MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ರಿಯಲ್ ಲೈಫ್ ಗಂಡ-ಹೆಂಡ್ತಿ ಈಗ ರೀಲ್ ಲೈಫ್‌ನಲ್ಲಿ ಮಾಡ್ತಿದಾರೆ ಮ್ಯಾಜಿಕ್, ತಮ್ಮದೇ ರೊಮಾನ್ಸ್‌ ನೋಡಿ ರಶ್ಮಿಕಾ ಫಿದಾ!

ರಿಯಲ್ ಲೈಫ್ ಗಂಡ-ಹೆಂಡ್ತಿ ಈಗ ರೀಲ್ ಲೈಫ್‌ನಲ್ಲಿ ಮಾಡ್ತಿದಾರೆ ಮ್ಯಾಜಿಕ್, ತಮ್ಮದೇ ರೊಮಾನ್ಸ್‌ ನೋಡಿ ರಶ್ಮಿಕಾ ಫಿದಾ!

ಚಿತ್ರತಂಡ ನೀಡಿದ ಈ ಸರ್ಪ್ರೈಸ್ ನೋಡಿ ಖುಷಿಯಾದ ರಶ್ಮಿಕಾ ಮಂದಣ್ಣ ತಕ್ಷಣ ಪ್ರತಿಕ್ರಿಯಿಸಿದ್ದಾರೆ. ‘ಇದು ನಮಗೆ ಸಿಕ್ಕ ಅತ್ಯಂತ ಸುಂದರವಾದ ಸಪ್ರೈಸ್. ಈಗ ಇದು ನಿಮಗೂ ಕೂಡ ಸರ್ಪ್ರೈಸ್ ಆಗಲಿದೆ. ಇದು ನಾವೇ, ರಣಬಾಲಿ ಮತ್ತು ಜಯಮ್ಮ’ ಎಂದಿದ್ದಾರೆ.

2 Min read
Author : Shriram Bhat
Published : Feb 28 2026, 08:01 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

'ರಣಬಾಲಿ' ಚಿತ್ರದ ಮೊದಲ ಹಾಡು ಔಟ್: ವಿಜಯ್ ದೇವರಕೊಂಡ ಜೊತೆಗಿನ ರೊಮ್ಯಾನ್ಸ್ ನೋಡಿ ಫಿದಾ ಆದ ರಶ್ಮಿಕಾ ಮಂದಣ್ಣ!

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಕ್ಯೂಟ್ ಕಪಲ್ ಎನಿಸಿಕೊಂಡಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸದ್ಯ ಸುದ್ದಿಯ ಕೇಂದ್ರಬಿಂದು.

27
Image Credit : X

ಇತ್ತೀಚೆಗಷ್ಟೇ ಹಸೆಮಣೆ ಏರಿ ದಂಪತಿಗಳಾದ ಈ ಜೋಡಿಯ ರಿಯಲ್ ಲೈಫ್ ಕೆಮಿಸ್ಟ್ರಿ ಈಗ ರೀಲ್ ಲೈಫ್‌ನಲ್ಲಿಯೂ ಮ್ಯಾಜಿಕ್ ಮಾಡಲು ಸಿದ್ಧವಾಗಿದೆ. ಹೌದು, ವಿಜಯ್ ಮತ್ತು ರಶ್ಮಿಕಾ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಣಬಾಲಿ'ಯ (Ranabaali) ಮೊದಲ ಹಾಡು 'ಎಂದಯ್ಯ ಸ್ವಾಮಿ' (Endhayya Saami) ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

Related Articles

Related image1
ಪಕ್ಕಾ ಹೊಟೆಲ್ ರುಚಿಯ ಮಸಾಲೆ ವಡೆ ಮಾಡೋದಕ್ಕೆ ಈ ಪದಾರ್ಥ ಬಳಸಿ, ಈ ಸೀಕ್ರೆಟ್ ನಿಮ್ಗೆ ಇನ್ಯಾರೂ ಹೇಳಿರಲ್ಲ!
Related image2
ಶಿವನ ಪೂಜೆಗಷ್ಟೇ ಅಲ್ಲ, ಬಿಲ್ವಪತ್ರೆ ಆರೋಗ್ಯಕ್ಕೂ ಉಪಕಾರಿ.. ತುಪ್ಪದ ಜೊತೆಗೆ ಗಟ್ಟಿ ಚಟ್ನಿ ತಿಂದರೆ ಆರೋಗ್ಯದಲ್ಲಿ ಮ್ಯಾಜಿಕ್ ಗ್ಯಾರಂಟಿ!
37
Image Credit : instagram

ನವಜೋಡಿಗೆ ಚಿತ್ರತಂಡದ ಸ್ಪೆಷಲ್ ಗಿಫ್ಟ್!

ವಿಜಯ್ ಮತ್ತು ರಶ್ಮಿಕಾ ಮದುವೆಯಾದ ಸಂಭ್ರಮಕ್ಕೆ ಚಿತ್ರತಂಡ ಈ ಹಾಡನ್ನು ವಿಶೇಷವಾಗಿ ಅರ್ಪಿಸಿದೆ. ವಸಾಹತುಶಾಹಿ ಕಾಲದ (Colonial India) ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಪಿರಿಯಡ್ ಡ್ರಾಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರಗಳು ಮದುವೆಯಾಗಿ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮನೆಗೆ ಪ್ರವೇಶಿಸುವ ದೃಶ್ಯಗಳು ಈ ಹಾಡಿನಲ್ಲಿವೆ. ಇಬ್ಬರ ನಡುವಿನ ಪ್ರೀತಿ ಹೇಗೆ ಚಿಗುರುತ್ತದೆ ಎಂಬುದನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ. ಹಾಡಿನ ಕೊನೆಯಲ್ಲಿ "ಹ್ಯಾಪಿ ಮ್ಯಾರೀಡ್ ಲೈಫ್ ವಿಜಯ್ ಮತ್ತು ರಶ್ಮಿಕಾ" ಎಂಬ ಸಂದೇಶವನ್ನು ಹಾಕುವ ಮೂಲಕ ಚಿತ್ರತಂಡ ದೊಡ್ಡ ಸರ್ಪ್ರೈಸ್ ನೀಡಿದೆ.ಪತ್ನಿ ರಶ್ಮಿಕಾ ಮಂದಣ್ಣ ಏನಂತಾರೆ?

ಚಿತ್ರತಂಡ ನೀಡಿದ ಈ ಸರ್ಪ್ರೈಸ್ ನೋಡಿ ಖುಷಿಯಾದ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಕ್ಷಣ ಪ್ರತಿಕ್ರಿಯಿಸಿದ್ದಾರೆ. "ಇದು ನಮಗೆ ಸಿಕ್ಕ ಅತ್ಯಂತ ಸುಂದರವಾದ ಸಪ್ರೈಸ್. ಈಗ ಇದು ನಿಮಗೂ ಕೂಡ ಸರ್ಪ್ರೈಸ್ ಆಗಲಿದೆ. ಇದು ನಾವೇ, ರಣಬಾಲಿ ಮತ್ತು ಜಯಮ್ಮ" ಎಂದು ಹೃದಯದ ಎಮೋಜಿಗಳೊಂದಿಗೆ ಬರೆದುಕೊಂಡಿದ್ದಾರೆ. ಈ ಹಾಡು ಮದುವೆಯ ನಂತರದ ಅವರ ಮೊದಲ ಸಿನಿಮಾದ ಝಲಕ್ ಆಗಿರುವುದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

47
Image Credit : instagram

ಸಿನಿಮಾದ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ:

ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ದಂಪತಿಗಳಾಗಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಇವರು 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಮೋಡಿ ಮಾಡಿದ್ದರು. 

57
Image Credit : instagram

'ರಣಬಾಲಿ' ಚಿತ್ರಕ್ಕೆ ಖ್ಯಾತ ಸಂಗೀತ ಜೋಡಿ ಅಜಯ್-ಅತುಲ್ ಸಂಗೀತ ಸಂಯೋಜನೆ ಮಾಡಿದ್ದು, ಸಿನಿಮಾ 2026ರ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರುವುದು ಚಿತ್ರದ ತೂಕ ಹೆಚ್ಚಿಸಿದೆ.

67
Image Credit : Asianet News

ಭವ್ಯವಾದ ಆರತಕ್ಷತೆಗೆ ಸಿದ್ಧತೆ:

ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್ ಮತ್ತು ರಶ್ಮಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ಎರಡು ಬಾರಿ ವಿವಾಹ ಜರುಗಿತು. ಈಗ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಭವ್ಯವಾದ ಆರತಕ್ಷತೆಯನ್ನು (Reception) ಹಮ್ಮಿಕೊಳ್ಳಲಾಗಿದ್ದು, ಟಾಲಿವುಡ್‌ನ ಘಟಾನುಘಟಿಗಳು ಭಾಗವಹಿಸುವ ನಿರೀಕ್ಷೆಯಿದೆ.

77
Image Credit : Asianet News

ಒಟ್ಟಿನಲ್ಲಿ, 'ರಣಬಾಲಿ' ಚಿತ್ರದ ಹಾಡು ವಿಜಯ್-ರಶ್ಮಿಕಾ ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ. ರಿಯಲ್ ಲೈಫ್ ಗಂಡ-ಹೆಂಡತಿ ಈಗ ರೀಲ್ ಲೈಫ್‌ನಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಸಿನಿರಸಿಕರಲ್ಲಿ ಮನೆಮಾಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಟಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಸಿಎಂ ಸಾಹೆಬ್ರೇ, ಆ ಪರಭಾಷೆಯ 'ತಮ್ಮಣ್ಣ'ನೇ ಬೇಕಿತ್ತಾ? ಯಶ್​ಗೆ 5 ಕೋಟಿ ಕೊಟ್ಟಿದ್ರೆ ಪತ್ನಿ-ಮಕ್ಕಳೂ ಬರ್ತಿದ್ರು!
Recommended image2
'ದಿ ಕೇರಳ ಸ್ಟೋರಿ 2 ಚಿತ್ರದ ಬಿಡುಗಡೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವು; ತೆರೆಮರೆಯ ಸತ್ಯ ಬಯಲಾಗುವುದೇ?
Recommended image3
ಕೋಡಿಮಠ ಶ್ರೀ ಹೇಳಿದ್ರು ದರ್ಶನ್ ಭವಿಷ್ಯ! ರಾಜಕೀಯದಲ್ಲಿ ಕಾಟೇರನಿಗಿದೆಯಾ ವೈಭೋಗ?
Related Stories
Recommended image1
ಪಕ್ಕಾ ಹೊಟೆಲ್ ರುಚಿಯ ಮಸಾಲೆ ವಡೆ ಮಾಡೋದಕ್ಕೆ ಈ ಪದಾರ್ಥ ಬಳಸಿ, ಈ ಸೀಕ್ರೆಟ್ ನಿಮ್ಗೆ ಇನ್ಯಾರೂ ಹೇಳಿರಲ್ಲ!
Recommended image2
ಶಿವನ ಪೂಜೆಗಷ್ಟೇ ಅಲ್ಲ, ಬಿಲ್ವಪತ್ರೆ ಆರೋಗ್ಯಕ್ಕೂ ಉಪಕಾರಿ.. ತುಪ್ಪದ ಜೊತೆಗೆ ಗಟ್ಟಿ ಚಟ್ನಿ ತಿಂದರೆ ಆರೋಗ್ಯದಲ್ಲಿ ಮ್ಯಾಜಿಕ್ ಗ್ಯಾರಂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved