Asianet Suvarna News Asianet Suvarna News

ಟ್ರಾಫಿಕ್ ಕಿರಿ ಕಿರಿ, ಟೆನ್ಷನ್, ಸರಸಕ್ಕಿಲ್ಲ ದಾಂಪತ್ಯದಲ್ಲಿ ಜಾಗ!

ಕೆಲಸ, ನಿಲ್ಲದ ಒತ್ತಡ, ಟ್ರಾಫಿಕ್ ಕಿರಿ ಕಿರಿ ಎಲ್ಲವೂ ಸೇರಿ ದಾಂಪತ್ಯದಲ್ಲಿ ವಿರಸವೇ ಮರೆಯಾಗುತ್ತಿದೆ. ಸರಸಕ್ಕೆ ಮನಸ್ಸೇ ಮಾಡದ ದಂಪತಿ ನಿದ್ರೆಗೆ ಜಾರಲು ಆದ್ಯತೆ ನೀಡುತ್ತಾರೆ. ಇದಕ್ಕೆ ಪರಿಹಾರ ಕಂಡು ಕೊಳ್ಳೋದು ಹೇಗೆ? 

How to provoke men who are tired after working and lost sexual drive
Author
First Published Sep 18, 2022, 3:19 PM IST

ಗಂಡನಿಗಾಗಿ ನೀಟಾಗಿ ಡ್ರೆಸ್ ಮಾಡಿಕೊಂಡು, ಬಾಗಿಲಲ್ಲಿ ಕಾಯೋ ಕೆಲವು ಹೆಣ್ಣು ಮಕ್ಕಳಿಗೆ ಗಂಡನನ್ನು ನೋಡಿ ಕನಿಕರ ಹುಟ್ಟುವಂತಾಗುತ್ತದೆ. ಟ್ರಾಫಿಕ್ಕಲ್ಲಿ ಮನೆ ಸೇರುವ ಹೊತ್ತಿಗೆ ಹಾಸಿಗೆಯಲ್ಲಿ ಬಿದ್ದುಕೊಂಡರೆ ಆಯಿತು ಅನಿಸುವಂತಾಗಿರುತ್ತದೆ ಆ ಬಡಪಾಯಿ ಸ್ಥಿತಿ. ಆಫೀಸ್ ಟೆನ್ಷನ್, ಪೊಲ್ಯೂಶನ್ ಎಲ್ಲವೂ ಸೇರಿ ಹೆಂಡತಿಯ ಮುಖ ನೋಡುವ ವ್ಯವಧಾನವೂ ಇರೋಲ್ಲ. ಮುಖವೇ ನೋಡಿ, ಹಾಯ್ ಅಂತ ಸಹ ಹೇಳದ ಗಂಡನನ್ನು ನೋಡಿ ಹೆಂಡತಿಯ ಹುಮ್ಮಸ್ಸೂ ಮರೆಯಾಗುತ್ತದೆ. ಅಲ್ಲಿಗೆ ಸಂಸಾರದಲ್ಲಿ ಸಣ್ಣದೊಂದು ಬಿರುಕು ಮೂಡಿದೆ ಎಂದರ್ಥ. ಒಂದಿನ ಓಕೆ, ಎರಡು ದಿನ ತಡೆದುಕೊಳ್ಳಬಹುದು. ಬರ್ತಾ ಬರ್ತಾ ಗಂಡನ ಈ ನಡೆ ಹೆಂಡತಿಗೆ ಅದರಲ್ಲಿಯೂ ಮನೆಯಲ್ಲಿಯೇ ಕಾಲ ಕಳೆಯುವ ಹೆಂಗಸಿಗೆ ಬದುಕೇ ನೀರಸ ಎನಿಸುತ್ತದೆ. 

ಇದು ಈಗೀಗ ಪ್ರತಿ ಸಂಸಾರದಲ್ಲಿಯೂ ಕಾಮನ್. ದುಡ್ಡು ಮಾಡುವ ಧಾವಂತವೋ ಅಥವಾ ಹೆಸರು ಗಳಿಸುವ ಹುಚ್ಚೋ ಮನುಷ್ಯನ ಪ್ರೆಷರ್ ಹೆಚ್ಚಾಗುತ್ತಿದೆ. ಗಂಡನ ಈ ನಡೆಯಿಂದ ಹಾಳಾಗುವ ದಾಂಪತ್ಯ, ಎಲ್ಲಿಯವರೆಗೆ ಬೇಕಾದರೂ ತಲುಬಹುದು.  ನಿರಾಸೆಯೊಂದೇ ನಿಮ್ಮದು ಎಂಬಂತಾಗಿದೆಯೇ? ಇಂದಿನ ಜೀವನಶೈಲಿಯಲ್ಲಿ ದಾಂಪತ್ಯದ ಪಾಡಿದು. ಹಾಗಾಗಿ, ಬದುಕಿನ ಶೈಲಿ  ಬಯ್ದುಕೊಳ್ಳುವ  ಅಥವಾ ಆತನ  ಸೆಕ್ಸ್ ಡ್ರೈವ್‌ ದೂಷಿಸುವ ಬದಲು ಇಂಥ  ಸಂದರ್ಭಗಳಲ್ಲಿ ಪತಿಯ ಲೈಂಗಿಕ ವಾಂಛೆ ಕೆರಳಿಸಲು ಪತ್ನಿ ಯತ್ನಿಸಬೇಕು. ಕೆಲವೊಂದು ಟ್ರಿಕ್ಸ್ ಫಾಲೋ ಮಾಡಬೇಕು. ಅಷ್ಟಕ್ಕೂ ಹೆಣ್ಣು ಏನು ಮಾಡಬಹುದು?

ಕನ್ನಡಿ ಮುಂದೆ ನಗ್ನರಾಗಿ
ಡಲ್ ಆದ ಗಂಡನನ್ನು ಪ್ರವೋಕ್ ಮಾಡಲು ಹೆಂಡತಿಯೇ ಕೆಲವು ಕ್ರಮ ಅನುಸರಿಸುವುದು ಒಳ್ಳೆಯದು. ಗಂಡನ ಇರುವಿಕೆಯ ಗಮನವಿಲ್ಲದಂತೆ ಕನ್ನಡಿ (Mirror) ಎದುರು ನಿಮ್ಮ ಪಾಡಿಗೆ ನೀವು ಬಟ್ಟೆ ಬದಲಿಸಿ. ಕನ್ನಡಿಯಲ್ಲಿ ಕಾಣುವ ನಿಮ್ಮ ಪ್ರತಿಫಲನ (Reflection) ಪತಿಯ ಕಣ್ಣಿಗೆ ಬೀಳುತ್ತಿರಲಿ. ಆದರೂ ಗೊತ್ತಿಲ್ಲವೆಂಬಂತೆ ಇರಿ. 

ತಾಜ್ ಮಹಲ್ ಪ್ರೇಮಕಥೆಯಿಂದ ಪ್ರೇರಿತ; ಆಗ್ರಾದಲ್ಲಿ ಮದುವೆಯಾದ ಮೆಕ್ಸಿಕನ್ ಜೋಡಿ
 

ಸೆಕ್ಸೀ ಲಿಂಗರೀ
ಭಾರತೀಯ ನಾರಿಯರು ತಮ್ಮ ಡ್ರೆಸ್‌ಗೆ ಕೊಟ್ಟಷ್ಟು ಮಹತ್ವವನ್ನು ಒಳ ಉಡುಪಿಗೆ (Inner Wear) ಕೊಡುವುದಿಲ್ಲ. ಆದ್ದರಿಂದ ಮುಂದಿನ ಬಾರಿ ಒಳ ಉಡುಪು ಖರೀದಿಸುವಾಗ ಸೆಕ್ಸೀ ಲಿಂಗರಿ ಕೊಳ್ಳೋದ ಮರೀಬೇಡಿ. ನಿಮ್ಮಲ್ಲಿನ ಸಣ್ಣ ಪುಟ್ಟ ಬದಲಾವಣೆಗಳು ಪತಿಗೆ ಹಿಡಿಸುತ್ತದೆ. ಚೆಂದದ ಪರಿಮಳ (Perfume) ಹೊಂದಿರುವ ಬಾಡಿ ಲೋಶನ್ (Body Lotion) ಬಳಸಿ. ಇವೆಲ್ಲ ಮಾಡುವಾಗ ಪತಿ ಅಲ್ಲಿರುವುದೇ ಗೊತ್ತಿಲ್ಲವೆಂಬಂತೆ ವರ್ತಿಸಿ. ಹಾಗಿದ್ದಾಗಲೇ ಆತನಿಗೆ ನೀವು ಇನ್ನೂ ಹೆಚ್ಚು ಬೇಕು ಎನಿಸುತ್ತದೆ. 

ಸ್ವಚ್ಛತೆ (cleanliness)
ಬಹಳ ಹೆಣ್ಣು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ತುಸು ಇಗ್ನೋರೆನ್ಸ್. ಇದು ಬಹಳಷ್ಟು ಗಂಡಸರಿಗೆ ಹೆಂಡತಿ ಮೇಲೆ ಅಸಡ್ಡೆ ಹುಟ್ಟುವಂತೆ ಮಾಡುತ್ತದೆ. ದೇಹದ ಮೇಲಿನ ಬೇಡದ ಕೂದಲಿಗೆ ಬೈ ಹೇಳಿ. ಚರ್ಮದ ಕಡೆ ಗಮನ ಹರಿಸಿ. ಸುಹಾಸನಾಯುಕ್ತ ಶಾಂಪೂ, ಬಾಡಿ ಲೋಶನ್ (Body Lotion), ಪೌಡರ್, ಸೆಂಟ್ ಬಳಸಿ. ಈ ಪರಿಮಳ ಹಾಗೂ ಸ್ವಚ್ಛತೆ ಪತಿಯನ್ನು ನಿಮ್ಮತ್ತ ಸೆಳೆಯಬಲ್ಲದು. 

ಆಡಿಯೋ ಪೋರ್ನ್
ಪೋರ್ನ್ ವಿಡಿಯೋಗಳಿಗಿಂತ ಆಡಿಯೋ ಹೆಚ್ಚು ಜನರನ್ನು ಕೆರಳಿಸುತ್ತದೆ. ಹಾಗಾಗಿ, ಪೋರ್ನ್ ನೋಡೋ ಬದಲು, ಆಡಿಯೋವನ್ನು ಪತಿಗೆ ಕೇಳಿಸಿ. ಹಾಗಂಥ ಪಕ್ಕದ ಮನೆಯವರಿಗೂ ಕೇಳಿಸುವಷ್ಟು ವಾಲ್ಯೂಮ್ ಇಡದಂತೆ ಎಚ್ಚರವಹಿಸಿ.

ಮಸಾಜ್
ಪತಿಗೆ ಮಸಾಜ್ ಮಾಡುತ್ತೇನೆಂದರೆ, ಇರೋಬರೋ ಸುಸ್ತೆಲ್ಲಾ ಹೋಗಿರುತ್ತೆ. ಇದೊಂದು ಕಲೆ. ಮಸಾಜ್‌ಗ ಎಂಥ ಸುಸ್ತಾದರೂ ಹೋಗಿಸುವ ಸಾಮರ್ಥ್ಯ ಇರುತ್ತದೆ. ದೈಹಿಕವಾಗಿ, ಮಾನಸಿಕವಾಗಿ ರಿಲ್ಯಾಕ್ಸ್ ಆಗುವಂತಾಗುತ್ತದೆ. ನಿಧಾನವಾಗಿ, ಕೈಯನ್ನು ಸೆನ್ಷುಯಲ್ ಆಗಿ ಮಸಾಜ್ ಮಾಡುತ್ತಾ ಸಾಗಿ. ಇದರಿಂದ ಆತ ಉದ್ವೇಗಗೊಳ್ಳುತ್ತಾನೆ. 

ಡರ್ಟಿ ಟಾಕ್ (Dirty Talk)
ಆಗಾಗ ನಿಮ್ಮ ಮೊದಲ ಭೇಟಿ, ಚುಂಬನ, ಮಿಲನದ ಬಗ್ಗೆ ಮಾತುಕತೆ ನಡೆಯಲಿ. ಸುಖ ಸಂತೋಷದ ಕ್ಷಣಗಳನ್ನು ನೆನಪಿಸಿಕೊಳ್ಳಿ. ಕೊಳಕು ಎನಿಸುವಂಥ ವಿಷಯಗಳು ಶೇರ್ ಆಗಲಿ. ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗಿ, ಸುಸ್ತು ಸಹ ಹಾರಿ ಹೋಗುತ್ತದೆ. 

Husband Material: ಗಂಡ ಆಗೋನು ಇದ್ರೆ ಈ ರೀತಿ ಇರ್ಬೇಕು ಅಂತಾ ಬಯಸ್ತಾರೆ ಹುಡುಗೀರು…

ಆ್ಯಕ್ಸಿಡೆಂಟಲ್ ಟಚ್ (Accidental Touch)
ಪತಿ ಬಳಿ ನಿಮ್ಮ ಪ್ರೀತಿಯ ಕುರಿತು ಮಾತನಾಡುತ್ತಾ  ಫೋರ್‌ಪ್ಲೇ (Fore Play) ಆರಂಭಿಸಿ. ಸಮಾಧಾನ ಇರಲಿ. ಸಂದರ್ಭ ಸೃಷ್ಟಿಯಾಗುವವರೆಗೆ ಕಾಯಿರಿ. ಆಗ ಯಾವುದೂ ಕೃತಕತೆ (Artificial) ಎನಿಸುವುದಿಲ್ಲ. 

Follow Us:
Download App:
  • android
  • ios