ರಜೆಗೆ ಹೋಗುವ ಮುನ್ನ ಬಾಯ್‌ಫ್ರೆಂಡ್, ‘ನೀನು ನಕಲಿ ಎಂಗೇಜ್‌ಮೆಂಟ್ ರಿಂಗ್ ಹಾಕಿಕೋ’ ಎಂದಿದ್ದಾನೆ. ಅವನು ಯಾಕೆ ಹೀಗೆ ಮಾಡ್ತಿದ್ದಾನೆ ಅಂತಾ ಹುಡುಗಿಗೆ ಅರ್ಥವಾಗ್ತಿಲ್ಲ. ಅದಕ್ಕೆ ಅವಳು ನೆಟ್ಟಿಗರ ಮುಂದೆ ಈ ಪ್ರಶ್ನೆ ಇಟ್ಟು ಉತ್ತರ ಕೇಳಿದ್ದಾಳೆ. ನೆಟ್ಟಿಗರ ಕಾಮೆಂಟ್ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ..!
ನೀನು ನಕಲಿ ಎಂಗೇಜ್‌ಮೆಂಟ್ ರಿಂಗ್ ಹಾಕಿಕೋ
ಸಂಬಂಧದಲ್ಲಿ ನಂಬಿಕೆಯ ಸಮಸ್ಯೆ: ರಜೆಗೆ ಹೋಗುವ ಮುನ್ನ ಬಾಯ್‌ಫ್ರೆಂಡ್, 'ನೀನು ನಕಲಿ ಎಂಗೇಜ್‌ಮೆಂಟ್ ರಿಂಗ್ ಹಾಕಿಕೋ, ಆಗ ಅಲ್ಲಿನ ಸ್ಥಳೀಯರಿಗೆ ನಿನ್ನ ಎಂಗೇಜ್‌ಮೆಂಟ್ ಆಗಿದೆ ಅನ್ಸುತ್ತೆ' ಅಂದಿದ್ದಾನೆ. ಅವನು ಯಾಕೆ ಹೀಗೆ ಮಾಡ್ತಿದ್ದಾನೆ, ಅವನಿಗೆ ತನ್ನ ಮೇಲೆ ನಂಬಿಕೆ ಇಲ್ವಾ ಅಂತಾ ಹುಡುಗಿಗೆ ಅರ್ಥವಾಗ್ತಿಲ್ಲ.
ರಜೆಯಲ್ಲಿ ನಿಮ್ಮ ಪಾರ್ಟ್ನರ್ ವಿಚಿತ್ರವಾದ ರಿಕ್ವೆಸ್ಟ್ ಮಾಡಿ ನಿಮಗೆ ಮುಜುಗರ ಉಂಟುಮಾಡಿದ ಸಂದರ್ಭವನ್ನು ಎಂದಾದರೂ ಎದುರಿಸಿದ್ದೀರಾ? ಅಮೆರಿಕದ ಮಹಿಳೆಯೊಬ್ಬರಿಗೆ ಇದೇ ರೀತಿಯ ಅನುಭವವಾಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ ಅವರ ಬಾಯ್‌ಫ್ರೆಂಡ್ ನಕಲಿ ಎಂಗೇಜ್‌ಮೆಂಟ್ ರಿಂಗ್ ಧರಿಸಲು ಹೇಳಿದ್ದಾನೆ. ಈ ಪೋಸ್ಟ್ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ಜನರು ಇದನ್ನು ನಂಬಿಕೆಯ ಕೊರತೆಯ ಸಂಕೇತ ಎಂದು ಹೇಳಿದ್ದಾರೆ.
24 ವರ್ಷದ ಯುವತಿ ಆಸ್ಟ್ರೇಲಿಯಾಗೆ ಶಿಫ್ಟ್ ಆಗುವ ಪ್ಲ್ಯಾನ್‌ನಲ್ಲಿದ್ದಾಳೆ. ಅಲ್ಲಿನ ಜೀವನಶೈಲಿ ಮತ್ತು ವೃತ್ತಿ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಲು ಆಕೆಯ ಕುಟುಂಬ ಒಂದು ತಿಂಗಳ ರಜೆಯ ಮೇಲೆ ಕರೆದುಕೊಂಡು ಹೋಗಲು ಒಪ್ಪಿಕೊಂಡಿದೆ. ಈ ಯುವತಿ ಬಾಲ್ಯದಿಂದಲೂ ಆಸ್ಟ್ರೇಲಿಯಾದ ಸಂಸ್ಕೃತಿ ಮತ್ತು ಅಪಾಯಕಾರಿ ಜೀವಿಗಳ ಬಗ್ಗೆ ಆಸಕ್ತಿ ಹೊಂದಿದ್ದಳು. ಆದರೆ ಈ ಪ್ರಯಾಣಕ್ಕೂ ಮುನ್ನ, ಆಕೆಯ ಬಾಯ್‌ಫ್ರೆಂಡ್ ಡಾನ್ (ಹೆಸರು ಬದಲಾಯಿಸಲಾಗಿದೆ) ನಕಲಿ ಎಂಗೇಜ್‌ಮೆಂಟ್ ರಿಂಗ್ ಧರಿಸಬೇಕು, ಆಗ ಸ್ಥಳೀಯರು ತಮ್ಮ ಬಳಿ ಚಾನ್ಸ್ ಇದೆ ಎಂದು ಯೋಚಿಸುವುದಿಲ್ಲ ಎಂದು ಹೇಳಿದ್ದಾನೆ.
ಬಾಯ್‌ಫ್ರೆಂಡ್ ಇಟ್ಟ ವಿಚಿತ್ರ ಷರತ್ತು
ಯುವತಿ ಬರೆದಿದ್ದಾಳೆ, 'ಸ್ಥಳೀಯರು ಹಾಗೆಲ್ಲಾ ಯೋಚಿಸುವುದಿಲ್ಲ ಎಂದು ನಾನು ಅವನಿಗೆ ಹೇಳಿದೆ, ಆದರೆ ಅವನು ಹಠ ಹಿಡಿದ. ಇದ್ದಕ್ಕಿದ್ದಂತೆ ನನಗಾಗಿ ಒಂದು ದೊಡ್ಡ ಉಂಗುರವನ್ನು ತಂದುಕೊಟ್ಟ. ನಮ್ಮಿಬ್ಬರದ್ದು ಎಂಗೇಜ್‌ಮೆಂಟ್ ಆಗಿಲ್ಲದ ಕಾರಣ ನಾನು ಇದನ್ನು ಧರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನಂತರ ನಮ್ಮಿಬ್ಬರ ನಡುವೆ ಜಗಳವಾಗಿ ಅವನು ಸೋಫಾದ ಮೇಲೆ ಮಲಗಲು ಹೋದ. ಅವನ ತಾಯಿ ನನಗೆ ಮೆಸೇಜ್ ಮಾಡಿ, 'ಇದು ಡಾನ್‌ಗೆ ಕಂಫರ್ಟಬಲ್ ಎನಿಸಿದರೆ, ಇದರಲ್ಲಿ ದೊಡ್ಡ ವಿಷಯವೇನಿಲ್ಲ. ನೀನು ಅದನ್ನು ಧರಿಸಬೇಕು' ಎಂದರು.
ಬಾಯ್‌ಫ್ರೆಂಡ್‌ಗೆ ನಿಮ್ಮ ಮೇಲೆ ನಂಬಿಕೆ ಇಲ್ಲ
ಅವರಿಬ್ಬರ ಎಂಗೇಜ್‌ಮೆಂಟ್ ಇನ್ನೂ ಆಗಿಲ್ಲ!
ಯುವತಿಗೆ ಇದು ವಿಚಿತ್ರ ಮತ್ತು ಮುಜುಗರ ತರಿಸಿತು, ಏಕೆಂದರೆ ಅವರಿಬ್ಬರ ಎಂಗೇಜ್‌ಮೆಂಟ್ ಇನ್ನೂ ಆಗಿಲ್ಲ. ರೆಡ್ಡಿಟ್‌ನಲ್ಲಿ ಈ ಕಥೆಯನ್ನು ಪೋಸ್ಟ್ ಮಾಡಿ, ನಕಲಿ ಎಂಗೇಜ್‌ಮೆಂಟ್ ರಿಂಗ್ ಧರಿಸುವುದು ಸರಿನಾ ಎಂದು ಕೇಳಿದ್ದಾಳೆ. ಈ ಪೋಸ್ಟ್‌ಗೆ ಹಲವು ಬಳಕೆದಾರರು ಇದು ನಂಬಿಕೆಯ ಕೊರತೆ ಮತ್ತು ಸಂಬಂಧದಲ್ಲಿ ಅಪಾಯದ ಸಂಕೇತ (ರೆಡ್ ಫ್ಲ್ಯಾಗ್) ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ, 'ಎಂಗೇಜ್‌ಮೆಂಟ್ ರಿಂಗ್ ಎಂದರೆ ನೀವು ನಿಶ್ಚಿತಾರ್ಥ ಮಾಡಿಕೊಂಡಿದ್ದೀರಿ ಎಂದರ್ಥ. ನಕಲಿ ಉಂಗುರವು ಅವನು ನಿಮ್ಮನ್ನು ನಂಬುವುದಿಲ್ಲ ಎಂಬುದನ್ನು ತೋರಿಸುತ್ತದೆ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಅವನು ನಿಜವಾಗಿಯೂ ಉಂಗುರ ಕೊಡಲು ಬಯಸಿದರೆ, ಸರಿಯಾದ ರೀತಿಯಲ್ಲಿ ಕೊಡಲಿ. ಬೇರೆ ಪುರುಷರು ಉಂಗುರ ನೋಡಿ ಹಿಂದೆ ಸರಿಯಲಿ ಎಂಬುದು ಕೇವಲ ನಾಟಕ' ಎಂದು ಬರೆದಿದ್ದಾರೆ.
ನಕಲಿ ಉಂಗುರ ಧರಿಸುವುದು ನನಗೆ ತಪ್ಪು ಎನಿಸುತ್ತದೆ!
ತಾನು ಉಂಗುರ ಧರಿಸಿದರೆ, ಅದು ಬಾಯ್‌ಫ್ರೆಂಡ್‌ನ ಕುಟುಂಬದ ದೃಷ್ಟಿಯಲ್ಲಿ ಸರಿ ಎಂದು ಸಾಬೀತಾಗುತ್ತದೆ ಎಂಬ ಭಯ ಯುವತಿಗಿದೆ. ಆಕೆಯ ತಂದೆ-ತಾಯಿ ಡಾನ್‌ನನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಆಗಾಗ ಅವನನ್ನು ಮಗನಂತೆ ಕಾಣುತ್ತಾರೆ. ಈ ಫ್ಯಾಮಿಲಿ ಸಂಬಂಧದ ಮೇಲೆ ನೆಗೆಟಿವ್ ಪರಿಣಾಮ ಬೀರಬಾರದು ಎಂದು ಯುವತಿ ಬಯಸುವುದಿಲ್ಲ. 'ನಾನು ಡಾನ್‌ನನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಭವಿಷ್ಯದಲ್ಲಿ ಮದುವೆಯಾಗಲೂ ಬಯಸುತ್ತೇನೆ, ಆದರೆ ನಕಲಿ ಉಂಗುರ ಧರಿಸುವುದು ನನಗೆ ತಪ್ಪು ಮತ್ತು ಮುಜುಗರ ಎನಿಸುತ್ತದೆ. ಇದು ನನ್ನ ಸಂಬಂಧ ಅಥವಾ ನನ್ನ ಕುಟುಂಬದ ಸಂಬಂಧದ ಮೇಲೆ ಪರಿಣಾಮ ಬೀರಬಾರದು' ಎಂದು ಆಕೆ ಹೇಳುತ್ತಾಳೆ.
ಕಥೆ ಕೇಳಿದರೆ ಖಂಡಿತವಾಗಿಯೂ ನಗು ಬರುತ್ತದೆ!
ಅವರಿಬ್ಬರ ಹಾಗೂ ಪರಸ್ಪರ ಕುಟುಂಬದ ಕಥೆ ಕೇಳಿದರೆ ಖಂಡಿತವಾಗಿಯೂ ನಗು ಬರುತ್ತದೆ. ಏಕೆಂದರೆ ಅದು ಅವರಿಬ್ಬರ ಹಾಗೂ ಆ ಎರಡು ಫ್ಯಾಮಿಲಿಗಳು ಖಾಸಗಿ ವಿಷಯ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಒಪಿನಿಯನ್ ಕೇಳುತ್ತಾರೆ ಎಂದರೆ ಅವರಿಗೆ ಏನೆನ್ನಬೇಕು? ಮುಂದೆ ಮದುವೆಯಾದ ಬಳಿಕ ನಾನು ಅವನ ಜೊತೆ ಅಥವಾ ಅವಳ ಜೊತೆ 'ಫಸ್ಟ್ ನೈಟ್' ಮಾಡಬೇಕೋ ಬೇಡವೋ ಎಂದು ಕೇಳುತ್ತಾ ಕುಳಿತರೆ ಅವರಿಗೆ ಸಜೆಶನ್ ಕೊಡಲು ತುಂಬಾ ಜನರು ಮುಂದೆ ಬರಬಹುದು. ಆದರೆ, ಅದು ತಮ್ಮಿಬ್ಬರ ಪ್ರೈವೇಟ್ ಸಂಗತಿ, ಅದನ್ನು ಸೋಷಿಯಲ್ ಮೀಡಿಯಾ ಟ್ರೆಂಡ್ ಮಾಡಬಾರದು ಎಂಬಷ್ಟು ಕಾಮನ್ ಸೆನ್ಸ್ ಅವರಿಬ್ಬರಿಗೆ ಅಥವಾ ಇಬ್ಬರಲ್ಲಿ ಒಬ್ಬರಿಗೆ ಇಲ್ಲ ಅಂದ್ರೆ ಏನೆನ್ನಬೇಕು? ಇಂದಿನ ಸಮಾಜ ಎತ್ತ ಸಾಗುತ್ತಿದೆ? ಉತ್ತರ ಗೊತ್ತಿದ್ದರೆ ಹೇಳಿ..
