ಮಗು ತಿರುಗಿ ಹೇಳುವುದನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯುವ ಮೊದಲು, ಅದು ಏಕೆ ಹಾಗೆ ಮಾಡುತ್ತದೆ ಎಂದು ಅರಿಯುವುದು ಅಗತ್ಯ. 

1. ಯಾಕೆ ಯೋಚಿಸಿ

ಸಾಮಾನ್ಯವಾಗಿ ಮಕ್ಕಳ ಕೆಟ್ಟ ಮನಸ್ಥಿತಿ ಹಾಗೂ ತಿರುಗಿ ಹೇಳುವ ಅಭ್ಯಾಸಕ್ಕೆ ಈ ಕಾರಣಗಳಿರುತ್ತವೆ;

- ಅವರ ಬಳಿ ಉಳಿದವರು ಮಾತನಾಡುವ ರೀತಿ ಹಾಗಿರುತ್ತದೆ.
- ಅವರ ಉತ್ಸಾಹಕ್ಕೆ ಪದೇ ಪದೆ ತಣ್ಣೀರೆರಚಲಾಗುತ್ತಿದೆ.

ನಿಮ್ಮ ಮಗುವಿಗೆ ಪ್ರೋಟೀನ್ ಕೊರತೆಯಾಗದಂತೆ ನೋಡಿಕೊಳ್ಳುವುದು ಹೇಗೆ?
- ಅವರಿಗೆ ಅಧಿಕಾರವಿಲ್ಲವೆನಿಸುತ್ತದೆ.
- ಅವರಿಗೆ ನಿಮ್ಮ ಗಮನ ಸೆಳೆವ ಅಗತ್ಯವಿರುತ್ತದೆ.
- ಅವರಿಗೆ ನಿಮ್ಮ ಪ್ರತಿಕ್ರಿಯೆ ಅಗತ್ಯವಿರುತ್ತದೆ.
- ಅವರು ತಮ್ಮ ಪವರ್ ಎಷ್ಟಿದೆ ಎಂದು ಪರೀಕ್ಷಿಸುತ್ತಿರುತ್ತಾರೆ. 

ನೀವು ನಿಮ್ಮೆಲ್ಲ ಸುಸ್ತು, ಚಿಂತೆ, ಸಿಟ್ಟು ಸೆಡವುಗಳನ್ನೆಲ್ಲ ಮಗುವಿನ ಮೇಲೆ ಹೇರುತ್ತಿದ್ದೀರಾ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ. ಕಣ್ಣು ದೊಡ್ಡದು ಮಾಡುವುದು, ಜೋರಾಗಿ ಕಿರುಚುವುದು, ಸದಾ ಬೈಯ್ಯುವುದು, ಹೊಡೆಯುವುದು- ಮಗುವಿನ ಬಳಿ ನೀವು ಹೀಗೇ ವರ್ತಿಸುತ್ತಿದ್ದರೆ ಅದಕ್ಕೆ ತಾನು ಹೇಗೆ ಮಾತನಾಡಬೇಕೆಂದು ತಿಳಿಯಲು ಅದೊಂದೇ ಮಾದರಿ ಸಿಗುವುದಲ್ಲವೇ? ನೀವು ಮಗುವಿನ ಬಳಿ ಸದಾ ನಗುಮುಖದಿ, ನಯವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಗ ಮಗುವಿನ ಮಾತಿನಲ್ಲೂ ಬದಲಾವಣೆ ಕಾಣಬಹುದು.

2. ನಿಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಿ

ಮಕ್ಕಳು ಕಾರಣವಿಲ್ಲದೆ ಪ್ರತಿಕ್ರಿಯಿಸುವುದಿಲ್ಲ. ಸಿಟ್ಟು ಎಂಬುದು ಎರಡನೇ ಎಮೋಶನ್ ಎಂಬ ಮಾತನ್ನು ಕೇಳಿದ್ದೀರಾ? ಅಂದರೆ, ಮೊದಲನೇ ಎಮೋಶನ್ ಸಿಟ್ಟನ್ನು ಹೊರತರುತ್ತದೆಯೇ ಹೊರತು ನೇರವಾಗಿ ಸಿಟ್ಟು ಹೊರಬರುವುದಿಲ್ಲ. ಉದಾಹರಣೆಗೆ ತೀರಾ ಬೇಜಾರಾದಾಗ, ಪವರ್‌ಲೆಸ್ ಅನಿಸಿದಾಗ, ಅಸಹಾಯಕತೆ ಕಾಡಿದಾಗ, ಕಿರಿಕಿರಿಯಾದಾಗ ಮುಂತಾದ ಕಾರಣಗಳಿಂದಾಗಿ ಸಿಟ್ಟು ಹೊರಬರುತ್ತದೆ. ಹಾಗಾಗಿ, ನಿಮ್ಮ ಮಕ್ಕಳಿಗೆ ಈ ವಿಷಯಗಳಲ್ಲಿ ಕಾಡುತ್ತಿರುವುದೇನು ಎಂದು ವಿಚಾರಿಸಿ, ಯೋಚಿಸಿ ನೋಡಿ. ಆ ಮೂಲ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸಿ.

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

3. ನಿಮ್ಮ ಮಗುಗೆ ಹೇಗನಿಸುತ್ತಿರಬಹುದೆಂದು ಫೀಲ್ ಮಾಡಿ ನೋಡಿ

ಇದೊಂದು ಸನ್ನಿವೇಶ ಉದಾಹರಣೆಗೆ. ನಿಮ್ಮ ಮಗಳು ಮೊಬೈಲ್ ಪೋನ್ ಇಟ್ಟುಕೊಂಡು ಬಹಳ ಸಮಯವಾಗಿರುತ್ತದೆ. ಸಿಟ್ಟಿನಲ್ಲಿ ಅದು ಕಸಿದು ಬಯ್ಯುತ್ತೀರಿ. ಆಕೆ ಮತ್ತೂ ಸಿಟ್ಟಾಗಿ ನಿಮ್ಮ ಮೇಲೆ ರೇಗಾಡಿ ಫೋನನ್ನು ಕಸಿದು ಎಸೆಯುತ್ತಾಳೆ. ಮತ್ತೆ ನಿಮ್ಮ ಪಿತ್ತ ನೆತ್ತಿಗೇರುತ್ತದೆ. ಪ್ರಹಸನ ಗಂಟೆಗಟ್ಟಲೆ ಮುಂದುವರಿಯುತ್ತದೆ. ಆದರೆ, ಅಲ್ಲಿ ಮಗಳಿಗೆ ಶಾಲೆಯಲ್ಲಿ ಕೆಲ ಹುಡುಗಿಯರ ನಡವಳಿಕೆಯಿಂದ ಬೇಜಾರಾಗಿರುತ್ತದೆ. ಅವರೇಕೆ ಹಾಗೆ ಮಾಡಿದರೆಂದು ಆಕೆ ಮೆಸೇಜ್‌ನಲ್ಲಿ ವಿಚಾರಿಸುತ್ತಿರುತ್ತಾಳೆ. ಇನ್ನೇನು ರಿಪ್ಲೈ ಬರಬೇಕು, ಅಷ್ಟರಲ್ಲಿ ನೀವು ಕಸಿದಿರುತ್ತೀರಿ. ಇದು ಆಕೆಯ ಕಿರಿಕಿರಿಯನ್ನು ಕೋಪವಾಗಿಸುತ್ತದೆ. ಅವಳ ನಡುವಳಿಕೆ ಸರಿಯೆಂದಲ್ಲ, ನೀವು ಹಾಗೆ ವಿಚಾರಿಸದೆ ಫೋನ್ ಕಸಿದದ್ದು ಕೂಡಾ ತಪ್ಪು. ಯಾವುದೇ ಸಂದರ್ಭದಲ್ಲಿ ಮಕ್ಕಳಿಗೆ ಹೇಗನಿಸುತ್ತಿದೆ, ಅವರೇಕೆ ಹಾಗೆ ಮಾಡುತ್ತಿದ್ದಾರೆಂದು ವಿಚಾರಿಸಿ, ನೀವೇ ಅವರ ಸ್ಥಾನದಲ್ಲಿದ್ದು ಕಲ್ಪಿಸಿ ನೋಡಿ. ಇಂಥ ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗಿದ್ದು ಏನನ್ನಾದರೂ ಸರಿಪಡಿಸಬೇಕೇ ಹೊರತು ನೀವಿಬ್ಬರೇ ಕಚ್ಚಾಡುವುದು ಸರಿಯಲ್ಲ. 

ಮಗುವಿನ ಜೀರ್ಣಕ್ರಿಯೆ ಉತ್ತಮಗೊಳಿಸುವುದು ಹೇಗೆ?

4. ಅವರಿಗೆ ಸ್ವಲ್ಪ ಅಧಿಕಾರ ಕೊಡಿ

ಹಾಗಂತ ಪೂರ್ತಿ ಅಧಿಕಾರ ಕೊಡಿ ಎಂದಲ್ಲ, ಆದರೆ, ಸ್ವಲ್ಪ ಅಧಿಕಾರ ಅನುಭವಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಪೋಷಕರು ಸುತ್ತಲಿದ್ದಾಗ ಸಂಪೂರ್ಣ ಪವರ್‌ಲೆಸ್ ಎಂದು ಅನಿಸಿದರೆ, ಅಂತ ಮಕ್ಕಳು ದೊಡ್ಡವರಾದಂತೆಲ್ಲ ಅಧಿಕಾರದ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಾರೆ. ನೀವು ಅಧಿಕಾರ ನಿಯಂತ್ರಿಸಲು ಅಲ್ಲ, ಹಂಚಿಕೊಳ್ಳಲು ಕೂಡಾ ಸಾಧ್ಯ ಎಂದು ತೋರಿಸಿಕೊಡಿ. ಹೇಗೆ ಮಾಡುವುದು? ಅವರಿಗೆ ನಿಮ್ಮ ಇಷ್ಟಕಷ್ಟಗಳನ್ನು ಅತಿಯಾಗಿ ಹೇರುವ ಬದಲು ಆಯ್ಕೆಗಳನ್ನು ನೀಡಿ. 

5. ತಿರುಗಿ ಹೇಳುವ ಮಕ್ಕಳಿಗೆ ಶಿಕ್ಷೆ ಕೊಡಬೇಡಿ

ಮಕ್ಕಳು ತಿರುಗಿ ಹೇಳಿದಾಗ ಎರಡೇಟು ಬಿಗಿಯೋಣ ಎನಿಸುತ್ತದೆ ನಿಜ. ಆದರೆ, ಅದರಿಂದ ಮಕ್ಕಳು ಮತ್ತಷ್ಟು ಹಠಮಾರಿಗಳೂ, ದಪ್ಪ ಚರ್ಮದವರೂ ಆಗುತ್ತಾರೆ. ಹಾಗಾಗಿ, ನಿಧಾನವಾಗಿ ಸನ್ನಿವೇಶ ಹ್ಯಾಂಡಲ್ ಮಾಡಿ. ಸ್ವಲ್ಪ ಸಮಯದ ಬಳಿಕ ಎಲ್ಲರೂ ತಣ್ಣಗಾಗಿದ್ದಾಗ, ಮಗುವಿಗೆ ತಿರುಗಿ ಹೇಳಿದ್ದರಿಂದ ನಿಮಗೆಷ್ಟು ನೋವಾಯಿತು, ಅದು ತಪ್ಪು ಎಂಬುದನ್ನು ವಿವರಿಸಿ.

ನಿಮ್ಮ ಮಗು ಊಟ ಇಷ್ಟ ಪಡಬೇಕಂದ್ರೆ ಹೀಗ್ ಮಾಡಿ! 

6. ಕೆಟ್ಟ ಆ್ಯಟಿಟ್ಯೂಡ್‌ಗೆ ಪ್ರೀತಿಯೇ ಮದ್ದು

ಸಕ್ಕರೆಯಿಂದ ಹೆಚ್ಚು ಜೇನನ್ನು ಸೆಳೆಯಬಹುದೇ ಹೊರತು ವಿನೆಗರ್‌ನಿಂದಲ್ಲ ಎಂದು ಇಂಗ್ಲಿಷ್‌ನಲ್ಲಿ ಮಾತೊಂದಿದೆ. ಹೀಗಾಗಿ, ತಿರುಗಿ ಹೇಳುವ ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ. ನೀನು ಹೀಗೆ ಮಾತನಾಡಿದ್ದು ನನಗೆಷ್ಟು ಬೇಜಾರಾಯಿತು ಗೊತ್ತೇ ಎನ್ನಿ. ಇಲ್ಲವೇ, ಈ ಮನೆಯಲ್ಲಿ ನಾವು ಈ ರೀತಿ ಇನ್ನು ಮಾತನಾಡುವುದಿಲ್ಲ ಎನ್ನಿ. ಇಲ್ಲಿ ನಾವು ಎಂದಿದ್ದರಿಂದ ಅಪವಾದವನ್ನು ಕೇವಲ ಮಗುವಿನ ಮೇಲೆ ಎಸೆದಂತಾಗಲಿಲ್ಲ. ಆಗ ಮಗು ಕೂಡಾ ಅದನ್ನು ಒಪ್ಪಿಕೊಳ್ಳುತ್ತದೆ. 

7. ವೈಯಕ್ತಿಕವಾಗಿ ಪರಿಗಣಿಸಬೇಡಿ.

ಎಷ್ಟೇ ಆದರೂ ಮಕ್ಕಳು ಮಕ್ಕಳೇ. ಈಗ ಅಂದಿದ್ದು ಇನ್ನೊಂದು ಕ್ಷಣಕ್ಕೆ ಅವಕ್ಕೆ ನೆನಪಿರುವುದಿಲ್ಲ. ಅಷ್ಟೇ ಅಲ್ಲ, ಮಕ್ಕಳು ದಿನೇ ದಿನೇ ಬದಲಾಗುತ್ತಿರುತ್ತಾರೆ. ದೊಡ್ಡವರಾದಂತೆಲ್ಲ ಹೇಗೆ ಮಾತನಾಡಬೇಕು, ಹೇಗಿರಬೇಕು ಎಂಬುದನ್ನು ಕಲಿಯುತ್ತಾರೆ. ಹಾಗೆ ಬದಲಾಗಲು ಸಮಯ ಕೊಡಿ. ಅವರಿಗೆ ತಂದೆತಾಯಿಯ ಮೇಲೆ ಪ್ರೀತಿ ಇದ್ದೇ ಇರುತ್ತದೆ. ನಿಮ್ಮ ವಿರುದ್ಧ ಅವರು ಸಮರ ಸಾರಿರುವುದಿಲ್ಲ. ಹೀಗಾಗಿ, ಮಕ್ಕಳ ತಿರುಗು ಮಾತನ್ನ ವೈಯಕ್ತಿಕವಾಗಿ ಪರಿಗಣಿಸಿ ದೊಡ್ಡದು ಮಾಡಬೇಡಿ. 

8. ಅವರ ಒಳ್ಳೆಯ ವರ್ತನೆಗೆ ಪ್ರಶಂಸೆ ನೀಡಿ

ಮಕ್ಕಳು ಮಾಡುವ ಸರಿಯಾದ ಕೆಲಸಗಳಿಗೆ, ಒಳ್ಳೆಯ ಕೆಲಸಗಳಿಗೆ ಪ್ರಶಂಸೆ ಕೊಡಿ. ನೀವು ಹೆಚ್ಚು ಪ್ರಶಂಸಿಸಿದಷ್ಟೂ ಅವರು ಮತ್ತಷ್ಟು ಒಳ್ಳೆಯ ನಡತೆ ತೋರಲು ಉತ್ಸುಕರಾಗುತ್ತಾರೆ. ಮಕ್ಕಳ ವ್ಯಕ್ತಿತ್ವ ಗಟ್ಟಿಯಾಗಿರಬೇಕೆಂದರೆ ಪೇರೆಂಟಿಂಗ್ ಪಾಸಿಟಿವ್ ಆಗಿರಬೇಕು.