* ಹಾಲು ವ್ಯಾಪಾರಿ ಜತೆ ಚಕ್ಕಂದ* ಮಗಳ ಜತೆ ಚಲ್ಲಾಟವಾಡುತ್ತಿದ್ದ ಪ್ರಿಯಕರನ ಹತ್ಯೆಗೈದ ತಂದೆ * ಬೆಂಗಳೂರು, ಬೆಳಗಾವಿಯಲ್ಲಿ ನಡೆದ ಪ್ರತ್ಯೇಕ ಘಟನೆ
ಬೆಳಗಾವಿ, ಬೆಂಗಳೂರು, (ಡಿ.05): ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಸಂಬಂಧ ಶಂಕಿ ಹಿನ್ನೆಯಲ್ಲಿ ಹಾಲಿನ ವ್ಯಾಪಾರಿ ಹತ್ಯೆಯಾದ. ಬೆಂಗಳೂರಿನಲ್ಲಿ ಮಗಳ ಜತೆ ಚೆಲ್ಲಾಟವಾಡುತ್ತಿದ್ದ ಪ್ರಿಯಕರನನ್ನು ಹತ್ಯೆಗೈದ ತಂದೆ. ಈ ಘಟನಗಳು ಪ್ರತ್ಯೇಕವಾಗಿ ನಡೆದಿದ್ದು, ಇದರ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ..
ಹಾಲು ವ್ಯಾಪಾರಿ ಜತೆ ಚಕ್ಕಂದ
ರಾಯಭಾಗ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ಹಾಲು ವ್ಯಾಪಾರಿಯೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿ ಶವ ಬಿಸಾಡಿ ಪರಾರಿಯಾಗಿದ್ದ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
Illicit Relationship:ಯುವಕನ ಜತೆ 2 ಮಕ್ಕಳ ತಾಯಿ ಲವ್ವಿ-ಡವ್ವಿ, ಊರೆಲ್ಲ ಸುದ್ದಿ
ಹಾಲು ವ್ಯಾಪಾರಿ ಅರ್ಜುನ್ ಮಾರುತಿ ಮೇಗಡೆ(30) ಕೊಲೆಯಾದವ. ಆರೋಪಿ ಭೀಮಪ್ಪ ದುಂಡಪ್ಪ ತಟ್ಟಿಮನಿ ಹಾಗೂ ಈತನ ಮತ್ತಿಬ್ಬರು ಸಹಚರರು ಬಂಧಿತರು. ತನ್ನ ಪತ್ನಿ ಜತೆ ಹಾಲು ವ್ಯಾಪಾರಿ ಅರ್ಜುನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಭೀಮಪ್ಪ ದುಂಡಪ್ಪ ತಟ್ಟಿಮನಿಗೆ ಬಂದಿತ್ತು.
ಅನೈತಿಕ ಸಂಬಂಧದ ಬಗ್ಗೆ ಸಂಶಯಗೊಂಡಿದ್ದ ಭೀಮಪ್ಪ, ಇದೇ ವಿಚಾರಕ್ಕೆ ಕುಪಿತಗೊಂಡು ಅರ್ಜುನನ್ನು ಮುಗಿಸಲು ಸೇಹಿತರ ಜತೆ ಸಂಚು ರೂಪಿಸಿದ್ದ. ಅದರಂತೆ ಡಿ.3ರಂದು ರಾಯಭಾಗ ತಾಲೂಕಿನ ಬೆಂಡವಾಡ ಹೊರವಲಯದಲ್ಲಿ ಹಾಡಹಗಲೇ ಅರ್ಜುನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಬಳಿಕ ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಕೆನಾಲ್ ಒಂದರಲ್ಲಿ ಶವ ಬಿಸಾಕಿ ಪರಾರಿಯಾಗಿದ್ದರು.
ಪ್ರಕರಣದ ಬೆನ್ನತ್ತಿದ ರಾಯಭಾಗ ಠಾಣೆ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೀಮಪ್ಪ ತಟ್ಟಿಮನಿ, ಇವನ ಸ್ನೇಹಿತರಾದ ಲೋಕೆಶ್ ಬಂಡಿವಡ್ಡರ್ ಮತ್ತು ಶಿವನಗೌಡ ಪಾಟೀಲ್ ಎಂಬುವರನ್ನು ಬಂಧಿಸಿದ್ದಾರೆ.
ಮಗಳ ಪ್ರಿಯಕರನನ್ನು ಹತ್ಯೆಗೈದ ತಂದೆ
ಬೆಂಗಳೂರು: ಮಗಳ ಪ್ರಿಯಕರನನ್ನು ಹತ್ಯೆಗೈದಿದ್ದ ಆರೋಪಿ ತಂದೆಯನ್ನು ಬೆಂಗಳೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿನೋಬನಗರ ನಿವಾಸಿ ನಾರಾಯಣ ಬಂಧಿತ ಆರೋಪಿ. ನಿವೇಶ್ ಕುಮಾರ್(19) ಕೊಲೆಯಾದ ಯುವಕ.
ಆರೋಪಿ ನಾರಾಯಣ್, ತನ್ನ ಮಗಳನ್ನು ಪ್ರೀತಿಸುತ್ತಿದ್ದ ನಿವೇಶ್ ಕುಮಾರ್ನನ್ನು ಕೆಲ ದಿನಗಳ ಹಿಂದೆ ಕೊಲೆ ಮಾಡಿದ್ದ. ಆರೋಪಿ ನಾರಾಯಣ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ನಿವೇಶ್ ನಾರಾಯಣ್ ಮನೆಗೆ ಬಂದಿದ್ದ. ಇದೇ ವೇಳೆ ಆಚೆ ಹೋಗಿದ್ದ ನಾರಾಯಣ ಮನೆಗೆ ಹಿಂತಿರುಗಿದ್ದ. ಮನೆಗೆ ಬರುತ್ತಿದ್ದಂತೆ ಮಗಳು ಆತನ ಪ್ರಿಯಕರನ ಜೊತೆ ಇರುವುದನ್ನು ಕಂಡು ಕೋಪಗೊಂಡು ನಿವೇಶ್ ಹತ್ಯೆಗೈದಿದ್ದಾನೆ.
ನಾರಾಯಣ್ ಮನೆಯಲ್ಲಿದ್ದ ಕಟ್ಟಿಗೆಯಿಂದ ನಿವೇಶ್ ತಲೆಗೆ ಹೊಡೆದಿದ್ದಾನೆ. ನಂತರ ಅಪರಿಚಿತ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಆ ವೇಳೆಗೆ ನಿವೇಶ್ ಮೃತಪಟ್ಟಿದ್ದ. ಕಲಾಸಿಪಾಳ್ಯ ಪೊಲೀಸರು ಆಸ್ಪತ್ರೆ ಮಾಹಿತಿ ಅಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ನಿವೇಶ್ ಕಾಣಿಸುತ್ತಿಲ್ಲ ಎಂದು ನಿವೇಶ್ ಪೋಷಕರು ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದರು. ಈ ವೇಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ತೋರಿಸಿದಾಗ ನಿವೇಶ್ ಗುರುತು ಪತ್ತೆಯಾಗಿದೆ. ನಿವೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ ನಾರಾಯಣ್ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿದೆ. ಕಲಾಸಿಪಾಳ್ಯದಿಂದ ಪ್ರಕರಣ ವರ್ಗಾಯಿಸಿಕೊಂಡು ವಿ.ವಿ.ಪುರಂ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
