ಚಳಿಗಾಲದಲ್ಲಿ ಸಂಗಾತಿ ಸನಿಹವನ್ನು ಮನಸ್ಸು ಬಯಸುತ್ತದೆ. ದೇಹ ಉಷ್ಣತೆ ಕಾರಣ ನೀಡಿ,ಸೆಕ್ಸ್ ನಿಂದ ದೂರವಿರುವಂತೆ ಮಾಡುತ್ತದೆ. ಸುಮಧುರ ಪಯಣಕ್ಕೆ ಋತು ಅಡ್ಡಿಯಾಗುವುದು ಒಳ್ಳೆಯದಲ್ಲ. ಚಳಿಗಾಲದಲ್ಲಿ ಸಂಗಾತಿ ಜೊತೆ ಸಂಭೋಗ ನಡೆಸೋದು ಒಳ್ಳೇಯದು ಎನ್ನುತ್ತಾರೆ ಲೈಫ್ ಎಕ್ಸ್‌ಪರ್ಟ್ಸ್.
ಚಳಿಗಾಲ (Winter) ಶುರುವಾಗ್ತಿದ್ದಂತೆ ದೇಹ ಬಿಸಿ ಬಿಸಿಯಾಗಿರುವುದನ್ನು ಬಯಸುತ್ತದೆ. ಚಳಿಗಾಲದಲ್ಲಿ ನಮ್ಮ ಕಷ್ಟ ನಿಮಗೆ ಹೇಗೆ ಗೊತ್ತಾಗಬೇಕು ಅಂತಾ ಅವಿವಾಹಿತರು ಪ್ರಶ್ನೆ ಮಾಡ್ತಾರೆ. ಚಳಿಗಾಲದಲ್ಲಿ ಹೊಗೆಯಾಡುವ ಟೀ,ಕಾಫಿ ಮಾತ್ರವಲ್ಲ ಬೆಚ್ಚನೆ ಹೊದಿಕೆಯೊಳಗೊಂದು ಸಂಗಾತಿ ಇದ್ದರೆ ಎಷ್ಟು ಸುಖ ಎನ್ನುವವರಿದ್ದಾರೆ. ಸಂಭೋಗಕ್ಕೆ ( sex) ಯಾವುದೇ ಸಮಯ,ಋತುವಿನ ಗೆರೆಯಿಲ್ಲ. ಚಳಿಗಾಲದಲ್ಲಿ (winter) ಶೀತ ಉತ್ತುಂಗದಲ್ಲಿದ್ದಾಗ, ಲೈಂಗಿಕ ಬಯಕೆಯು ನಿಧಾನವಾಗುವುದುಂಟು. ಆದಾಗ್ಯೂ, ಚಳಿಗಾಲದ ಸೆಕ್ಸ್, ಬಹಳ ವಿಶೇಷ ಮತ್ತು ಬೆಚ್ಚಗಿನ ಅನುಭವವಾಗಿದೆ. ಇದೇ ಕಾರಣದಿಂದ ಕೆಲವರಿಗೆ ಈ ಋತುವಿನಲ್ಲಿ ಕೆಲವರಿಗೆ ಲೈಂಗಿಕ ಬಯಕೆ ಹೆಚ್ಚಾಗುತ್ತವೆ. ಚಳಿಗಾಲದ ಸೆಕ್ಸ್ ಆನಂದ ಹೇಗಿರಬೇಕೆಂಬ ಟಿಪ್ಸ್ ಇಲ್ಲಿದೆ.
ದೇಹದ ಬಿಸಿ ಹೆಚ್ಚಿಸುತ್ತೆ ಬೆಳಗಿನ ಸೆಕ್ಸ್ : ಬೆಳಗಿನ ಜಾವದ (Morning) ಚುಮು ಚುಮು ಚಳಿಯ ಅನುಭವ ಮುದ ನೀಡುತ್ತದೆ. ಬೆಚ್ಚಗಿನ ಹಾಸಿಗೆ ಮೇಲೆ ಹೊದ್ದು ಮಲಗಿದ್ರೆ ಏಳುವ ಮನಸ್ಸಾಗುವುದಿಲ್ಲ. ಸಂಗಾತಿಯೂ ಜೊತೆಗಿದ್ದರೆ ಸುಖ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಬೆಳಗಿನ ಸೆಕ್ಸ್, ಆ ದಿನಕ್ಕೆ ಒಂದು ಪ್ರಣಯ ಆರಂಭವನ್ನು ನೀಡುತ್ತದೆ. ದೇಹದ ಉಷ್ಣತೆ, ಸಂತೋಷದ ಮಟ್ಟವನ್ನು ಹೆಚ್ಚಿಸುತ್ತದೆ. ಪರಸ್ಪರ ಚುಂಬನ,ಅಪ್ಪುಗೆಯಿಂದ ಶುರುವಾಗುವ ಪ್ರಣಯ,ಪರಾಕಾಷ್ಠೆ ತಲುಪಿದಾಗ ಚಳಿ ಮರೆತ ಮೈ ಬೆವರಲು ಶುರುವಾಗಿರುತ್ತದೆ.
ಹದಿ ವಯಸ್ಸಲ್ಲಿ ಹೆಚ್ಚಾಗುತ್ತಿದೆ ಪ್ರೆಗ್ನೆನ್ಸಿ
ಹೊಟ್ಟೆ ತುಂಬಿದ ಮೇಲೊಂದು ಮಿಲನ : ಹೊಟ್ಟೆ ತುಂಬಿದಾಗ ವಿಶೇಷವಾಗಿ ಮಹಿಳೆಯರು ಹೆಚ್ಚು ಲೈಂಗಿಕ ಆನಂದವನ್ನು (Orgasm) ಅನುಭವಿಸುತ್ತಾರೆ. ಚಳಿ ವಾತಾವರಣದಲ್ಲಿ ಆಹಾರ (Food) ಸೇವನೆ ನಂತರ ಶಾರೀರಿಕ ಸಂಬಂಧ ಬೆಳೆಸುವುದು ಒಳ್ಳೆಯದು. ಊಟದ ನಂತರ ಅದರಲ್ಲೂ ರಾತ್ರಿಯ ಊಟದ ನಂತರ ದೈಹಿಕ ಸಂಬಂಧ ದೇಹದ ಉಷ್ಣತೆಯನ್ನು ಹೆಚ್ಚಿಸಲು ಮತ್ತಷ್ಟು ನೆರವಾಗುತ್ತದೆ.
ಲೈಂಗಿಕತೆಯ ಮೊದಲು ಸ್ನಾನ : ಸಾಮಾನ್ಯವಾಗಿ ಚಳಿಗಾಲದಲ್ಲಿ ಮೈ ಮುಚ್ಚುವ ಬಟ್ಟೆ ಧರಿಸುತ್ತಾರೆ. ತಣ್ಣನೆಯ ಕೈ ಸೋಕಿದರೂ ಕಿರಿಕಿರಿಯಾಗುತ್ತದೆ. ಸಂಭೋಗ ಎಷ್ಟೇ ಸುಖ ನೀಡಿದರೂ,ಕೆಲವರಿಗೆ ಚಳಿಯೇ ಸೆಕ್ಸ್ ಗೆ ಶತ್ರುವಾಗಿರುತ್ತದೆ. ಅಂತವರು. ಸೆಕ್ಸ್ ಮೊದಲು ಬಿಸಿ ನೀರಿನಲ್ಲಿ (Bath) ಸ್ನಾನ ಮಾಡಬೇಕು. ಇದು ದೇಹಕ್ಕೆ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆಯಾಸವನ್ನು ಹೋಗಲಾಡಿಸುತ್ತದೆ. ದೇಹದ ಉಷ್ಣತೆಯು ಸಾಮಾನ್ಯವಾಗಿದ್ದರೆ, ಸಂಭೋದಲ್ಲಿ ಹೆಚ್ಚು ಆನಂದ ಸಿಗುತ್ತದೆ.
ಕೊಠಡಿಯ ತಾಪಮಾನ : ತಣ್ಣನೆಯ ಗಾಳಿ ಮನಸ್ಸನ್ನು ನಿದ್ರೆಗೆ ಕರೆದೊಯ್ಯುತ್ತದೆ. ಹಾಗಾಗಿ ಕೋಣೆಯ ತಾಪಮಾನ ಬದಲಾಯಿಸುವ ಅಗತ್ಯವಿದೆ. ಕೋಣೆಯನ್ನು ಬಿಸಿ ಮಾಡಬೇಕು. ಇದಕ್ಕಾಗಿ ಹೀಟರ್ ಬಳಸಬಹುದು. ಕೋಣೆ ತುಂಬಾ ತಂಪಾಗಿದ್ದರೆ, ಸಂಭೋಗದ ಸಮಯದಲ್ಲಿ ತೊಂದರೆ ಉಂಟಾಗಬಹುದು. ದೇಹವು ತಾಪಮಾನಕ್ಕೆ ಪ್ರತಿಕ್ರಿಯಿಸುತ್ತದೆ. ಮತ್ತೊಂದೆಡೆ, ಬಿಸಿಯಾದ ದೇಹ ಮತ್ತು ತಣ್ಣನೆಯ ಕೋಣೆ ಸಹ ವ್ಯಕ್ತಿಯನ್ನು ಅನಾರೋಗ್ಯಕ್ಕೆ ಒಳಪಡಿಸಬಹುದು. ಹಾಗಾಗಿ ದೇಹದ ಜೊತೆ ಕೋಣೆ ಕೂಡ ಬೆಚ್ಚಗಿರುವುದು ಬಹಳ ಮುಖ್ಯವಾಗುತ್ತದೆ.
ಅನೈತಿಕ ಸಂಬಂಧ ತೆಗೆದುಕೊಂಡಿತು ಪ್ರಾಣ
ಬಟ್ಟೆಯ ಬಗ್ಗೆ ಇರಲಿ ಗಮನ : ಮಲಗಿದ ತಕ್ಷಣ ನಿಮ್ಮ ಅಥವಾ ನಿಮ್ಮ ಸಂಗಾತಿಯ ಬಟ್ಟೆ ತೆಗೆಯುವ ಆತುರ ಬೇಡ. ಮೊದಲು ಮಾತನಾಡಿ ದೇಹ ಬೆಚ್ಚಗಾದ ನಂತರವೇ ಉಡುಪನ್ನು ತೆಗೆಯಿರಿ. ದೇಹದ ಎಲ್ಲ ಬಟ್ಟೆಗಳನ್ನು ತೆಗೆಯದೇ ಸಂಭೋಗ (Sexual Intercourse) ಸುಖ ಪಡೆಯಲು ಸಾಧ್ಯವಾದರೆ ಚಳಿಗಾಲದಲ್ಲಿ ಆ ವಿಧಾನ ಒಳ್ಳೆಯದು. ಚಳಿಗಾಲದ ಅವಧಿಯಲ್ಲಿ ಫೋರ್‌ಪ್ಲೇಗೆ ಸ್ವಲ್ಪ ಹೆಚ್ಚು ಸಮಯವನ್ನು ನೀಡಿ.
ಚಳಿಗಾಲದಲ್ಲಿ ಸೆಕ್ಸ್ ಭಂಗಿ : ಚಳಿ,ಮಳೆ, ಬೇಸಿಗೆ ಯಾವುದೇ ಕಾಲವಿರಲಿ, ಸಂಭೋಗದ ಭಂಗಿ ಮಹತ್ವ ಪಡೆಯುತ್ತದೆ. ಚಳಿಗಾಲದಲ್ಲಿ ನೆಲದ ಮೇಲೆ ಮಾಡಬಹುದಾದ ಯಾವುದೇ ಭಂಗಿಯನ್ನು ಅನುಸರಿಸಬೇಡಿ.
