Extramarital Affair: ಕೆಲಸದಾಕೆ ಮೇಲೆ ಹೆಚ್ಚಾಯ್ತು ಪ್ರೀತಿ, ಕದ್ದುಮುಚ್ಚಿ ಫೋಟೋ ಕ್ಲಿಕ್ಕಿಸಿದ ವ್ಯಕ್ತಿ
Extramarita Affair News: ಬುದ್ದಿ ನಮ್ಮ ಹಿಡಿತದಲ್ಲಿರಬೇಕು. ಆಕರ್ಷಣೆಗೆ ಮನಸೋತು ಜೀವನ ಹಾಳು ಮಾಡಿಕೊಳ್ಳಬಾರದು. ಮುದ್ದಾದ ಮಡದಿ ಇದ್ದರೂ ಪ್ರೀತಿಸದ ವ್ಯಕ್ತಿ ಹಿಂದೆ ಬಿದ್ದು ಮನಸ್ಸು,ಸಂಬಂಧ ಎರಡನ್ನೂ ಹಾಳು ಮಾಡಿಕೊಳ್ಳೋದ್ರಲ್ಲಿ ಏನು ಅರ್ಥವಿದೆ ಹೇಳಿ?
ಪ್ರತಿಯೊಬ್ಬ ಸಂಬಂಧವು ಪ್ರೀತಿ (Love ) - ವಾತ್ಸಲ್ಯ ಮತ್ತು ಅನ್ಯೋನ್ಯತೆಯಿಂದ ಪ್ರಾರಂಭವಾಗುತ್ತದೆ. ಇಬ್ಬರ ಮಧ್ಯೆ ಸಮಾನವಾದ ಪ್ರೀತಿ ಇದ್ದಾಗ ಮಾತ್ರ ಸಂಬಂಧ (Relationship) ಮುಂದುವರೆಯಲು ಸಾಧ್ಯ. ಒಂದು ಕಡೆ ಅತಿಯಾದ ಪ್ರೀತಿ, ಆಕರ್ಷಣೆ, ಮೋಹವಿದ್ದು ಇನ್ನೊಂದು ಕಡೆ ಶೂನ್ಯ (Zero)ವೆಂದಾಗ ಅದನ್ನು ಮುಂದುವರೆಸುವುದ್ರಲ್ಲಿ ಅರ್ಥವಿಲ್ಲ. ವಿವಾಹಿತ (Married) ಜೋಡಿ ಮಧ್ಯೆ ಈ ಸಮಸ್ಯೆ ಬಂದಾಗ ಅದನ್ನು ಬಗೆಹರಿಸುವ ಪ್ರಯತ್ನ ನಡೆಸಬಹುದು. ಆದ್ರೆ ವಿವಾಹೇತರ ಸಂಬಂಧದಲ್ಲಿ ಈ ಪ್ರಯತ್ನಕ್ಕೆ ಕೈ ಹಾಕುವುದೇ ತಪ್ಪು. ಪ್ರೀತಿಯಿಲ್ಲದವರ ಹಿಂದೆ ಹೋಗಿ ಎರಡು ದೋಣಿ ಮೇಲೆ ಕಾಲಿಟ್ಟು ನದಿಗೆ ಬೀಳುವ ಬದಲು ಒಂದು ದೋಣಿಯಲ್ಲಿ ಪ್ರಯಾಣ ಬೆಳೆಸುವುದು ಉಳಿತು. ಇಷ್ಟೆಲ್ಲ ಹೇಳಿದ್ದೇಕೆ ಅಂದ್ರೆ ವಿವಾಹಿತ ವ್ಯಕ್ತಿಯೊಬ್ಬನಿಗೆ ಕೆಲಸದಾಕೆ ಮೇಲೆ ಪ್ರೀತಿ ಹುಟ್ಟಿದೆಯಂತೆ. ಈ ವ್ಯಕ್ತಿಯನ್ನು ಆಕೆ ಕಣ್ಣೆತ್ತಿಯೂ ನೋಡೋದಿಲ್ಲ. ಈ ಎಲ್ಲದರ ಮಧ್ಯೆ ಪತ್ನಿ ಮೇಲೂ ಪ್ರೀತಿ ಇದೆ ಎನ್ನುತ್ತಿದ್ದಾನೆ ಆತ. ಅವನ ಕಥೆ ಏನು ಅನ್ನೋದನ್ನು ನಾವಿಂದು ಹೇಳ್ತೇವೆ.
ಕೆಲಸದಾಕೆ ಮೇಲೆ ಪ್ರೀತಿ : ಆತನಿಗೆ 44 ವರ್ಷ. ಮದುವೆಯಾಗಿದೆ. ಒಂದು ಮುದ್ದಾದ ಮಗನಿದ್ದಾನೆ. ಪತ್ನಿಯನ್ನು ಪ್ರೀತಿ ಮಾಡ್ತೇನೆ ಎಂದು ಮೊದಲೇ ಹೇಳಿಕೊಂಡಿರುವ ವ್ಯಕ್ತಿಗೆ ಕೆಲಸದಾಕೆ ಬಿಡಲು ಮನಸ್ಸಿಲ್ಲ. ಕೆಲಸದಾಕೆ ವಯಸ್ಸು 50 ವರ್ಷ. ನಾಲ್ಕೈದು ವರ್ಷಗಳಿಂದ ಈತನ ಮನೆಯಲ್ಲಿಯೇ ಕೆಲಸದಾಕೆ ವಾಸವಂತೆ. ಪತ್ನಿ ಮನೆಯಿಂದ ಹೊರಗೆ ಹೋದಾಗ, ಕೆಲಸದಾಕೆ ಹತ್ತಿರ ಹೋಗುವ ಪ್ರಯತ್ನವನ್ನೂ ಮಾಡಿದ್ದಾನೆ. ಆದ್ರೆ ಆಕೆ ಇದ್ರಲ್ಲಿ ಉತ್ಸಾಹ ತೋರಿಸಿಲ್ಲವಂತೆ. ಆಕೆ ಜೊತೆ ಮಾತನಾಡುವ ಪ್ರಯತ್ನವನ್ನೂ ಮಾಡಿದ್ದಾನಂತೆ. ಆದ್ರೆ ಈತನ ಮೇಲೆ ಕೆಲಸದಾಕೆಗೆ ಎಳ್ಳಷ್ಟು ಆಸಕ್ತಿಯಿಲ್ವಂತೆ. ಆಕೆ ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ಕದ್ದುಮುಚ್ಚಿ ಆಕೆ ಫೋಟೋ ತೆಗೆದುಕೊಂಡಿದ್ದೇನೆ. ನಾನು ಮಾಡ್ತಿರೋದು ತಪ್ಪಾ ಸ್ವಾಮಿ ಎನ್ನುತ್ತಿದ್ದಾನೆ ಈ ವ್ಯಕ್ತಿ. ಮುಂದೇನು ಮಾಡ್ಬೇಕು ಹೇಳಿ ಅಂತಾ ಸಲಹೆ ಕೂಡ ಕೇಳಿದ್ದಾನೆ.
ತಜ್ಞರ ಸಲಹೆ : ಆಕೆಗೆ ನಿಮ್ಮ ಮೇಲೆ ಪ್ರೀತಿ ಇಲ್ಲವೆಂದ್ಮೇಲೆ ಪ್ರಯತ್ನವೇಕೆ ಎಂದು ತಜ್ಞರು ಕೇಳಿದ್ದಾರೆ. ಆಕೆಯಿಂದ ದೂರವಿರುವುದು ಎಲ್ಲ ರೀತಿಯಲ್ಲೂ ಒಳ್ಳೆಯದು. ನಿಮ್ಮ ಭಾವನೆಗಳನ್ನು ತಡೆದಿಡುವುದು ಹಾಗೆ ಅದನ್ನು ಮೆಟ್ಟಿ ನಿಲ್ಲುವುದು ಎಷ್ಟು ಕಷ್ಟವೆಂಬುದು ನಮಗೆ ಗೊತ್ತಾಗುತ್ತದೆ. ಎಷ್ಟೇ ಕಷ್ಟವಾದ್ರೂ ಮೊದಲು ಆಕೆಯನ್ನು ದೂರವಿಡಿ ಎನ್ನುತ್ತಾರೆ ತಜ್ಞರು.
Life Story : ಪತ್ನಿ ತವರಿಗೆ ಹೋದಾಗ ಮಗಳ ಜೊತೆ ಸಂಬಂಧ..! ಈಗ ಶುರುವಾಗಿದೆ ಸಂಕಷ್ಟ
ನಿಮ್ಮ ದಾಂಪತ್ಯದ ಬಗ್ಗೆ ಇರಲಿ ಗಮನ : ನೀವು ವಿವಾಹಿತ ವ್ಯಕ್ತಿ. ನಿಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಿಮಗೂ ಒಬ್ಬ ಮಗನಿದ್ದಾನೆ. ಹಾಗಾಗಿ ನಿಮ್ಮ ದಾಂಪತ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ ಎನ್ನುತ್ತಾರೆ ತಜ್ಞರು. ಪತ್ನಿ ಜೊತೆ ಮಧುರ ಕ್ಷಣಗಳನ್ನು ಆನಂದಿಸಿ. ಅಷ್ಟೇ ಅಲ್ಲ ಹೆಂಡತಿಯೊಂದಿಗೆ ಭಾವನಾತ್ಮಕ ಬಂಧ ಬೆಳೆಸಿಕೊಳ್ಳಿ. ಕೆಲಸದಾಕೆ ಮೇಲೆ ಆಸೆ ಮುಂದುವರೆದ್ರೆ ಅಥವಾ ಸಂಬಂಧ ಬೆಳೆದ್ರೆ ಅದು ದಾಂಪತ್ಯ ಹಾಳು ಮಾಡುತ್ತದೆ ಎಂಬುದು ನೆನಪಿರಲಿ ಎಂದು ತಜ್ಞರು ಎಚ್ಚರಿಸಿದ್ದಾರೆ.
Relationship Tips : ಎಲ್ಲರ ಮುಂದೆ ಕಿರುಚಾಡಿ ಅವಮಾನ ಮಾಡ್ತಾಳೆ ನನ್ನ ಹೆಂಡ್ತಿ
ಹೆಂಡತಿಯೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ : ಪತಿ-ಪತ್ನಿ ಪರಸ್ಪರರ ಅಗತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಈ ಅಗತ್ಯಗಳು ದೈಹಿಕ ಮತ್ತು ಭಾವನಾತ್ಮಕ ಎರಡೂ ಆಗಿರಬಹುದು. ಪತ್ನಿ ಜೊತೆ ನಿಮ್ಮ ಸಂಬಂಧ ಗಟ್ಟಿಯಾಗ್ಬೇಕು, ಕೆಲಸದಾಕೆಯನ್ನು ಮರೆಯಬೇಕೆಂದ್ರೆ ನಿಮ್ಮ ಹೆಂಡತಿಯೊಂದಿಗೆ ನೀವು ಗರಿಷ್ಠ ಸಮಯವನ್ನು ಕಳೆಯಬೇಕು. ಕೆಲವೊಂದು ಹೊಸ ಹೊಸ ಪ್ರಯತ್ನ ನಡೆಸಿ. ರೋಮ್ಯಾಂಟಿಕ್ ಚಿತ್ರಗಳನ್ನು ವೀಕ್ಷಿಸಿ. ಅವರ ಜೊತೆ ಪ್ರವಾಸಕ್ಕೆ ಹೋಗಿ ಮನಸ್ಸನ್ನು ಬೇರೆಡೆ ತಿರುಗಿಸಿದಾಗ ಕೆಲಸದಾಕೆ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.