ಮದ್ವೆಯಾಗಿ ವರ್ಷವಾಯಿತಾ? ಆಗದಿದ್ದರೆ ಈ ಕೆಲ್ಸಕ್ಕೆ ಕೈ ಹಾಕಬೇಡಿ!

ಸಂಗಾತಿಯ ಬಗ್ಗೆ ಪ್ರೀತಿ, ವಿಶ್ವಾಸ, ಗೌರವ ಇದ್ದರೂ ಮದುವೆಯಾದ ಹೊಸದರಲ್ಲಿ ಕಿರಿಕಿರಿಯೂ ಇರುತ್ತದೆ. ಪರಸ್ಪರ ಅರ್ಥೈಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ವೈವಾಹಿಕ ಜೀವನದ ಮೊದಲ ಒಂದು ವರ್ಷ ಅತ್ಯಂತ ತಾಳ್ಮೆಯನ್ನು ಬೇಡುತ್ತದೆ. ಸಂಬಂಧ ದಿನದಿಂದ ದಿನಕ್ಕೆ ದೃಢವಾಗುತ್ತ ಹೋಗಬೇಕೆಂದರೆ ಕೆಲವು ಮಾರ್ಗಗಳನ್ನು ಇಬ್ಬರೂ ಅನುಸರಿಸಬೇಕು.

What not to do in first one year after marriage

ಮದುವೆಯಾದ ಬಳಿಕ ಹುಡುಗ, ಹುಡುಗಿ ಇಬ್ಬರಿಗೂ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಹುಡುಗಿ ಹುಟ್ಟಿದ ಮನೆಯಿಂದ ದೂರವಾಗಿ ಗಂಡನ ಮನೆಗೆ ಕಾಲಿಡುವುದರಿಂದ ಮಾನಸಿಕ ಒತ್ತಡ ಇನ್ನಷ್ಟು ಹೆಚ್ಚು. ಪುರುಷರಿಗೂ ಇದು ಬಹಳ ಸುಲಭವಾದ ಟಾಸ್ಕ್‌ ಏನೂ ಆಗಿರುವುದಿಲ್ಲ. ಇಷ್ಟುದಿನದ ಬಿಂದಾಸ್‌, ಬೇಕಾಬಿಟ್ಟಿಯ ಬದುಕಿಗೆ ಚೂರು ಶಿಸ್ತು ನೀಡಬೇಕಾಗಿರುತ್ತದೆ. ವೈವಾಹಿಕ ಸಂಬಂಧದ ಆರಂಭದ ದಿನಗಳು ನಿಜಕ್ಕೂ ಕಷ್ಟದಾಯಕ. ಮನಸ್ಸಿಗೆ ಮಾತ್ರವಲ್ಲ, ದೇಹಕ್ಕೂ ಬದಲಾವಣೆ ಎದುರಾಗುವ ಹಂತವಿದು. ರೋಮ್ಯಾಂಟಿಕ್‌ ಭಾವನೆಗಳ ನಡುವೆಯೂ ಕಿರಿಕಿರಿ ಸಾಕಷ್ಟಿರುತ್ತದೆ. ಲೈಂಗಿಕ ಚಟುವಟಿಕೆ ಸಕ್ರಿಯವಾಗುವ ಪರಿಣಾಮವಾಗಿ ದೇಹವೂ ಆ ಬದಲಾವಣೆಗೆ ಒಗ್ಗಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲೇ ಬಹಳಷ್ಟು ಸಮಸ್ಯೆಗಳೂ ಉದ್ಭವಿಸಬಹುದು. ತಾಳ್ಮೆಯಿಂದ ಎಲ್ಲವನ್ನೂ ಗಮನಿಸುತ್ತ, ಬದಲಾವಣೆಯನ್ನು ಒಪ್ಪಿಕೊಳ್ಳುತ್ತ ಸಾಗುವವರಾದರೆ ಸಮಸ್ಯೆಗಳು ಕಡಿಮೆ. ಆದರೆ, ಬದಲಾವಣೆ ಒಪ್ಪಿಕೊಳ್ಳದೆ ಚಿಕ್ಕಪುಟ್ಟದ್ದಕ್ಕೂ ಕಿರಿಕಿರಿ ಮಾಡಿಕೊಳ್ಳುತ್ತ, ಮದುವೆಯಾದರೂ ಹಿಂದಿನ ಜೀವನವೇ ಬೇಕು ಎನ್ನುವವರು ನೀವಾಗಿದ್ದರೆ ನಿಜಕ್ಕೂ ಸಮಸ್ಯೆ ದೊಡ್ಡದಾಗುತ್ತದೆ. ಹೀಗಾಗಿಯೇ, ಮದುವೆಯಾದ ಒಂದು ವರ್ಷದೊಳಗೆ ಡಿವೋರ್ಸ್‌ ಮೊರೆ ಹೋಗುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಅದಿರಲಿ. ಈ ಸಮಯದಲ್ಲಿ ದಂಪತಿಯಲ್ಲಿ ಪರಸ್ಪರ ಬೆಂಬಲದ ಅಗತ್ಯ ಹೆಚ್ಚಾಗಿರುತ್ತದೆ. ಮುಖ್ಯವಾಗಿ, ಮಹಿಳೆಯರಿಗೆ ಪತಿಯ ಬೆಂಬಲ ಅನಿವಾರ್ಯವಾಗಿರುತ್ತದೆ. 

ಸಾಮಾನ್ಯವಾಗಿ ಪುರುಷರು (Male) ಮದುವೆಯಾದ (Marriage) ಕೆಲ ದಿನಗಳಲ್ಲೇ ಪತ್ನಿಯನ್ನು (Wife) ಛೇಡಿಸಲು ಆರಂಭಿಸುತ್ತಾರೆ. ಆದರೆ, ಇದು ಅವರಿಗೆ ಇಷ್ಟವಾದರೆ ಸರಿ, ಇಲ್ಲವಾದರೆ ಪುರುಷರು ಈ ಅಭ್ಯಾಸ ಬದಲಿಸಿಕೊಳ್ಳಬೇಕು. ಏಕೆಂದರೆ, ಲಘುವಾದ ತಮಾಷೆ (Kidding) ಕೂಡ ಕೆಲವರಿಗೆ ಕಿರಿಕಿರಿಯಾಗಿ (Irritation) ಕಾಣಬಹುದು. ಮದುವೆಯಾದ ಒಂದು ವರ್ಷ ಅರ್ಥೈಸಿಕೊಳ್ಳಲು ಸಮಯ ಬೇಕಾಗುತ್ತದೆ ಎನ್ನುವ ಸೂಕ್ಷ್ಮ ಅರಿವಿನೊಂದಿಗೆ ಇರುವುದು ಅಗತ್ಯ. ಪುರುಷರೇ ಆಗಲಿ, ಮಹಿಳೆಯರೇ ಆಗಲಿ, ಮದುವೆಯಾದ ಮೊದಲ ಒಂದು ವರ್ಷ ಕೆಲವು ವಿಚಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ಆ ಬಳಿಕ ಹೇಗೆ ಬೇಕೋ ಹಾಗೆ ವರ್ತಿಸಬಹುದು ಎಂದಲ್ಲ. ಸಾಮಾನ್ಯವಾಗಿ ಒಂದು ವರ್ಷದ ಬಳಿಕ ದಂಪತಿಯ ಸಂಬಂಧ (Relationship) ಮತ್ತೊಂದು ಮಜಲಿಗೆ ಏರುತ್ತದೆ, ಒಡನಾಟ ಹೆಚ್ಚಿ ಮುಕ್ತವಾದ (Open) ವಾತಾವರಣ ನಿರ್ಮಾಣವಾದಾಗ ನೀವೂ ಮುಕ್ತವಾಗಿ ಭಾವನೆಗಳನ್ನು ಹಂಚಿಕೊಳ್ಳಬಹುದು. ಅಲ್ಲಿಯವರೆಗೆ ಸ್ವಲ್ಪ ಎಚ್ಚರಿಕೆ ಇದ್ದರೆ ಉತ್ತಮ. 

ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

•    ಮೊದಲನೆಯದಾಗಿ, ನಿಮ್ಮ ಖಾಸಗಿ (Private) ಅಂದರೆ ಖಾಸಗಿ ವಿಚಾರಗಳ ಕುರಿತು ಪರಸ್ಪರ ಲೇವಡಿ, ಟೀಕೆ ಮಾಡಬಾರದು. ಮಹಿಳೆಯರಿಗೆ ತಮ್ಮ ಕನಸುಗಳನ್ನು ಹಂಚಿಕೊಳ್ಳಲು ಸ್ವಲ್ಪ ಸಮಯ ತಗಲಬಹುದು. ಈ ಸಮಯದಲ್ಲಿ ಅವರ ಧೋರಣೆ, ಆಪ್ತ ಸಮಯದಲ್ಲಿ ಅವರ ವರ್ತನೆಗಳ ಕುರಿತು ಟೀಕೆ (Critic), ವಿಮರ್ಶೆ, ಲೇವಡಿ ಸಲ್ಲದು.
•    ಪಾಲಕರೊಂದಿಗೆ (Parents) ನಿಮ್ಮ ಸಂಬಂಧ ಹಾಗೂ ಮನೆಯಲ್ಲಿರುವ ಪದ್ಧತಿ, ಸಮಸ್ಯೆಗಳ ಕುರಿತಾಗಿ ಹೆಚ್ಚು ಚರ್ಚೆ ಮಾಡಬಾರದು. ಹೆಣ್ಣುಮಕ್ಕಳು (Girls) ಈ ವಿಚಾರದಲ್ಲಿ ಎಚ್ಚರ ತಪ್ಪುತ್ತಾರೆ. ಅಮ್ಮನ ಬಳಿ ಪತಿ, ಅತ್ತೆ (Mother in Law) ಹಾಗೂ ಮನೆಯ ತಮಗೆ ಸರಿ ಎನಿಸದ ಪದ್ಧತಿಗಳ ಬಗ್ಗೆ ಹೇಳುತ್ತಿರುತ್ತಾರೆ. ಇದರಿಂದಾಗಿ, ಅವರಿಗೆ ಮಗಳ ಮನೆಯಲ್ಲಿ ಸಮಸ್ಯೆಗಳೇ ಹೆಚ್ಚು ತುಂಬಿರುವಂತೆ ಭಾಸವಾಗಿ ಆತಂಕವಾಗಬಹುದು. ಆ ಆತಂಕವನ್ನು ಮಗಳಿಗೂ ತುಂಬಬಹುದು.
•    ಸಂಗಾತಿಯ (Partner) ಬಗ್ಗೆ ಗೂಢಚಾರಿಕೆ (Spy) ಮಾಡುವುದು ಬೇಡ. ಪತಿಯ (Husband) ಮೊಬೈಲ್‌ ಚೆಕ್‌ ಮಾಡುವುದು ಅನೇಕರ ಅಭ್ಯಾಸ. ಹಾಗೆಯೇ, ಪತ್ನಿಯ ಮೊಬೈಲ್‌ ಚೆಕ್‌ ಮಾಡುವ ಪುರುಷರೂ ಸಾಕಷ್ಟು. ಇದರಿಂದ ಪರಸ್ಪರ ಅಪನಂಬಿಕೆ ಹೆಚ್ಚುತ್ತದೆಯೇ ಹೊರತು ಬೇರೆ ಪ್ರಯೋಜನವೇನಿಲ್ಲ. ಅವರಿಗೂ ಅವರದ್ದೇ ಸ್ನೇಹ ವಲಯ ಇರುತ್ತದೆ. ಅವರಾಗಿಯೇ ಹೇಳಿಕೊಳ್ಳದ ಹೊರತು ಕೆದಕುವುದು ಸರಿಯಲ್ಲ. ಅವರು ಮೋಸ (Cheat) ಮಾಡುತ್ತಿದ್ದಾರೆ ಎಂದು ಭಾವಿಸುವುದು ಸಹ ಬೇಕಾಗಿಲ್ಲ. 
•    ನಿಮಗೆ ಸಂಬಂಧಿಸದ ವಿಚಾರಗಳ ಬಗ್ಗೆ ತೀವ್ರ ವಾಗ್ವಾದ (Argument) ನಡೆಸಲು ಹೋಗಬಾರದು.    

ಟ್ರಾಫಿಕ್ ಕಿರಿ ಕಿರಿ, ಟೆನ್ಷನ್, ಸರಸಕ್ಕಿಲ್ಲ ದಾಂಪತ್ಯದಲ್ಲಿ ಜಾಗ!

Latest Videos
Follow Us:
Download App:
  • android
  • ios