ವಾತ್ಸಾಯನನ ಕಾಮಸೂತ್ರದ ಪ್ರಕಾರ, ಮದುವೆಯಾಗೋ ಗಂಡಿಗೆ ಇದು ಇರಲೇಬೇಕಂತೆ!
ವಾತ್ಸಾಯನ ಯಾರು ಎಂಬುದು ನಿಮಗೆ ಗೊತ್ತು ತಾನೆ. ʼಕಾಮಸೂತ್ರʼವನ್ನು ಬರೆದ ಮಹರ್ಷಿ ಈತ. ಈತನ ಪ್ರಕಾರ. ಮದುವೆಯಾಗಲು ಬಯಸುವ ಹುಡುಗನಿಗೆ ಇವಿಷ್ಟು ಇರಲೇಬೇಕಿತ್ತಂತೆ. ಅವು ಯಾವುವು ಅಂತ ನಿಮಗೂ ತಿಳಿದಿರಲಿ.
ಕಾಮಸೂತ್ರ- ನಿಮಗೆ ಗೊತ್ತೇ ಇರುತ್ತದೆ. ಮಹರ್ಷಿ ವಾತ್ಸಾಯನ ಬರೆದ ಈ ಗ್ರಂಥ ಭಾರದಲ್ಲಿ ಮಾತ್ರವಲ್ಲದೆ ಹೊರಗೂ ತುಂಬಾ ಪಾಪ್ಯುಲರ್. ದಾಂಪತ್ಯ ಸುಖದ ಸೊಗಡನ್ನು ಮೊಗೆಮೊಗೆದು ಕುಡಿಯಲು ಅಗತ್ಯವಾದುದನ್ನೆಲ್ಲಾ ಈ ಗ್ರಂಥದಲ್ಲಿ ವಾತ್ಸಾಯನ ಬರೆದು ಗುಡ್ಡೆ ಹಾಕಿದ್ದಾನೆ. ಅದರಲ್ಲಿ, ಮದುವೆಯಾಗಲು ಹೊರಟಿರುವ ಹುಡುಗನಿಗೆ ಏನಿರಬೇಕು ಎಂಬುದನ್ನೂ ಆತ ವಿವರವಾಗಿ ಬರೆದಿದ್ದಾನೆ. ಅದೆಲ್ಲ ಏನು ಎಂಬುದು ಇಲ್ಲಿದೆ ನೋಡಿ.
ದೈಹಿಕ ದೃಢತೆ: ಪುರುಷ ಮದುವೆಯಾಗಲು ಮೊದಲು ತಾನು ಸಾಂಸಾರಿಕ ಬದುಕಿಗೆ ಫಿಟ್ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡಿರಬೇಕು. ಅಂದರೆ ಹೆಂಡತಿಗೆ ದೈಹಿಕ ಸುಖ ಕೊಡಲು, ಆಕೆಯಿಂದ ಅದನ್ನು ಪಡೆಯಲು ಆತ ಸಮರ್ಥನಾಗಿರಬೇಕು. ಆತನ ಲೈಂಗಿಕತೆ ಸ್ಪಷ್ಟವಾಗಿರಬೇಕು- ಅಂದರೆ ಆತ ನಪುಂಸಕನಾಗಿರಬಾರದು, ಸಲಿಂಗಕಾಮಿ ಆಗಿರಬಾರದು, ವಿಕೃತಕಾಮಿಯೂ ಆಗಿರಬಾರದು.
ಲೈಂಗಿಕ ಶಿಕ್ಷಣ: ರಾಜರ ಕಾಲದಲ್ಲಿ ರಾಜಕುಮಾರರಿಗೆ ಲೈಂಗಿಕ ಶಿಕ್ಷಣ ಕೊಡಲೆಂದೇ ಪಂಡಿತರನ್ನು, ಸಖಿಯರನ್ನು ನೇಮಿಸುತ್ತಿದ್ದರು. ಇವರು ಮದುವೆಗೂ ಮೊದಲೇ ಆತನಿಗೆ ಸಾಕಷ್ಟು ಲೈಂಗಿಕ ಶಿಕ್ಷಣ ಕೊಟ್ಟಿರುತ್ತಿದ್ದರು. ಆದರೆ ಇತರರಿಗೆ ಆ ಅವಕಾಶ ಇರಲಿಲ್ಲ. ಹೀಗಾಗಿ ಆತ ತನ್ನ ಗೆಳೆಯರಿಂದಲೇ ಅದನ್ನೆಲ್ಲ ಕೇಳಿ ತಿಳಿದಿರಬೇಕಾಗುತ್ತಿತ್ತು. ಚಾಣಕ್ಯನೂ ʼಹಿರಿಯ ಗೆಳೆಯʼರಿಂದ ಸೂಕ್ತ ಲೈಂಗಿಕ ತಿಳುವಳಿಕೆ ಪಡೆಯಬೇಕು ಎನ್ನುತ್ತಾನೆ.
ಮಾನಸಿಕ ದೃಢತೆ: ವಿವಾಹಕ್ಕೀಡಾಗುವ ಪುರುಷ ಮಾನಸಿಕವಾಗಿ ಅದಕ್ಕೆ ಸಜ್ಜಾಗಿರಬೇಕು. ಸಂಸಾರಕ್ಕೆ ಹೊಸ ಸದಸ್ಯೆಯನ್ನು ಸೇರಿಸಲು, ಆಕೆಯನ್ನು ತನ್ನ ಬದುಕಿನ ಪ್ರಮುಖ ಭಾಗವಾಗಿ ಮಾಡಿಕೊಳ್ಳಲು ರೆಡಿಯಾಗಿರಬೇಕು. ಆಕೆಯನ್ನು ತನ್ನ ಸಮಾನ ವ್ಯಕ್ತಿಯಾಗಿ ಪರಿಗಣಿಸಬೇಕು. ಅಧಿಕಾರವನ್ನು ಆಕೆಯ ಮೇಲೆ ಹೇರಬಾರದು. ಆತ ವಿಕೃತಕಾಮಿ ಆಗಿರಬಾರದು. ಸಮಾಜ ಒಪ್ಪುವ ರೀತಿಯ ಲೈಂಗಿಕ ಸುಖವನ್ನು ಬಯಸುವವನಾಗಿರಬೇಕು. ಮದುವೆಗೆ ಮೊದಲೇ ವೇಶ್ಯೆಯರ ಬಳಿ ಹೋಗಿ ಲೈಂಗಿಕ ಕಾಯಿಲೆಗಳನ್ನು ಗಳಿಸಿರಬಾರದು.
ಉದ್ಯೋಗ: ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತಾನೆ ಚಾಣಕ್ಯ. ದುಡಿಯುವ ಸಾಮರ್ಥ್ಯ ಇದ್ದು, ಕೆಲಸ ಮಾಡಿ ಹಣ ಸಂಪಾದಿಸುವವನನ್ನು ಮಾತ್ರ ಹೆಣ್ಣು ಇಷ್ಟಪಡುತ್ತಾಳೆ. ಮೂರು ಹೊತ್ತೂ ಓತ್ಲಾ ಹೊಡೆಯುವ, ಭೂಮಿಗೆ ಭಾರ ಅನ್ನದಂಡ ಅನ್ನುವಂತೆ ಇರುವ ಯಾರನ್ನೂ ಆಕೆ ಇಷ್ಟಪಡುವುದಿಲ್ಲ. ದುಡಿದು ತಂದು ತನ್ನನ್ನೂ ತಮಗೆ ಮಕ್ಕಳಾದರೆ ಅವರನ್ನೂ ಸಾಕುವ ಸಾಮರ್ಥ್ಯ ಇವನಲ್ಲಿ ಇದೆಯಾ ಅಂತ ಪ್ರತಿ ಹೆಣ್ಣೂ ನೋಡುತ್ತಾಳೆ. ಈಗ ಸ್ವತಃ ಹೆಣ್ಣೇ ದುಡಿಯುತ್ತಾಳೆ ಎಂಬುದೇನೋ ನಿಜ. ಆದರ ಗಂಡಿನ ದುಡಿಯುವ ಸಾಮರ್ಥ್ಯ ಅತಿ ಮುಖ್ಯ.
ಇನ್ನೂ ವಯಸ್ಸಾಗೋದು ಬೇಡ, 30 ದಾಟಿದರೆ ಇವೆನ್ನೆಲ್ಲ ಲೈಫಲ್ಲಿ ಬಿಟ್ಹಾಕಿ
ಶರಣಾಗತಿ: ಚಾಣಕ್ಯನ ಪ್ರಕಾರ ಪತಿ ಪತ್ನಿಯರ ಸಂಬಂಧದಲ್ಲಿ ಸಮರ್ಪಣಾ ಭಾವ ಇರಬೇಕು. ಸಾಂಗತ್ಯದಲ್ಲಿ ಬದ್ಧತೆಯ ಭಾವನೆ ಇಲ್ಲದಿದ್ದರೆ ಸಂಪರ್ಕದ ಮಾಧುರ್ಯವು ಗಟ್ಟಿಯಾಗುವುದಿಲ್ಲ. ಗಂಡ ಮತ್ತು ಹೆಂಡತಿ ಬದ್ಧತೆಯ ಭಾವನೆಯನ್ನು ಹೊಂದಿರುವಾಗ, ಅವರು ಪರಸ್ಪರರ ನ್ಯೂನತೆಗಳನ್ನು ಕಡೆಗಣಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾನೆ. ಅಂದರೆ ಶರಣಾಗತ ಆಗಲು ಪುರುಷ ಸಿದ್ಧನಿರಬೇಕು. ತನ್ನ ಪ್ರೀತಿಯನ್ನು ನಿವೇದಿಸುವಾಗ ಆತ ಆಕೆಯ ಮುಂದೆ ಮಂಡಿಯೂರಲೇಬೇಕು!
ಉತ್ತಮ ಹಿನ್ನೆಲೆ: ಪುರುಷನ ಹಿನ್ನೆಲೆಯನ್ನೂ ಹೆಣ್ಣು ಗಮನಿಸುತ್ತಾಳಂತೆ. ಅಂದರೆ ಆತನ ಮನೆತನಕ್ಕೆ ಗೌರವ ಇದೆಯಾ, ಆತ ಬೀದಿ ರೌಡಿಯಾ, ಅವನ ತಂದೆಗೆ ಎಷ್ಟು ಆಸ್ತಿ ಇದೆ, ತಾಯಿ ಹೇಗಿರುತ್ತಾಳೆ, ಇವರ ಮನೆ ಹೇಗಿದೆ, ಕಾರು ಇಟ್ಟಿದ್ದಾನಾ ಇಲ್ವಾ, ಸಂಬಳ ಎಷ್ಟು ಬರಬಹುದು, ಇವರ ಬಂಧುಗಳು ಗೌರವ ಇರೋವ್ರಾ ಅಲ್ವಾ, ಇವರ ಮಾತಿಗೆ ಸಮಾಜದಲ್ಲಿ ಗೌರವ ಇದ್ಯಾ ಇಲ್ವಾ ಎಲ್ಲವನ್ನೂ ಹೆಣ್ಣು ಗಮನಿಸ್ತಾಳಂತೆ.
ಈ ರಾಶಿ ಹೆಂಡ್ತೀರು ಸಿಕ್ಕರೆ ಗಂಡ ಸೇಫ್, ಸದಾ ಬೆಂಬಲವಾಗಿರುತ್ತಾರೆ