ನಿಮ್ಮ ಮಗುವಿಗೆ ಪ್ರೋಟೀನ್ ಕೊರತೆಯಾಗದಂತೆ ನೋಡಿಕೊಳ್ಳುವುದು ಹೇಗೆ?

ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ ಹೆಚ್ಚು ಪ್ರೋಟೀನ್ ಅಗತ್ಯ. ಆದರೆ, ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸಿಗುತ್ತಿಲ್ಲವೇನೋ ಎಂದು ಬಹಳಷ್ಟು ಪೋಷಕರು ಚಿಂತಿಸುತ್ತಾರೆ. ಯಾವ ಆಹಾರದಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ, ಅದನ್ನು ಕೊಡುವ ಬಗೆ ಹೇಗೆ ತಿಳಿದುಕೊಳ್ಳಿ. 

Tips to add more  protein in toddler  vegetarian diet

ಒಮ್ಮೆ ಮಗು ಎದೆಹಾಲು ಬಿಟ್ಟು ಘನಾಹಾರ ಅಭ್ಯಾಸ ಮಾಡಿಕೊಳ್ಳತೊಡಗಿದ ಮೇಲೆ  ಅದಕ್ಕೆ ಬೇಕಾಗಿರುವಷ್ಟು ಪ್ರೋಟೀನ್ ಒದಗಿಸುವುದೇ ಎಲ್ಲ ತಾಯಂದಿರಿಗೆ ದೊಡ್ಡ ಸವಾಲು. ಏಕೆಂದರೆ ಬೆಳವಣಿಗೆಯ ಹಂತದಲ್ಲಿರುವ ಮಗುವಿಗೆ ಹೆಚ್ಚು ಪ್ರೋಟೀನ್ ಅಗತ್ಯ. ಇದು ಮಗುವಿಗೆ ಶಕ್ತಿ ಒದಗಿಸುವ ಜೊತೆಗೆ, ಕೋಶಗಳ ಬೆಳವಣಿಗೆ, ಎಂಜೈಮ್ಸ್ ಹಾಗೂ ಹಾರ್ಮೋನ್‌ಗಳ ಉತ್ಪಾದನೆ ಎಲ್ಲಕ್ಕೂ ಬೇಕು.

ಇದಲ್ಲದೆ ಮೆದುಳಿನ ಬೆಳವಣಿಗೆ, ಸ್ನಾಯುಗಳು, ಉಗುರು, ಕೂದಲು, ಮೂಳೆ, ರಕ್ತ, ಅಂಗಾಂಗಗಳ ಬೆಳವಣಿಗೆಯಲ್ಲಿ ಕೂಡಾ ಪ್ರೋಟೀನ್ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ದೇಹ ಹೆಚ್ಚು ಪ್ರೋಟೀನ್ ಸ್ಟೋರ್ ಮಾಡಿಟ್ಟುಕೊಳ್ಳಲು ಶಕ್ತವಾಗಿಲ್ಲ. ಹಾಗಾಗಿ, ನಾವು ದೇಹಕ್ಕೆ ಪ್ರತಿದಿನ ಪ್ರೋಟೀನ್ ಒದಗಿಸುತ್ತಿರಬೇಕು. ಮಾಂಸ, ಮೊಟ್ಟೆಯಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ ನಿಜ. ಆದರೆ, ಮೊಟ್ಟೆ ತಿನ್ನದ ಸಸ್ಯಾಹಾರಿ ಮಕ್ಕಳಿಗೆ ಬೇಕಾದ ಪ್ರೋಟೀನ್ ಒದಗಿಸಲು ಯಾವ ಆಹಾರ ನೀಡಬೇಕು? 

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ನವಣೆ ಅಕ್ಕಿ

ನವಣೆಯನ್ನು ಹಲವರು ಬೇಳೆ ಎಂದು ತಿಳಿಯುತ್ತಾರೆ. ಅದು ನವಣೆಯು ಬೀಜವಾಗಿದ್ದು, ಒಂದು ಕಪ್‌ ನವಣೆಯಲ್ಲಿ 8 ಗ್ರಾಂಗೂ ಅಧಿಕ ಪ್ರೋಟೀನ್ ಇರುತ್ತದೆ. ಇದರೊಂದಿಗೆ 9 ರೀತಿಯ ಅಮೈನೋ ಆ್ಯಸಿಡ್ಸ್ ಇದರಲ್ಲಿದ್ದು, ಇವು ಮಗುವಿನ ಬೆಳವಣಿಗೆಗೆ ಅತಿ ಅಗತ್ಯವಾದವು. ಹಾಗಾಗಿ, ನವಣೆಯನ್ನು ಮಕ್ಕಳಿಗೆ ಮಾಡುವ ಮಣ್ಣಿ, ಸೂಪ್‌ಗಳಿಗೆ ಸೇರಿಸಿ.

ನಟ್ಸ್ ಹಾಗೂ ನಟ್ ಬಟರ್

ವಾಲ್‌ನಟ್, ಬಾದಾಮಿ, ಗೋಡಂಬಿ, ಪಿಸ್ತಾ, ಕಡಲೆಕಾಯಿ- ಹೀಗೆ ನಟ್ಸ್‌ಗಳಲ್ಲಿ ಪ್ರೋಟೀನ್ ಜೊತೆಗೆ ಆರೋಗ್ಯಕರ ಫ್ಯಾಟ್ ಕೂಡಾ ಅಧಿಕವಾಗಿರುವುದರಿಂದ ಇವುಗಳು ನಿಮ್ಮ ಮಗುವಿನ ಆಹಾರದಲ್ಲಿರಲೇಬೇಕು. ಬಹುತೇಕ ಬೀಜಗಳು 30 ಗ್ರಾಂಗೆ 5ರಿಂದ 6 ಗ್ರಾಂ ಪ್ರೋಟೀನ್ ಹೊಂದಿರುತ್ತವೆ. ಮಕ್ಕಳಿಗೆ ಈ ನಟ್ಸ್ ರುಚಿ ಹಿಡಿಸಲು ಯಾವಾಗಲೂ ಅದನನ್ನು ಹುರಿದು ನೀಡಿ. ಅಗಿದು ನುಂಗಲು ಬಾರದ ಮಕ್ಕಳಾದರೆ ಇವೆಲ್ಲವನ್ನೂ ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಮಣ್ಣಿ ಮಾಡಿ ಕೊಡಿ. ಇನ್ನು ಬ್ರೆಡ್ ಅಥವಾ ಚಪಾತಿಗೆ ಯಾವುದೋ ಶುಗರ್ ಸಿರಪ್ ಸುರಿದ ಜಾಮ್ ಅಥವಾ ಇನ್ನಾವುದೇ ಸಿಹಿ ಹಾಕಿಕೊಡುವ ಬದಲು ನಟ್ ಬಟರ್ ಹಾಕಿಕೊಡುವುದು ಹೆಚ್ಚು ಆರೋಗ್ಯಕಾರಿ. 

ಮಗುವಿನ ಜೀರ್ಣಕ್ರಿಯೆ ಉತ್ತಮಗೊಳಿಸುವುದು ಹೇಗೆ?

ಟೋಫು

ಸಸ್ಯಾಹಾರಿ ಆಹಾರದಲ್ಲಿ ಅತಿ ಹೆಚ್ಚು ಪ್ರೋಟೀನ್ ಹೊಂದಿದ ಆಹಾರವೆಂದರೆ ಸೋಯಾಬೀನ್. ಉದಾಹರಣೆಗೆ ಇದರಿಂದ ತಯಾರಿಸಿದ ಟೋಫು ಒಂದು ಕಪ್‌ನಲ್ಲಿ ಸುಮಾರು 40 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. ಬಹುತೇಕ ಆಹಾರಗಳಲ್ಲಿ ಪನ್ನೀರ್ ಬಳಸುವ ಬದಲಿಗೆ ಟೋಫು ಬಳಸಬಹುದು. 

ಚಿಯಾ ಹಾಗೂ ಫ್ಲ್ಯಾಕ್ಸ್ ಸೀಡ್ಸ್

ಅಗಸೆ ಬೀಜ ಹಾಗೂ ಚಿಯಾ ಸೀಡ್ಸ್‌ಗಳಲ್ಲಿ ಕೂಡಾ ಪ್ರೋಟೀನ್ ಅಧಿಕವಾಗಿರುತ್ತದೆ. 25 ಗ್ರಾಂ ಚಿಯಾ ಸೀಡ್ಸ್‌ನಲ್ಲಿ 4.7 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. ಇನ್ನು ಫೈಬರ್ ವಿಷಯ ಕೇಳಲೇ ಬೇಡಿ. ಇಂಥ ಬೀಜಗಳನ್ನು ಕೊಡುವುದರಿಂದ ನಿಮ್ಮ ಮಗುವಿನ ಮಲಬದ್ಧತೆ ಸಮಸ್ಯೆ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. ಏಕೆಂದರೆ ಇವುಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಫ್ಲ್ಯಾಕ್ಸ್ ಸೀಡ್‌ಗಳನ್ನು ಓಟ್ಸ್ ಅಥವಾ ಮಿಲ್ಕ್ ಶೇಕ್‌ಗೆ ಸೇರಿಸಿ ಕೊಡಬಹುದು. ಚಿಯಾ ಸೀಡ್‌ಗಳನ್ನು ಸಲಾಡ್ ಅಥವಾ ಹಣ್ಣಿನ ಯೋಗರ್ಟ್ಗೆ ಸೇರಿಸಿ ನೀಡಬಹುದು. 

ಮೊಳಕೆಕಾಳುಗಳು

ಕಾಳುಗಳು ಸಸ್ಯಾಹಾರಿಗಳಿಗೆ ಪ್ರೋಟೀನ್ ಒದಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಅವನ್ನು ಮೊಳಕೆ ಬರಿಸಿ ಸೇವಿಸುವುದರಿಂದ ಅದರ ಪೋಷಕಸತ್ವಗಳು ಹೆಚ್ಚುತ್ತವೆ. ರಾಜ್‌ಮಾ, ಕಪ್ಪು ಬೀನ್ಸ್, ಛೋಲೆ, ಹೆಸರುಕಾಳು, ಕಡಲೆಕಾಳು- ಒಟ್ಟಾರೆ ಎಲ್ಲ ಕಾಳುಗಳು ಪೋಷಕಾಂಶಗಳ ಆಗರ. 1 ಕಪ್ ಕಿಡ್ನಿ ಬೀನ್ಸ್‌ನಲ್ಲಿ 15 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. ಮಗು ಚಿಕ್ಕದಾದರೆ, ಈ ಎಲ್ಲ ಕಾಳುಗಳನ್ನು ನೆನೆಸಿ, ಮೊಳಕೆ ಬರಿಸಿ., ಬಿಸಿಲಿನಲ್ಲಿ ಒಣಗಿಸಿ, ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡು ಮಗುವಿನ ಊಟದೊಂದಿಗೆ ಸೇರಿಸಿ ನೀಡಬಹುದು. ಸ್ವಲ್ಪ ದೊಡ್ಡ ಮಕ್ಕಳಾದರೆ ಕಾಳುಗಳನ್ನು ಹಾಗೆಯೇ ಮೊಳಕೆ ಬರಿಸಿ ತಿನ್ನಲು ಕೊಡಬಹುದು. ಇಲ್ಲದಿದ್ದಲ್ಲಿ, ಇವುಗಳಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥ ನೀಡಬಹುದು.

ನಿಮ್ಮ ಮಗು ಊಟ ಇಷ್ಟ ಪಡಬೇಕಂದ್ರೆ ಹೀಗ್ ಮಾಡಿ!

ಹಾಲು

ಮಗುವಿಗೆ ಪ್ರತಿ ಹೊತ್ತಿನ ಊಟದ ಬಳಿಕ ಒಂದು ಲೋಟ ಹಾಲು ಕೊಡುವ ಅಭ್ಯಾಸ ಒಳ್ಳೆಯದು. ಏಕೆಂದರೆ ಇದರಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ. ಅದರಲ್ಲೂ ಸೋಯಾ ಮಿಲ್ಕ್ ಕುಡಿಸಲು ಅಭ್ಯಾಸ ಮಾಡಿದರೆ ಮತ್ತೂ ಹೆಚ್ಚಿನ ಪ್ರೋಟೀನ್ ಮಗುವಿನ ದೇಹ ಸೇರಿ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತದೆ. 

Latest Videos
Follow Us:
Download App:
  • android
  • ios