ಮಂಟಪದಲ್ಲೇ ವರ ಮಾಡಿರೋ ಕೆಲಸಕ್ಕೆ ನಾಚಿ ನೀರಾದ್ಲು ವಧು, ಇಷ್ಟಕ್ಕೂ ಆತ ಮಾಡಿದ್ದೇನು ?
ಮದುವೆ ಅನ್ನೋದು ಒಂದು ಪವಿತ್ರವಾದ ಬಂಧನ. ದಾಂಪತ್ಯ ಅನ್ನೋ ಹೆಸರಲ್ಲಿ ಇಬ್ಬರು ಒಂದಾಗುತ್ತಾರೆ. ಹೀಗಾಗಿಯೇ ಈ ದಿನ ಸ್ಪೆಷಲ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ದಿನವನ್ನು ಮೆಮೊರೆಬಲ್ ಆಗಿಸಲು ಪ್ರಯತ್ನಿಸುತ್ತಾರೆ. ಆದ್ರೆ ಇಲ್ಲೊಬ್ಬ ವರ ದಿನವನ್ನು ಸ್ಪೆಷಲ್ ಆಗಿಸೋಕೆ ಅದೇನ್ ಮಾಡಿದ್ದಾನೆ ನೋಡಿ..
ಮದುವೆ (Wedding) ಅನ್ನೋದು ಎಲ್ಲರ ಪಾಲಿಗೆ ಸ್ಪೆಷಲ್ ದಿನ. ಇನ್ನೊಬ್ಬ ವ್ಯಕ್ತಿಯೊಂದಿಗೆ ಖುಷಿ-ದುಃಖ ಎರಡರಲ್ಲೂ, ಜೀವನದುದ್ದಕ್ಕೂ ಜೊತೆಯಾಗಿ ಸಾಗುವ ವಾಗ್ದಾನ ಮಾಡುವುದೇ ದಾಂಪತ್ಯ. ಕೆಲವೊಬ್ಬರು ಪ್ರೀತಿಸಿ ಮದುವೆಯಾದರೆ, ಇನ್ನು ಕೆಲವರು ಆರೇಂಜ್ಡ್ ಮ್ಯಾರೇಜ್ ಆಗುತ್ತಾರೆ. ಆದರೆ ಯಾವ ರೀತಿ ಮದುವೆಯಾದರೂ ಈ ದಿನ ಎಲ್ಲರ ಪಾಲಿಗೆ ಸ್ಪೆಷಲ್ ಆಗಿರುತ್ತದೆ. ಹೀಗಾಗಿಯೇ ಈ ದಿನವನ್ನು ಮೆಮೊರೆಬಲ್‌ಗೊಳಿಸಲು ಎಲ್ಲಾ ಜೋಡಿ ಪ್ರಯತ್ನಿಸುತ್ತಾರೆ. ಸ್ಪೆಷಲ್ ವೀಡಿಯೋ ತಯಾರಿಸಿ ಪ್ಲೇ ಮಾಡುವುದು, ಡ್ಯಾನ್ಸ್ ಮಾಡುವುದು, ಕೇಕ್ ಕಟ್ಟಿಂಗ್, ಉಡುಗೊರೆಗಳನ್ನು ಕೊಡುವುದು ಮೊದಲಾದ ಕೆಲಸ ಮಾಡುವ ಮೂಲಕ ದಿನವನ್ನು ಸ್ಪೆಷಲ್ ಆಗಿಸುತ್ತಾರೆ. ಆದ್ರೆ ಇಲ್ಲೊಬ್ಬ ವರ, ಇದೆಲ್ಲಕ್ಕಿಂತ ವಿಭಿನ್ನವಾಗಿ ಇನ್ನೇನೋ ಮಾಡಿ ವಧು (Bride) ಹುಬ್ಬೇರುವಂತೆ ಮಾಡಿದ್ದಾನೆ. ಅಷ್ಟಕ್ಕೂ ಆತ ಮಾಡಿರೋದೇನು ಗೊತ್ತಾ ?
ಮದುವೆಯ ದಿನ ವಧುವರರು ಎಲ್ಲಾ ಸಂಭ್ರಮಗಳಾಚೆಯೂ ಏನಾದರೂ ಒಂದು ಅಚ್ಚರಿಯನ್ನು ಎದುರು ನೋಡುತ್ತಿರುತ್ತಾರೆ. ಮದುವೆಯಲ್ಲಿ ಪ್ರೀತಿಪಾತ್ರರಿಂದ, ವಿಶೇಷವಾಗಿ ನಿಮ್ಮ ಪತಿಯಿಂದ ಉಡುಗೊರೆ (Gift)ಗಳನ್ನು ಪಡೆಯುವುದು ವಿಶೇಷವಾಗಿರುತ್ತದೆ. ಮದುವೆಯ ಋತುವಿನಲ್ಲಿ, ವಧು ಮತ್ತು ವರ (Bride groom)ರಿಬ್ಬರೂ ಅನಿರೀಕ್ಷಿತವಾಗಿ ಡ್ಯಾನ್ಸ್ ಮಾಡುವ ಮೂಲಕ ಮತ್ತು ಪರಸ್ಪರ ಉಡುಗೊರೆಗಳನ್ನು ನೀಡುವ ಮೂಲಕ ಆಶ್ಚರ್ಯಗೊಳಿಸುತ್ತಾರೆ. ಅದುವೇ ಮದುವೆಯ ಹೈಲೈಟ್ ಆಗುತ್ತದೆ. ಹಾಗೆಯೇ ಉತ್ತರಭಾರತದಲ್ಲೊಬ್ಬ ವರ, ವಧುವಿಗಾಗಿ ಮಾಡಿರೋ ಕೆಲಸ ಎಲ್ಲೆಡೆ ವೈರಲ್ ಆಗ್ತಿದೆ.
Arranged Marriage ಆದ್ರೇನು, ದಾಂಪತ್ಯದಲ್ಲಿ ಪ್ರೀತಿ ಉಕ್ಕಿ ಹರಿಯಲಿ!
ಕ್ಯಾನ್ವಾಸ್‌ನಲ್ಲಿ ವಧುವಿನ ಚಿತ್ರ ಬಿಡಿಸಿ ಅಚ್ಚರಿ ಮೂಡಿಸಿದ ವರ
ಭಾರತೀಯ ವರನೊಬ್ಬ ತನ್ನ ಕಲಾತ್ಮಕ ಪ್ರತಿಭೆಯನ್ನು ಬಳಸಿ ತನ್ನ ವಧುವಿಗೆ ಉಡುಗೊರೆಯಾಗಿ ನೀಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದರಲ್ಲಿ ವರ ಲೈವ್ ಆಗಿ ವಧುವಿನ ಸುಂದರವಾದ ಚಿತ್ರವನ್ನು ಬಿಡಿಸುತ್ತಾನೆ. ಚಿಕ್ಕ ಕ್ಲಿಪ್‌ನಲ್ಲಿ, ವಧುವಿನ ಪತಿ ವರುಣ್, ಅವಳನ್ನು ಕ್ಯಾನ್ವಾಸ್‌ನಲ್ಲಿ ತಲೆಕೆಳಗಾದ ಚಿತ್ರದಲ್ಲಿ ಚಿತ್ರಿಸಿದ್ದಾರೆ. ನಂತರ ಅದನ್ನು ತಿರುಗಿಸಿ ನಿಜವಾದ ಕಲಾಕೃತಿಯನ್ನು ಬಹಿರಂಗಪಡಿಸುತ್ತಾರೆ. ವಧು ಅಚ್ಚರಿ, ಖುಷಿಯಿಂದ (Happy) ನಗುವುದನ್ನು ನೋಡಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಫುಲ್ ವೈರಲ್ ಆಗಿದೆ.
ವರುಣ್ ಜರ್ಸಾನಿಯಾ ಎಂಬ ಬಳಕೆದಾರರು ಈ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. 'ವರನು ತನ್ನ ವಧುವಿಗೆ ನೃತ್ಯ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಆದರೆ ಇದು ಅದೆಲ್ಲಕ್ಕಿಂತಲೂ ವಿಭಿನ್ನವಾಗಿದೆ' ಎಂದು ಈ ವೈರಲ್ ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಡಿಸೆಂಬರ್ 17 ರಂದು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ, ವೀಡಿಯೊ ಸುಮಾರು 211,755 ಲೈಕ್‌ಗಳನ್ನು ಪಡೆದುಕೊಂಡಿದೆ. ಹಲವಾರು ಮಂದಿ ವೀಡಿಯೋವನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
ಹೀಗೂ ಮಾಡ್ತಾರಾ..ಮದುವೆಗೆ ಒತ್ತಾಯಿಸಿದ್ದಕ್ಕೆ ದೇವರನ್ನೇ ವರಿಸಿದ ಯುವತಿ !
'ಮದುವೆಯ ದಿನ ತುಂಬಾ ಉತ್ತಮವಾದ ಕೆಲಸ' ಮಾಡಿದ್ದೀರಿ ಎಂದು ಒಬ್ಬ ಬಳಕೆದಾರ ಹೇಳಿದರೆ, ಇನ್ನೊಬ್ಬರು 'ಪ್ರತಿಭಾವಂತ ಪತಿ' ಎಂದಿದ್ದಾರೆ. ಮತ್ತೊಬ್ಬರು 'ಇದು ಮದುವೆ ಮನೆಯಲ್ಲಿ ನೀಡಬಹುದಾದ ನಿಜವಾದ ಸರ್‌ಪ್ರೈಸ್ ಆಗಿದೆ' ಎಂದು ಬಣ್ಣಿಸಿದ್ದಾರೆ. ಇನ್ನಷ್ಟು ಮಂದಿ ವಧುವನ್ನು ಲಕ್ಕಿಯೆಸ್ಟ್ ಗರ್ಲ್ ಎಂದು ಹೊಗಳಿದ್ದಾರೆ.
ಮದುವೆಯ ದಿನ ವಧುವರರು ಎಲ್ಲಾ ಸಂಭ್ರಮಗಳಾಚೆಯೂ ಏನಾದರೂ ಒಂದು ಅಚ್ಚರಿಯನ್ನು ಎದುರು ನೋಡುತ್ತಿರುತ್ತಾರೆ. ವೈರಲ್ ಆಗಿರೋ ವೀಡಿಯೋ ಇಲ್ಲಿದೆ ನೋಡಿ.