Relationship Tips: ಈ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡ್ತಾಳೆ ಪತ್ನಿ
Relationship Tips: ಪತಿ –ಪತ್ನಿ ಸಂಬಂಧ ಸೂಕ್ಷ್ಮವಾದದ್ದು. ಸ್ವಲ್ಪ ಎಡವಿದ್ರೂ ಆಪತ್ತು ನಿಶ್ಚಿತ. ತಾಳ್ಮೆಯಿರುವ, ಹೊಂದಿಕೊಂಡು ಬಾಳುವ ಕೆಲ ಮಹಿಳೆಯರು ಕೂಡ ವಿಚ್ಛೇದನದಂತಹ ನಿರ್ಧಾರಕ್ಕೆ ಬರ್ತಾರೆ. ಅದಕ್ಕೆ ಅನೇಕ ಕಾರಣಗಳಿವೆ.
ಸಪ್ತಪದಿ ತುಳಿದು ಮದುವೆ (Marriage) ಯಾದ್ಮೇಲೆ ಇಬ್ಬರ ಜವಾಬ್ದಾರಿ (Responsibility) ಹೆಚ್ಚಾಗುತ್ತದೆ. ಮಕ್ಕಳಾದ್ಮೇಲೆ ಜವಾಬ್ದಾರಿ ದುಪ್ಪಟ್ಟಾಗುತ್ತದೆ. ಪತಿ (Husband) – ಪತ್ನಿ (Wife) ಇಬ್ಬರೂ ಇದನ್ನು ಹಂಚಿಕೊಂಡು ಒಟ್ಟಿಗೆ ಹೆಜ್ಜೆಯಿಡಬೇಕು. ಆದ್ರೆ ಅನೇಕ ಬಾರಿ, ಎಲ್ಲ ಜವಾಬ್ದಾರಿಯನ್ನು ಹೊರುವುದು ಪತ್ನಿಯಾದವಳ ಕರ್ತವ್ಯವೆಂದು ಪತಿ ಭಾವಿಸ್ತಾನೆ. ಆಕೆಗೆ ಎಲ್ಲ ಹೊಣೆ ನೀಡಿ ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ತಾರೆ. ಪತ್ನಿಯಾದವಳ ಸ್ವಾತಂತ್ರ್ಯ (Freedom) ವನ್ನು ಸಂಪೂರ್ಣವಾಗಿ ಕಸಿದುಕೊಳ್ಳುವ ವ್ಯಕ್ತಿ, ಆಕೆಯನ್ನು ಕೆಲಸದಾಳಿನ ರೀತಿಯಲ್ಲಿ ನೋಡುವುದಿದೆ. ತನ್ನೆಲ್ಲ ಆಸೆ,ಆಕಾಂಕ್ಷೆಗಳನ್ನು ಬದಿಗೊತ್ತಿ ಜೀವನ (Life) ನಡೆಸುವ ಪತ್ನಿ ಒಂದು ಹಂತದಲ್ಲಿ ಸ್ಫೋಟಗೊಳ್ತಾಳೆ. ಪತಿಗೆ ವಿಚ್ಛೇದನ (Divorce) ನೀಡುವ ನಿರ್ಧಾರಕ್ಕೆ ಬರ್ತಾಳೆ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ವಿಚ್ಛೇದನದ ನಿರ್ಧಾರವನ್ನು ತೆಗೆದುಕೊಳ್ಳುವುದು ಯಾವುದೇ ಹೆಂಡತಿಗೆ ಸುಲಭವಲ್ಲ. ಆದರೆ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಅವಳನ್ನು ಒತ್ತಾಯಿಸುವ ಕೆಲವು ಕಾರಣಗಳಿವೆ. ಮಹಿಳೆ ವಿಚ್ಛೇದನ ಪಡೆಯಲು ಮುಖ್ಯವಾದ ಕಾರಣಗಳೇನು ಎಂಬುದನ್ನು ಇಂದು ಹೇಳ್ತೇವೆ.
ಮಹಿಳೆಯ ವಿಚ್ಛೇದನ ನಿರ್ಧಾರಕ್ಕೆ ಇವು ಕಾರಣ :
ದಾಂಪತ್ಯ ದ್ರೋಹ (Infidelity) : ಸಂಬಂಧ ಎಷ್ಟೇ ಗಟ್ಟಿಯಾಗಿದ್ದರೂ ಮೋಸ (Cheating) ಸಂಬಂಧವನ್ನು ಹಾಳು ಮಾಡುತ್ತದೆ. ಸಂಗಾತಿಯ ಮೋಸವನ್ನು ಎಂದೂ ಪತ್ನಿ ಸಹಿಸಲಾರಳು. ವಿವಾಹೇತರ ಸಂಬಂಧಗಳು (Extramarital Affairs) ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತವೆ. ಮದುವೆಯ ನಂತರವೂ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಈ ಕಾರಣದಿಂದಾಗಿ ಅವರ ಪ್ರಸ್ತುತ ಸಂಬಂಧವು ಸಂಪೂರ್ಣವಾಗಿ ಕೊನೆಯಾಗುತ್ತದೆ. ಯಾವುದೇ ಹೆಂಡತಿ ದಾಂಪತ್ಯ ದ್ರೋಹವನ್ನು ಸಹಿಸುವುದಿಲ್ಲ. ಇದೇ ಕಾರಣಕ್ಕೆ ಪತಿಯಿಂದ ದೂರವಾಗಲು ಬಯಸ್ತಾಳೆ. ವಿಚ್ಛೇದನ ಪಡೆಯುತ್ತಾಳೆ.
ಇನ್ಮುಂದೆ ಪರಸ್ಪರ ಆರೋಪಗಳಿಲ್ಲದೆಯೂ ಸಿಗುತ್ತೆ ವಿಚ್ಛೇದನ
ಸ್ವಾಭಿಮಾನಕ್ಕೆ (Self Respect) ಧಕ್ಕೆ : ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು. ಇಬ್ಬರಿಗೂ ಒಂದೇ ರೀತಿಯಲ್ಲಿ ಗೌರವ ಸಿಗಬೇಕು. ಆದ್ರೆ ಅನೇಕ ಗಂಡಸರು ಪುರುಷನೆಂದ್ರೆ ಶ್ರೇಷ್ಠ ಎಂಬ ಭ್ರಮೆಯಲ್ಲಿರುತ್ತಾರೆ. ಪತ್ನಿಯನ್ನು ಗುಲಾಮಳಂತೆ ನೋಡ್ತಾರೆ. ಇದು ಆಕೆಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ದಾಂಪತ್ಯದಲ್ಲಿ ಪದೇ ಪದೇ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದನ್ನು ಮಹಿಳೆ ಸಹಿಸಲಾರಳು. ಪತಿ ಮೇಲಿರುವ ಗೌರವವನ್ನು ಕಳೆದುಕೊಳ್ತಾಳೆ. ಅನೇಕ ಪ್ರಯತ್ನದ ನಂತ್ರವೂ ಪರಿಸ್ಥಿತಿ ಸುಧಾರಿಸಿಲ್ಲವೆಂದಾದ್ರೆ ಕೊನೆಯದಾಗಿ ವಿಚ್ಛೇದನದ ದಾರಿ ಹಿಡಿಯುತ್ತಾಳೆ.
ಕನಸಿನ ಮನೆಗೆ ಬೀಗ : ಮಹಿಳೆ, ಪುರುಷನ ಸಮಾನವಾಗಿ ದುಡಿಯುತ್ತಿದ್ದಾಳೆ. ಮದುವೆ ನಂತ್ರವೂ ವೃತ್ತಿ ಬದುಕನ್ನು ಮುಂದುವರೆಸುವ ಆಸೆಯನ್ನು ಮಹಿಳೆ ಹೊಂದಿರುತ್ತಾಳೆ. ಆದ್ರೆ ಹೆಂಡತಿಯಾದವಳು ಮನೆ ಕೆಲಸ ಮಾಡಬೇಕು ಎಂಬ ಸ್ವಾರ್ಥರ ಮಧ್ಯೆ ಆಕೆ ಕನಸು ನುಚ್ಚು ನೂರಾಗುತ್ತದೆ. ಕೆಲಸದ ಜೊತೆಗೆ ಮನೆಯನ್ನು ನಿಭಾಯಿಸುವ ಕೌಶಲವಿದ್ದರೂ, ವೃತ್ತಿಜೀವನದಲ್ಲಿ ರಾಜಿ ಮಾಡಿಕೊಳ್ಳುವುದು ಆಕೆಗೆ ಕಷ್ಟವಾಗುತ್ತದೆ. ಕಣ್ಣೆದುರಿನಲ್ಲೇ ತನ್ನ ಆಸೆಗಳು ಕಮರಿ ಹೋಗುವುದನ್ನು ಆಕೆ ನೋಡಲಾರಳು. ತನ್ನ ಗುರಿ ತಲುಪಲು ಆಕೆ ಕೊನೆಯದಾಗಿ ವಿಚ್ಛೇದನದ ದಾರಿ ಹಿಡಿಯುತ್ತಾಳೆ. ಆಕೆಯ ಕನಸಿಗೂ ನೀರೆರೆದು, ಆಕೆ ಜೊತೆ ನಿಂತು ಬೆಂಬಲ ನೀಡಿದ್ರೆ ದಾಂಪತ್ಯ ಸಿಹಿಯಾಗಿರುತ್ತದೆ.
ಗಂಡನಿಂದ ಬೇರೆಯಾಗಿ ಮಗನನ್ನೇ ಮದುವೆಯಾದ Social Media ಇನ್‌ಫ್ಲುಯೆನ್ಸರ್
ಮಾನಸಿಕವಾಗಿ ನಿಂದನೆ : ಮದುವೆ ನಂತ್ರ ಬೇಡವೆಂದ್ರೂ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಒಂದೇ ಬಾರಿ ಎಲ್ಲವನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಅದನ್ನು ತಿಳಿಯದೆ ಹೆಂಡತಿಯ ಮೇಲೆ ಮನೆಯ ಕೆಲಸದ ಭಾರ ಹಾಕಿದಾಗ ಇದು ಅವಳನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸುತ್ತದೆ. ಮನೆಯ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳುವ ಅಗತ್ಯವಿದೆ. ಇದರಿಂದ ಅವಳ ಹೊರೆ ಕಡಿಮೆಯಾಗಬಹುದು. ಆದರೆ ಮನೆಕೆಲಸ ಮಾಡುವುದನ್ನು ಸಣ್ಣ ಕೆಲಸವೆಂದು ಪರಿಗಣಿಸುವ ಗಂಡಸರು ಪತ್ನಿಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಾರೆ. ಇದರ ಫಲಿತಾಂಶ ವಿಚ್ಛೇದನವಾಗಿರುತ್ತದೆ ಎಂಬುದು ನೆನಪಿರಲಿ.