ಈ ರಾಶಿ ಹೆಂಡ್ತೀರು ಸಿಕ್ಕರೆ ಗಂಡ ಸೇಫ್, ಸದಾ ಬೆಂಬಲವಾಗಿರುತ್ತಾರೆ

ಕೆಲವು ರಾಶಿಯ ಸ್ತ್ರೀಯರ ಪತಿಗಾಗಿ ಹುಲಿಯನ್ನೂ ಎದುರಿವಷ್ಟು ಬಲಶಾಲಿಯಾಗಿರುತ್ತಾರೆ. ಎಂಥದ್ದೇ ಕಷ್ಟದ ಸನ್ನಿವೇಶ ಕ್ರಿಯೇಟ್ ಆದರೂ ಗಂಡಂದಿರನ್ನು ಬಿಟ್ಟು ಕೊಡದೇ ಬೆನ್ನೆಲುಬಾಗಿ ನಿಲ್ಲುವಂಥವರು ಇವರು. 

leo scorpio areis cancer women could safegaurd their husbands in trouble

ಕೆಲವು ಹೆಣ್ಣು ಮಕ್ಕಳು ಮನೆಯಿಂದ ಹೊರ ಹೋಗಿ ದುಡಿಯುವುದಿಲ್ಲ. ಆರ್ಥಿಕವಾಗಿ ಸ್ವತಂತ್ರರಾಗಿರುವುದಿಲ್ಲ. ಆದರೆ, ಗೃಹಿಣಿಯಾಗಿದ್ದುಕೊಂಡೆ ಜೀವನದಲ್ಲಿ ಎಂಥದ್ದೇ ಕಷ್ಟದ ಪರಿಸ್ಥಿತಿ ಎದುರಾದರೂ ಎದುರಿಸಲು ಸಿದ್ಧರಾಗಿರುತ್ತಾರೆ. ಗಂಡ ಯಾವುದೋ ತೊಂದರೆಯಲ್ಲಿ ಸಿಕ್ಹಾಕಿಕೊಂಡಿದ್ದಾನೆಂಬ ತುಸು ಸುಳಿವು ಸಿಕ್ಕರೂ, ಅವರಿಗಾಗಿ ಏನನ್ನು ಬೇಕಾದರೂ ಎದುರಿಸಲು ರೆಡಿಯಾಗುತ್ತಾರೆ. ಯಾವ ರಾಶಿಯವರು ಅವರು? 

1. ಮೇಷ ರಾಶಿ (Aries):
ಕಷ್ಟ ಬಂದಾಗ ಕೂಲ್ ಆಗಿಯೇ ನಿಭಾಯಿಸೋ ಸಾಮರ್ಥ್ಯ ಇರುವಂಥ ರಾಶಿ ಇದು. ಮಹತ್ವಾಕಾಂಕ್ಷೆಯುಳ್ಳ ಇವರು, ಮಾನಸಿಕವಾಗಿ ಸಿಕ್ಕಾಪಟ್ಟೆ ಸ್ಟ್ರಾಂಗ್. ಒಳಗಡೆಯಿಂದ ಬೆಂಕಿ ಇದ್ದಂತೆ, ಶಕ್ತಿಶಾಲಿಗಳು. ಮೃದು ಎಂಬಂತೆ ಕೆಲವೊಮ್ಮೆ ಕಂಡರೂ, ಕಷ್ಟ ಎಂದರೆ ಕಠಿಣವಾಗುತ್ತಾರೆ. ತಮ್ಮ ಗಂಡನ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಲು ಹಿಂದು ಮುಂದೆ ನೋಡುವುದಿಲ್ಲ. 

2. ಕಟಕ ರಾಶಿ (Cancer):
ಕುಟುಂಬ ಹಾಗೂ ಗಂಡನ ಬಗ್ಗೆ ತುಸು ಹೆಚ್ಚೇ ಕಾಳಜಿ ತೋರುತ್ತಾರೆ ಕಟಕ ರಾಶಿಯ ಸ್ತ್ರೀಯರು. ಕಾಳಜಿ ವಹಿಸುವವರನ್ನ ರಕ್ಷಿಸಲು ಹೋರಾಡಲೂ ಹಿಂದು ಮುಂದು ನೋಡುವುದಿಲ್ಲ. ಅಮ್ಮ ಕರಡಿ ಹೇಗೆ ವೈರಿಗಳು ಅಟ್ಯಾಕ್ ಮಾಡಿದಾಗ ಮಗುವನ್ನು ರಕ್ಷಿಸಲು ಹೋರಾಡುತ್ತೋ ಹಾಗೆಯೇ ಈ ರಾಶಿಯ ಹೆಣ್ಮಕ್ಕಳು ತಮ್ಮ ಪತಿಗಾಗಿ ಹೋರಾಡುತ್ತಾರೆ. ಅಷ್ಟೇ ಅಲ್ಲ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುವುದು ಗೊತ್ತು. ಸಂಗಾತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಇವರು ಆವರನ್ನು ಕಾಪಿಟ್ಟು ಕಾಯುತ್ತಾರೆ. ಬಾಳ ಸಂಗಾತಿಯ ಎಲ್ಲ ಕೆಲಸಗಳಲ್ಲೂ ಜೊತೆಯಾಗುತ್ತಾರೆ.

ಸಂಗಾತಿ ಬೇಕು ಬೇಡ ಗೊತ್ತು ಮಾಡ್ಕೊಂಡು ಖುಷಿ ಪಡಿಸೋ ರಾಶಿಗಳಿವು

3.ವೃಶ್ಚಿಕ ರಾಶಿ (Scorpio):
ಫಿಸಿಕಲಿ ಸಹ ತುಂಬಾ ಬಲವಾಗಿರುವ ಈ ರಾಶಿಯ ಸ್ತ್ರೀಯರು, ಹೋರಾಟದಲ್ಲಿ ಗಂಡಿಗೆ ಸಮಾನವಾಗಿ ಸೆಣೆಸಬಲ್ಲವರಾಗಿರುತ್ತಾರೆ. ಈ ರಾಶಿಯ ಹೆಂಡತಿಯರು ಸಿಕ್ಕರೆ ಗಂಡ ಅದೃಷ್ಟವಂತನೇ ಸರಿ. ಯಾರಿಗೂ ಹೆದರಬೇಕಾದ ಸಂದರ್ಭವೇ ಅವನಿಗೆ ಬರುವುದಿಲ್ಲ. ಬಲವಾದ ಆಸೆಗಳೊಂದಿಗೆ, ಅವನ್ನು ಈಡೇರಿಸಿಕೊಳ್ಳವುದೂ ಈ ರಾಶಿ ಹೆಣ್ಣು ಮಕ್ಕಳಿಗೆ ಕರಾತಲಮಲಕ.  ಈ ವಿಷಯದಲ್ಲಿ ಇವರು ಹಠಮಾರಿಗಳು. ಮೌನವಾಗಿದ್ದೇ ಕೆಲಸ ಸಾಧಿಸಿಕೊಳ್ಳುತ್ತಾರೆ. ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಬಲ್ಲ ಇವರು, ಗಂಡಸರ ಸಮಸ್ಯೆಗಳನ್ನೂ ಅಷ್ಟೇ ಸುಲಭವಾಗಿ ನಿಭಾಯಿಸುತ್ತಾರೆ. 

4. ಮಕರ ರಾಶಿ ( Capricorn):
ಈ ರಾಶಿಯ ಸ್ತ್ರೀಯರಿಗೆ ಭಯವೆಂಬುವುದೇ ಗೊತ್ತಿರೋಲ್ಲ.ಆತ್ಮವಿಶ್ವಾಸ ಬೇರೆಯವರಿಗಿಂತ ತುಸು ಹೆಚ್ಚು. ಬಯಸಿದ್ದನ್ನು ಪಡೆಯಲು ಇವರು ಅವಿರತವಾಗಿ ಕೆಲಸ ಮಾಡುತ್ತಾರೆ. ಪ್ರೇಮದಲ್ಲಿ ಅಂಜುವ ಗಂಡಸನ್ನು ತಮ್ಮ ಕಡೆಗೆ ಮಣಿಯುವಂತೆ ಮಾಡುವ ಚಾಕಚಕ್ಯತೆ ಇರುತ್ತೆ ಈ ರಾಶಿಯ ಹೆಣ್ಣಿಗೆ. ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಯಶಸ್ಸು ಗ್ಯಾರಂಟಿ. ಮುನ್ನಡಿ ಇಡಲು ಎರಡನೇ ಬಾರಿ ಯೋಚಿಸುವುದೇ ಇಲ್ಲ. ತುಂಬಾ ಪ್ರಾಕ್ಟಿಕಲ್. ಹೊಸತಿಗೆ ಹಾತೊರೆಯುತ್ತಾರೆ. 

ಹುಡುಗರು ಈ ಗುಣಗಳನ್ನು ಹೊಂದಿರುವ ಹುಡುಗಿಯರನ್ನು ಹತ್ತಿರ ಸೇರಿಸ ಬೇಡಿ

5. ಸಿಂಹ ರಾಶಿ (Leo):
ಅರ್ಧ ಗ್ಲಾಸ್ ಖಾಲಿ ಅಂತ ಹೇಳೋರಲ್ಲ ಸಿಂಹ ರಾಶಿಯ ಹೆಣ್ಣು ಮಕ್ಕಳು. ಯಾವಾಗಲೂ ಆಶಾವಾದಿಗಳು. ಅರ್ಧ ಗ್ಲಾಸ್ ಫುಲ್ ಅಂತಾನೇ ಹೇಳುತ್ತಿರುತ್ತಾರೆ. ಇವರಿಗೆ ಡೌಟ್ಸ್ ಕಡಿಮೆ. ಕ್ಲಾರಿಟಿ ಹೆಚ್ಚು. ಸಂಗಾತಿಯನ್ನು ಕಷ್ಟದಿಂದ ಕಾಪಾಡಿಕೊಳ್ಳುತ್ತಾರೆ. ಇವರ ವಿಶ್ವಾಸವೇ ಇವರಿಗೆ ಬಲ. ಇವರಲ್ಲಿರುವ ಉತ್ಸಾಹವೇ ಹಿಡಿದ ಕೆಲಸ ಯಶಸ್ವಿಯಾಗಿ ಮುಗಿಯುವಂತೆ ಮಾಡುತ್ತದೆ. 

6. ಮೀನ ರಾಶಿ (Pisces):
ಬೇರೆ ರಾಶಿಯವರಿಗೆ ಕಂಪೇರ್ ಮಾಡಿದರೆ ಇವರು ಸ್ವಲ್ಪ ವೀಕ್ ಎನ್ನಬಹುದು. ಆದರೆ, ಮಾನಸಿಕವಾಗಿ ಶಕ್ತಿಶಾಲಿಗಳು ಎನ್ನೋದ್ರಲ್ಲಿ ಅನುಮಾನವೇ ಇಲ್ಲ. ಇವರನ್ನು ಹೆದರಿಸೋದು ಅಷ್ಟು ಸುಲಭವಲ್ಲ. ಹಾಗೆ ಮಾಡಲು ಯಾರಾದ್ರೂ ಯತ್ನಿಸಿದರೆ ಅಂತರ ಕಾಯ್ದುಕೊಳ್ಳೋದು ಹೇಗೆ ಅಂತ ಇವರಿಗೆ ಗೊತ್ತು. ಇವರಿಗೆ ಬೇಕಾದವರ ಪರವಾಗಿ ನಿಲ್ಲಲು ಗೊತ್ತು. ಇವರು ಬುದ್ಧಿವಂತಿಕೆಯೇ ಇವರಿಗೆ ಶ್ರೀ ರಕ್ಷೆ.
 

Latest Videos
Follow Us:
Download App:
  • android
  • ios