷ ಲಾರೆನ್ ಮತ್ತು ಪ್ಯಾಟ್ರಿಕ್ ಬೇರೆ ಬೇರೆಯಾದರು. ಅದೇ ಸಂದರ್ಭದಲ್ಲೇ, ಜೆಫ್ ಬೆಜೋಸ್ ತಮ್ಮ ಪತ್ನಿ ಮೆಕೆಂಜೀಗೆ ಕೂಡ ಡೈವೋರ್ಸ್ ನೀಡಿದರು. ಹೀಗೆ ಹಳೆಯ ಸಂಗಾತಿಗಳಿಂದ ಯಾವುದೇ ಬೇಸರವಿಲ್ಲದೆ ಡೈವೋರ್ಸ್ ತೆಗೆದುಕೊಂಡ ಇಬ್ಬರೂ ಈಗ ಭಾರತದಲ್ಲಿ ಡೇಟಿಂಗ್ ಮುಂದುವರಿಸಿದ್ದಾರೆ.
ಅಮೇಜಾನ್, ಫ್ಲಿಪ್‌ಕಾರ್ಟ್‌ನಿಂದ ವಿವರ ಕೇಳಿದ ಸರ್ಕಾರ
ಪ್ಯಾಟ್ರಿಕ್ ಮೂಲಕ ಲಾರೆನ್‌ಗೆ ಇಬ್ಬರು ಮಕ್ಕಳು- ಗಂಡು ಮತ್ತು ಹೆಣ್ಣು. ಹಾಗಾದ್ರೆ ಮೂರನೇ ಮಗು ಯಾವುದು ಎಂದು ಕೇಳಿದಿರಾ? ಅದು ಇನ್ನೊಂದು ಕತೆ. ಲಾರೆನ್‌ಗೆ ಪ್ಯಾಟ್ರಿಕ್‌ನನ್ನೂ ಮದುವೆಯಾಗುವುದಕ್ಕೆ ಮುನ್ನ ಇನ್ನೊಂದು ಅಫೇರ್ ಇತ್ತು. ಆತನ ಹೆಸರು ಟೋನಿ ಗೊನ್ಸಾಲೆಸ್. ಆತನಿಂದ ಒಬ್ಬ ಮಗ ಹುಟ್ಟಿದ. ಆತನನ್ನು ತೊರೆದ ಲಾರೆನ್, ಪ್ಯಾಟ್ರಿಕ್‌ನನ್ನು ಮದುವೆಯಾದಳು. ಈಗ ಅವನನ್ನೂ ಬಿಟ್ಟು ಜೆಫ್ ಜೊತೆ. ಇತ್ತ ಜೆಫ್‌ಗೂ ನಾಲ್ವರು ಮಕ್ಕಳು. ಪತ್ನಿ, ಕಾದಂಬರಿಗಾತಿ ಮೆಕೆಂಜೀ ಜೊತೆಗಿನ ೨೫ ವರ್ಷಗಳ ಸುದೀರ್ಘ ದಾಂಪತ್ಯದಲ್ಲಿ ಮೂವರು ಮಕ್ಕಳು, ಇನ್ನೊಂದು ಮಗು ಚೀನಾದಿಂದ ದತ್ತು ಪಡೆದುಕೊಂಡದ್ದು. ಅಮೆಜಾನ್ ಸಂಸ್ಥೆಯ ಮುಕ್ಕಾಲು ಪಾಲು ಶೇರುಗಳು ಈಗ ಜೆಫ್ ಬಳಿ ಇದ್ದರೆ, ಕಾಲು ಪಾಲು ಮೆಕೆಂಜೀ ಬಳಿ ಇವೆ. ಇದರ ನಡುವೆ ಜೆಫ್- ಲಾರೆನ್ ದಾಂಪತ್ಯದ ಕತೆ ಏನೋ ಮುಂದೆ ನೋಡಬೇಕು.