ಪ್ರಶ್ನೆ: ನನಗೆ 28 ವರ್ಷ ವಯಸ್ಸು. ವಿವಾಹಿತೆ. ಮದುವೆಯಾಗಿ ಮೂರು ವರ್ಷವಾಗಿದೆ. ಮಕ್ಕಳ ಪ್ಲಾನ್ ಸದ್ಯಕ್ಕಿಲ್ಲ. ನನ್ನದೊಂದು ವಿಚಿತ್ರ ಸಮಸ್ಯೆ. ಮದುವೆ ಆದಾಗಿಂದಲೂ ಗಂಡ ಜೊತೆಗಿರುವಾಗ ಮೂಡ್ ಬರೋದೇ ಇಲ್ಲ. ಆದರೆ ಒಬ್ಬಳೇ ಇದ್ದಾಗ ತುಂಬ ಮೂಡ್‌ ಬರುತ್ತೆ. ನಮ್ಮ ಮನೆಯಲ್ಲಿ ನಾವಿಬ್ಬರೇ ಇರ್ತೀವಿ. ಇಬ್ಬರೂ ಉದ್ಯೋಗಿಗಳು. ಹಾಗೆಂದು ಮದುವೆಗೂ ಮೊದಲಾಗಲೀ, ಮದುವೆಯ ನಂತರವಾಗಲೀ ಯಾರೊಂದಿಗೂ ಲವ್ ಆಗಲೀ, ರಿಲೇಶನ್ ಶಿಪ್ ಆಗಲಿ ಇರಲಿಲ್ಲ. ಸೆಕ್ಸ್ ಅನುಭವವಾಗಿದ್ದು ಮದುವೆಯ ಬಳಿಕವೇ. ಹಾಗಂತ ನನಗೆ ಹಸ್ತಮೈಥುನ ಮಾಡಿಕೊಳ್ಳಲು ಸಂಕೋಚ. ಆದರೆ ಒಬ್ಬಳೇ ಇದ್ದಾಗ ನಮ್ಮಿಬ್ಬರ ಮಿಲನದ ದೃಶ್ಯಗಳೇ ನೆನಪಾಗಿ ಮೂಡ್ ಬರುತ್ತೆ. ಆದರೆ ಗಂಡ ಹತ್ರ ಬಂದಾಗ ಮೂಡ್ ಬರಲು ಒದ್ದಾಡುತ್ತೀನಿ. ಇದೊಂದು ಸಮಸ್ಯೆಯಾ, ಅಥವಾ ನಾರ್ಮಲ್ ಮನಸ್ಥಿತಿಯಾ, ಇಂಥದ್ದಕ್ಕೆ ಕೌನ್ಸಿಲಿಂಗ್ ಮಾಡಿಸಿಕೊಂಡರೆ ಸರಿಯಾಗುತ್ತಾ? ದಯಮಾಡಿ ತಿಳಿಸಿ. 

#Feelfree: ಹುಡುಗಿಯರನ್ನು ಸಂತೃಪ್ತಿಪಡಿಸಲು ಶಿಶ್ನ ಎಷ್ಟುದ್ದ ಇರಬೇಕು? ...

ಉತ್ತರ: ಇದು ಅಬ್ ನಾರ್ಮಲ್ ಮನಸ್ಥಿತಿ ಅಂತ ಹೇಳಕ್ಕಾಗಲ್ಲ. ನಮ್ಮ ಮನಸ್ಸಿನ ಬೇರೆ ಬೇರೆ ಸ್ಥಿತಿಗಳಲ್ಲಿ ಇದೂ ಒಂದು ಅಷ್ಟೇ. ಎಲ್ಲರಿಗೂ ಸಾಮಾನ್ಯವಾಗಿ ಆಗೋದು ನಿಮಗೆ ಚೂರು ಹೆಚ್ಚಾಗಿದೆ ಅಷ್ಟೇ. ಸಾಮಾನ್ಯವಾಗಿ ಕಲ್ಪನೆಯಲ್ಲಿ ಸಿಗುವ ಸಂತಸ ವಾಸ್ತವದಲ್ಲಿ ಸಿಗೋದಿಲ್ಲ ಎಂಬ ಮಾತಿದೆ. ನಮಗೆ ಬಹಳ ಇಷ್ಟವಾದವರ ಸ್ಪರ್ಶ, ಸಂಗ ನಮಗೆ ಆ ಕ್ಷಣಕ್ಕೆ ಖುಷಿ ಕೊಡುತ್ತದೆ. ಅವರು ಹತ್ತಿರದಲ್ಲಿಲ್ಲದ ಕ್ಷಣ ಅದನ್ನು ನೆನೆಸಿಕೊಂಡರೆ ಇನ್ನಷ್ಟುಹಿತ ಅನಿಸುತ್ತೆ. ಇದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣ. ಅವರು ಜೊತೆಗಿರುವ ಕ್ಷಣಗಳಲ್ಲಿ ಬೇರೆ ಡಿಸ್ಟ್ರಾಕ್ಷನ್ ಗಳಿರಬಹುದು. ಸೆಕ್ಸ್‌ಗಿಂತಲೂ ಅಂದಾಗಬೇಕಿರುವ ಕೆಲಸ ಕಾರ್ಯಗಳು ಮುಖ್ಯ ಎನಿಸಬಹುದು. ಇನ್ನೂ ಹಲವು ಕಾರಣಗಳು ಸಿಗಬಹುದು. ಆದರೆ ಇದನ್ನು ಹೀಗೇ ಮುಂದುವರಿಸೋದರಿಂದ ಖಂಡಿತಾ ಸಮಸ್ಯೆ ಆಗುತ್ತೆ. ನಿಮ್ಮ ಪತಿಯ ಜೊತೆಗೆ ಹೆಚ್ಚೆಚ್ಚು ಸಮಯ ಕಳೆಯಿರಿ. ಅವರ ಜೊತೆಗೆ ಭಾವನಾತ್ಮಕ ಬಂಧ ಇನ್ನಷ್ಟು ಗಟ್ಟಿಯಾಗುವ ಹಾಗೆ ನೋಡಿಕೊಳ್ಳಿ. ಸಾಧ್ಯವಾದಷ್ಟೂ ಇಬ್ಬರೂ ಜೊತೆಯಾಗಿ ಔಟಿಂಗ್ ಹೋಗಿ. ಜೊತೆಯಾಗಿ ರೊಮ್ಯಾಂಟಿಕ್ ಸಿನಿಮಾ ನೋಡಿ. ಇವೆಲ್ಲ ನಿಮ್ಮ ಸ್ಥಿತಿಯನ್ನು ಸುಧಾರಿಸಬಹುದು. ಇದ್ಯಾವುದರಿಂದಲೂ ಪರಿಹಾರ ಸಿಗುತ್ತಿಲ್ಲ ಅಂತಾದರೆ ಸೆಕ್ಸಾಲಜಿಸ್ಟ್ ಭೇಟಿ ಮಾಡೋದು ಉತ್ತಮ. 

Feelfree: ಕಾರ್ ಸೆಕ್ಸ್ ಅಪರಾಧವಾ? ಏನು ಎಚ್ಚರಿಕೆ ತಗೋಬೇಕು? ...

ಪ್ರಶ್ನೆ: ನಲವತ್ತೈದು ವರ್ಷದ ಗಂಡಸು. ಮದುವೆಯಾಗಿ ಹದಿನೆಂಟು ವರ್ಷವಾಗಿದೆ. ಇತ್ತೀಚೆಗೆ ಹಸ್ತಮೈಥುನ ಚಟಕ್ಕೆ ಬಿದ್ದಿದ್ದೇನೆ. ಇದರಿಂದ ಪತ್ನಿಯ ಮೇಲೆ ಆಸಕ್ತಿಯೇ ಹೊರಟುಹೋಗಿದೆ. ಇದು ಹೆಂಡತಿಯ ಗಮನಕ್ಕೂ ಬಂದ ಹಾಗಿದೆ. ಇತ್ತೀಚೆಗೆ ಈ ಕಾರಣಕ್ಕೆ ಆಕೆ ನನ್ನನ್ನು ಅನುಮಾನದಿಂದ ನೋಡುತ್ತಿದ್ದಾಳೆ. ನನಗೆ ಬೇರೆ ಯಾರ ಜೊತೆಗೋ ಸಂಬಂಧವಿದೆ ಎಂಬ ರೀತಿಯ ಮಾತುಗಳನ್ನಾಡಿ ಜಗಳವಾಡುತ್ತಾಳೆ. ಇದರಿಂದ ನಮ್ಮಿಬ್ಬರ ನಡುವೆ ಬಿರುಕು ಮೂಡಿದೆ. ಅವಳ ಬಗ್ಗೆ ಆಸಕ್ತಿ ಮೂಡೋದು ಹೇಗೆ? ಹಸ್ತಮೈಥುನ ಚಟದಿಂದ ಪಾರಾಗುವ ಬಗೆ ತಿಳಿಸುವಿರಾ?

ಉತ್ತರ: ಇದಕ್ಕೆ ನಿಮ್ಮ ಕಲ್ಪನೆಯೂ ಕಾರಣವಾಗಿರಬಹುದು. ಅಥವಾ ಒಂದೇ ಬಗೆಯ ಸೆಕ್ಸ್‌ನಿಂದ ಆಸಕ್ತಿ ಹೋಗಿರಬಹುದು. ಬೇರೆ ಬೇರೆ ಭಂಗಿಗಳನ್ನು ಪ್ರಯತ್ನಿಸಿ. ಸೆಕ್ಸ್‌ ಅನ್ನೋದು ಒಂದು ಯಾಂತ್ರಿಕ ಕ್ರಿಯೆಯಲ್ಲ. ಅದು ಮನಸ್ಸಿಗೂ ಸಂಬಂಧಿಸಿದ್ದು. ಇದರಲ್ಲಿ ಪತ್ನಿ ಜೊತೆಗೆ ದಿನದಲ್ಲಿ ಅಂದಾಜು ಎಷ್ಟು ಸಮಯ ಕಳೆಯುತ್ತೀರಿ ಅನ್ನುವ ವಿವರ ಇಲ್ಲ.  ಪತ್ನಿಯ ಜೊತೆಗೆ ಹೆಚ್ಚೆಚ್ಚು ಸಮಯ ಕಳೆದಾಗ, ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿದಾಗ ಆಕೆಯೂ ಸಕಾರಾತ್ಮಕವಾಗಿ ಸ್ಪಂದಿಸಬಹುದು. ಇದನ್ನು ಸದ್ಯಕ್ಕೆ ಪ್ರಯತ್ನಪೂರ್ವಕವಾಗಿ ಮಾಡಿ. ಆಮೇಲಾಮೇಲೆ ಅದೇ ಸಹಜವಾಗುತ್ತದೆ. ಹಸ್ತಮೈಥುನ ಹೆಚ್ಚಿದರೆ ಅದರಿಂದಲೂ ಸಮಸ್ಯೆಯಾಗುತ್ತದೆ. ಹೀಗಾಗಿ ಹಸ್ತಮೈಥುನದ ಬಯಕೆ ಬಂದಾಗ ಮನಸ್ಸನ್ನು ಡೈವರ್ಟ್ ಮಾಡಲು ಪ್ರಯತ್ನಿಸಿ.

#Feelfree: Oral Sex ಅಪರಾಧವೇ? ಈ ಬಗ್ಗೆ ಒಂದಿಷ್ಟು ಡೌಟ್ಸಿಗಿಲ್ಲಿವೆ ಮಾಹಿತಿ ...