ಇನ್ನೂ ವಯಸ್ಸಾಗೋದು ಬೇಡ, 30 ದಾಟಿದರೆ ಇವೆನ್ನೆಲ್ಲ ಲೈಫಲ್ಲಿ ಬಿಟ್ಹಾಕಿ

ವಯಸ್ಸು 30. ಲೈಫಲ್ಲಿ ಸೆಟಲ್ ಆಗಿ, ಸಂಗಾತಿಯನ್ನು ಹುಡುಕಿಕೊಳ್ಳುವ ರಮ್ಯಕಾಲ. ಆದರೆ, ಇನ್ನು ಬದುಕಿ ಬಾಳುವ ವಯಸ್ಸಿರುವಾಗಲೇ ಲೈಫಿನ ಕೆಲವು ಅಭ್ಯಾಸಗಳನ್ನು ಬಿಟ್ಟರೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೊಳಿತು. 

stop negligent driving have breakfast witout fail must do things after 30

ಭಾವನಾತ್ಮಕವಾಗಿ ಬೆಳೆಯುವ, ಕೆರಿಯರ್‌ನಲ್ಲಿ ಬದುಕನ್ನು ಕಟ್ಟಿಕೊಳ್ಳುವ ವಯಸ್ಸು 25-30. ಜೀವನ ಪೂರ್ತಿ ಉಳಿಯೋ ಗೆಳೆಯರನ್ನು ಕಂಡು ಕೊಳ್ಳುವ ಟೈಮಿದು. ಆಗ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡರೆ ಇಡೀ ಜೀವನವೇ ರಸಮಯವಾಗಿರುತ್ತದೆ. ಹಾಗಿದ್ದರೆ ಬಿಡ ಬೇಕಾದ ಕೆಟ್ಟ ರೂಢಿಗಳು ಯಾವುವು? ರೂಪಿಸಿಕೊಳ್ಳಬೇಕಾದ ಒಳ್ಳೆಯ ಅಭ್ಯಾಸಗಳೇನು? 

ತಿಂಡಿ ತಿನ್ನೋದ ಮಿಸ್ ಮಾಡ್ಬೇಡಿ (Breakfast)
ಬ್ಯುಸಿ ಶೆಡ್ಯೂಲ್. ಬೇಗ ಏಳಲಾಗದ ಸಮಯ. ಆಫೀಸಿಗೆ ಲೇಟಾಗುತ್ತೆ ಅಂತ ತಿಂಡಿಯನ್ನೇ ಬಿಟ್ಟರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಡಾ ಸ್ಟೀವನ್ ಮಾಸ್ಲೆ ಬರೆದ  'ದಿ 30-ಡೇ ಹಾರ್ಟ್ ಟ್ಯೂನ್-ಅಪ್'ನಲ್ಲಿ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಿದರೆ, ಜೀರ್ಣಶಕ್ತಿ ಕುಂಠಿತವಾಗುವುದಲ್ಲದೇ, ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ತಿಂಡಿ ಬಿಟ್ಟರೆ ತೂಕ ಹೆಚ್ಚಿಸುತ್ತದೆ. ಆಗಾಗ್ಗೆ ಸೋಂಕಿಗೆ ತುತ್ತಾಗೋದು ಕಾಮನ್ ಆಗುತ್ತದೆ. ಏನೇ ಆದರೂ  ಬ್ರೇಕ್‌ಫಾಸ್ಟ್ ಮಾತ್ರ ತಪ್ಪಿಸಬೇಡಿ.

2025ಕ್ಕೆ ತೂಕ ಇಳಿಸೋ ಸಂಕಲ್ಪ ಮಾಡಿದ್ರೆ ತಿನ್ನಿ ದಕ್ಷಿಣ ಭಾರತದ 7 ತಿಂಡಿಗಳು

ಕೊಬ್ಬಿನ (Cholesterol) ಆಹಾರಕ್ಕೆ ಹೇಳಿ ಗುಡ್ ಬೈ
30ನೇ ವರ್ಷದ ಹುಟ್ಟಿದಬ್ಬ ಆಚರಿಸಿಕೊಳ್ಳೋ ಮುನ್ನ ಕಳಪೆ ಹಾಗೂ ಫಾಸ್ಟ್ ಫುಡ್‌ಗೆ ಗುಡ್ ಬೈ ಹೇಳಿ. ಆಹಾರದಲ್ಲಿ ವೆರೈಟಿ ಇರಲಿ. ಹಣ್ಣು-ತರಕಾರಿಯನ್ನು ತಪ್ಪದೇ ಸೇವಿಸಿ. ಮನೆ ಫುಡ್‌ಗಿರಲಿ ಮೊದಲ ಆದ್ಯತೆ. ಏನೇ ತಿಂದರೂ ಅಳೆದು ತೂಗಿ, ಆರೋಗ್ಯಕ್ಕೆ ಒಳ್ಳೇಯದೆನಿಸುವ, ಶುಚಿಯಾಗಿರೋ ಆಹಾರವನ್ನೇ ಸೇವಿಸಿ. 

ಕುಡಿದ್ರೆ ಸಾಯ್ತೀರಿ ಹುಷಾರು!
ಆಲ್ಕೋಹಾಲ್ ಸೇವನೆ ಈಗ ಕಾಮನ್. ಇಪ್ಪತ್ತರ ವಯಸ್ಸಲ್ಲೇ ಅಂಟಿಸಿಕೊಳ್ಳುವ ಗೀಳಿದು. ಬುದ್ಧಿವಂತರ ಸಾಮೀಪ್ಯಕ್ಕಿದು ಅಗತ್ಯ ಎಂಬ ಭಾವನೆಯೂ ಅನೇಕರಲ್ಲಿದೆ. ಇದು ಆರೋಗ್ಯಕ್ಕೆ ಕಿಂಚಿತ್ತೂ ಒಳ್ಳೇದಲ್ಲ ಎಂಬುವುದು ನೆನಪಿರಲಿ. ವರ್ಷ 30 ಆಗುತ್ತಿದ್ದಂತೆ ಧೂಮಪಾನ, ಮಧ್ಯಪಾನ ಮಾಡೋ ಅಭ್ಯಾಸವಿದ್ದರೆ ಫುಲ್ ಸ್ಟಾಪ್ ಇಟ್ಟು ಬಿಡಿ. ಆರೋಗ್ಯಕರ ಜೀವನಕ್ಕಿರಲಿ ಮೊದಲ ಆದ್ಯತೆ. 
 

ದಿನಾ ಕುಡಿತಿದ್ದವ ಆಲ್ಕೋಹಾಲ್ ಬಿಟ್ಮೇಲೆ ಸೇವ್ ಮಾಡಿದ್ದೆಷ್ಟು ಹಣ?

ದ್ವೇಷ, ಜಗಳವೇಕೆ?
ಬಿಸಿರಕ್ತದಲ್ಲಿ ಮಾಡೋ ತಪ್ಪನ್ನೇ ಮತ್ತೆ ನಡು ವಯಸ್ಸಲ್ಲೂ ರಿಪೀಟ್ ಮಾಡಬೇಡಿ. ಫ್ರೆಂಡ್ಸ್, ಕೊಲೀಗ್ಸ್ ಜೊತೆ ಅತ್ಯುತ್ತಮ ಬಾಂಧವ್ಯ ಇರುವಂತೆ ನೋಡಿಕೊಳ್ಳಿ. ಜಗಳಕ್ಕೆಲ್ಲ ಫುಲ್ ಸ್ಟಾಪ್ ಇಟ್ಟು ಬಿಡಿ. ಮನಸ್ಸು ಚೆಂದವಿದ್ದಷ್ಟು ದೈಹಿಕ ಆರೋಗ್ಯವೂ ಸುಧಾರಿಸುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಮನ ಬಿಚ್ಚಿ ಮಾತನಾಡಿ. ಆ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. 

ಸಂಬಂಧದಲ್ಲಿ ಬದ್ಧತೆ ಇರಲಿ 
ಬೇಡದ ಅನೈತಿಕ ಸಂಬಂಧಗಳಿದ್ದರೆ ಬಿಟ್ಟು ಬಿಡಿ. ಮದ್ವೆ, ಮಕ್ಕಳ ಕಡೆ ಗಮನಿಸಿ. ಕಟ್ಟಿಕೊಂಡ ಸಂಬಂಧದೆಡೆ ಬದ್ಧತೆ ಇರಲಿ. ಆರೋಗ್ಯಕರ ದೈಹಿಕ ಸಂಬಂಧ ಬೆಳೆಯಿಸಿಕೊಳ್ಳಿ. ಮಾನಸಿಕವಾಗಿ ಸ್ಟ್ರಾಂಗ್ ಆಗಿ. ಕೆರೆಯರ್‌ ಕಡೆ ಗಮನ ಕೊಟ್ಟು, ಸಂಸಾರವನ್ನು ಚೆನ್ನಾಗಿಟ್ಟುಕೊಳ್ಳಿ. 

ಹಳೇ ಫ್ರೆಂಡ್ಸ್‌ಗೆ ಕರೆ ಮಾಡಿ
ಫ್ರೆಂಡ್‌ಶಿಪ್ ಅನ್ನೋದು ಜೀವನದಲ್ಲಿ ಸಂತೋಷ ತರುತ್ತದೆ. ಕೆರಿಯರ್, ಸಂಸಾರ ಅಂತ ಬ್ಯುಸಿ ಇದ್ದಾಗ ಅದರ ಅಗತ್ಯ ಕಾಣಿದಿರಬಹುದು. ಆದರೆ, ನಡು ವಯಸ್ಸಿಗೆ ಕಾಲಿಡೋ ಹೊತ್ತಿಗೆ ಹಳೇ ಪ್ರೆಂಡ್ಸ್‌ಗೊಮ್ಮೆ ಕಾಲ್ ಮಾಡಿ, ಮತ್ತೆ ಕನೆಕ್ಟ್ ಆಗಲು ಟ್ರೈ ಮಾಡಿ. ಆಗಾಗ ಹೇಗಾದರೂ ಮೀಟ್ ಮಾಡಬಹುದಾ ನೋಡಿ. ಕೆಲವು ಸಂಬಂಧಗಳು ಪೂರ್ತಿ ಮರೆಯಾಗುವ ಮುನ್ನ ಚಿಗುರುವಂತೆ ಮಾಡಬೇಕು. ಜರ್ನಲ್ ಆಫ್ ಕಪಲ್ ಆ್ಯಂಡ್ ರಿಲೇಶನ್‌ಶಿಪ್ ಥೆರಪಿಯಲ್ಲಿ  (Journal of Couple and Relationshi Therapy) ಪ್ರಕಟವಾದ ಒಂದು ಸಮೀಕ್ಷೆ ಪ್ರಕಾರ, ಪುರುಷರು ತಮ್ಮ ಸಂಗಾತಿಗೆ ದಿನಕ್ಕೆ ಹಲವಾರು ಬಾರಿ ಸಂದೇಶಗಳನ್ನು ಕಳುಹಿಸುತ್ತಾರಂತೆ. ವಿವಾದಗಳನ್ನು ಪರಿಹರಿಸುವುದು ಅಥವಾ ನಿರ್ಧಾರ ತೆಗೆದುಕೊಳ್ಳುವಂತಹ ವಿಷಯಗಳಿಗೆ ಇದು ಅತ್ಯಗತ್ಯ. ಭಾವನಾತ್ಮಕವಾಗಿ ಸ್ಪಂದಿಸಲು ಸಹಕಾರಿಯಾಗುವಂತೆ ನೇರವಾಗಿಯೇ ಮಾತುಕತೆ ನಡೆಸಿ.

ನೀವೂ ಹೀಗೆ ಮಾಡಿದ್ದೀರಾ? ನಕ್ಕು ನಕ್ಕು ಸುಸ್ತಾದ ಏರ್‌ಪೋರ್ಟ್ ಸಿಬ್ಬಂದಿ, ಇದುವೇ ಫ್ರೆಂಡ್‌ಶಿಪ್ ಎಂದ್ರು ಜನ

ಕುಡಿದು, ಅಜಾಗರೂಕರಂತೆ ವಾಹನ ಚಲಿಸಬೇಡಿ
ಅತಿವೇಗ, ಕುಡಿದು ವಾಹನ ಓಡಿಸುವುದನ್ನು ನಿಲ್ಲಿಸಿ. ಡ್ರೈವ್ ಮಾಡುವಾಗ ಫೋನ್ ನೋಡುವಂಥ ಕೆಟ್ಟ ಚಟಗಳಿಗೆ ಫುಲ್ ಸ್ಟಾಪ್ ಇಡಲೇಬೇಕಾದ ಟೈಮಿದು. ಇಂಥ ಅಭ್ಯಾಸಗಳು ಯಾವ ವಯಸ್ಸಲ್ಲೂ ಒಳ್ಳೇದಲ್ಲ. ಆದರೆ, 30ರ ನಂತರ ನಿಮ್ಮ ಜೊತೆ ನಿಮ್ಮ ಹೆಂಡತಿ, ಮಕ್ಕಳೂ ಇರುತ್ತಾರೆಂಬುದನ್ನು ಅಪ್ಪಿತಪ್ಪಿಯೂ ಮರೀಬೇಡಿ. ಸ್ಟೇರಿಂಗ್ ಕೈಗೆ ಸಿಕ್ಕರೆ ನಿಮ್ಮನ್ನು ನಿಯಂತ್ರಿಸಲು ನಿಮಗೆ ಆಗದಿದ್ದರೆ, ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸೋದು ಒಳ್ಳೇದು.  
 

Latest Videos
Follow Us:
Download App:
  • android
  • ios