ಪ್ರಶ್ನೆ: ನಾನು ಇಪ್ಪತ್ತಾರು ವರ್ಷದ ವಿವಾಹಿತೆ. ಮದುವೆಯಾಗಿ ಮೂರು ತಿಂಗಳಾಗಿದೆ. ಗಂಡನಿಗೆ ಇಪ್ಪತ್ತೆಂಟು ವರ್ಷ. ಸೆಕ್ಸ್‌ನಲ್ಲಿ ಹೊಸ ಹೊಸ ಆಸನ, ಭಂಗಿಗಳನ್ನೆಲ್ಲ ಎಕ್ಸ್‌ಪ್ಲೋರ್ ಮಾಡುತ್ತಿದ್ದೇವೆ. ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಸಂಭೋಗಿಸಿ ಸಂತೋಷಪಟ್ಟಿದ್ದೇವೆ. ಹೊಸ ಪ್ರಯೋಗಗಳು ನಮಗೆ ಯಾವಾಗಲೂ ಸಂತೋಷ ಕೊಟ್ಟಿವೆ.

ಇತ್ತೀಚೆಗೆ, ನಮ್ಮ ಮನೆಯಲ್ಲೇ, ಪಾರ್ಕಿಂಗ್ ಮಾಡಿದ್ದ ಕಾರ್‌ನಲ್ಲಿ ಸಂಭೋಗಿಸಿದೆವು. ಅದು ನಮಗೆ ತುಂಬಾ ಸಂತೋಷ ನೀಡಿತು. ಇದಾದ ಬಳಿಕ, ಪಬ್ಲಿಕ್ ಸ್ಪೇಸ್‌ನಲ್ಲಿ ಕಾರ್‌ನಲ್ಲಿ ಸೆಕ್ಸ್ ಮಾಡಬಹುದಾ ಎಂಬ ಆಸೆ, ಕುತೂಹಲ ಮೂಡಿದೆ. ಹಾಗೆ ಮಾಡಬಹುದಾ? ಕಾನೂನು ಏನು ಹೇಳುತ್ತದೆ? ಕಾರ್ ಸೆಕ್ಸ್ ನಡೆಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಏನು?

ಉತ್ತರ: ಸಂಭೋಗದಲ್ಲಿ ನಾನಾ ವೈವಿಧ್ಯಗಳನ್ನು ಹುಡುಕುವುದು ತಪ್ಪಲ್ಲ, ಅದು ಅಪೇಕ್ಷಣೀಯ, ನೀವು ಮದುವೆಯಾಗಿ ಮೂರು ತಿಂಗಳಲ್ಲೇ ಇಷ್ಟೆಲ್ಲ ಸ್ವಾರಸ್ಯಕರ ಸಾಹಸ ಮಾಡಿರುವುದು ಕುತೂಹಲಕರ ಹಾಗೂ ಶ್ಲಾಘನೀಯ. ಹೀಗೇ ಮುಂದುವರಿಯಿರಿ. ಯಾವ ತಪ್ಪೂ ಇಲ್ಲ.

ಪಬ್ಲಿಕ್ ಸ್ಪೇಸ್‌ನಲ್ಲಿ ಕಾರ್‌ನಲ್ಲಿ ಸೆಕ್ಸ್ ನಡೆಸುವುದು ಭಾರತೀಯ ಕಾನೂನು ಪ್ರಕಾರ ತಪ್ಪು. ಭಾರತೀಯ ಕಾನೂನಿನಲ್ಲಿ ಇದರ ಉಲ್ಲೇಖವೇನೂ ಇಲ್ಲ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿ ಅಶ್ಲೀಲವಾಗಿ, ಕಾಮಪ್ರಚೋದಕವಾಗಿ ವರ್ತಿಸುವುದು, ಗುಪ್ತಾಂಗಗಳನ್ನು ಪ್ರದರ್ಶಿಸುವುದು ಕಾನೂನುಬಾಹಿರ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಇದು ಬೇಡ.

#Feelfree: Oral Sex ಅಪರಾಧವೇ? ಈ ಬಗ್ಗೆ ಒಂದಿಷ್ಟು ಡೌಟ್ಸಿಗಿಲ್ಲಿವೆ ಮಾಹಿತಿ ...

ಆದರೂ ಇಂಥದೊಂದು ಸಾಹಸ ಮಾಡಲೇಬೇಕು ಎಂಬ ಮನಸ್ಸು ನಿಮಗಿದ್ದರೆ, ರಾತ್ರಿಯ ವೇಳೆಯಲ್ಲಿ ಹಾಗೆ ಮಾಡಬಹುದು. ಸಾರ್ವಜನಿಕರು ಹೆಚ್ಚು ಓಡಾಡದ ಪ್ರದೇಶಗಳನ್ನು ಆರಿಸಿಕೊಳ್ಳಬಹುದು. ಆದರೆ ಅಲ್ಲೂ ಕಳ್ಳಕಾಕರ, ರೌಡಿಗಳ ಅಪಾಯ ಇದ್ದೇ ಇರುತ್ತದೆ. ಇದನ್ನೆಲ್ಲ ಯೋಚಿಸಿ ಮುಂದುವರಿಯರಿ. ಎಲ್ಲ ರೀತಿಯಲ್ಲೂ ಏಕಾಂತಕರವಾದ, ಕಾನೂನಿನ ದೃಷ್ಟಿಯಲ್ಲಿ ಅಪರಾಧವೆನ್ನಿಸದ, ದರೋಡೆಗಾರರಿಲ್ಲದ ಪ್ರದೇಶದಲ್ಲಿ ಈ ಸಾಹಸ ನೀವು ಮಾಡಬಹುದು.

ಹೀಗೆ ಮಾಡುವುದು ಕಾರಿನ ಒಳಗೆ ಸಿಕ್ಕಿಹಾಕಿಕೊಂಡು ಲಾಕ್ ಆಗುವಂಥ ಪ್ರಸಂಗ ತಂದುಕೊಳ್ಳಬೇಡಿ. ಕೆಲವೊಮ್ಮೆ ನಿಲ್ಲಿಸಿದ ಕಾರುಗಳನ್ನು ಎಸಿ ಕೂಡ ಇಲ್ಲದೆ ಬಂದ್ ಮಾಡಿದಾಗ ಉಂಟಾಗುವ ಒಳಗೆ ಉಸಿರುಗಟ್ಟಿ ಪ್ರಾಣ ಬಿಟ್ಟ ಪ್ರಸಂಗಗಳಿವೆ. ಕಾರ್ ಸೆಕ್ಸ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಕ್ಕಿ ಹಾಕಿಕೊಳ್ಳುವುದು ಸುಲಭ. ಯಾಕೆಂದರೆ ಬಿಚ್ಚಿದ ಬಟ್ಟೆಯನ್ನು ಮತ್ತೆ ಧರಿಸಿಕೊಳ್ಳಲು ಕಾರಿನ ಒಳಗೆ ಸಾಧ್ಯವಾಗದು, ಅಷ್ಟೊಂದು ಸ್ಪೇಸ್ ಇರುವುದಿಲ್ಲ. 

ಇದನ್ನೆಲ್ಲ ಯೋಚಿಸಿದರೆ ನೀವು ಮನೆಯ ಕಾರ್ ಪಾರ್ಕಿಂಗ್‌ನಲ್ಲೇ ಸೆಕ್ಸ್ ನಡೆಸುವುದು ಒಳ್ಳೆಯದು. ಅಥವಾ, ಒಳ್ಳೆಯ ಬೆಡ್‌ರೂಮ್, ಅಡುಗೆಮನೆ ಸ್ಲಾಬ್, ಹಾಲ್‌ನ ದೀವಾನಾ, ಟೆರೇಸ್‌ನ ತಂಗಾಳಿ ಇವೆಲ್ಲ ಇರುವಾಗ ಕಾರ್‌ನಲ್ಲಿ ಯಾಕೆ ಕಷ್ಟಪಡಬೇಕು, ಅಲ್ಲವೇ?

#Feelfree: ಪಕ್ಕದ್ಮನೆಯವಳನ್ನು ನೋಡಿದ್ರೆ ಏನೇನೋ ಅನಿಸುತ್ತೆ! ...

ಪ್ರಶ್ನೆ: ನಾನು ಹಾಗೂ ನನ್ನ ಗೆಳೆಯ, ಗೆಳೆಯನ ಅಪಾರ್ಟ್‌ಮೆಂಟ್‌ನಲ್ಲಿ ಆಗಾಗ ಸಂಧಿಸುತ್ತೇವೆ. ಇಬ್ಬರೂ ವಾರಕ್ಕೆರಡು ಬಾರಿಯಾದರೂ ಸೆಕ್ಸ್ ನಡೆಸುವುದುಂಟು. ನಮ್ಮಿಬ್ಬರ ವಯಸ್ಸು ಇಪ್ಪತ್ತು. ಇಬ್ಬರಿಗೂ ಮದುವೆಯಾಗಿಲ್ಲ. ನನ್ನ ಸಮಸ್ಯೆ ಏನೆಂದರೆ, ಸೆಕ್ಸ್‌ನ ಬಳಿಕ ನನಗೆ ತೀವ್ರವಾಗಿ ತಲೆನೋವು ಕಾಡುತ್ತದೆ. ಅರ್ಧ ದಿನವಾದರೂ ಅದು ಇರುತ್ತದೆ. ಅದನ್ನು ನೋಡಿದರೆ ಸೆಕ್ಸೇ ಬೇಡ ಅನ್ನಿಸುತ್ತದೆ. ಆದರೆ ಗೆಳೆಯ ಒತ್ತಾಯಿಸುತ್ತಾನೆ. ಯಾಕಿರಬಹುದು? ಇದರಿಂದ ಮುಕ್ತಿ ಹೇಗೆ?

ಉತ್ತರ: ಇದಕ್ಕೆ ಉತ್ತರಿಸಲು ಬೇಕಾದ ಹಲವು ವಿವರಗಳನ್ನು ನೀವು ಕೊಟ್ಟಿಲ್ಲ. ನೀವು ಮದುವೆಯಾಗಿಲ್ಲ ಎನ್ನುತ್ತೀರಿ. ಹಾಗಿದ್ದರೆ ನೀವು ಸಮಾಜದ ಅಥವಾ ನಿಮ್ಮ ಕುಟುಂಬದವರ ಕಣ್ಣಿನಿಂದ ತಪ್ಪಿಸಿ ಸೇರುತ್ತಿರಬೇಕು. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಒಂದು ಬಗೆಯ ಒತ್ತಡ ನಿಮ್ಮ ಮೇಲೆ ಸೃಷ್ಟಿಯಾಗುತ್ತದೆ. ಅದೇ ನಿಮ್ಮ ತಲೆನೋವಿಗೆ ಕಾರಣ ಆಗಿರಬಹುದು.

ನಿಮಗಿಬ್ಬರಿಗೂ ಉದ್ಯೋಗ ಇದೆಯೇ ಅಥವಾ ನಿರುದ್ಯೋಗಿಗಳೇ ಎಂಬುದನ್ನು ನೀವು ಹೇಳಿಲ್ಲ. ಇಬ್ಬರಿಗೂ ಅಥವಾ ಇಬ್ಬರಲ್ಲಿ ಒಬ್ಬರಿಗೆ ಸರಿಯಾದ ಉದ್ಯೋಗ ಇದ್ದರೆ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ. ಕುಟುಂಬದವರ ಮೇಲೆ ಅವಲಂಬನೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಮದುವೆಯಾಗುವ ಯೋಚನೆ ಇದ್ದರೂ ಒತ್ತಡ ಕಡಿಮೆಯಾಗುತ್ತದೆ.

#Feelfree: ಇಬ್ಬರ ಜೊತೆ ಲೈಂಗಿಕ ಸಂಬಂಧ, ಮಗು ಯಾರದ್ದು? ...

ಹಾಗೇ ನೀವಿಬ್ಬರೂ ಸೇರುವಾಗ ಸುರಕ್ಷಿತ ಸೆಕ್ಸ್ ನಡೆಸುತ್ತೀರಾ, ಅಥವಾ ಗರ್ಭಧಾರಣೆಯ ರಿಸ್ಕ್ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ? ಗರ್ಭಧಾರಣೆಯ ಆತಂಕದಿಂದಲೂ ನಿಮಗೆ ತಲೆನೋವು ಬಂದಿರಬಹುದು. ಇದನ್ನೆಲ್ಲ ಯೋಚಿಸಿ, ಸಮಸ್ಯೆ ಪರಿಹರಿಸಿಕೊಳ್ಳಿ