ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

ಕೆಲವು ಕನ್ನಡ ಸೀರಿಯಲ್ಸ್‌ನಲ್ಲಿ ಮಗಳಿನಷ್ಟು ದೊಡ್ಡವಳೊಂದಿಗೆ ಪ್ರೀತಿ ಹುಟ್ಟಿಸಿಕೊಂಡು, ಮದುವೆಯಾಗೋದು ನೋಡಿದ್ದೇವೆ. ಅಷ್ಟೆಲ್ಲಾ ಗ್ಯಾಪ್ ದಂಪತಿ ನಡುವೆ ಇದ್ದರೆ ಸಂಸಾರ ಸರಿ ಇರೋದು ಹೌದಾ? ಏನು ಹೇಳುತ್ತೆ ಅಧ್ಯಯನ? 

What must be age gap between couples to marry and lead happy life

ಕಾಲ ಬದಲಾಗಿದೆ. ಪ್ರೀತಿಯ ಡೆಫಿನೇಷನ್ ಸಹ ಬದಲಾಗಿದೆ. ಮದುವೆ ಕಾನ್ಸೆಪ್ಟ್ ಬದಲಾವಣೆಯ ಪರ್ವದಲ್ಲಿದೆ. ಇಷ್ಟೆಲದರ ಮಧ್ಯೆ ಗಂಡ-ಹೆಂಡತಿ ನಡುವೆ ವಯಸ್ಸಿನ ಅಂತರವೆಷ್ಟಿರಬೇಕು ಎಂಬ ಪ್ರಶ್ನೆ ಮಾತ್ರ ಸರ್ವಕಾಲಕ್ಕೂ ಚಾಲ್ತಿಯಲ್ಲಿರುವ ಪ್ರಶ್ನೆ. ಪ್ರೀತಿ ಕುರುಡು. ವಯಸ್ಸಿನ ಹಂಗಿಲ್ಲ.. ಏನೇನೋ ಹೇಳುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಇವೆಲ್ಲ ಹೌದಾದರೂ ಮೆಚುರಿಟಿ ಇರೋರ ಸಂಬಂಧ ಕುದುರುವುದು ಅಷ್ಟು ಸುಲಭವಲ್ಲ ಬಿಡಿ. ಅದೂ ಇಲ್ಲದೇ ಇತ್ತೀಚಿನ ಅಧ್ಯಯನವೊಂದು ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂದೂ ಹೇಳಿದೆ. 

ಅಟ್ಲಾಂಟಾ ಯುನಿವರ್ಸಿಟಿ ಈ ಬಗ್ಗೆ ಸಂಶೋಧನೆಯೊಂದು (Research) ನಡೆಸಿದೆ. ದಂಪತಿ (Couple) ನಡುವೆ ವಯಸ್ಸಿನ ಅಂತರವಿದ್ದಷ್ಟೂ ಡಿವೋರ್ಸ್ (Divorce) ಸಾಧ್ಯತೆ ಹೆಚ್ಚೆಂದು ಹೇಳುತ್ತಿದೆ. ವಿವಿಧ ವಯಸ್ಸಿನ ಅಂತರ ಇರುವ ಸುಮಾರು 3000 ಜೋಡಿಗಳ ಮೇಲೆ ಈ ಸಂಶೋಧನೆ ನಡೆದಿದೆ. ವಯಸ್ಸಿನ ಅಂತರ ಹೆಚ್ಚಿರುವ ದಂಪತಿಗಿಂತ, ಒಂದು ವರ್ಷದಷ್ಟು ವಯಸ್ಸಿನ ಅಂತರವಿರುವ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ ಎಂಬುವುದು ಈ ಸಂಶೋಧನೆ ಕಂಡು ಕೊಂಡ ಸತ್ಯ.

ಪ್ರೀತಿಗೆ ವಯಸ್ಸು ಅಡ್ಡಿಯಲ್ಲ ಎಂದು ಪ್ರೂವ್ ಮಾಡಿದ ಜೋಡಿಗಳಿವರು

ಮಗುವಿಲ್ಲದ ಜೋಡಿಗಳು ಸಪರೇಟ್ ಆಗಲು ಹೆಚ್ಚು ಯೋಚಿಸುವುದೇ ಇಲ್ಲವಂತೆ. ಮಗುವಿರುವವರು ಬೇರ್ಪಡುವ ವಿಷಯ ಬಂದಾಗ ಅಷ್ಟು ಸುಲಭವಾಗಿ ಅಕ್ಸೆಪ್ಟ್ ಮಾಡಿಕೊಳ್ಳುವುದೂ ಇಲ್ಲವಂತೆ. ಸಂಬಂಧವನ್ನು ಸರಿ ಮಾಡಿಕೊಳ್ಳಲು ಮುಂದಾಗುತ್ತಾರೆಂದು ಈ ಸಂಶೋಧನೆಯಿಂದಲೇ ತಿಳಿದು ಬಂದಿದೆ. ಅದಕ್ಕೆ ಅಲ್ಲವೇ ಕೆಲವು ಸಿನಿ ತಾರೆಯರು (Cine Celebrities) ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ ಮೇಲೂ ಮಗುವಿಗಾಗಿಯೇ ಮತ್ತೆ ಒಂದಾಗಿ ಚೆಂದ ಸಂಸಾರ ಮಾಡುತ್ತಿದ್ದಾರೆ. ಮತ್ತೆ ಕೆಲವು ದಾಂಪತ್ಯದಲ್ಲಿ ಸುಖವಿಲ್ಲದವರೂ ಮಗುವಿಗಾಗಿ ಎಲ್ಲವಕ್ಕೂ ತೇಪೆ ಹಾಕ್ಕೊಂಡು ಸುಮ್ಮನೆ ಬದುಕುತ್ತಿದ್ದಾರೆ. 

ಬಾಲಿವುಡ್ ಇಂಡಸ್ಟ್ರಿಯಲ್ಲಿ (Bollywood) ಎಲ್ಲವೂ ಸ್ವಲ್ಪ ವಿಭಿನ್ನ. ಮದುವೆಯೇನೋ ಆಗಿರುತ್ತಾರೆ. ಮಗುವೂ ಆಗಿ ದಶಕಗಳ ಕಾಲ ಸಂಸಾರವನ್ನೂ ಸುಸೂತ್ರವಾಗಿಯೇ ನಿಭಾಯಿಸುತ್ತಾರೆ. ಆದರೆ, ಅದೇನೋ ಆಗಿ ಬಿಡುತ್ತೆ. ಒಂದು ಫೈನ್ ಡೇ ಈ ಸಂಬಂಧಿಂದ (Relationship) ಹೊರ ಹೋದರೆ ಸಾಕು ಎಂದು ಅವಸರಿಸುತ್ತಾರೆ. ಆ ಬಾಂಧವ್ಯಕ್ಕೆ ಡಿವೋರ್ಸ್ ಎಂಬ ಮುದ್ರೆ ಹಾಕಿಸಿಕೊಂಡು, ತಮ್ಮಿಷ್ಟ ಬಂದಂತೆ ಬದುಕುತ್ತಾರೆ. ಆದರೆ, ಅಂಥವರೂ ಮಕ್ಕಳ ವಿಷಯಕ್ಕೆ ಬಂದಾಗ ತಮ್ಮ ಅಹಂಕಾರವನ್ನೂ ಮರೆತು, ಮಕ್ಕಳಿಗಾಗಿ ಜೊತೆಯಾಗಿ ಕಾಣಿಸುವುದನ್ನೂ ನೋಡುತ್ತೇವೆ. ಒಟ್ಟಿನಲ್ಲಿ ಮಕ್ಕಳು ದಾಂಪತ್ಯವನ್ನು ಚೆನ್ನಾಗಿಡಲು ಸಹಕರಿಸುತ್ತವೆ.  

12 ವರ್ಷ ಕಿರಿಯ ನಟನ ಜೊತೆ 47ರ ಮಲೈಕಾ ಡೇಟಿಂಗ್..! ಟ್ರೋಲ್ ಮಾಡಿದವ್ರಿಗೆ ಮುನ್ನಿಯ ಖಡಕ್ ಉತ್ತರ

ಕನ್ನಡ ಸೀರಿಯಲ್ಸ್‌ನಲ್ಲಿ ಲವ್
ಜೊತೆ ಜೊತೆಯಲಿ, ಹಿಟ್ಲರ್ ಕಲ್ಯಾಣದಂಥ ಸೀರಿಯಲ್ಸ್ ನೋಡಿದವರು ಅದು ಹೇಗೆ ಸಾಧ್ಯ ಇಷ್ಟು ಗ್ಯಾಪ್ ಇರೋರ ಮದ್ಯೆ ಪ್ರೀತಿ (Love) ಹುಟ್ಟಲು ಎಂದು ಯೋಚಿಸುತ್ತಿರುತ್ತಾರೆ. ಪ್ರೀತಿ ಹುಟ್ಟಲು ವಯಸ್ಸಿನ ಹಂಗಿಲ್ಲದೇ ಹೋಗಬಹುದು. ಆದರೆ, ಮದುವೆಯಾಗುವಾಗ ಮಾತ್ರ ಎಲ್ಲವೂ ಗಮನಕ್ಕೆ ಬರುತ್ತದೆ ಎನ್ನೋದು ಈ ಅಧ್ಯಯನ ಹೇಳುತ್ತೆ. ಯಾವುದು ಆಮಿಷವೋ, ಆಸೆಗೋ ಬಲಿಯಾಗಿ ಒಂದು ಜೋಡಿ ಪ್ರೀತಿಯಲ್ಲಿ ಬಿದ್ದರೂ ಅದು ಆಕರ್ಷಣೆಯಾಗುತ್ತದೆಯೋ ಹೊರತು, ದೀರ್ಘ ಕಾಲ ಉಳಿಯುವುದು ಕಷ್ಟವಂತೆ. 

ವಯಸ್ಸಿನ ಅಂತರ 3 ರಿಂದ 5 ವರ್ಷವಾದರೆ ಕ್ಲೋಸ್‌ನೆಸ್ (Closeness) ಕಡಿಮೆಯಾಗುತ್ತಂತೆ. 5 ರಿಂದ 10 ವರ್ಷದ ಅಂತವಿರುವವರ ಸಂಬಂಧದ ವ್ಯಾಖ್ಯಾನವೇ ಬದಲಾಗಿರುತ್ತೆ. ಅನ್ಯೂನ್ಯತೆ ಎನ್ನೋದು ಇವರ ದಾಂಪತ್ಯದಲ್ಲಿ ಅರ್ಥವೇ ಕಳೆದುಕೊಂಡಿರುತ್ತದೆ ಎನ್ನುತ್ತದೆ ಅಧ್ಯಯನ. ಒಟ್ಟಿನಲ್ಲಿ ವಯಸ್ಸಿನ ಅಂತರ ಹೆಚ್ಚಾದಷ್ಟೂ ದಂಪತಿಯಲ್ಲಿ ವಿರಸ ಹೆಚ್ಚು. ಸಾಮರಸ್ಯ ಕಡಿಮೆ ಅನ್ನೋದು ಸರ್ವವಿಧಿತ ಸತ್ಯ. 

ಮದುವೆಯಲ್ಲಿ ಸಂಗಾತಿಗಳ ವಯಸ್ಸಿನ ಅಂತರ ಹೆಚ್ಚಾದಾಗ ಏನಾಗುತ್ತೆ?

ಇದಕ್ಕೆ ಅಪವಾದದಂತಿರುವ ಎಷ್ಟೋ ಜೋಡಿ ಭಾರತದಲ್ಲಿ ಸಿಗಬಹುದು. ಸಂಸಾರವೂ ಚೆನ್ನಾಗಿರಬಹುದು. ಏನೋ ನ್ಯೂನತೆ ಇದ್ದರೂ ಸಂಸಾರ ಚೆನ್ನಾಗಿರಬಹುದು. ಒಟ್ಟಿನಲ್ಲಿ ದಾಂಪತ್ಯದ ಅನುಬಂಧ ಪ್ರಬುದ್ಧತೆ (Maturity) ಮೇಲೆ ಡಿಪೆಂಡ್ ಆಗಿರುತ್ತೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. 

 

What must be age gap between couples to marry and lead happy life

 

Latest Videos
Follow Us:
Download App:
  • android
  • ios