wife for rent: ತನ್ನ ಹೆಂಡತಿಯ ಖರ್ಚು-ವೆಚ್ಚಗಳನ್ನು ಭರಿಸಲಾಗದೆ ಆಕೆಯನ್ನು ಬಾಡಿಗೆಗೆ ನೀಡುತ್ತಿರುವುದಾಗಿ ಗಂಡನೊಬ್ಬ ಹೇಳಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವಿಡಿಯೋ ಮೂಲಕ ಹೆಂಡ್ತಿಯನ್ನೇ ಬಾಡಿಗೆಗೆ ನೀಡುವುದಾಗಿ ಘೋಷಿಸಿದ ಗಂಡ

ಸಾಮಾಜಿಕ ಜಾಲತಾಣದಲ್ಲಿ ಹೆಂಡ್ತಿಯನ್ನು ಬಾಡಿಗೆ ನೀಡ್ತಿದ್ದೇನೆ ಎಂದು ಗಂಡನೋರ್ವ ಹೇಳುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಆಕೆಯ ಖರ್ಚು ವೆಚ್ಚಗಳನ್ನು ನನಗೆ ಬರಿಸಲಾಗುತ್ತಿಲ್ಲ. ಹೀಗಾಗಿ ಅಕೆಯನ್ನು ಬಾಡಿಗೆ ನೀಡುತ್ತಿದ್ದೇನೆ ಎಂದು ಆತ ಹೇಳುತ್ತಿರುವುದು ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೀವನ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೆಂದು ಯಾರೂ ಕೂಡ ಹೆಂಡತಿಯನ್ನು ಬಾಡಿಗೆ ನೀಡುವ ಮಟ್ಟಕ್ಕೆ ಇಳಿಯುವುದಿಲ್ಲ. ಹೆಂಡತಿ ಎಂಬುದು ಬಾಡಿಗೆ ನೀಡುವುದಕ್ಕೆ ವಸ್ತು ಅಲ್ಲ, ಆಕೆಗೂ ಜೀವ ಇದೆ. ಆದರೆ ಇಲ್ಲಿ ಆಕೆಯ ವೆಚ್ಚವನ್ನು ತನಗೆ ಭರಿಸುವುದಕ್ಕೆ ಆಗುತ್ತಿಲ್ಲ, ಹೀಗಾಗಿ ಆಕೆಯನ್ನೇ ಬಾಡಿಗೆಗೆ ನೀಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳುತ್ತಿದ್ದಾನೆ. ಕೆಲವು ಕಡೆಗಳಲ್ಲಿ ಹೆಂಡತಿಯನ್ನು ಬದಲಾಯಿಸಿಕೊಳ್ಳುವ ಟ್ರೆಂಡ್‌ಗಳು ಇರುವುದನ್ನು ನೀವು ಕೇಳಿರಬಹುದು. ಹಲವು ಮಹಾನಗರಿಗಳಲ್ಲಿ ಕೆಲವು ಹೈಕ್ಲಾಸ್‌ಗಳ ಜನರು ಲೈಂಗಿಕತೆಯಲ್ಲಿ ಹೊಸದನ್ನು ಹುಡುಕಲು ಬಯಸುವ ಜನರು ಈ ಹೆಂಡತಿಯನ್ನು ಬದಲಾಯಿಸಿಕೊಳ್ಳುವುದನ್ನು ಮಾಡುತ್ತಾರೆ. ಆದರೆ ಇದು ಭಾರತದಲ್ಲಿ ಸಹಜವಲ್ಲ.

ಹೆಂಡತಿಗೆ ವಾಸ್ತವದಲ್ಲಿ ಗಂಡ ಮರ್ಯಾದೆ ಕೊಡದೇ ಇದ್ದರೂ ಕೂಡ ಆಕೆಯನ್ನು ವಸ್ತುವಿನಂತೆ ನೋಡುವಂತಿಲ್ಲ, ಹೆಂಡತಿಯಾಗುವುದೇ ಜನಮು ಜನಮಗಳ ಅನುಬಂಧ ಎಂಬ ನಂಬಿಕೆ ಇದೆ. ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕರಲ್ಲೂ ಜೊತೆ ಜೊತೆಯಾಗಿ ಹೆಜ್ಜೆ ಇಡುತ್ತಾ ಸಾಗೋಣ ಎಂದು ಸಪ್ತಪದಿ ತುಳಿಯುವಾಗಲೇ ವಧುವರರು ಪರಸ್ಪರ ಪ್ರತಿಜ್ಞೆ ಮಾಡುತ್ತಾರೆ. ಆದರೆ ಇಲ್ಲಿ ಈತ ಹೆಂಡತಿಯನ್ನು ಬಾಡಿಗೆಗೆ ಇಟ್ಟಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕನ್ನಡ್ ಗೊತ್ತಿಲ್ಲ ಅನ್ನೋರ್ ಮಧ್ಯೆ ಮಾತನಾಡುವುದಲ್ಲದೇ ಕನ್ನಡ ಓದಲು ಬರೆಯಲು ಕಲಿತ ಮೇಘಾಲಯದ ಹುಡುಗ

ಈತ ಗಂಡನಲ್ಲ ಪಿಂಪ್ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಫೋಟೋ ಕಳುಹಿಸಿ ಡೀಲ್ ಕುದಿರಿಸೋಣ ಎಂದಿದ್ದಾರೆ. ಇದೆಂಥಾ ಸಂಸ್ಕೃತಿ ಸೆರಗಿನಿಂದ ಮುಖ ಮುಚ್ಚಿ ರಕ್ಷಣೆ ಮಾಡ್ಕೋಬೇಕು ಅಂತಾರೆ ಆದರೆ ಬಾಡಿಗೆಗೆ ನೀಡ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಘೋರ ಕಲಿಯುಗ ಏನು ಬೇಕಾದರೂ ಆಗಬಹುದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅವನು ಬಹುಶಃ ಅವನನ್ನು ಬಾಡಿಗೆಗೆ ನೀಡುತ್ತಾನೆ. ಇಂತಹ ಸಂದರ್ಭದಲ್ಲಿ ಹೆಂಡ್ತಿ ಆತನನ್ನು ತೊರೆದು ಹೋಗಬೇಕು ಅಥವಾ ಆತನನನ್ನೆ ಮನೆಯಿಂದ ಹೊರಗೆ ಹಾಕಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: ಗುಂಡೇಟು ತಿಂದರೂ ಉಗ್ರರನ್ನು ಬಿಡದ ನಾಲ್ಕು ಕಾಲಿನ ಸೇನಾ ಯೋಧ ಟೈಸನ್

View post on Instagram