Asianet Suvarna News Asianet Suvarna News

Feelfree: ರೂಮ್‌ಮೇಟ್‌ ಬಾಯ್‌ಫ್ರೆಂಡ್ ಮೇಲೆ ಅಟ್ರಾಕ್ಷನ್! ಏನು ಮಾಡಲಿ?

ಇಂಥ ಸನ್ನಿವೇಶ ಎದುರಾಗುತ್ತೆ. ನಿಮ್ಮ ರೂಮ್‌ಮೇಟ್ ಅಥವಾ ಆಪ್ತ ಗೆಳೆಯ/ಗೆಳತಿಯರ ಬಾಯ್‌ಫ್ರೆಂಡ್/ ಗರ್ಲ್‌ಫ್ರೆಂಡ್ ನಿಮ್ಮಲ್ಲಿ ತೀರದ ಆಕರ್ಷಣೆ ಹುಟ್ಟಿಸ್ತಾರೆ. ಇದರಿಂದ ಪಾರಾಗುವ ದಾರಿ ಹೇಗೆ?

 

 

Woman seeks solution as she had crush on boyfriend of roommate
Author
Bengaluru, First Published Nov 19, 2021, 1:36 PM IST

ಪ್ರಶ್ನೆ : ನಾನು ಪೋಸ್ಟ್ ಗ್ರಾಜ್ಯುಯೇಷನ್ ಮಾಡ್ತಿದ್ದೀನಿ. ನಾನು ಮತ್ತು ನನ್ನ ಫ್ರೆಂಡ್ ಒಂದೇ ರೂಮ್‌ನಲ್ಲಿದ್ದೀವಿ. ಅವಳಿಗೊಬ್ಬ ಬಾಯ್ ಫ್ರೆಂಡ್ (Boyfriend) ಇದ್ದಾನೆ. ಅವನ ಜೊತೆಗೆ ಲಾಂಗ್ ಡ್ರೈವ್‌ಗೆ, ಸಿನಿಮಾಕ್ಕೆಲ್ಲ ಹೋಗುತ್ತಿರುತ್ತಾಳೆ. ಅವನ ಬಗ್ಗೆ ನನ್ನ ಜೊತೆಗೆ ತುಂಬ ಹೇಳ್ತಾನೂ ಇರ್ತಾಳೆ. ಆದರೆ ಅವರಿಬ್ಬರ ನಡುವೆ ಸೆಕ್ಸ್ (Sex) ರಿಲೇಶನ್ ಇದೆ ಅಂತ ಗೊತ್ತಿರಲಿಲ್ಲ. ಒಂದು ಘಟನೆ ಆದ್ಮೇಲಿಂದ ತಲೆ ಕೆಟ್ಟು ಹೋಗಿದೆ. ಅವತ್ತು ಕ್ಲಾಸ್ ಬೇಗ ಮುಗೀತು ಅಂತ ರೂಮ್‌ಗೆ ಬಂದೆ. ನೋಡಿದ್ರೆ ರೂಮ್ ಬೀಗ ತೆಗೆದಿತ್ತು. ಒಳಗಿಂದ ಲಾಕ್ ಆಗಿತ್ತು. ನನ್ನ ಫ್ರೆಂಡ್ ಬಂದಿರ್ತಾಳೆ ಅಂದುಕೊಂಡು ಬಾಗಿಲು ತಟ್ಟಲು ಹೊರಟವಳು ಒಳಗಿನಿಂದ ಏನೋ ಸೌಂಡ್ ಕೇಳಿದಂತಾಗಿ ಹಿಂತೆಗೆದೆ. ಸೈಡ್‌ನಿಂದ ಹೋಗಿ ರೂಮ್‌ನ ಕಿಟಕಿಯಲ್ಲಿ ಇಣುಕಿದೆ. ಒಳಗೆ ನನ್ನ ಫ್ರೆಂಡ್ ಮತ್ತು ಅವಳ ಬಾಯ್ ಫ್ರೆಂಡ್ ನೋಡಬಾರದ ಸ್ಥಿತಿಯಲ್ಲಿದ್ದರು. 

ನನಗೆ ಒಂದು ಕ್ಷಣ ಅದನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ಅವರೆಲ್ಲಿ ನನ್ನ ನೋಡ್ತಾರೋ ಅಂತ ಭಯ ಆಯ್ತು. ಸದ್ದಿಲ್ಲದಂತೆ ಹೋಗಿ ಪಾರ್ಕ್‌ನಲ್ಲಿ ಕೂತೆ. ಆಮೇಲೆ ನನ್ನ ಟೈಮ್‌ಗೆ ವಾಪಾಸ್ ಬಂದೆ. ಅಷ್ಟರಲ್ಲಿ ಅವನು ಹೋಗಾಗಿತ್ತು. ಅವಳು ಎಂದಿನಂತೆ ಇದ್ದಳು. ಆದರೆ ಅದನ್ನು ನೋಡಿದಾಗಿನಿಂದ ನನ್ನ ಮನಸ್ಸು ಒಂಥರಾ ಆಗಿದೆ. ಬೇಡ ಬೇಡ ಅಂದರೂ ಆ ದೃಶ್ಯ ಕಣ್ಮುಂದೆ ಬರುತ್ತೆ. ಅವರೇನು ಮಾಡಿರಬಹುದು ಅನ್ನುವ ಕಲ್ಪನೆಗಳೆಲ್ಲ ಬರುತ್ತೆ. ಅವಳ ಬಾಯ್ ಫ್ರೆಂಡ್‌ನ ಆ ಸ್ಥಿತಿಯಲ್ಲಿ ನೋಡಿದ ಮೇಲಿಂದ ಅವನ ಬಗ್ಗೆ ಒಂಥರ ಅಟ್ರಾಕ್ಷನ್ ಶುರುವಾಗಿದೆ. ಮನಸ್ಸು ನನ್ನ ಹತೋಟಿಗೆ ಬರುತ್ತಿಲ್ಲ. ಅವನ ಜೊತೆಯಲ್ಲಿ ನಾನೂ ಅದೇ ಭಂಗಿಯಲ್ಲಿ ಇದ್ದಂತೆಲ್ಲ ಕಲ್ಪನೆಗಳೆಲ್ಲ ತಲೆಗೆ ಬರ್ತಿದೆ. ಯಾವತ್ತೂ ಹೀಗಾಗಿರಲಿಲ್ಲ. ಏನು ಮಾಡೋದು ಅಂತ ಗೊತ್ತಾಗ್ತಿಲ್ಲ. ಚೆನ್ನಾಗಿ ಓದಬೇಕು ಅಂತ ಬಹಳ ಕನಸಿಟ್ಟುಕೊಂಡವಳು ನಾನು. ಈಗ ಪುಸ್ತಕ ಓದಲಿಕ್ಕೇ ಆಗ್ತಿಲ್ಲ. ಕ್ಲಾಸ್‌ನಲ್ಲಿ ಪಾಠ ಕೇಳುವಾಗಲೂ ಏಕಾಗ್ರತೆ ಬರುತ್ತಿಲ್ಲ. ಜೊತೆಗೆ ನಾನೆಲ್ಲಿ ಹಾದಿ ತಪ್ಪಿ ಬಿಡಬಹುದೋ ಅನ್ನೋ ಭಯ ಕಾಡ್ತಿದೆ. ದಯಮಾಡಿ ಇದರಿಂದ ಹೊರಬರೋದು ಹೇಗೆ ಅಂತ ಹೇಳಿ.

Feelfree: ಮುಖಮೈಥುನ ಆನಂದದಾಯಕವೇ, ಅನಾರೋಗ್ಯಕಾರಿಯೇ?

ಉತ್ತರ : ಇದೊಂಥರ ಅನಿರೀಕ್ಷಿತ ಆಘಾತ ಎನ್ನಬಹುದು. ನಿಮ್ಮ ಮನಸ್ಥಿತಿ ಹೀಗಾಗಲು ನಿಮ್ಮ ವಯಸ್ಸೂ ಒಂದು ಕಾರಣ ಆಗಿರಬಹುದು. ಕೆಲವು ಸಲ ಹೀಗಾಗುತ್ತೆ. ಒಂದು ತೀವ್ರವಾದ ಮಾನಸಿಕ ಅನುಭವಕ್ಕೆ ಒಳಪಟ್ಟಾಗ ಅದರ ಪರಿಣಾಮ ಕೆಲವು ದಿನಗಳು, ಕೆಲವು ವಾರಗಳು ಕೆಲವೊಮ್ಮೆ ಕೆಲವು ತಿಂಗಳವರೆಗೂ ವಿಸ್ತರಿಸುತ್ತಾ ಹೋಗುತ್ತದೆ. ಆಮೇಲೆ ಫೇಡ್ಔಟ್ ಆಗುತ್ತದೆ. ಆದರೆ ಒಂದಂತೂ ಸತ್ಯ. ಇದೇನು ಪರ್ಮನೆಂಟ್ ಆಗಿ ಉಳಿಯೋದಿಲ್ಲ. ಒಂದಿಷ್ಟು ದಿನ ನಿಮ್ಮನ್ನು ಕಾಡಬಹುದು, ದಿಕ್ಕೆಡಿಸಬಹುದು ಅಷ್ಟೇ. ಬಹುಶಃ ನಿಮಗೀಗ ಇಪ್ಪತ್ತೆರಡು ವರ್ಷ ಆಗಿರಬಹುದು. ಸೆಕ್ಸ್ ಹಾರ್ಮೋನ್‌ಗಳು ಕ್ರಿಯಾಶೀಲವಾಗಿರುವ ಅವಧಿ ಇದು. ಈ ಸಮಯದಲ್ಲಿ ಲೈಂಗಿಕಾಸಕ್ತಿ ಅಧಿಕ ಇರುತ್ತದೆ. ಆದರೆ ಓದು, ಗುರಿ, ಕೆರಿಯರ್ ಕಡೆಗಿನ ಹಂಬಲದಿಂದ ಈ ಕಾಮನೆಗಳನ್ನು ಸಪ್ರೆಸ್ ಮಾಡಲೇಬೇಕಾಗುತ್ತದೆ. ಆದರೆ ಇಂಥ ಅನಿರೀಕ್ಷಿತ ಘಟನೆಗಳಾದಾಗ ಆ ಕಾಮನೆಗಳು ಮತ್ತೆ ಎಚ್ಚೆತ್ತುಕೊಂಡು ಕಾಡಬಹುದು. ಆ ಬಗ್ಗೆ ಯೋಚಿಸುವುದರಲ್ಲಿ, ಯೋಚಿಸುತ್ತಾ ಸುಖಿಸುವುದರಲ್ಲಿ ಮನಸ್ಸು ಖುಷಿ ಕಾಣಬಹುದು. ಬಹಳ ಪ್ರಬಲವಾಗಿರುವ ಇಂಥ ವಿಷಯಗಳಿಂದ ಹೊರಬರಲು ಪ್ರಯತ್ನ ಬೇಕೇ ಬೇಕು. ನೀವು ಪರಿಸರ ಬದಲಾವಣೆ ಮಾಡಿಕೊಳ್ಳಿ. ಒಂದಿಷ್ಟು ದಿನ ಊರಿಗೋ, ಸಂಬಂಧಿಕರ ಮನೆಗೋ ಅಥವಾ ಪ್ರವಾಸಕ್ಕೋ ಹೋಗಿ. ಅಲ್ಲಿ ಇಂಥ ಯೋಚನೆಗಳು ಬಂದ ಕೂಡಲೇ ಅದನ್ನು ಡೀವಿಯೇಟ್ ಮಾಡಿ ಬೇರೆ ಯಾವುದಾದರೂ ವಿಷಯಗಳತ್ತ ಗಮನಕೊಡಿ.

Feelfree: ಮಗುವಾದ ಬಳಿಕ ಸೆಕ್ಸ್ ಫೀಲ್ ಹೆಚ್ಚಾಗ್ತಿದೆ, ಮನೆಯವ್ರು ಗಂಡನ ಹತ್ರ ಬಿಡ್ತಿಲ್ಲ!

ಒಂದೆರಡು ಸಿನಿಮಾ ನೋಡಿ, ಗಾಢವಾಗಿ ಓದಿಸಿಕೊಳ್ಳುವ ಪುಸ್ತಕ ಓದಿ. ತೀವ್ರವಾಗಿ ಆಟ ಆಡಿ. ಶಟಲ್ ಬ್ಯಾಡ್ಮಿಂಟನ್, ರನ್ನಿಂಗ್ ಇತ್ಯಾದಿಗಳಿಂದ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಇಷ್ಟಾದ ಮೇಲೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದಾದರೆ ದಯಮಾಡಿ ಆಪ್ತ ಸಲಹೆಗಾರರ ಬಳಿ ಹೋಗಿ. ಅವರು ನಿಮ್ಮ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದ ಹೊರಬರಲು ಕೆಲವೊಂದು ಉಪಾಯಗಳನ್ನು ಹೇಳುತ್ತಾರೆ. ಒಬ್ಬ ತಜ್ಞ ವ್ಯಕ್ತಿಯೆದುರು ಎಲ್ಲವನ್ನೂ ಮನಬಿಚ್ಚಿ ಮಾತಾಡಿ, ಅವರು ನಿಮ್ಮಲ್ಲಿ ನಿಮಗೆ ವಿಶ್ವಾಸ ಮೂಡಿಸಿ ಹೇಳುವ ಸಲಹೆಗಳು ಬಹಳ ಪರಿಣಾಮಕಾರಿಯಾಗಿರುತ್ತವೆ.ಕಾಮನೆಗಳಿಗೆ ವಶವಾಗಿ, ನಿಮ್ಮ ಗೆಳತಿಯ ಬಾಯ್‌ಫ್ರೆಂಡ್‌ ಅನ್ನು ಬಳಸಿಕೊಳ್ಳಲು ಮುಂದಾಗಬೇಡಿ. ಹಾಗೆ ಮಾಡಿದರೆ ಗೆಳತಿಯನ್ನೂ ಕಳೆದುಕೊಳ್ಳುತ್ತೀರಿ, ಚಾರಿತ್ರ್ಯದ ಬಗ್ಗೆಯೂ ಒಳ್ಳೆಯ ಹೆಸರು ಉಳಿಯಲಿಕ್ಕಿಲ್ಲ. 

#Feelfree: ಹುಡುಗಿಯರ ಬಗ್ಗೆ ಕುತೂಹಲವಿಲ್ಲ, ಆಂಟಿಯನ್ನು ಕಂಡರೆ ಕಾಮೋದ್ರೇಕ!

Follow Us:
Download App:
  • android
  • ios